CONNECT WITH US  

ಪಂಚರ್

ಐಶ್ವರ್ಯಾ ರೈ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ವದಂತಿ
* ಸಾಮಾಜಿಕ ವದಂತಿ ತಾಣ!
ಬಿಸ್ಮಿಲ್ಲಾ ಖಾನ್‌ರ 5 ಶಹನಾಯಿ ಕಳವು.
* ಕದ್ದು ಊದಿದರೆ ಸಿಕ್ಕಿಬೀಳ್ಳೋದು ಗ್ಯಾರಂಟಿ!
ಬ್ರಿಗೇಡ್‌ ಸಭೆಗೆ ಹೋದರೆ ಈಶ್ವರಪ್ಪ ವಿರುದ್ಧ ಕ್ರಮ: ಯಡಿಯೂರಪ್ಪ
* ಫೈನಲ್‌ ವಾರ್ನಿಂಗಾ, ಸೆಮಿಫೈನಲಾ!?
ತಾನು ಪಾಕ್‌ ತಂಡಕ್ಕೆ ಆಯ್ಕೆ ಆಗದಿರಲು ಐಸಿಸಿ ಕಾರಣ: ಕಳಂಕಿತ ಕ್ರಿಕೆಟಿಗ ಆಸಿಫ್
*ಕಳ್ಳನಿಗೊಂದು ಪಿಳ್ಳೆ ನೆವ
ನನಗೆ ಸಾಡೇಸಾತಿ ಶನಿ ಕಾಟ: ಅಸ್ನೋಟಿಕರ್‌
-ರಾಜಕೀಯದಲ್ಲಿ ಯಾವಾಗ್ಲೂ ಹೀಂಗೇ!
ವರ ಬ್ಯುಸಿ, ಆತನ ಪರವಾಗಿ ಆತನ ತಂಗಿ ತಾಳಿ ಕಟ್ಟಿದ್ಲು!
-ದಾಂಪತ್ಯವೂ ಹಿಂಗೇ ಆದ್ರೆ ಕಷ್ಟ ಕಣ್ರೀ!
ಚೆಕ್‌ಬೌನ್ಸ್‌: 251 ರೂ. ಮೊಬೈಲ್‌ ತಯಾರಕಗೆ ಸಮನ್ಸ್‌
- ಫೋನ್‌ ಮಾಡಿದ್ರೆ ನಾಟ್‌ ರೀಚೇಬಲ್‌ ಅಂತ ಬರುತ್ತಂತೆ!
ತಿಮ್ಮಪ್ಪನಿಗೆ ಹಳೆಯ 10 ಲಕ್ಷ ನೋಟು ಹಾಕಿದ ನಟ ಬಾಲಕೃಷ್ಣ ಪತ್ನಿ
- ದೇವ್ರಿಗೆ ನೋಟು ನಿಷೇಧ ಆಗಿದ್ದು ಹೇಗೂ ಗೊತ್ತಾಗಲ್ಲ ಅಂತಾನಾ?
ಕೋಲ್ಕತಾದ ಬೀದಿಯಲ್ಲಿ ಕ್ರಿಕೆಟ್‌ ಆಡಿದ ಗಂಗೂಲಿ
- ಬೀದಿಗೆ ಬಂದ ದಾದಾ!
ದುಬಾರಿ ವಾಚ್‌ ಕೇಸಿಂದ ಸಿಎಂ ಪಾರು
* ಇನ್ನೂ ವಿವಾದಕ್ಕೆ ಯಾರಾದ್ರೂ "ಕೀ' ಕೊಡ್ತಾರಾ ನೋಡ್ಬೇಕು!
ಅಧಿಕಾರಿಗಳ 152 ಕೋಟಿ ರೂ. ಅಕ್ರಮ ಆಸ್ತಿಯಲ್ಲಿ ಸಿಎಂ ಪಾಲು: ಜನಾರ್ದನ ಪೂಜಾರಿ
* ಕಾಂಗ್ರೆಸ್‌ ಸರ್ಕಾರಕ್ಕೆ ಇವರೇ ನಿಜವಾದ ವಿರೋಧ ಪಕ್ಷದ ನಾಯಕ!
ರದ್ದಾದ ನೋಟಿನಷ್ಟು ಹೊಸ ನೋಟು ಪ್ರಿಂಟು ಮಾಡಲ್ಲ: ಜೇಟ್ಲಿ
* ಬೇಡ ಬಿಡಿ ನಾವೇ ಮಾಡ್ಕೋತೀವಿ ಅಂತಾರೆ ಕಳ್ಳನೋಟಿನೋರು!
ಬಿಹಾರ ವ್ಯಕ್ತಿಯ ಜನ-ಧನ ಖಾತೆಯಲ್ಲಿ 40 ಲಕ್ಷ ಪತ್ತೆ!
