CONNECT WITH US  

ಟ್ವಿಟಾಪತಿ

ಮಹಾನಗರಗಳು ಎಷ್ಟು ಹದಗೆಟ್ಟಿವೆ ಎಂದರೆ ಯಾವ ತಯ್ನಾರಿಯೂ ಅವನ್ನು ಬಚಾವು ಮಾಡದು. ಮಳೆಗೆ ಮತ್ತೆ ತತ್ತರಿಸಿದೆ ಮುಂಬೈ.
● ಅನಿರ್ಬಾನ್‌
ಟ್ವಿಟರ್‌ನಲ್ಲಿ ನಮ್ಮ ಕೇಂದ್ರ ಸಚಿವರಿಗೆ ಟ್ವೀಟ್‌ ಮಾಡಿದ ತಕ್ಷಣ ಸಮಸ್ಯೆ ಬಗೆಹರಿಸುತ್ತಾರೆ.ಆದರೆ ದೇಶದಲ್ಲಿ ಎಲ್ಲರೂ ಟ್ವಿಟರ್‌ ಬಳಕೆದಾರರಲ್ಲವಲ್ಲ!
●ತೂಜಾನೇನಾ
ನಿಮ್ಮ ಗುರಿಯ ಹಾದಿಯಲ್ಲಿ ಸೋಲೊಪ್ಪಿಕೊಳ್ಳಬೇಡಿ, ಯಾವಾಗಲೂ ಆರಂಭವೇ ಕಷ್ಟಕರವಾಗಿರುತ್ತದೆ.
●ರಾಬಿನ್‌ ಶರ್ಮಾ
ಅನೇಕ ಬಾರಿ ತಪ್ಪು ಪುನರಾವರ್ತನೆಯಾದರೆ ಅದನ್ನು ನಿರ್ಧಾರ ಎನ್ನುತ್ತಾರೆ.
●ಪೌಲೋ ಕೋಲ್ಹೋ
ಚೀನಾ ಮತ್ತು ನೇಪಾಳ ರೈಲ್ವೆ ನೆಟ್‌ವರ್ಕ್‌ ನಿರ್ಮಾಣ ಯೋಜನೆಯ ಬಗ್ಗೆ ಘೋಷಿಸಿವೆ.ಭಾರತದ ಹಿತಾಸಕ್ತಿಗೆ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ಏನು ಮಾಡುತ್ತಿದೆ?
●ಕೃಷ್ಣ ಬೈರೇಗೌಡ
ಯೋಗ ದಿನದಂದು ಮೋದಿ ವಿರೋಧಿಗಳು ನಿದ್ದೆಯಾದರೂ ಮಾಡುತ್ತಾರೋ ಇಲ್ಲವೋ?
●ತೂಜಾನೇನಾ
ವಿಶ್ವಸಂಸ್ಥೆ ಮಾನವಹಕ್ಕುಗಳ ಮಂಡಳಿಯು ವ್ಯವಸ್ಥಿತವಾಗಿ ಮಾನವ ಹಕ್ಕು ಉಲ್ಲಂಘನೆ ಮಾಡುವ ಆಡಳಿತಗಳನ್ನು ನೋಡುವುದು ಬಿಟ್ಟು, ಮಧ್ಯಪ್ರಾಚ್ಯದಲ್ಲಿನ ಪ್ರಾಮಾಣಿಕ ಪ್ರಜಾಪ್ರಭುತ್ವವಾಗಿರುವ ಇಸ್ರೇಲ್‌ ಅನ್ನೇ ಗುರಿಯಾಗಿಸುತ್ತಿದೆ.
●ಬೆಂಜಮಿನ್‌ ನೇತನ್ಯಾಹು
ನಾವು ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕಿಂತ, ಇನ್ನೊಬ್ಬರ ಜೊತೆ ಮಾತನಾಡಲಾರಂಭಿಸಿದಾಗ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ.
●ಇಟ್ಸ್‌ಲೈಫ್ಫ್ಯಾಕ್ಟ್
ನಿಮ್ಮ ಗಾಯಗಳು ನಿಮ್ಮನ್ನು "ನೀವಾಗಲು ಬಯಸದ' ವ್ಯಕ್ತಿಯಾಗಿಸದಿರಲಿ.
●ಪೌಲೋ ಕೋಹ್ಲೋ
