CONNECT WITH US  

ಟ್ವಿಟಾಪತಿ

ಕೇಜ್ರಿವಾಲ್‌: ನಾನೇ ದೆಹಲಿ ಸಿಎಂ.. ಬಿಜೆಪಿ: ನಮ್ಮಲ್ಲಿ ಯಾರಾದ್ರೂ ವಿರೋಧ ಪಕ್ಷದ ನಾಯಕರಾಗಬಹುದೇ? ಕೇಜ್ರಿವಾಲ್‌: ನೋ.. ನೋ... ಪ್ರಶಾಂತ್‌ ಭೂಷಣ್‌ ಇದ್ದಾರಲ್ಲ!
- ರಮೇಶ್‌ ಶ್ರೀವತ್ಸ
ಮದ್ಯ ಅಂದರೆ: ಡ್ಯಾನ್ಸ್‌ ಮಾಡಲು ಏನೇನೂ ಗೊತ್ತಿಲ್ಲದ್ದವರನ್ನೂ ಪಳಗಿಸುವ ಏಕೈಕ ಔಷಧ!
- ಗೂಗಲ್‌ ಬಾಬಾ
ಗ್ರಾಹಕ: ಹೊಸ ಆ್ಯಪಲ್‌ ಕಂಪ್ಯೂಟರಿಗೆ ಎಷ್ಟಾಗುತ್ತೆ..?: ಅಂಗಡಿಯಾತ: 99 ಸಾವಿರ ರೂ.: ಗ್ರಾಹಕ: ಹಾಗಾದ್ರೆ ಪ್ಯಾಕ್‌ ಮಾಡಿ.:ಅಂಗಡಿಯಾತ: ಕ್ಯಾಶ್‌ ಕೊಡ್ತೀರಾ ಅಲ್ಲ..?: ಗ್ರಾಹಕ: ಕಿಡ್ನಿ ಕೊಡ್ತೀನಿ ಅಗ್ಬಹುದಾ!?
- ಮಸಾಲಾಟ್ವೀಕ್ಸ್‌
ಎಎಪಿ ಆಂತರಿಕ ವಿಚಾರಗಳು ಟೇಪ್‌ ಹೆಸರಲ್ಲಿ ಬಹಿರಂಗವಾಗುವುದು ನೋಡಿದ್ರೆ, ಎಲ್ಲಾ ಎಎಪಿ ಸದಸ್ಯರಿಗೆ ಸೇರ್ಪಡೆ ವೇಳೆ ಟೇಪ್‌ರೆಕಾರ್ಡರ್‌ ಫ್ರೀಯಾಗಿ ಕೊಟ್ಟಿದ್ದಾರಾ ಅಂತಾ ಡೌಟು!
- ಇಂಡಿಯಾ ಸ್ಪೀಕ್ಸ್‌
ಕ್ರಿಕೆಟ್‌ನಲ್ಲಿ ಎಷ್ಟೇ ಸಾಧನೆ ಮಾಡಿದ್ರೂ ಸಂಗಕ್ಕಾರ ಯಾಕೆ ಸುದ್ದಿಯಾಗಲ್ಲ..?: ಅವರು ರಾಮ ಸೇತುವಿನ ರಾಂಗ್‌ ಸೈಡ್‌ನ‌ಲ್ಲಿ ಹುಟ್ಟಿದ್ದಾರೆ!
- ಹರಿಕೇನ್‌
ಬಿಜೆಪಿ ಶಾಸಕರನ್ನು ಖರೀದಿಸಿದ್ರೆ- ಕುದುರೆ ವ್ಯಾಪಾರ ಎಎಪಿ ಶಾಸಕರನ್ನು ಖರೀದಿಸಿದ್ರೆ- ಅದು ಸ್ಥಿರ ಸರ್ಕಾರಕ್ಕಾಗಿ!
-ದೇಸಿ ಬಾಯ್‌ಜ್‌
ರಾಬರ್ಟ್‌ ವಾದ್ರಾ ಅವರ ಬಳಿ ಇರುವ ಎಲ್ಲಾ ಭೂಮಿಯನ್ನು ಸರ್ಕಾರಕ್ಕೆ ಕೊಡುತ್ತಾರೆ ಎಂದರೆ, ಭೂ ಸ್ವಾಧೀನ ಮಸೂದೆಯ ಅಗತ್ಯವೇ ಇಲ್ಲ!
