CONNECT WITH US  

ಟ್ವಿಟಾಪತಿ

ಆಮ್‌ ಆದ್ಮಿ ಪಾರ್ಟಿ ಒಂದು ಮರ ಇದ್ದಂತೆ. ಅರವಿಂದ ಕೇಜ್ರಿವಾಲ್‌ ಅದರ ಕಾಂಡ. ಉಳಿದವರೆಲ್ಲ ಉದುರಿ ಹೋಗಬಹುದು!
*ರಮೇಶ್‌ ಶ್ರೀವತ್ಸ
ಮದುವೆಗೆ ಮುನ್ನ: ಜೀವನ ಅಂದರೆ ಬಿಟ್ಟ ಪದ ತುಂಬಿಸುವ ಪ್ರಶ್ನೆಗಳಿದ್ದಂತೆ. ಮದುವೆಯ ನಂತರ: ಹೌದು ಅಥವಾ ಇಲ್ಲ ಅಂತ ಉತ್ತರಿಸುವ ಪ್ರಶ್ನೆಗಳಿದ್ದಂತೆ!
* ರಾಫ‌ಲ್‌ ಇಂಡಿಯನ್‌
ಕಾರ್ಪೊರೇಟ್‌ ಕಂಪನಿಗಳನ್ನು ಉದ್ಧಾರ ಮಾಡೋದು ಬಿಟ್ಟು ಜನಕೇಂದ್ರಿತ ಬಜೆಟ್‌ ಮಂಡಿಸೋದು ಹೇಗೆಂಬುದನ್ನು ಅರುಣ್‌ ಜೇಟ್ಲಿ ಯವರು ಸಿದ್ದರಾಮಯ್ಯ ಅವರನ್ನು ನೋಡಿ ಕಲೀಬೇಕು.
- ಐಸ್ಟಾಂಡ್‌ವಿತ್‌ ಎಂಎಂಎಸ್‌
ರಾಹುಕಾಲ ಮುಗಿದ ಬಳಿಕ ಸಿದ್ದು ಬಜೆಟ್‌ ಮಂಡನೆ. ಮೂಢನಂಬಿಕೆ ವಿರೋಧಿ ಕಾಯ್ದೆ ಘೋಷಣೆ ಮಾಡ್ತಾರಂತೆ. ಬಹುಶಃ ಅದನ್ನೂ ರಾಹುಕಾಲ ಮುಗಿದ ಮೇಲೇ ಮಾಡಬಹುದು!
- ಸತೀಶ್‌ ಕಾಲಗಿ
ದಾಖಲೆಯ 10ನೇ ಬಾರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ. ಆದರೆ "ಪೊಲಿಟಿಕಲಿ ಕರೆಕ್ಟ್' ಭಾಗ್ಯಗಳ ನಡುವೆ ಅವರೊಳಗಿರುವ ಅರ್ಥಶಾಸ್ತ್ರಜ್ಞ ಕಣ್ಮರೆಯಾಗಿದ್ದಾನೆ!
- ವಸಂತ ಶೆಟ್ಟಿ
ಸಿದ್ದರಾಮಯ್ಯ ಬಜೆಟ್‌ ಮಂಡಿಸುತ್ತಿದ್ದರೆ ನಾನು ಪಂ.ಭೀಮಸೇನ ಜೋಶಿ ಹಾಡಿದ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಕೇಳ್ತಿದ್ದೆ!
- ನಿತಿನ್‌ ಪೈ
ಇಷ್ಟು ದಿನ ಪುಸ್ತಕ ಸಿಕ್ಕಿಲ್ಲ, ಯೂನಿಫಾರಂ ಸಿಕ್ಕಿಲ್ಲ, ಸೈಕಲ್‌ ಸಿಕ್ಕಿಲ್ಲ, ಬಿಸಿಯೂಟದ ತರಕಾರಿ ಬಂದಿಲ್ಲ ಅಂತ ಶಾಲೆ ಮಕ್ಕಳು ಗೊಳ್ಳೋ ಅನ್ನುತ್ತಿದ್ರು. ಮುಂದಿನ ವರ್ಷದಿಂದ ಶೂ ಬಂದಿಲ್ಲ ಅನ್ನೋದನ್ನೂ ಸೇರಿಸಿಕೊಳ್ಳಬಹುದು!
- ಬ್ಯಾಡ್‌ ಇಂಡಿಯನ್‌
