CONNECT WITH US  

ಪಂಚರ್

ಸೈಕಲ್‌ ಚಿಹ್ನೆ ಬಗ್ಗೆ ಶೀಘ್ರ ನಿರ್ಧಾರ: ಆಯೋಗ
* ರೀ ಸೈಕಲ್‌ ಮಾಡಿ ಪರವಾಗಿಲ್ಲ!

ಡಿಎಂಕೆಗೆ ಈಗ ಸ್ಟಾಲಿನ್‌ ಬಾಸ್‌. ಕಣ್ಣೀರಿಟ್ಟು ಒಪ್ಪಿದ ಕರುಣಾ ಪುತ್ರ.
* ಕರುಣಾಜನಕ ಸನ್ನಿವೇಶ!

ಬಿಕ್ಕಟ್ಟಿಗೆ ಮತ್ತೆ ಮುಲಾಯಂ- ಅಖೀಲೇಶ್‌ ತೇಪೆ ಯತ್ನ.
* ಮುಲಾಮು ಹಚ್ಚೋ ಪ್ಲಾನು!

ಸಕ್ಕರೆ ಇದ್ದರೆ ಇರುವೆ ಬರೋದು ಖಚಿತ. ಬಟ್ಟೆ ತೊಡದೇ ಇರುವುದೇ ಮಾಡರ್ನ್ ಸಂಸ್ಕೃತಿಯಾಗಿದೆ: ಅಬು ಅಜ್ಮಿ....

ಜಾತಿ, ಧರ್ಮ, ಸಮುದಾಯ, ಭಾಷೆಯ ಆಧಾರದಲ್ಲಿ ಮತ ಕೇಳುವುದು ಅಕ್ರಮ.
* ಮತ ಕೇಳ್ಳೋದರಲ್ಲೇ ಮತ ಇದೆಯಲ್ಲ!

ಮುಖ್ಯಮಂತ್ರಿ ಆಗಿ: ಶಶಿಕಲಾಗೆ ತಂಬಿದೊರೈ ಒತ್ತಾಯ.
 * ತಂಬಿಗೆ ಜೊತೆಗೆ ಬಕೆಟ್ಟೂ...

ಸಿದ್ದು ಸಿಎಂ ಆಗಿಯೇ ಇದ್ರೆ ಕಾಂಗ್ರೆಸ್‌ ಸರ್ವನಾಶ: ಪೂಜಾರಿ.
* ಹೈಕಮಾಂಡ್‌ ಕೊಟ್ರೂ ಪೂಜಾರಿ ಕೊಡಲ್ಲ ಅಂತಾಯ್ತು!

ಡಿ.31ಕ್ಕೆ ಮೋದಿ ಅನಿರೀಕ್ಷಿತ ಬಜೆಟ್‌.
* ನಿರೀಕ್ಷಿತವಾಗಿ ಅವರು...

ಕಾಣಿಕೆ ಪಡೆದು ಶ್ಯಾಮ್‌ ಭಟ್‌ ನೇಮಕ: ಶೆಟ್ಟರ ಆರೋಪ

-ಪೂಜೆ ಮಾಡಿಸ್ಕೊಂಡಿದ್ರಾ..?

ಬಿಕಾಂನಲ್ಲಿ ಗಣಿತ, ಭೌತಶಾಸ್ತ್ರ ಓದಿದ ಶಾಸಕರು

-ಆರ್ಟ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್‌ ಓದಿದವ್ರೂ...

ಹೋಟೆಲ್‌ ಉದ್ಯಮಿಗಳಿಂದ ಕ್ರಿಕೆಟ್‌ ಲೀಗ್‌
* ಬೋಂಡಾ ಮಾಡುವ ಕೈ ಬೌಲಿಂಗೂ ಮಾಡುತ್ತೆ ಅಂದಂಗಾಯ್ತು!

ದೆಹಲಿ ಉಪರಾಜ್ಯಪಾಲರಾಗಿ ಅಜಿಲ್‌ ಬೈಜಾಲ್‌ ಕೇಜ್ರಿವಾಲ್‌ ತೊಡೆ
* ತಟ್ಟೋಕೆ...

ಕೊನೆಗೂ ಸಿಎಂ ಭೇಟಿಗೆ ಸಮಯ ಕೊಟ್ಟ ಪಿಎಂ
* ಸಮಯ ಎಎಂಗೆ ಕೊಟ್ಟಿದ್ದಾರಾ? ಪಿಎಂಗೆ ಕೊಟ್ಟಿದ್ದಾರಾ?

