CONNECT WITH US  

ಪಂಚರ್

ನೋಟು ಸರಬರಾಜು ಮಾಡಿ, ಇಲ್ಲವೇ ಉತ್ತರಪ್ರದೇಶ ಚುನಾವಣೆ ಮುಂದೂಡಿ: ಬಿಜೆಪಿಗೆ ಆರೆಸ್ಸೆಸ್‌ ಸಂದೇಶ
* ಅಪ-ನಗದೀಕರಣ ವರ್ಸಸ್‌ ರಾಜಕಾರಣ!
ಖಾತೆಗೆ ದಿಢೀರ್‌ 2 ಲಕ್ಷ ತುಂಬಿದವರಿಗೆ ಸಂಕಷ್ಟ.
* ದುಡ್ಡೇ ದೊಡ್ಡಪ್ಪ, ಮೋದಿ ಅದರಪ್ಪ!
ಕರ್ನಾಟಕಕ್ಕೆ ಬಂದಿದೆ ಹೆಲಿಕಾಪ್ಟರ್‌ ಆ್ಯಂಬುಲೆನ್ಸ್‌.
* ಅಲ್ಲೂ ಸೈರನ್‌ ಸದ್ದು ಮಾಡುತ್ತಾ ಅಂತ ಕೇಳಬೇಕು!
ಸೋನಿಯಾಗೆ ದೆಹಲಿಗಿಂತ ಗೋವಾ ಇಷ್ಟ: ರಾಹುಲ್‌ ಗಾಂಧಿ
* ರಾಹುಲ್‌ ತವರು ಮನೆ ಗೋವಾ ಅಂದಂಗಾಯ್ತು!
ಕ್ರಿಕೆಟನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸಾಧ್ಯವಿಲ್ಲ: ಪಾಕ್‌ ಕಳಂಕಿತ ಸಲ್ಮಾನ್‌ ಭಟ್‌
*ಕಳಂಕಿತನ ಕಳವಳ?
2000 ರೂ. ನೋಟು ಪುಡಿ ಪುಡಿ
* ದುಡ್ಡನ್ನ ಪುಡಿ ಮಾಡ್ತಾನೆ ಅಂತ ಮಕ್ಕಳನ್ನ ಬೈತಿದ್ರು. ನಿಜ ಆಯ್ತು!
ನನ್ನನ್ನು ಹೀಗೇ ಭೇಟಿ ಆಗ್ತಾ ಇರಿ...: ರಾಹುಲ್‌ ಗಾಂಧಿಗೆ ಹೇಳಿದ ಮೋದಿ
*ಬುದ್ಧಿವಂತರಾಗ್ತಿರಿ ಅಂತಲೂ ಹೇಳಬೇಕಿತ್ತು!
ಎಲ್ಲ ನದಿ ವಿವಾದಗಳಿಗೂ ಒಂದೇ ನ್ಯಾಯಾಧಿಕರಣ.
* ಎಲ್ಲಾ ನದಿಗಳಿಗೂ ಒಂದೇ ಬದಿ!
ಶಶಿಕಲಾ ಪಟ್ಟಾಭಿಷೇಕಕ್ಕೆ ತೊಡಕು.
* ಹಾಗಿದ್ದರೆ ಶಶಿಕಲಾಪ ಕಷ್ಟ
ಜೆಫ್ರಿ ಬಾಯ್ಕಟ್‌ ಕನಸಿನ ತಂಡದಲ್ಲಿ ಭಾರತೀಯ ಕ್ರಿಕೆಟಿಗರೇ ಇಲ್ಲ.
* ಬಾಯ್ಕಟ್‌ ತಂಡಕ್ಕೆ ಭಾರತೀಯರ ಬಾಯ್ಕಟ್‌ ಖಾತ್ರಿ.
ಕಾರ್ಡ್‌ ಬಳಸಿ ಬಹುಮಾನ ಗೆಲ್ಲಿ.ಮೆಗಾ ಡ್ರಾದಲ್ಲಿ 25 ಲಕ್ಷ ರೂ. 50 ಲಕ್ಷ ರೂ. 1 ಕೋಟಿ ರೂ.
*ಗೆದ್ದದ್ದನ್ನು ಬ್ಲಾಕ್‌ ಮನಿ ಅಂತ ಕಿತ್ಕೊಂಡ್ರೆ ಕಷ್ಟ!
ಅಪನಗದೀಕರಣ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲು ವಿಪಕ್ಷಗಳ ನಿರ್ಧಾರ. ರದ್ದಿಗೆ ಹೋದ ಹಣ ದೂರು