* ಈ "ಜನ ಧನ'ವಂತ!
224 ಕೋಟಿ ರೂ. ತೆರಿಗೆ ವಂಚನೆ ಸುಳಿಯಲ್ಲಿ ಪೋರ್ಚುಗಲ್‌ ಫ‌ುಟ್ಬಾಲ್‌ ತಾರೆ ರೊನಾಲ್ಡೋ
*ಭಾರತದ ಪ್ರಭಾವ ಪೋರ್ಚುಗಲ್‌ನಲ್ಲೂ ಇದೆ ಅಂತಾಯ್ತು...!
ಸಿಬಿಐಗೆ ಪೂರ್ಣಾವಧಿ ಮುಖ್ಯಸ್ಥರ ನೇಮಕ ಇಲ್ಲ.
*ಪ್ರಧಾನಿ ಇದ್ದಾರಲ್ಲ ಅಂದ್ರಂತೆ ವಿಪಕ್ಷದವ್ರು!
ಪ್ರಧಾನಿ ಮೋದಿ ಟಿಆರ್‌ಪಿ ಪಾಲಿಟಿಕ್ಸ್‌ ಮಾಡ್ತಿದಾರೆ: ರಾಹುಲ್‌.
* ಅರ್ನಾಬ್‌ ಇಲ್ಲದ್ದರಿಂದ ಹಾಗನ್ನಿಸಿತೋ, ಏನೋ!
ಬೆಂಗಳೂರಿನಲ್ಲಿ ಐಟಿ ದಾಳಿಗೊಳಗಾದವರು ನನ್ನ ಆಪ್ತರಲ್ಲ: ಸಿದ್ದು
*"ಕೈ' ಎತ್‌ ಬಿಟ್ರಾ!?
ಬಿಸಿಸಿಐ ಎಡವಟ್ಟಿನಿಂದ 19 ವಯೋಮಿತಿ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ದೇಶದ 7 ಕ್ರಿಕೆಟಿಗರು.
* ಗ್ರಹಚಾರ ಕೈಕೊಟ್ಟರೆ ಬಿಸಿಸಿಐ ಕೂಡ ಕಾಪಾಡದು
500 ರೂ.ನಲ್ಲಿ ಮದುವೆ ಮುಗಿಸಿದ ಐಎಎಸ್‌ ಜೋಡಿ
* ಹಳೇ 1 ಸಾವಿರ ನೋಟು ಯಾರಾದ್ರೂ ಕವರ್‌ನಲ್ಲಿ ಕೊಟ್ರಾ? ಗೊತ್ತಾಗಿಲ್ಲ!
ಜಿಯೋ ಉಚಿತ ಇಂಟರ್ನೆಟ್‌, ಕರೆ ಮಾ.31ರವರೆಗೂ ವಿಸ್ತರಣೆ
* ಡೌನ್‌ಲೋಡ್‌ ಮಾಡೋಕೆ ಸರ್ಕಾರದ ಅನುಮತಿ ಬೇಕು ಅಂದ್ರೆ ಕಷ್ಟ!
ಇದೀಗ ಕಾಂಗ್ರೆಸ್‌ ಟ್ವೀಟರ್‌ ಖಾತೆಗೂ ಕನ್ನ!
* ಎಲ್ರೂ ಬ್ಯಾಂಕ್‌ ಖಾತೆ ತಲೆಬಿಸೀಲಿ ಇದ್ರೆ, ಕಾಂಗ್ರೆಸ್ಸಿಗರಿಗೆ ಟ್ವೀಟರ್‌ ಖಾತೆ ತಲೆಬಿಸಿ!
ಕಲಾಪ ಮುಂದೂಡಿದರೂ ಸದನದಲ್ಲೇ ಕುಳಿತ ಮೋದಿ
* ಭಾಷಣ ಮಾಡೋಕೆ ಹೇಳ್ತಾರೆ ಅಂತ ಕೂತಿದ್ರಾ..?
ಮಕ್ಕಳು ಕ್ರೀಡೆಯಲ್ಲಿ ಪಾಸಾದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ: ಕೇಂದ್ರ ಸರ್ಕಾರ ಚಿಂತನೆ
* ಪಾಠ ಕಷ್ಟ, ಆಟ ಮೊದಲು ಎನ್ನುವವನಿಗೂ ಕೂಡಿಬರಲಿದೆ ರ್‍ಯಾಂಕ್‌ ಯೋಗ...!

Pages

Back to Top