CONNECT WITH US  

ಟ್ವಿಟಾಪತಿ

ಮೋದಿ ಫ್ಯಾಬ್‌ ಇಂಡಿಯಾದ ಟ್ರಯಲ್‌ ರೂಂಗೆ ಹೋಗಿ ಕುರ್ತಾ ಹಾಕುತ್ತಿದ್ದರು. ಕೂಡಲೇ ಅಲ್ಲೊಂದು ಕ್ಯಾಮೆರಾ ಕಂಡಿತು. ಪರಿಣಾಮ ಅಲ್ಲೇ ಭಾಷಣ ಶುರು... ಭಾಯಿ ಔರ್‌ ಬೆಹೆನೋ...!
- ಗೂಗಲ್‌ ಬಾಬಾ
ಕೇಂದ್ರ ಸರ್ಕಾರ 2014ರಲ್ಲಿ- ಯೆಮೆನ್‌ ನಿಂದ ಬನ್ನಿ, ಕೇಂದ್ರ ಸರ್ಕಾರ 2015ರಲ್ಲಿ- ಯೆಮೆನ್‌ನಿಂದ ಬನ್ನಿ, 2015ರಲ್ಲಿ ಯೆಮೆನ್‌ನಿಂದ ಭಾರತೀಯರ ರಕ್ಷಣೆ: ಈಗ ಮಾಧ್ಯಮಗಳು- ಕೇಂದ್ರ ಸರ್ಕಾರ ಭಾರತೀಯರನ್ನು ರಕ್ಷಿಸುತ್ತಿಲ್ಲ!
- ರವಿ
ಫೇಸ್‌ಬುಕ್‌: ಲಾಸ್ಟ್‌ ಸೀನ್‌ 8 ಸೆಕೆಂಡ್‌ ಹಿಂದೆ. ವಾಟ್ಸಪ್‌: ಲಾಸ್ಟ್‌ಸೀನ್‌ 4 ಸೆಕೆಂಡ್‌ ಹಿಂದೆ. ಪುಸ್ತಕ ಓದಿದ್ದು: ಲಾಸ್ಟ್‌ 1 ವರ್ಷದ ಹಿಂದೆ!
-ಮಸಾಲಾಟ್ವೀಕ್ಸ್‌
ಒಳ್ಳೆ ಸ್ಪಿನ್ನರ್‌ಗಳು ಯಾರು?: ಸಿಬಿಐ, ಟೀವಿಯವರು ಮತ್ತು ಪಕ್ಷದ ವಕ್ತಾರರು!
-ರಾಜೇಂದ್ರನ್‌
ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾದ ಮೇಲೆ ಅವಳಿ ಮಕ್ಕಳಾದ್ರೆ ಏನು ಹೆಸರಿಡುತ್ತಿದ್ದರು?: ಜಂತರ್‌-ಮಂತರ್‌!
- ಟ್ರೋಲಾಚಾರ್ಯ
ನಾನು: ಆ ಕೋಳಿ ರಸ್ತೆ ದಾಟಿದ್ಯಾಕೆ? ಪ್ರಗತಿಪರರು: ಅದು ಅಲ್ಪಸಂಖ್ಯಾತರ ವಿರೋಧಿ!
-ರೇಬಿಸ್‌
ಇಂಜಿನಿಯರಿಂಗ್‌ ಹುಡುಗನಿಗೆ ತಂದೆಯ ಎಚ್ಚರಿಕೆ: ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆಯಾದಂತೆ ನಿನ್ನ ಹನಿಮೂನ್‌ ಸಿಂಗಾಪುರದಿಂದ ಟಿ.ನರಸೀಪುರಕ್ಕೆ ಶಿಫ್ಟ್ ಆಗುತ್ತೆ ಹುಷಾರ್‌!
