CONNECT WITH US  

ಟ್ವಿಟಾಪತಿ

ಉಪಚುನಾವಣೆ ನೆಪವೊಡ್ಡಿ ಸಂಪುಟ ವಿಸ್ತರಣೆಯನ್ನು ದೋಸ್ತಿ ಸರ್ಕಾರ ಇನ್ನು ಒಂದು ತಿಂಗಳು ಮುಂದಕ್ಕೆ ಹಾಕಲಿದೆ, ಆ ನಂತರ ಲೋಕಸಭೆ ಚುನಾವಣೆಯನ್ನು ತೋರಿಸುತ್ತ ಇನ್ನೊಂದು ಆರು ತಿಂಗಳು ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕಲಿದೆ.
●ನಂದೀಶ್‌
ಲೋಕಸಭೆ ಚುನಾವಣೆಗೆ ಕೇವಲ ಐದಾರು ತಿಂಗಳ ಸಮಯ ಇರುವಾಗ ಯಾಕೆ ಉಪಚುನಾವಣೆ?ಸಮಯ ಇದ್ದಾಗಲೇ ಕೆಲಸ ಮಾಡದ ಈ ಸೋಂಬೇರಿ ರಾಜಕಾರಣಿಗಳು ಈ ಅಲ್ಪ ಸಮಯದಲ್ಲಿ ಅದೇನು ಕಡಿದು ಕಟ್ಟೆ ಹಾಕ್ತಾರೆ? ಚು.ಆಯೋಗ ಯೋಚನೆ ಮಾಡಬೆಕಿತ್ತಲ್ಲವೇ? ಸುಮ್ಮನೆ ದುಡ್ಡು ದಂಡ.
●ಆನಂದ್‌ ಜಿ ಬಿದರಕುಂದಿ
ಉಪ ಚುನಾವಣೆಗಳೇ ಅವಶ್ಯವಿಲ್ಲ. ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದವರನ್ನು ರಿಕ್ತಗೊಂಡ ಸ್ಥಾನಕ್ಕೆ ಆಯ್ಕೆ ಮಾಡಿ. ಇದು ಪಕ್ಷ ಬದಲಾವಣೆಯನ್ನೂ ತಡೆಯುತ್ತದೆ.
●ನಾರಾಯಣ ಬಾಲಾಜಿ
ನೋಟಾಗೆ ಮತ ಹಾಕುವುದರಿಂದ ಏನು ಲಾಭ? ಏನೂ ಇಲ್ಲ; ಆಯ್ಕೆಯೇ ಮಾಡದೇ ಇರುವ ಬದಲು ಸೆಕೆಂಡ್‌ ಚಾಯ್ಸ ಅನ್ನಾದ್ರೂ ಮಾಡುವುದು ಒಳ್ಳೆಯದಲ್ಲವೇ?
●ಮೋಹನ್‌ದಾಸ್‌ಪೈ
ನವೆಂಬರ್‌ 6ರಂದು ಮತ ಎಣಿಕೆಯಲ್ಲಿ ಆಯ್ಕೆಯಾಗುವ ಕರ್ನಾಟಕದ ಮೂರು ಲೋಕಸಭಾ ಸದಸ್ಯರ ಅವಧಿ ಎಷ್ಟಿರುತ್ತದೆ? ಗರಿಷ್ಠ 4 ತಿಂಗಳು. ಉಪಚುನಾವಣೆ ಅಗತ್ಯವಿತ್ತೇ?
●ಸುರೇಶ್‌ಕುಮಾರ್‌
ಹವಾಮಾನ ಬದಲಾವಣೆ ಆಗಿಲ್ಲ, ನಾವು ಬದಲಾಗಿದ್ದೇವೆ. ರುಪಾಯಿ ದುರ್ಬಲಗೊಂಡಿಲ್ಲ, ಡಾಲರ್‌ ಬಲಿಷ್ಠಗೊಂಡಿದೆ.
●ಗೀತ್‌
ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದೇ ಈಗ ಉಳಿದಿರುವ ಮಾರ್ಗ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲಾದರೂ ಈ ನಿರ್ಧಾರಕ್ಕೆ ಬರಲಿ.
●ಭಾವೇಶ್‌ ಜೋಶಿ