ಬಜೆಟ್‌ ಮೇಲೆ ಚರ್ಚೆ ನಡೆಯೋವಾಗ ಶಾಸಕರಿಗೆ ಒಂದು ಟೆಸ್ಟ್‌ ಕೊಡಬೇಕು. "ಸಿದ್ದು ಬಜೆಟ್‌ನಲ್ಲಿ ಭಾಗ್ಯ ಅನ್ನೋ ಪದ ಎಷ್ಟು ಬಾರಿ ಬಂದಿದೆ?' ಎಲ್ಲರೂ ಸೋಲ್ತಾರೆ!
- ಫೇಕು ಮಾಮಾ
ಚಾಮುಂಡಿ ಬೆಟ್ಟಕ್ಕೆ ಕೇಬಲ್‌ ಕಾರ್‌ ಹಾಕ್ತಾರಂತೆ. ಐದು ವರ್ಷದ ಹಿಂದಿನ ಬಜೆಟ್‌ನಲ್ಲೂ ಈ ಘೋಷಣೆಯಿತ್ತು. ಇನ್ನೈದು ವರ್ಷದ ನಂತರವೂ ಇರುತ್ತೆ. ಜೈ ಕರ್ನಾಟಕ ಬಜೆಟ್‌!
- ಮೈ ಗಾಡ್‌ ಯಾಕೂಬ್‌
ಈ ಬಾರಿಯೂ ಬಜೆಟ್‌ನಲ್ಲಿ ಮಧ್ಯ ದುಬಾರಿಯಾಗಿದೆ. ಗುಂಡು ಹಾಕಿದ ನಂತರ ದುಡ್ಡು ಕೊಡೋರಿಗೆ ಏನೂ ತಿಳಿಯೋದಿಲ್ಲ ಅಂತ ಈ ಥರಾ ಮೋಸ ಮಾಡಾರ್ದು ಕಣ್ರೀ!
- ಬಿಯರ್‌ ಬಾಬಾ
ಸಮ ಸಮ ಪಾಲು, ಸಮ ಸಮ ಬಾಳು ಅಂತ ಬಜೆಟ್‌ ಭಾಷಣದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರರ್ಥವೇನು? ಕಷ್ಟಪಟ್ಟು ದುಡಿಯುವವರಿಂದ ಕಿತ್ತು ನಾಲ್ಕೈದು ಜಾತಿಗಳಿಗೆ ಸಮಾನವಾಗಿ ಹಂಚು ಅಂತ!
- ದಿ ಪ್ರೋಟೋಗಾನಿಸ್ಟ್‌
ಕರ್ನಾಟಕದ ಎಲ್ಲ ತೆರಿಗೆ ಹಣ ಭಾಗ್ಯಗಳಲ್ಲಿ ಪೋಲಾಗುತ್ತಿದೆ. ಹೊಸ ಭಾಗ್ಯ "ಅಂತರ್ಜಾತಿ ಮದುವೆ ಭಾಗ್ಯ.'
- ಯರ್ರಿಸ್ವಾಮಿ
ಕೇಜ್ರಿವಾಲ್‌: ನಾನೇ ದೆಹಲಿ ಸಿಎಂ.. ಬಿಜೆಪಿ: ನಮ್ಮಲ್ಲಿ ಯಾರಾದ್ರೂ ವಿರೋಧ ಪಕ್ಷದ ನಾಯಕರಾಗಬಹುದೇ? ಕೇಜ್ರಿವಾಲ್‌: ನೋ.. ನೋ... ಪ್ರಶಾಂತ್‌ ಭೂಷಣ್‌ ಇದ್ದಾರಲ್ಲ!
- ರಮೇಶ್‌ ಶ್ರೀವತ್ಸ
ಮದ್ಯ ಅಂದರೆ: ಡ್ಯಾನ್ಸ್‌ ಮಾಡಲು ಏನೇನೂ ಗೊತ್ತಿಲ್ಲದ್ದವರನ್ನೂ ಪಳಗಿಸುವ ಏಕೈಕ ಔಷಧ!
- ಗೂಗಲ್‌ ಬಾಬಾ
ಗ್ರಾಹಕ: ಹೊಸ ಆ್ಯಪಲ್‌ ಕಂಪ್ಯೂಟರಿಗೆ ಎಷ್ಟಾಗುತ್ತೆ..?: ಅಂಗಡಿಯಾತ: 99 ಸಾವಿರ ರೂ.: ಗ್ರಾಹಕ: ಹಾಗಾದ್ರೆ ಪ್ಯಾಕ್‌ ಮಾಡಿ.:ಅಂಗಡಿಯಾತ: ಕ್ಯಾಶ್‌ ಕೊಡ್ತೀರಾ ಅಲ್ಲ..?: ಗ್ರಾಹಕ: ಕಿಡ್ನಿ ಕೊಡ್ತೀನಿ ಅಗ್ಬಹುದಾ!?
- ಮಸಾಲಾಟ್ವೀಕ್ಸ್‌

Pages

Back to Top