CONNECT WITH US  

ಟ್ವಿಟಾಪತಿ

ಸಲ್ಮಾನ್‌ ಖಾನ್‌ ಕಾರನ್ನು ಚಾಲಕನೇ ಚಲಾಯಿಸುತ್ತಿದ್ದನಂತೆ. ಮುಂದೇನು? "ನನ್ನನ್ನು ಗುಂಡಿಟ್ಟು ಕೊಂದಿಲ್ಲ, ನಾನೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆ' ಅಂತ ಕೃಷ್ಣಮೃಗದ ಮರಣ ಪತ್ರ ಸಿಗಬಹುದು!
- ರಾಜು ಅರುಣ್‌
ನಾನೇ ಡ್ರೈವ್‌ ಮಾಡ್ತಿದ್ದೆ ಅಂತ ಸಲ್ಮಾನ್‌ ಖಾನ್‌ರ ಡ್ರೈವರ್‌ ಹೇಳಿದ್ದೇಕೆ? "ಒಂದೋ ನನ್ನ ಸಿನಿಮಾ ನೋಡು ಅಥವಾ ನಾನೇ ಡ್ರೈವ್‌ ಮಾಡ್ತಿದ್ದೆ ಅಂತ ಹೇಳು' ಎಂದು ಸಲ್ಮಾನ್‌ ಕೊಟ್ಟ ಎರಡು ಆಯ್ಕೆಗಳಲ್ಲಿ ಡ್ರೈವರ್‌ ಎರಡನೆಯದನ್ನೇ ಆಯ್ಕೆ ಮಾಡಿಕೊಂಡನಂತೆ!
- ಅಂಕುರ್‌
ಸಲ್ಮಾನ್‌ ಖಾನ್‌: ನನ್ನ ಚಿತ್ರಗಳು ಹಿಟ್‌ ಆಗಲು ನಾನಲ್ಲ, ನನ್ನ ಡ್ರೈವರ್‌ ಕಾರಣ. ಕೇಜ್ರಿವಾಲ್‌: ದೆಹಲಿ ಜನತೆಗೆ ಉಚಿತ ಯೋಜನೆಗಳನ್ನು ಘೋಷಿಸಿದ್ದು ನಾನಲ್ಲ, ನನ್ನ ಡ್ರೈವರ್‌. ಕಾಂಗ್ರೆಸ್‌: ಚುನಾವಣೆ ಸೋಲಲು ಕಾರಣ ರಾಹುಲ್‌ ಅಲ್ಲ, ಅವರ ಡ್ರೈವರ್‌!
- ಆರ್‌.ಎ.
ಎಚ್ಚರಿಕೆ: ಆಸ್ಟ್ರೇಲಿಯಾದವರು ಹೀಗೇ ಕ್ರಿಕೆಟ್‌ ವಿಶ್ವಕಪ್‌ ಜಯಿಸುತ್ತಾ ಹೋದರೆ, ಪ್ರತಿ ಮನೆಯಲ್ಲೂ ವಿಶ್ವಕಪ್‌ ಇಟ್ಟುಕೊಳ್ಳುತ್ತಾರೆ!
„*ಅಮಿತ್‌.ಎ
ಯಾವಾಗಲೂ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ಗೆ ನಿರಾಯಾಸವಾಗಿ ಹೋಗುವ ಕಾರಣ ಇನ್ನು ಮುಂದೆ ಆಸ್ಟ್ರೇಲಿಯನ್ನರು ಕ್ರಿಕೆಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಮಾತ್ರ ಆಡಬೇಕು!
*ಅಬ್ದುಲ್ಲಾ ಓಮರ್‌
ಎಎಪಿ ಪ್ರಜಾಪ್ರಭುತ್ವವಾದಿ ಪಾರದರ್ಶಕ ಪಕ್ಷ: ಈ ವಿಚಾರದಲ್ಲಿ ಯಾರಾದರೂ ದೂಸ್ರಾ ಮಾತಾಡಿದರೆ, ಕೂಡಲೇ ಅವರನ್ನು ಪಕ್ಷದಿಂದ ಕಿತ್ತೂಗೆಯಲಾಗುತ್ತದೆ!
*ಇಂಡಿಯಾ ಸ್ಪೀಕ್‌