- ಗೂಗಲ್‌ ಬಾಬಾ
ಮಹಿಳೆಯರು ಎಂದರೆ ತೆರೆದ ಪುಸ್ತಕದಂತೆ.ಆದರೆ ಅಲ್ಲಿ ಬರೆದಿರುವುದು ಮಾತ್ರ ಯಾವುದೋ ಅರ್ಥವೇ ಆಗದ ಭಾಷೆಯಲ್ಲಿ!
ಪಾಲ್‌36
ಪುರುಷರು ಸಂಭಾವ್ಯ ಅತ್ಯಾಚಾರಿಗಳು ಅಂತ ನಂದಿತಾ ದಾಸ್‌ ಹೇಳಿದ್ದಾರೆ. ಅದಕ್ಕಾಗಿ ಗಂಡು ಮಗು ಹುಟ್ಟಿದಕೂಡಲೇ ನಿಮಿಷವೂ ತಡಮಾಡದೆ ಜೈಲಿಗೆ ಹಾಕಬೇಕು.
ಧವಳ್‌ ಪಟೇಲ್‌
ಟ್ರಯಲ್‌ ರೂಮಲ್ಲಿ ಸ್ಮತಿ ಇರಾನಿಯವರಿಗೆ ಕ್ಯಾಮೆರಾ ಪತ್ತೆ: ಅಲ್ಲಾ, ಅಷ್ಟು ಸಣ್ಣ ರೂಮ್‌ಗೆ ಅವರು ನುಗ್ಗಿದ್ದಾದರೂ ಹೇಗೆ..?
ಸ್ಟನ್‌ ರೇಡಿಯೋ
ಕೇಜ್ರಿವಾಲ್‌ ರಿಪೋರ್ಟ್‌ ಕಾರ್ಡ್‌: 50 ದಿನದ ಸರ್ಕಾರ. 10 ದಿನ ರಜೆ. 2 ಧರಣಿ. 4 ಕುಟುಕು ಕಾರ್ಯಾಚರಣೆ!
- ಗೀತಿಕಾ
ಕೇಜ್ರಿವಾಲ್‌: ಕಾಫಿ ಕುಡೀತೀಯೇನೋ? ಮಗ: ಬೇಡಪ್ಪಾ ನಂಗೆ ಐಸ್‌ಕ್ರೀಂ ಬೇಕು. ಕೇಜ್ರಿವಾಲ್‌: ನಂಗೇ ಉಲ್ಟಾ ಮಾತಾಡ್ತಾನೆ, ಪಕ್ಷದಿಂದ ಹೊರಗೆ ಹಾಕಿ!
- ನೀತಿ
ದೀಪಿಕಾ: ದೇವ್ರೇ ನನಗೆ ಆಶೀರ್ವಾದ ಮಾಡು. ದೇವರು: ನನ್ನ ಆಶೀರ್ವಾದ, ನನ್ನ ಚಾಯ್ಸು!
- ಕಿಂಗ್‌ ಡ್ರಂಕರ್ಡ್‌
ಏಪ್ರಿಲ್‌ ಫ‌ೂಲ್‌ ದಿನ: ಅಲಿಯಾ ಭಟ್‌ ಅಂಗಡಿಗೆ ಹೋಗಿ: ಒಂದು ಏಪ್ರಿಲ್‌ ಫ‌ೂಲ್‌(ಹೂ) ಕೊಡಿ.
-ಮಸಾಲಾಟ್ವೀಕ್ಸ್‌
ಬಿಜೆಪಿ ಸದಸ್ಯತ್ವ ವಿಧಾನ- ವ್ಯಕ್ತಿ (ಫೋನ್‌ನಲ್ಲಿ): ಸಾರ್‌, ಒಂದು ಪಿಜ್ಜಾ ಬುಕ್‌ ಮಾಡ್ಬೇಕಿತ್ತು..: ಆ ಕಡೆಯಿಂದ : ಧನ್ಯವಾದಗಳು, ನೀವಿಗ ಬಿಜೆಪಿ ಸದಸ್ಯರಾಗಿದ್ದೀರಿ!
- ಜಸ್ಟಿಸ್‌ ಅರ್ನಾಬ್‌

Pages

Back to Top