CONNECT WITH US  

ಟ್ವಿಟಾಪತಿ

2002ರ ಸಲ್ಮಾನ್‌ ಪ್ರಕರಣಕ್ಕೂ ಮೊದಲೇ ಚಾಲಕರಹಿತ ಸ್ವಯಂಚಾಲಿತ ಕಾರು ಇದ್ದಿದ್ದರೆ, ಎಲ್ಲದಕ್ಕೂ ಅದನ್ನೇ ದೂರಬಹುದಿತ್ತು!
* ಸುಪ್ರೀಂ ಲೀಡರ್‌
ಮೂತ್ರ ಮಿಶ್ರಿತ ನೀರಿನಿಂದ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ-ಗಡ್ಕರಿ: ಇನ್ನು ರಾಷ್ಟ್ರೀಯ ಹೆದ್ದಾರಿಗಳ ಬದಿ ಮರಕ್ಕೆ ಕಡ್ಡಾಯವಾಗಿ ಮೂತ್ರ ಮಾಡಿ ಎಂದು ಗಡ್ಕರಿ ಕಾನೂನು ತರಬಹುದು!
- ಸೈಕೋ
ಈಗಿನ ಕಾಲದಲ್ಲಿ ಮಹಾಭಾರತ ನಡೆಯುತ್ತಿದ್ದರೆ.. ಧೃತರಾಷ್ಟ್ರ: ಸಂಜಯಾ.. ಕುರುಕ್ಷೇತ್ರದಲ್ಲಿ ಏನು ನಡೆಯುತ್ತಿದೆ..? ಸಂಜಯ: ಯೂಟ್ಯೂಬ್‌ ಸ್ಲೋ ಪ್ಲೇ ಆಗ್ತಿದೆ.. ಸ್ವಲ್ಪ ಆಮೇಲೆ ಹೇಳ್ಳಾ..?
- ಗೂಗಲ್‌ ಬಾಬಾ
ಫೇಸ್‌ಬುಕ್‌ನ ಫಾರ್ಮ್ ವಿಲ್ಲೆಯಲ್ಲಿ ಬೆಳೆ ತೆಗೆಯಿರಿ, ಮುಂಗಾರಿಗೆ ಕಾಯಬೇಕೆಂದೇನಿಲ್ಲ: ರೈತರಿಗೆ ರಾಹುಲ್‌ ಗಾಂಧಿ ಸಲಹೆ!
- ವಾಟ್‌ ಡಾ ಡಕ್‌
ಕಾಂಗ್ರೆಸ್ಸಿಗರೇಕೆ ಇತ್ತೀಚಿನ ದಿನಗಳಲ್ಲಿ "ಕಿಸಾನ್‌' ಪರ ಮಾತನಾಡುತ್ತಾರೆ?; ರಾಜಕೀಯದಲ್ಲಿ ಏನು ಮಾಡಬೇಕೆಂದು ತಿಳಿಯದೇ ಅವರು "ಜಾಮ್‌'ನಲ್ಲಿರೋದ್ರಿಂದ!
- ರಮೇಶ್‌ ಶ್ರೀವತ್ಸ
ತೂಕ ಕಡಿಮೆ ಮಾಡಿಕೊಳ್ಳಲು ಇರುವ ಸುಲಭ ಉಪಾಯಗಳು 2 ಗಂಟೆ ವಾಕಿಂಗ್‌ 1 ಗಂಟೆ ವ್ಯಾಯಾಮ 1 ಗಂಟೆ ಯೋಗ 10 ನಿಮಿಷ ಹೆಂಡತಿ ಬಳಿ ಜಗಳವಾಡಿದರೆ ಇವೆಲ್ಲಕ್ಕಿಂತ ಒಳ್ಳೆಯ ಪರಿಣಾಮ ಲಭ್ಯ!
- ಗೂಗಲ್‌ ಬಾಬಾ
ಮದುವೆ ಎಂದರೆ, ಹಿಂದೆಂದೂ ಇಲ್ಲದ ತೊಂದರೆಯೊಂದನ್ನು ಪರಿಹರಿಸಲು ಇಬ್ಬರು ಹೋರಾಡುವುದು!
- ಮಸಾಲಾಟ್ವೀಕ್ಸ್‌
ತರಕಾರಿ ಬೆಲೆ ಎಷ್ಟು ದುಬಾರಿ ಆಗಿದೆ ಎಂದರೆ, ನಾವು ಬಹುಶಃ ತರಕಾರಿಗಳ ಕಲರ್‌ ಪ್ರಿಂಟ್‌ ತೆಗೆದು ಅಡುಗೆಮನೆಯಲ್ಲಿ ಹಾಕಿಕೊಳ್ಳಬೇಕಷ್ಟೆ. ಕೊಂಡುಕೊಳ್ಳೋಕಂತೂ ಆಗಲ್ಲ!
