CONNECT WITH US  

ಟ್ವಿಟಾಪತಿ

ಹೆಸರು ಬದಲಾವಣೆ ಎಂಬ ಕ್ರಮ ಭಾರತ ಎಂಬ ಒಕ್ಕೂಟ ವ್ಯವಸ್ಥೆಯನ್ನು ನಾಶಗೊಳಿಸುವ ತಂತ್ರವಾಗಿದೆ. ಅದು ಗಂಗಾ, ಯಮುನಾ ಸೇರಿದಂತೆ ಹಲವು ಪವಿತ್ರ ನದಿಗಳು, ಹಲವಾರು ಜನಾಂಗಗಳನ್ನು ಹೊಂದಿದೆ.
●ಮೆಹಬೂಬಾ
ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಅದನ್ನು ಕಂಡು ಹಲವರಿಗೆ ಹೊಟ್ಟೆ ಉರಿಯಾಗುತ್ತಿದೆ. ಅಸೂಯೆ ಎನ್ನುವುದಕ್ಕೆ ವಿಶ್ವದಲ್ಲಿ ಮದ್ದಿಲ್ಲ.
●ಭಾಗ್ಯದಾತಾ
ರಾಹುಲ್‌ ಗಾಂಧಿ ಹೋದಲ್ಲೆಲ್ಲ ರಫೇಲ್‌, ಜಿಎಸ್‌ಟಿ, ನೋಟು ಅಮಾನ್ಯ ವಿಚಾರಗಳನ್ನೇ ಪ್ರಸ್ತಾಪ ಮಾಡುತ್ತಿದ್ದಾರೆ. ಸಭೆಗಳಲ್ಲಿ ಮಾತನಾಡಲು ಅವರಿಗೆ ಬೇರೆ ವಿಚಾರವೇ ಸಿಗುತ್ತಿಲ್ಲವೇಕೆ?
●ಕುಮಾರಿ
ಕೇಸರಿ ಭಯೋತ್ಪಾದನೆ ಎಂಬ ಪದ ಪುಂಜವನ್ನು ವಿರೋಧಿಸದವರೆಲ್ಲರಿಗೂ ಈಗ ನಗರ ನಕ್ಸಲರು ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖೀಸಿದ್ದನ್ನು ಆಕ್ಷೇಪಿಸುತ್ತಿದ್ದಾರೆ.
●ಸುನಂದಾ ವಸಿಷ್ಠ
ತನ್ನ ವಿರೋಧಿಗಳನ್ನು ಮೋದಿ ಸಹಿಸುತ್ತಿಲ್ಲ. ಹೀಗಾಗಿಯೇ ಅವರನ್ನು ನಗರ ನಕ್ಸಲರು ಎಂದು ಅವರು ಕರೆದಿದ್ದಾರೆ.
● ಜ್ಯೋತಿ
ನಗರ ನಕ್ಸಲರನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರೂ ಹಿಂದೂ ವಿರೋಧಿಗಳಂತೂ ಹೌದು.
●ಅಜಯ್‌ ಶಾಸ್ತ್ರಿ
ನಾವು ಚಿಪ್‌ ಹೊಂದಿರುವ 2000 ರೂ. ನೋಟುಗಳ ಸುದ್ದಿ ಕೇಳಿ ಎರಡು ವರ್ಷವಾಯಿತು!
●ರಿಜಾಯ್‌
ಥಗ್ಸ್‌ ಆಫ್ ಹಿಂದುಸ್ತಾನ್‌ ಸಿನಿಮಾ ನೋಡಿದ ನಂತರ ಸರ್ಕಾರವು ಸಾರಿಡಾನ್‌ ನಿಷೇಧವನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
●ಬಾಲಿವುಡ್‌ ಮನುಷ್ಯ
"ಥಗ್ಸ್‌ ಆಫ್ ಹಿಂದುಸ್ತಾನ' ಸಿನಿಮಾವನ್ನು ನೋಡಿದರೆ ಬಾಲಿವುಡ್ಡಿಗರಿಗೆ ಐತಿಹಾಸಿಕ ಸಿನಿಮಾ ನಿರ್ಮಿಸಲು ಗೊತ್ತಿಲ್ಲ ಎಂದು ಭಾಸವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಮರಾಠಿ ಚಿತ್ರರಂಗದಲ್ಲಿ ಐತಿಹಾಸಿಕ ಸಿನಿಮಾಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.
●ರತ್ನಾಕರ್‌

ಟ್ವಿಟರ್‌ ಎನ್ನುವುದು ಸಂತೆಯಿದ್ದಂತೆ ಅಲ್ಲಿ ನಿಮ್ಮ ಅಭಿಪ್ರಾಯ ಗದ್ದಲದಲ್ಲಿ ಕೇಳಿಸದ ಧ್ವನಿಯಷ್ಟೇ!
●ದುಲಂಧರ್‌
ರಫೇಲ್‌ ವಿಚಾರದಲ್ಲಿ ರಾಹುಲ್‌ ಸ್ಪಷ್ಟ ಪುರಾವೆಯಿಲ್ಲದೇ ದಾಳಿ ಮಾಡುತ್ತಾ ಹೋಗುವುದು ನಿಲ್ಲಲಿ. ಪುರಾವೆಯಿದ್ದರೆ ಮಾತನಾಡಲಿ, ಇಲ್ಲದಿದ್ದರೆ ನಗೆಪಾಟಲಿಗೀಡಾಗುತ್ತಾರಷ್ಟೆ.
●ಮನೋಜ್‌ ಮುಕುಂದ್‌
ಸಭ್ಯ ಭಾಷೆಯ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ಸಿಗರಿಗೆ ದಿವ್ಯ ಸ್ಪಂದನಾ(ರಮ್ಯ) ಭಾಷೆ ಸಹನೀಯವೇ?
● ತೂಜಾನೇನಾ

Pages

Back to Top