CONNECT WITH US  

ಟ್ವಿಟಾಪತಿ

"ಜನರಲ್‌ ಕೆಟಗರಿಯ 10 ಪ್ರತಿಶತ ಬಡವರಿಗೆ ಮೀಸಲಾತಿ' ಎಂಬ ಸಾಲು ಪ್ರಗತಿಪರರ ಕಿವಿಗೆ "ಬ್ರಾಹ್ಮಣರಿಗೆ ಮೀಸಲಾತಿ' ಎಂದೇಕೆ ಕೇಳಿಸುತ್ತಿದೆ? ಒಮ್ಮೆ ಅವರು ತಮ್ಮ ಕಿವಿ ಚೆಕ್‌ ಮಾಡಿಸಿಕೊಳ್ಳುವುದು ಒಳಿತು!
● ತೂಜಾನೇನಾ
ನಿಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕೆಂದರೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ದ್ವಿಗುಣ ಹೂಡಿಕೆ ಮಾಡಿ.
●ರಾಬಿನ್‌ ಶರ್ಮಾ
ಚುನಾವಣೆಗಳು ಹತ್ತಿರವಾಗುತ್ತಿದೆ. ಮನಸ್ಸು ಶಾಂತವಾಗಿರಬೇಕೆಂದರೆ ಟ್ವಿಟರ್‌, ಫೇಸ್‌ಬುಕ್‌ನಿಂದ ಲಾಗ್‌ಔಟ್‌ ಆಗಿ. ಟಿ.ವಿ. ಆಫ್ ಮಾಡಿ, ಪತ್ರಿಕೆಗಳನ್ನು ಮಡಚಿಡಿ.
●ರೋಹಿತ್‌ ಅಗ್ನಿಹೋತ್ರಿ
10 ಪ್ರತಿಶತ ಕೋಟಾ ವಿಚಾರ ಪ್ರಕಟವಾಗಿದ್ದೇ ಅಚಾನಕ್ಕಾಗಿ ದೇಶದ ಪ್ರಗತಿಪರರು ಮೀಸಲಾತಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆಮಾಡಲಾರಂಭಿಸಿದ್ದಾರೆ!
●ಮೊನಿಕಾ
ಪಶ್ಚಾತ್ತಾಪಕ್ಕೆ ಅತ್ಯುತ್ತಮ ಪರಿಹಾರವೆಂದರೆ ಧೈರ್ಯ. ಕೆಚ್ಚೆದೆಯಿಂದ ಸಾಗಿದವನು ಪೆಚ್ಚಾಗಿ ಕೂಡುವುದಿಲ್ಲ.
●ರಾಬಿನ್‌ ಶರ್ಮಾ
ಮೀಸಲಾತಿ ವ್ಯಾಪ್ತಿಯಿಂದ ಹೊರಗಿದ್ದ ಕಾರಣಕ್ಕಾಗಿ ಸಿಬಿಎಸ್‌ಸಿಯಲ್ಲಿ 95 ಪ್ರತಿಶತ ಅಂಕ ಗಳಿಸಿದ್ದರೂ ಒಳ್ಳೆಯ ಕಾಲೇಜಿನಲ್ಲಿ ಜಾಗ ಪಡೆಯಲು ನಾನು ಒದ್ದಾಡಬೇಕಾಯಿತು. 10 ಪ್ರತಿಶತ ರಿಸರ್ವೇಷನ್‌ ನೀಡುವ ನಿರ್ಧಾರ ಸ್ವಾಗತಾರ್ಹ.
●ರಾಜಿ ಸುಬ್ರಮಣ್ಯಂ
ಹೆಚ್ಚು ಜ್ಞಾನವಂತರಾದಷ್ಟೂ ಹೆಚ್ಚು ಧೈರ್ಯಶಾಲಿಗಳಾಗುತ್ತೀರಿ. ಓದಿಗೆ ಪ್ರಾಮುಖ್ಯತೆ ಕೊಡಿ
●ಅರ್ನಾಲ್ಡ್‌ ಶ್ವಾರ್ಟ್ಸ್‌ ನೆಗ್ಗರ್‌
