CONNECT WITH US  

ಪಂಚರ್

ನೈಸ್‌ ಬಗ್ಗೆ ಸಿಬಿಐ ತನಿಖೆಗೆ ದೇವೇಗೌಡ ಪಟ್ಟು.
*ನೈಸ್‌ ವಿಷಯ ಬಂದಾಗ ಮಾತ್ರ ಗೌಡ್ರು ರಫ್ ಅಂಡ್‌ ಟಫ್ ಆಗ್ತಾರೆ, ಯಾಕೆ?
1996ರಲ್ಲಿ ಜಯಾ ಸೋಲಿಗೆ ನಾನೇ ಕಾರಣ: ರಜನೀಕಾಂತ್‌
* ಇದು ರಜನೀಕಾಂತ್‌ ಜೋಕಲ್ಲ,ನಿಜ ಕಣ್ರೀ!
ಕಸ ಕೊಡಿ ಅಂತ ನೆರೆದೇಶಗಳಿಗೆ ಅಂಗಲಾಚುವ ಸ್ವೀಡನ್‌.
* ಬೆಂಗಳೂರಿನವರು ಕಳ್ಸೋಕೆ ರೆಡಿ ಇದ್ದಾರೆ!
ಆಂಧ್ರಪ್ರದೇಶ, ತಮಿಳುನಾಡಿಗೆ ಇಂದು ವರ್ದಾ ಚಂಡಮಾರುತ.
* ಹಿಂದೆ ಕಾಂಗ್ರೆಸ್‌ಗೆ "ವಾದ್ರಾ'ಚಂಡಮಾರುತ ಬಡಿದಿತ್ತು!
ಯುವತಿಯನ್ನು ಹೋಟೆಲ್‌ಗೆ ಕರೆದು ಸಿಕ್ಕಿಬಿದ್ದ ಪಾಕ್‌ ಕ್ರಿಕೆಟಿಗ!
* ಹೊರಗಡೆ ಅಭಿಮಾನಿಗಳ ಕಾಟ, ಹೋಟೆಲ್‌ ಹೋದರೆ ಮಂಡಳಿ ಕಾಟ
ಬರಲಿವೆ, ಹೆಚ್ಚು ಬಾಳಿಕೆ,ಶುಭ್ರ ಪ್ಲಾಸ್ಟಿಕ್‌ ನೋಟ್‌
*ಕೊನೆಗೆ ನೋಟು ರದ್ದು ಮಾಡೋ ಬದಲು, ಪ್ಲಾಸ್ಟಿಕ್‌ ರದ್ದು ಮಾಡಿದ್ರೆ ಸಾಕು!
ಚೆನ್ನೈನಲ್ಲಿ ಸಿಕ್ಕಿದ್ದು 90 ಕೋಟಿಯಲ್ಲ, 106 ಕೋಟಿ ಕ್ಯಾಷ್‌!
* ಚೆನ್ನೈಯಲ್ಲಿ ಏನು ಸಿಕ್ಕರೂ ಜಯಾರ್ಪಣ!
ಸಂಸತ್ತಲ್ಲಿ ನಾನು ಮಾತಾಡಿದರೆ ಭೂಕಂಪ: ರಾಹುಲ್‌
* ತೆಲುಗು ಸಿನಿಮಾ ನೋಡಿದ್ದು ಜಾಸ್ತಿಯಾಯ್ತು!
ಜಯಾ ಮೃತರಾಗಿದ್ದರೂ ನಿಯಂತ್ರಣದಲ್ಲಿ ಪರಿಸ್ಥಿತಿ: ಚೆನ್ನೈನಲ್ಲೇ ನಡೆಯಲಿದೆ 5ನೇ ಟೆಸ್ಟ್‌.
* ಚೆನ್ನೈನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬಿಸಿಸಿಐ ಸ್ಥಿತಿಯೇ ನಿಯಂತ್ರಣದಲ್ಲಿಲ್ಲವಲ್ಲ?
ರೈಲು ಟಿಕೆಟ್‌ ಖರೀದಿಗೆ ಹಳೆ ನೋಟು ಬಳಸಲು ಡಿ.10 ಕಡೆ ದಿನ.