ಪರಂ ಕಿವುಡರ ಶಾಲೆಯ ಹೆಡ್‌ಮೇಷ್ಟ್ರು: ಪ್ರಸಾದ್‌
* ಅವ್ರು ಏನು ಹೇಳಿದ್ರೂ ಅಂತ...

ಕಾಂಗ್ರೆಸ್‌ನಿಂದ ದಾಖಲೆ ಕೇಳಿದ್ದ ಸ್ವಾಮಿ ಅರ್ಜಿ ವಜಾ
* ಅಬ್ಬ.. "ಸ್ವಾಮಿ'ಯೇ ಕಾಪಾಡು!

ಗುಜರಾತಲ್ಲಿ ಜಾನಪದ ಗಾಯಕರ ಮೇಲೆ ನೋಟುಗಳ ಮಳೆ..!
* "ಮಳೆ'ಯಿಂದಾಗಿ ಗಾಯನ ಅರ್ಧಕ್ಕೇ ಸ್ಥಗಿತ ಆಯ್ತಾ...

ಧ್ವಜ ಹಾರಿಸೋದಕ್ಕೆ ಮಂತ್ರಿ ಸ್ಥಾನ ಸೀಮಿತ: ಬಸವರಾಜ ರಾಯರೆಡ್ಡಿ

-ಭಿನ್ನಮತದ ಧ್ವಜಾನಾ? ಯಾವ ಧ್ವಜ ಅನ್ನೋದು ಇಂಪಾರ್ಟೆಂಟು

ಡಿಸೆಂಬರ್‌ ನಂತರವೂ ಜನರಿಗೆ ಬೇಕಾದಷ್ಟು ನಗದು ಸಿಗದು.

-...

ಆಧಾರ್‌ ಪೇಮೆಂಟ್‌ ಆ್ಯಪ್‌ಗೆ ನಾಳೆ ಚಾಲನೆ
* ಪೇಮೆಂಟ್‌ ಮಾಡಿದ್ದಕ್ಕೆ ಆ್ಯಪೇ ಆಧಾರ!

ನೋಟು ರದ್ದತಿ ಭಾರತ ನಗದು ಆರ್ಥಿಕತೆಯ ನಾಶ: ರಾಹುಲ್‌ ಗಾಂಧಿ
* ಇದು ಕಾಂಪ್ಲಿಮೆಂಟೋ ಬೈಗುಳವೋ...

ರಾಹುಲ್‌ ಮಾತಾಡಲು ಕಲಿತಿದ್ದು ಸಂತೋಷ, ಎಲ್ಲಿ ಭೂಕಂಪವಾಗಿದೆ ಎಂದು ನನಗೆ ತಿಳಿಸಿ: ಮೋದಿ ವ್ಯಂಗ್ಯ
* ಅವರು ಆಡಿದ್ದು ಒಂದೇ ಮಾತರಂ!

ಪಾರ್ಕಿಂಗ್‌ ಜಾಗ ಇದ್ದರಷ್ಟೇ ಕಾರು ನೋಂದಣಿ.
* ಇದೊಂಥರ...

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರೀ ಲಂಚ ಸ್ವೀಕಾರದ ಗಂಭೀರ ಆರೋಪ.
*ಅಂತೂ ರಾಹುಲ್‌ ರಾಕ್ಸ್‌!

ಹಳೇ ನೋಟು ಜಮೆ: 5,000 ರೂ.ನಿರ್ಬಂಧ ಸಡಿಲ. ಕೆವೈಸಿ ಪಾಲಿಸುವ ಗ್ರಾಹಕರಿಗೆ ಯಾವುದೇ ವಿಚಾರಣೆ...

ಪ್ರಧಾನಿ ಮೋದಿ ಬಟ್ಟೆ ಬದಲಿಸಿದಂತೆ ಆರ್‌ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್‌ ಗಾಂಧಿ
* ಬಟ್ಟೆ ಬದಲಾಯಿಸೋದನ್ನು ಅವರು ಯಾಕ್‌ ನೋಡಿದ್ರೋ ಗೊತ್ತಾಗ್ಲಿಲ್ಲ!

ಸ್ಪೀಕರ್‌ ದಂಡ ಕಸಿದು ಟಿಎಂಸಿ ಶಾಸಕ...

ಮಾಯಾವತಿ ಹುಟ್ಟುಹಬ್ಬಕ್ಕೆ ಈ ಬಾರಿ ನೋಟಿನ ಹಾರ ಇಲ್ಲ.
* ಪಿಂಕ್‌ ಹಾರ ದುಬಾರಿ ಅಂತ ಗೊತ್ತಾಗಿರಬೇಕು!

