CONNECT WITH US  

ನಸುಕಿನ ನಸುನಗು

ಪಚ್ಚ: ಯಾಕೆ ಇಷ್ಟೊಂದು ಜನ ಇದ್ದೀರಿ? ಏನಾಯ್ತು?

ಪಕ್ಕದ್ಮನೆಯವ: ನಿಮ್ಮ ಮನೆಗೆ ಹಾವು ನುಗ್ಗಿದೆ...

ಪಚ್ಚ: ಅಷ್ಟೇನಾ... ನಾನು ತವರಿಗೆ...

ಹೆಂಡತಿ: ತಗೊಳ್ಳಿ ಜೀರ್ಣ ಶಕ್ತಿ ಮಾತ್ರೆ... ಮೂರು ಹೊತ್ತು ತಿನ್ನಿ...
ಪಚ್ಚ: ನಂಗ್ಯಾಕೆ ಕೊಡ್ತಿದೀಯಾ?
ಹೆಂಡತಿ: ನಿನ್ನೆ 2 ರೇಷ್ಮೆ ಸೀರೆ ತಗೊಂಡೆ... ವಿಷಯ ಗೊತ್ತಾದ್ರೆ ನಿಮಗೆ ತಿಂದದ್ದು...

ಮರಿಪಚ್ಚ: ಅಪ್ಪಾ, ಕಾಗೆ ಕೂಗಿದ್ರೆ ನೆಂಟ್ರಾ ಬರ್ತಾರೇಂತ ಅರ್ಥಾನಾ? 

ಪಚ್ಚ: ಹೌದು...

ಮರಿಪಚ್ಚ: ಮತ್ತೆ ಹೋಗ್ಬೇಕಾದ್ರೆ?

...

ಗುಂಡ: ನಿನ್ನ ಹೆಂಡ್ತಿ ಯಾವಾಗ್ಲೂ ಅಡುಗೆ ಮನೇಲಿ ಇರ್ತಾಳಲ್ಲ.. ಅವ್ಳಿಗೆ ಅಡುಗೆ ಅಂದ್ರೆ ಅಷ್ಟು ಇಷ್ಟಾನಾ?
ಪಚ್ಚ: ಪಕ್ಕದ್ಮನೆಯಾಕೆ ಜೊತೆ ಮಾತಾಡೋಕೆ ಸುಲಭವಾಗೋದು ಅಲ್ಲೇ, ಅದ್ಕೇ  ಅಲ್ಲಿರ್ತಾಳೆ!

ಗುಂಡ: ನೀವು ಗಂಡ ಹೆಂಡ್ತಿ ಜಗಳ ಆಡ್ತಿಲ್ವಲ್ಲ.. ಈ ಸುಖಿ  ಸಂಸಾರದ ಗುಟ್ಟೇನು?
ಪಚ್ಚ: ಹೆಂಡ್ತಿಗೆ ಸ್ಮಾರ್ಟ್‌ ಫೋನ್‌ ಕೊಟ್ಟು, ವಾಟ್ಸಪ್‌ಗೆ ಸೇರಿಸಿದ್ದೀನಿ.ಅದ್ರಲ್ಲೇ ಬ್ಯುಸಿಯಾಗಿರ್ತಾಳೆ!

ಪಚ್ಚ: ನಿನ್ನನ್ನು ಸಂಪೂರ್ಣವಾಗಿ ಅರ್ಥ ಮಾಡ್ಕೊಬೇಕು ಅಂತ ಆಸೆ ಕಣೇ...

ಪ್ರೇಯಸಿ: ಸರಿ ಹಾಗಾದ್ರೆ... ನನ್ಜೊತೆ ಒಂದಿಡೀ ದಿನ ಶಾಪಿಂಗ್‌ ಮಾಡು!