ನಿಮ್ಮ ಭಯಕ್ಕಿಂತಲೂ ಬೃಹತ್ತಾಗಿರಲಿ ನಿಮ್ಮ ಗುರಿ. ನಿಮ್ಮ ಅನುಮಾನಕ್ಕಿಂತಲೂ ದೊಡ್ಡದಾಗಿರಲಿ ನಿಮ್ಮ ಕನಸು.
●ರಾಬಿನ್‌ ಶರ್ಮಾ
ಪ್ರತಿ ಪಕ್ಷಗಳು ಪೆಟ್ರೋಲ್‌ ದರ ತಗ್ಗಿಸುವುದಕ್ಕೆ ಇದು ಸುಸಮಯ. ಈಗ ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದರೆ ನಗೆಪಾಟಲಿಗೀಡಾಗುತ್ತವಷ್ಟೆ!
●ತೂಜಾನೇನಾ
ಭಾರತ-ರಷ್ಯಾ ಒಪ್ಪಂದವನ್ನು ನೋಡಿ ಅತ್ತ ಅಮೆರಿಕ, ಇತ್ತ ಚೀನಾ ಹಲ್ಲು ಕಡಿಯುತ್ತಿವೆ. ಪಾಪ, ಪಾಕಿಸ್ತಾನ ಥರಗುಟ್ಟುತ್ತಿದೆ.
●ಸುಮುಖೀ ಎಸ್‌
ಸಿಟ್ಟಿನಲ್ಲಿ ಮಾತನಾಡದಿರುವುದೇ ಲೇಸು. ಸಿಟ್ಟು ಕಡಿಮೆಯಾಗುತ್ತದೆ, ಆದರೆ ನೀವಾಡಿದ ಮಾತು ಎದುರಿನವರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ.
●ವಿಸ್ಡಂಕೋಟ್ಸ್‌
ವಿರಾಟ್‌ ಕೊಹ್ಲಿ ಈಗ ಯಾವ ಹಂತಕ್ಕೆ ತಲುಪಿದ್ದಾರೆಂದರೆ ಅವರ ಸೆಂಚುರಿಗಳು ನನಗೆ ಅಚ್ಚರಿಯನ್ನಾಗಲಿ, ಸಂತೋಷವನ್ನಾಗಲಿ ಮೂಡಿಸುತ್ತಿಲ್ಲ. ಈ ವ್ಯಕ್ತಿ ಉಳಿದೆಲ್ಲ ಬ್ಯಾಟ್ಸ್‌ಮೆನ್‌ಗಳಿಗೆ ವಿಪರೀತ ಕೀಳರಿಮೆ ಹುಟ್ಟಿಸುವಷ್ಟು ಟ್ಯಾಲೆಂಟೆಡ್‌!
●ಇಂಡಿಯನ್‌ ಪಂಕ್‌
ಪೆಟ್ರೋಲ್‌ ಬೆಲೆ ಕನಿಷ್ಠ ಹತ್ತು ರೂಪಾಯಿಯಾದರೂ ಇಳಿದಾಗ ಮಾತ್ರ ನಿಜಕ್ಕೂ ಜನ ಸಾಮಾನ್ಯರು ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ.
●ನಿಶಾಂತ್‌ ಜೈನ್‌
ಪ್ರತಿಯೊಬ್ಬರ ಜೀವನದ ಉದ್ದೇಶವೂ ತಮ್ಮನ್ನು ತಾವು ಹುಡುಕುವುದೇ ಆಗಿರಬೇಕು. ಆತ್ಮಾವಲೋಕನವೇ "ನಿಮ್ಮತನ'ಕ್ಕೆ ಹೆಬ್ಟಾಗಿಲು.
●ರಾಬಿನ್‌ ಶರ್ಮಾ
2014ರಲ್ಲಿ ಕಾಂಗ್ರೆಸ್‌ ಅಧಿಕಾರದಿಂದ ಕೆಳಕ್ಕಿಳಿಯುವ ಹೊತ್ತಿಗೆ ಡೀಸೆಲ್‌ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ ಕೇವಲ 3.46 ರೂಪಾಯಿ ಇತ್ತು. ಮೋದಿ ಸರ್ಕಾರ ಈ ಸುಂಕವನ್ನು 15.33 ರೂಪಾಯಿ ಪ್ರತಿ ಲೀಟರ್‌ಗೆ ಏರಿಸಿದೆ.
●ರಣದೀಪ್‌ ಸಿಂಗ್‌ ಸುರ್ಜೇವಾಲಾ

Pages

Back to Top