ಧೋನಿ ಮನೆಗೆ ಬಿಗಿ ಪೊಲೀಸ್‌ ಭದ್ರತೆ ನೀಡಲಾಗಿದೆ. ಜನರಿಂದ ರಕ್ಷಣೆ ನೀಡೋದಕ್ಕಲ್ಲ, ಅರ್ನಾಬ್‌ ಗೋಸ್ವಾಮಿಯಿಂದ ರಕ್ಷಣೆ ನೀಡೋದಕ್ಕೆ!
- ಓವರ್‌ ರೇಟೆಡ್
ಧೋನಿ ಟೀಂ ವಿಶ್ವಕಪ್‌ ಸೋತಿದ್ದಕ್ಕೆ ಕೊನೆಗೂ ಕಾರಣ ಪತ್ತೆ. ಮ್ಯಾಚ್‌ ಶುರುವಾಗೋದಕ್ಕೆ ಮುಂಚೆ ಅವರಿಗೆ ರಾಹುಲ್‌ ಗಾಂಧಿ ಗುಡ್‌ಲಕ್‌ ಹೇಳಿದ್ದರಂತೆ!
- ಫೇಕಿಂಗ್‌ ನ್ಯೂಸ್‌
ಭಾರತ ಸೋಲಲು ಆರೆಸ್ಸೆಸ್ಸಿನ ಘರ್‌ವಾಪಸಿಯೇ ಕಾರಣ: ದಿಗ್ವಿಜಯ್‌ ಸಿಂಗ್‌
-ಫೇಕಿಂಗ್‌ನ್ಯೂಸ್‌
1983 ಮತ್ತು 2011ರಲ್ಲಿ ಭಾರತ ವಿಶ್ವಕಪ್‌ ಗೆದ್ದಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ಕಾರಣ, ಕಾಂಗ್ರೆಸ್‌ ಹೊರತು ಭಾರತಕ್ಕೆ ಗೆಲುವು ಸಾಧ್ಯವಿಲ್ಲ!
- ಗಾಯಬ್‌ ಗಾಂಧಿ
ಟೈಮ್ಸ್‌ ನೌ ಚಾನೆಲ್‌ನ ಅರ್ನಾಬ್‌ ಗೋಸ್ವಾಮಿ ಅವರೇನಾದರೂ ಟ್ವೀಟರ್‌ಗೆ ಸೇರಿದರೆ, "ಟ್ವೀಟರ್‌'ನ ಹಕ್ಕಿ ಕೂಗದೇ ಅರಚಾಡಲು ಆರಂಭಿಸುತ್ತದೆ!
- ಸೌರಭ್‌ ಭಾರದ್ವಾಜ್‌
ಆಸ್ಟ್ರೇಲಿಯಾ ತಂಡಕ್ಕೆ ರಾಹುಲ್‌ ಗಾಂಧಿಯವರಿಂದ ಶುಭಾಶಯ ಹೇಳಿಸಬೇಕು, ಆಗ ಅವರು ಸೋಲುವುದು ಖಚಿತವಾಗುತ್ತದೆ.
- ರಾಜೇಶ್‌ ಕುಮಾರ್‌
ರಾಬರ್ಟ್‌ ವಾದ್ರಾ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವುದರಿಂದಲೇ ಗೊತ್ತಾಗುತ್ತದೆ, ಬಿಜೆಪಿ ನಿಜಕ್ಕೂ "ರೈತ' ವಿರೋಧಿ!
- ಇಂಡಿಯಾ ಸ್ಪೀಕ್ಸ್‌
ಸೈಬರ್‌ ಕಾನೂನಿನ 66ಎ ಕಲಂ ರದ್ದತಿಗೆ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್‌ ಆಗ್ರಹಿಸುವುದು ಎಂದರೆ, ಇಮ್ರಾನ್‌ ಹಶ್ಮಿ ಕಿಸ್‌ ಕೊಡೋದು ನಿಷೇಧಿಸಿ ಅಂದಹಾಗಾಯ್ತು!
- ಜುಂಜನ್‌ವಾಲಾ
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ನಡುವಿನ ಕ್ರಿಕೆಟ್‌ ಮ್ಯಾಚ್‌ನಲ್ಲಿ "ಮ್ಯಾನ್‌ ಆಫ್ದಿ ಮ್ಯಾಚ್‌' ಅಂದರೆ ಮಳೆ!
- ಫೇಕಿಂಗ್‌ ನ್ಯೂಸ್‌

Pages

Back to Top