ಆಸ್ಟ್ರೇಲಿಯನ್‌ ಕ್ರಿಕೆಟಿಗರನ್ನು ಭಾರತೀಯ ಕ್ರಿಕೆಟರ್‌ಗಳು ಈ ಪರಿ ಮೆತ್ತಗಾಗಿಸಿದ್ದು ಇದೇ ಮೊದಲಿರಬೇಕು. ಹ್ಯಾಟ್ಸಾಫ್ ಇಂಡಿಯನ್‌ ಟೀಂ!
●ತೂಜಾನೇನಾ
ನಾನು ಮಹಿಳಾ ಸಬಲೀಕರಣದ ಪರವಿದ್ದೇನೆ. ಆದರೆ, ಶಬರಿಮಲೆಗೆ ಮಹಿಳೆಯರ ಪ್ರವೇಶವು ಅಗತ್ಯವಿರಲಿಲ್ಲ. ಇದೊಂದು ಪ್ರಚೋದನಕಾರಿ ನಡೆ.
●ಶಶಿ ತರೂರ್‌
ರಿಷಭ್‌ ಪಂತ್‌ ನಿಜಕ್ಕೂ ಭರವಸೆ ಮೂಡಿಸಿರುವ ಆಟಗಾರ. ಧೋನಿ ನಿವೃತ್ತಿಯ ನಂತರ ಭಾರತಕ್ಕೆ ಅಗತ್ಯವಿರುವ ಕೀಪರ್‌-ಬ್ಯಾಟ್ಸ್‌ಮನ್‌ ಜಾಗವನ್ನು ಸಕ್ಷಮವಾಗಿ ತುಂಬುವ ಭರವಸೆ ಮೂಡಿಸುತ್ತಿದ್ದಾರೆ.
●ಭುವೇಂದ್ರ ಚಾವಾ
ಸಂಸದರು ಸಂಸತ್‌ನಲ್ಲಿ ಕಾಗದದ ವಿಮಾನಗಳನ್ನು ಎಸೆಯುತ್ತಿರುವುದನ್ನು ನೋಡಿದರೆ, ಕ್ಲಾಸ್‌ರೂಂನಲ್ಲಿ ಕುಳಿತುಕೊಳ್ಳಲೂ ಲಾಯಕ್ಕಿಲ್ಲದ ಇಂಥ ಜನ, ಸಂಸತ್‌ನಲ್ಲಿ ಹೇಗೆ ಕುಳಿತರು ಎಂಬ ಪ್ರಶ್ನೆ ಮೂಡುತ್ತದೆ.
●ಶೌರ್ಯದೀಪ್‌
ತರಗತಿಯ ಪರೀಕ್ಷೆಯಲ್ಲಿ ಫೇಲ್‌ ಆಗಿ, ಹೊರಗಡೆ ನಿಂತು ಸವಾಲು ಹಾಕುತ್ತಿರುವ ವಿದ್ಯಾರ್ಥಿಯಂತೆ ಆಗಿರುವ ವ್ಯಕ್ತಿ ಯಾರು?
● ಸುರೇಶ್‌ ಕುಮಾರ್‌
ನಿಮ್ಮ ಬದುಕಿನ ಅತ್ಯಂತ ಕೆಟ್ಟ ಗಳಿಗೆಯಲ್ಲಿ, ನಿಮ್ಮ ನೈಜ ಸ್ನೇಹಿತರ ಬಣ್ಣ ಬಯಲಾಗುತ್ತದೆ.
●ಸ್ನೇಹಾ
ರಫೇಲ್‌ ಡೀಲ್‌ ಬಗೆಗಿನ ಪ್ರಶ್ನೆಗಳಿಗೆ ವಿತ್ತ ಸಚಿವ ಅರುಣ್‌ ಜೇಟ್‌ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಂದ ಹಾಗೆ ಜೇಟಿÉ ಅವರು ರಕ್ಷಣಾ ಸಚಿವರಾಗಿದ್ದು ಯಾವಾಗ?
●ಸ್ವಾತಿ
ಇನ್ನು ಯಾವತ್ತೂ ಸತ್ಯವನ್ನೇ ನುಡಿಯಬೇಕು ಎನ್ನುವುದು ನನ್ನ ಈ ವರ್ಷದ ನಿರ್ಣಯವಾಗಿದೆ. ಅಂದ ಹಾಗೆ, ನಿನ್ನೆ ನಾನು 25 ಗಂಟೆಗಳ ಕಾಲ ಕೆಲಸ ಮಾಡಿದೆ.
●ನಾನಿ

Pages

Back to Top