- ವೆಂಕಟೇಶ್‌ ಮೂರ್ತಿ
ಮಹಾರಾಷ್ಟ್ರದಲ್ಲಿ ಲಾರಿಗಳ ಹಿಂದೆ "ಹಾರ್ನ್ ಓಕೆ ಪ್ಲೀಸ್‌' ಎಂಬ ಬರಹ ನಿಷೇಧಿಸಿದ ಸರ್ಕಾರ. ಇದರಿಂದ ಚಿತ್ರಕಲೆಗೆ ಭಾರೀ ಹೊಡೆತ!
- ರಮೇಶ್‌ ಶ್ರೀವತ್ಸ
ಮೀನು ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬನ ಗೊಣಗಾಟ... "ಇದೇನು ಮೀನು ಮಾರುಕಟ್ಟೆಯೋ, ಅಥವಾ ಅರ್ನಾಬ್‌ ಗೋಸ್ವಾಮಿಯ ನ್ಯೂಸ್‌ ಅವರ್‌ ಕಾರ್ಯಕ್ರಮವೋ'!!!
- ಜಿಂಗಂದ್‌ಸ್ಪೈಸ್‌
ಸ್ಕಾಟ್ಲೆಂಡ್‌ನ‌ವರು ಏನಾದರೂ "ಇವತ್ತು ಲೋಕಲ್‌ ಗುಂಡು ಹಾಕ್ತೀನಿ' ಅಂದುಕೊಂಡರೂ, ಅವರು ಸ್ಕಾಚ್‌ ಕುಡಿಯುತ್ತಾರೆ!
- ಮಸಾಲಾ ಟ್ವೀಕ್ಸ್‌
ಕಮೆಂಟರಿ ಬಾಕ್ಸ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಇದ್ದಾರೆ ಅಂದ ಮೇಲೆ ಕ್ರಿಕೆಟ್‌, ಶಾಯರಿ ಮತ್ತು ಕವಿ ಸಮ್ಮೇಳನ ಏಕಕಾಲಕ್ಕೆ ಜರುಗುತ್ತದೆ!
- ವಾಟ್‌ಡಡಕ್‌
ನವಜೋತ್‌ ಸಿಂಗ್‌ ಸಿಧು ಪ್ರಕಾರ ಪ್ರಪಂಚದಲ್ಲಿ ಎರಡು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು, ಹವಾಮಾನ. ಇನ್ನೊಂದು, ಹೆಂಡತಿ!
- ಎಂ.ಎಸ್‌.ಪ್ರಸಾದ್‌
ಮಹಿಳೆ: ನಿಮ್ಮ ಹುಡುಗಿಗೆ ಏನು ಗೊತ್ತಿದೆ? ಹುಡುಗಿ ಅಮ್ಮ: ಎಲ್ಲಾ ಗೊತ್ತಿದೆ. ಫೇಸ್‌ಬುಕ್‌ನಲ್ಲಿ ಅಡುಗೆ ವಿಷ್ಯ ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಊಟದ ಫೋಟೋ ತೆಗೆದು, ವಾಟ್ಸಾಪ್‌ನಲ್ಲಿ ಎಲ್ರಿಗೂ ಹಂಚ್ತಾಳೆ!
- ರಿಶಿ
ಗೆಳೆಯ (ಫೋನಲ್ಲಿ): ಏನೋ ನಿಮ್ಮಲ್ಲಿ ಭೂಕಂಪ ಆಯ್ತಾ? ಮತ್ತೂಬ್ಬ: ಇಲ್ಲ... ಇಲ್ಲ... ಅವಳು ತಾಯಿ ಮನೆಗೆ ಹೋಗಿದ್ದಾಳೆ!
- ಮಸಾಲಾಟ್ವೀಕ್ಸ್‌

Pages

Back to Top