ಹಿಂದೆ ಜಮ್ಮು-ಕಾಶ್ಮೀರದಲ್ಲಿ ಮುಫ್ತಿ ಸಾಹೇಬರು ನಿಧನರಾದಾಗ ಗವರ್ನರ್‌ ಆಡಳಿತ ಬಂತು. ಆಗ ಜಮ್ಮು-ಕಾಶ್ಮೀರ ಶಾಂತವಾಗಿತ್ತು. ಕಲ್ಲು ತೂರಾಟಗಳೂ ನಿಂತಿದ್ದವು
●ಮಧುಕೀಶ್ವರ್‌
ಜೀವನದಲ್ಲಿ ಎರಡು ಸಂಗತಿ ನೆನಪಿರಲಿ: ಒಂಟಿಯಾಗಿರುವಾಗ ನಿಮ್ಮ ಯೋಚನೆಗಳ ಮೇಲೆ ಗಮನವಿರಲಿ,ಜನರ ನಡುವಿದ್ದಾಗ ನಿಮ್ಮ ಮಾತಿನ ಮೇಲೆ ಗಮನವಿರಲಿ.
●ಅನುಪಮ್‌ ಖೇರ್‌
ಗೌರಿ ಲಂಕೇಶ್‌ ಕೊಲೆಯಾದಾಗ ದೆಹಲಿಯ ಪ್ರಸ್‌ಕ್ಲಬ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸೇರಿ ದವರೆಲ್ಲ ಏಕಕಂಠದಲ್ಲಿ ಹಿಂದೂ ಮೂಲಭೂತವಾದಿ ಶಕ್ತಿಗಳನ್ನು ದೂಷಿಸಿದರು. ಆದರೆ ಶುಜಾತ್‌ ಬುಖಾರಿ ಶ್ರದ್ಧಾಂಜಲಿ ಸಭೆಯಲ್ಲಿ ಒಬ್ಬರೂ ಪಾಕಿಸ್ತಾನ ಮತ್ತು ಜಿಹಾದಿ ಉಗ್ರರ ಬಗ್ಗೆ ಮಾತನಾಡಲಿಲ್ಲ!
●ಆರತಿ ಟಿಕೂ ಸಿಂಗ್‌
ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತರ ಕೋಮುವಾದವನ್ನು ಸಹಿಸಿಕೊಳ್ಳುವುದು ಅಥವಾ ಕಡೆಗಣಿಸುವುದು ಎಂದರ್ಥವಲ್ಲ. ಬೆಂಗಳೂರಿನಲ್ಲಿ ಕೋಮು ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸಿದ ತನ್ವೀರ್‌ ಹಷೀಮ್‌ನನ್ನು ಕೂಡಲೇ ಬಂಧಿಸಬೇಕು.
●ಜಾವೇದ್‌ ಅಖ್ತರ್‌
ಮನಸ್ಸು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದುಕೊಡಾಗ ಮಾತ್ರ ನೆಮ್ಮದಿ ಸಿಗುತ್ತದೆ. ಕೇವಲ ಪ್ರಾರ್ಥನೆಗಳಿಂದ ಮನೋನೆಮ್ಮದಿ ಸಿಗದು.
●ದಲೈ ಲಾಮಾ
ಟ್ವಿಟಾಪತಿ ವಿರಾಟ್‌ ಕೊಹ್ಲಿಯವರೇ ದೇಶದ ರಸ್ತೆಗಳಲ್ಲಿ ಪ್ರತಿ ದಿನ ಇಂಥ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ಹಾಲಿವುಡ್‌ ನಟರು ತೋರಿಸುವುದೇ ನಿಜವಾದ ಧೈರ್ಯ.ನಿಮ್ಮ ಕ್ರಮ ಚಕ್ರವರ್ತಿ ವಿರುದ್ಧ ತೆವಳಿದಂತೆ.
●ಅಶೋಕ್‌

Pages

Back to Top