ಐಪಿಎಲ್‌ 10ನೇ ಆವೃತ್ತಿ: ಇಶಾಂತ್‌, ಪೀಟರ್ಸನ್‌, ಸ್ಟೇನ್‌ ಕೈಬಿಟ್ಟ ಫ್ರಾಂಚೈಸಿಗಳು...

ಜಿಎಸ್‌ಟಿ ಜಾರಿ ಜುಲೈಗೆ ಮುಂದೂಡಿಕೆ ಸಾಧ್ಯತೆ.

-ಬೇಡ.. ಹೋಗ್ಲಿ ಬಿಡಿ, ಮುಂದಿನ ಸರ್ಕಾರವೇ ಮಾಡ್ಲಿ!

ನೋಟು ರದ್ದತಿ ಬಗ್ಗೆ ಮೋದಿ ಪತ್ನಿ ಖುಷ್‌.

- ಮನಮೋಹನ ಸಿಂಗ್‌ ಎಲ್ಪಿಜಿ ಬೆಲೆ ಜಾಸ್ತಿ...

ನೋಟು ಸರಬರಾಜು ಮಾಡಿ, ಇಲ್ಲವೇ ಉತ್ತರಪ್ರದೇಶ ಚುನಾವಣೆ ಮುಂದೂಡಿ: ಬಿಜೆಪಿಗೆ ಆರೆಸ್ಸೆಸ್‌ ಸಂದೇಶ
* ಅಪ-ನಗದೀಕರಣ ವರ್ಸಸ್‌ ರಾಜಕಾರಣ!

ಖಾತೆಗೆ ದಿಢೀರ್‌ 2 ಲಕ್ಷ ತುಂಬಿದವರಿಗೆ ಸಂಕಷ್ಟ.
*  ...

2000 ರೂ. ನೋಟು ಪುಡಿ ಪುಡಿ:
* ದುಡ್ಡನ್ನ ಪುಡಿ ಮಾಡ್ತಾನೆ ಅಂತ ಮಕ್ಕಳನ್ನ ಬೈತಿದ್ರು. ನಿಜ ಆಯ್ತು!

ನನ್ನನ್ನು ಹೀಗೇ ಭೇಟಿ ಆಗ್ತಾ ಇರಿ...: ರಾಹುಲ್‌ ಗಾಂಧಿಗೆ ಹೇಳಿದ ಮೋದಿ
*...

ಕಾರ್ಡ್‌ ಬಳಸಿ ಬಹುಮಾನ ಗೆಲ್ಲಿ.ಮೆಗಾ ಡ್ರಾದಲ್ಲಿ 25 ಲಕ್ಷ ರೂ. 50 ಲಕ್ಷ ರೂ. 1 ಕೋಟಿ ರೂ.
*ಗೆದ್ದದ್ದನ್ನು ಬ್ಲಾಕ್‌ ಮನಿ ಅಂತ ಕಿತ್ಕೊಂಡ್ರೆ ಕಷ್ಟ!

ಅಪನಗದೀಕರಣ ಬಗ್ಗೆ ರಾಷ್ಟ್ರಪತಿಗೆ ದೂರು...

ಹೊಸ ನೋಟುಗಳು ಬಿಡುಗಡೆ ಆಗುವಾಗ ಕಣ್ಣಿಡಲು ಆರ್‌ಬಿಐ ಸೂಚನೆ

-ನೋಟಿನ ಮೇಲಿರಲಿ ನೋಟ!

ಬಡವರ ವಿರುದ್ಧ ಮೋದಿ ಯುದ್ಧ: ರಾಹುಲ್‌ ವಾಗ್ಧಾಳಿ

-ಮೋದಿ ವಿರುದ್ಧ ರಾಹುಲ್‌ ಕ್ರುದ್ಧ!

...

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಮಹಿಳೆ ಜಯಾ ಪುತ್ರಿ ಅಲ್ಲ.
*ಜಾಲತಾಣ ಪುತ್ರಿ!

ಉತ್ತರ ಭಾರತದಲ್ಲಿ ಮೈಕೊರೆವ ಚಳಿ: ದೇವರಿಗೂ ವುಲ್ಲನ್‌ ಸ್ವೆಟರ್‌.
* ಸ್ವೆಟರ್‌ ಅಲಂಕಾರ!

...

Back to Top