* ಕೊಟ್ಟರೆ ಅಕೌಂಟಿಗೆ ಬಿದ್ದೀತೇ!
ಸಂಸತ್ತಿನ ಚಳಿಗಾಲದ ಅಧಿವೇಶನ ಅಪನಗದೀಕರಣಕ್ಕೆ ಪೂರ್ಣ ಬಲಿ.
* ಚಳಿಗೆ ಕಾಸಲ್ಲೇ ಮೈ ಕಾಸಿಕೊಂಡರು!
ಕ್ರೀಡಾಂಗಣದಲ್ಲೇ ಪಾಕಿಸ್ತಾನ ಕ್ರಿಕೆಟಿಗರ ಹೊಡೆದಾಟ!
* ಭಾರತಕ್ಕೆ ಮಾತ್ರ ಇದು ಬ್ರೇಕಿಂಗ್‌ ನ್ಯೂಸ್‌, ಪಾಕಿಸ್ತಾನದಲ್ಲಿ ಮಾಮೂಲು!
ಹೊಸ ನೋಟುಗಳು ಬಿಡುಗಡೆ ಆಗುವಾಗ ಕಣ್ಣಿಡಲು ಆರ್‌ಬಿಐ ಸೂಚನೆ
-ನೋಟಿನ ಮೇಲಿರಲಿ ನೋಟ!
ಬಡವರ ವಿರುದ್ಧ ಮೋದಿ ಯುದ್ಧ: ರಾಹುಲ್‌ ವಾಗ್ಧಾಳಿ
-ಮೋದಿ ವಿರುದ್ಧ ರಾಹುಲ್‌ ಕ್ರುದ್ಧ!
ಬ್ಯಾಂಕ್‌ ವ್ಯವಸ್ಥೆಯನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು: ಹ್ಯಾಕರ್‌ ಗ್ರೂಪ್‌ ಲೀಜನ್‌
-ಮೋದಿ ತೋರಿಸಿಕೊಟ್ಟಿದ್ದಾರಲ್ಲ!
ಹಣಕ್ಕಾಗಿ ಸರದಿ ನಿಂತವರಿಗೆ ಬಿಜೆಪಿಯಿಂದ ಲಡ್ಡು!
-ಲಡ್ಡು ಬಾಯಿಗೆ ಬಿತ್ತು!
ಬಿಸಿಸಿಐ ಹಣೆಬರಹ ಇಂದು ನಿರ್ಧಾರ
- ಯಾರ್ಯಾರದ್ದೋ ಹಣೆಬರಹ ಬರೆಯುತ್ತಿದ್ದವರೀಗ ತಮ್ಮ ಸರದಿಗೆ ಕಾಯುವಂತಾಯ್ತು!
ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಮಹಿಳೆ ಜಯಾ ಪುತ್ರಿ ಅಲ್ಲ.
*ಜಾಲತಾಣ ಪುತ್ರಿ!
ಉತ್ತರ ಭಾರತದಲ್ಲಿ ಮೈಕೊರೆವ ಚಳಿ: ದೇವರಿಗೂ ವುಲ್ಲನ್‌ ಸ್ವೆಟರ್‌.
* ಸ್ವೆಟರ್‌ ಅಲಂಕಾರ!
ನೋಟು ಮುದ್ರಣಕ್ಕೆ ವಿದೇಶದಿಂದ 20,000 ಟನ್‌ ಪೇಪರ್‌ ಆಮದು
* ಇನ್ನು ನಮ್ಮದೂ ಫಾರಿನ್‌ ಕರೆನ್ಸಿಯೇ!
ರಾಸಲೀಲೆ ವಿವಾದದಲ್ಲಿ ಮೇಟಿ.
* ಸಿಕ್ಕಿಬೀಳದೇ ಹೋದ್ರೆ ರಾಸಲೀಲೆ ವಿನೋದ,ಸಿಕ್ಕಿಬಿದ್ರೆ ಮಾತ್ರ ವಿವಾದ!
ಶೀಘ್ರವೇ ಎಲ್ಲ ಜಿಲ್ಲೆಗಳಲ್ಲಿ ಸರ್ವಋತು ಕಬಡ್ಡಿ ಮ್ಯಾಚ್‌
* ಹುಷಾರ್‌ ರಾಜಕಾರಣಿಗಳು ಎತ್ಕಂಡು ಹೋಗ್‌ ಬಿಟ್ಟಾರು!

Pages

Back to Top