ಪಚ್ಚ: ನೀವು ಕೊಟ್ಟ ಚೀಟಿಲಿದ್ದ ಎಲ್ಲಾ ಮಾತ್ರೆ ಸಿಕ್ತು . ಆದ್ರೆ ಚೀಟಿ ಹಿಂದೆ ಬರ್ದಿದ್ದ ಮಾತ್ರೆ ಸಿಕ್ಕಿಲ್ಲ.
ಡಾಕ್ಟ್ರು : ರೀ... ಅದು ಮಾತ್ರೆ ಹೆಸ್ರಲ್ಲ... ಪೆನ್ನು ಬರೀಲಿಲ್ಲ ಅಂತ ಸುಮ್ನೆ ಗೀಚಿದ್ದೆ...

ಪಚ್ಚ: ನಂಗೆ 20 ಜನ ಮಕ್ಕಳು...
ಗುಂಡ: ಫ್ಯಾಮಿಲಿ ಪ್ಲಾನಿಂಗ್‌ನವ್ರು ಬರ್ಲಿಲ್ವಾ?
ಪಚ್ಚ: ಬಂದಿದ್ರು. ಅಂಗನವಾಡಿ ಅಂತ ತಿಳ್ಕೊಂಡು ವಾಪಸ್‌ ಹೋದ್ರು!

ಪರೀಕ್ಷೆ ಟೈಮಲ್ಲಿ..
ಮರಿಪಚ್ಚ: ಅಪ್ಪಾ ನಾನು ಒಂದರ್ಧ ಗಂಟೆ ಟೀವಿ ನೋಡ್ಲಾ?

ಪಚ್ಚ: ಹಾಂ. ಬೇಕಾದ್ರೆ ನೋಡು. ಆದ್ರೆ ಆನ್‌ ಮಾಡ್ಬೇಡ!

ಮೇಷ್ಟ್ರು: ಶಂಕುಸ್ಥಾಪನೆ ಅಂದರೇನು?
ಮರಿಪಚ್ಚ: ಒಳ್ಳೆ ಕೆಲ್ಸಕ್ಕೆ ದೊಡ್ಡವ್ರು ಬಂದು "ಕಲ್ಲು ಹಾಕೋದು'!

ಪಚ್ಚ: ಪಲಾವ್‌ನಲ್ಲಿ ಯಾಕೆ ಟೂತ್‌ಪೇಸ್ಟ್‌ ವಾಸನೆ ಬರ್ತಿದೆ?
ಪತ್ನಿ: ಮನೆಯಲ್ಲಿ ಲವಂಗ, ಪುದಿನ,ಉಪ್ಪು ಇರಲಿಲ್ಲ. ಪೇಸ್ಟಲ್ಲಿ ಅದೆಲ್ಲ ಇದೆ ಅಂತಿತ್ತು. ಸ್ವಲ್ಪ ಹಾಕಿದೆ,ಅಷ್ಟೆ

ಪಚ್ಚ: ಮನೆ ಹಿತ್ತಿಲಲ್ಲಿ ಕಸ ಸುಡೋ ಹಾಗೂ ಇಲ್ಲ ಕಣೋ...
ಗುಂಡ: ಯಾಕೆ, ಏನಾಯ್ತು?
ಪಚ್ಚ: ನಿನ್ನೆ ಒಂದಷ್ಟು ಕಸ ಸುಟ್ಟೆ.ಬೆಳಗ್ಗೆ ಪಕ್ಕದ್ಮನೆ ಸಿದ್ಧ ಕೇಳಿದ..."ಎಷ್ಟಿತ್ತು?' ಅಂತ!

ವಾಟ್ಸಪ್‌ನಲ್ಲಿ..
ಪಚ್ಚ: ಲೋ.. ಜೋಕ್‌ ಕಳ್ಸು..
ಗುಂಡ: ನಾನು ಗರ್ಲ್ಫ್ರೆಂಡ್‌ ಜೊತೆ ಬ್ಯುಸಿ ಇದ್ದೀನಿ..
ಪಚ್ಚ: ಸೂಪರ್‌ ಚೆನ್ನಾಗಿದೆ.. ಹೀಗೆ ಇನ್ನೊಂದು ಕಳ್ಸು !