*ಹಳೇ ನೋಟಲ್ಲಿ ಕಡೇ ಪ್ರಯಾಣ!
ಪ್ರಿಯಾಂಕಾ ಚೋಪ್ರಾಳನ್ನು ಹಿಮ್ಮೆಟ್ಟಿಸಿದ ದೀಪಿಕಾ ಪಡುಕೋಣೆ ಏಷ್ಯಾದಲ್ಲಿ ಅತ್ಯಂತ ಸೆಕ್ಸಿ ಮಹಿಳೆ.
* ಏಷ್ಯಾದವರ ಕನಸಲ್ಲೀಗ ಪಡುಕೋಣೆ ಪಲ್ಲಂಗ!
ನೋಟು ನಿಷೇಧ ಎನ್ನುವುದು ಭ್ರಷ್ಟಾಚಾರದ ವಿರುದ್ಧದ ಯಜ್ಞ: ಪ್ರಧಾನಿ ಮೋದಿ.
* ನೋಟೇ ಆಜ್ಯ, ಬ್ಯಾಂಕ್‌ ಮ್ಯಾನೇಜರುಗಳೇ ಪುರೋಹಿತರು!
ಇದೇ ಮೊದಲ ಬಾರಿ ಮುಂಬೈ ಆಟಗಾರನೊಬ್ಬನೂ ಇಲ್ಲದೇ ಮೈದಾನಕ್ಕಿಳಿದ ಭಾರತ ಟೆಸ್ಟ್‌ ತಂಡ.
* ಬಾಂಬೇ ಡೈಯಿಂಗ್‌!
ರಣವೀರ್‌ನನ್ನು ಹೈರಾಣಾಗಿಸಿದ ಬಾಬಾ ರಾಮದೇವ್‌!
* ಯೋಗಿಯ ಮುಂದೆ ಭೋಗಿ ಉಸ್ಸೋ ಉಸ್ಸು!
ಸಂಸತ್‌ ಕಲಾಪ ನಡೆಯದ ಬಗ್ಗೆ ಅಡ್ವಾಣಿ ಕಿಡಿ.
* ಒಂಥರಾ ಪ್ರಲಾಪ, ಒಂಥರಾ ಸಂ"ತಾಪ'!
ಕೇಜ್ರಿವಾಲ್‌ರನ್ನು ಹಿಗ್ಗಾಮುಗ್ಗಾ ಝಾಡಿಸಿದ ಸಾಮಾಜಿಕ ಜಾಲತಾಣ ಬಳಕೆದಾರರು!
* ಬೈಗಳೇ ಆಶೀರ್ವಾದ ಅಂತ ಭಾವಿಸಿರಬೇಕು ಕೇಜ್ರಿ!
ಅಪನಗದೀಕರಣದಿಂದಾಗಿ ಸಾವನ್ನಪ್ಪಿದವರಿಗೆ ತಲಾ 2 ಲಕ್ಷ ಘೋಷಿಸಿದ ಅಖೀಲೇಶ್‌.
*"ನೋಟ್‌ ಬ್ಯಾಂಕ್‌' ರಾಜಕಾರಣ!
ಸಾನಿಯಾ- ಶೋಯೆಬ್‌ ಪುತ್ರ ಯಾವ ದೇಶದ ಪರ ಆಡ್ತಾನೆ?
* ಕಾಶ್ಮೀರದ ಪರ ಆಡಲಿ ಬಿಡಿ
ಮಠಾಧೀಶರ ಬೆಂಬಲ ಇರೋವರೆಗೂ ಯಾವುದೇ ನೋಟಿಸ್‌ಗೆ ಹೆದರುವ ಪ್ರಶ್ನೆಯೇ ಇಲ್ಲ: ಈಶ್ವರಪ್ಪ
* ಅವರ ಹೈ ಕಮಾಂಡ್‌ ಮಠಾಧೀಶರೇ ಇರಬೇಕು!
ನೋಟು ರದ್ದು: ಸಾಕಷ್ಟು ಹಣ ನೀಡದ್ದಕ್ಕಾಗಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ.
*ದುಡ್ಡೇ ಇಲ್ಲದ ಮೇಲೆ ಬೀಗ ಯಾಕಂತೆ!

Pages

Back to Top