 ಪಚ್ಚ: ತಲೆಗೂದಲು ಚಿಕ್ಕದಾಗಿ ಕತ್ತರಿಸು
 ಕ್ಷೌರಿಕ: ಚಿಕ್ಕದಾಗಿ ಅಂದ್ರೆ ಎಷ್ಟು ಸಾರ್‌?
ಪಚ್ಚ: ನನ್ನ ಹೆಂಡ್ತಿ ಕೈಗೆ ಸಿಗದಷ್ಟು! 

ಪಚ್ಚ: ನಾಳೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಬುತ್ತಿಗೆ ಹಾಕಿ ರೆಡಿ ಮಾಡಿಟ್ಟಿರು.

ಹೆಂಡತಿ: ಎಲ್ಲಿಗ್ರೀ ಹೋಗ್ತಾ ಇದ್ದೀರಾ?

ಪಚ್ಚ...

ಪಚ್ಚ  ಫಿಟ್‌ನೆಸ್‌ ಸೆಂಟರ್‌ ಇಟ್ಟಿದ್ದ..
ಹೆಂಗಸು: ನಾನು ಯುವತಿಯಂತೆ ಕಾಣಬೇಕಾದ್ರೆ ಏನು ಮಾಡ್ಬೇಕು?
ಪಚ್ಚ: ಸದಾ ಮುದುಕಿಯರ ಮಧ್ಯೆಯೇ ಕಾಣಿಸಿಕೊಳ್ಳಿ!

ಮರಿಪಚ್ಚ: ಅಪ್ಪಾ ನಾನಿನ್ನು ಶಾಲೆಗೆ ಹೋಗಲ್ಲ.. ಕೆಲ್ಸಕ್ಕೆ ಹೋಗ್ತೀನಿ..
ಪಚ್ಚ: ಬರೀ ಎರಡನೇ  ಕ್ಲಾಸು ಕಲ್ತಿದ್ದೀಯ ಏನು ಕೆಲ್ಸ ಮಾಡ್ತೀಯಾ?
ಮರಿಪಚ್ಚ: 1ನೇ ಕ್ಲಾಸು ಮಕ್ಕಳಿಗೆ ಟ್ಯೂಷನ್‌ ಕೊಡ್ತೀನಿ...

ಪಚ್ಚ ಮತ್ತವನ ಗೆಳೆಯ ಟೆರೇಸ್‌ ಮೇಲೆ ಮಲಗಿದ್ದರು. ಆಗ ಮಳೆ ಶುರುವಾಯ್ತು

ಪಚ್ಚ: ಆಕಾಶ ತೂತಾಗಿದೆ, ನಡಿ ಕೆಳಗೆ  ಹೋಗೋಣ.
(ಅಷ್ಟರಲ್ಲಿ ಮಿಂಚು ಬಂತು) 

ಗೆಳೆಯ...

ಶಿಕ್ಷಕ: ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೋ, ಎಲ್ಲ ಹೆಣ್ಣು ಮಕ್ಕಳನ್ನು ನಿನ್ನ ಸೋದರಿಯರೆಂದೇ ಭಾವಿಸು.
ಪಚ್ಚ: ಹಾಗೆ ಯೋಚಿಸಿದರೆ ನಮ್ಮಪ್ಪನ ಚಾರಿತ್ರ್ಯಕ್ಕೆ ಧಕ್ಕೆ ತಂದಂತಾಗುತ್ತದೆ ಸರ್‌!

ಬ್ಯಾಂಕ್‌ ವ್ಯವಸ್ಥಾಪಕ: ನಿಮಗೆ ಇಂಟರೆಸ್ಟ್‌ ಇಲ್ಲದೇ ಸಾಲ ಕೊಡ್ತಾ ಇದ್ದೀವಿ.
ಪಚ್ಚ: ಇಂಟರೆಸ್ಟ್‌ ಇಲ್ಲದ ಮೇಲೆ ಸಾಲ ಯಾಕೆ ಕೊಡ್ತೀರಾ? ಬೇಡ ಬಿಡಿ.

Back to Top