- ಜುಂಜನ್‌ವಾಲಾ
ಇಂಗ್ಲೆಂಡ್‌ನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲದಿದ್ದರೂ, ಹಿಂದಿನ ವಸಾಹತು ದೇಶಗಳು ಕ್ರಿಕೆಟ್‌ ನೆಪದಲ್ಲಾದರೂ ಸೋಲಿಸುತ್ತಿವೆ!
- ಗ್ಯಾಪಿಸ್ಟನ್‌ ರೇಡಿಯೋ
ಎಲ್ಲಾ ದೇಶಗಳಲ್ಲೂ ಉತ್ಪನ್ನ ತಯಾರಕರ "ಕಸ್ಟಮರ್‌ ಕೇರ್‌' ಇರುತ್ತವೆ. ಆದರೆ ಭಾರತದಲ್ಲಿ ಮಾತ್ರ "ಕಸ್ಟಮರ್‌ ವಿ ಡೋಂಟ್‌ ಕೇರ್‌' ಇದೆ!
- ಗೂಗಲ್‌ ಬಾಬಾ
ಬಿಜೆಪಿ ಮೊದಲು ಕೇಜ್ರಿವಾಲ್‌ ವಿಚಾರದಲ್ಲಿ ಮಸಿ ಬಳಿದುಕೊಂಡಿತು, ಬಳಿಕ ಮಾಂಝಿ ವಿಚಾರದಲ್ಲಿ ಬಟ್ಟೆ ಹರಿದುಕೊಂಡಿತು. ಈಗ ಮುಫ್ತಿ ಕೈಯಿಂದ ಬಿಜೆಪಿ ಹೊಡೆಸಿಕೊಳ್ಳುತ್ತಿದೆ!
- ದೆಹಲಿ ವಾಲಾ
ನಿರ್ಭಯಾ ಸಾಕ್ಷ್ಯಚಿತ್ರ ಪ್ರಸಾರಕ್ಕೆ ತಡೆ ವಿರುದ್ಧ ದೇಶದ ಎಲ್ಲಾ ಚಾನೆಲ್‌ಗ‌ಳು ಒಂದು ದಿನ ಪ್ರಸಾರ ನಿಲ್ಲಿಸಬೇಕು: ಒಂದು ದಿನವಾದರೂ ನೆಮ್ಮದಿ ಇರತ್ತದೆ!
- ಗೀತಿಕಾ
ಅಂಗಡಿಯಾತ: ಈ ಹೊಸ ಕಾರಲ್ಲಿ ಆ್ಯಕ್ಸಿಡೆಂಟ್‌ ತಡೆಯಲು ಎಬಿಎಸ್‌, ಗಟ್ಟಿಯಾದ ಚಾಸಿ, 8 ಏರ್‌ಬ್ಯಾಗ್‌ ಎಲ್ಲಾ ಇದೆ ಬೆಲೆ ಕೇವಲ 25 ಲಕ್ಷ ಸಂತಾ: ನಮ್ಮಲ್ಲಿ 1 ನಿಂಬೆ ಮೆಣಸಿನಕಾಯಿ ಕಾರಿಗೆ ಕಟ್ಟಿದ್ರೆ ಎಲ್ಲಾ ಅಪಘಾತವನ್ನೂ ತಡೆಯುತ್ತದೆ. ಅದಕ್ಕೆ ಇಷ್ಟು ಖರ್ಚು ಮಾಡ್ಬೇಕಾ..?
- ಮಸಾಲಾ ಟ್ವೀಕ್ಸ್‌
ಸುರಕ್ಷತೆಗಾಗಿ ಬೆಂಗಳೂರಲ್ಲಿ ಮಹಿಳೆಯರಿಗೆ ಸಾವಿರ ಸೀಟಿ ವಿತರಣೆ.
- ಇಷ್ಟು ದಿನ ಅವರನ್ನು ನೋಡಿ ಹುಡುಗರು ವಿಶಲ್‌ ಹೊಡೀತಿದ್ರು. ಇನ್ಮೆಲೆ ಉಲ್ಟಾ!
ಮಹಿಳಾ ದಿನದ ಅಂಗವಾಗಿ ಏರ್‌ ಇಂಡಿಯಾ ವಿಮಾನ ಸಂಪೂರ್ಣ ಮಹಿಳೆಯರಿಂದಲೇ ಚಾಲನೆ.
- ಪುಣ್ಯಕ್ಕೆ ವಿಮಾನಗಳಿಗೆ ರಿವರ್ಸ್‌ ಗೇರ್‌ ಇಲ್ಲ!
ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿದ್ರೆ ಸಂಬಳವೇ ಸಿಗುತ್ತಿಲ್ಲ.
- ಯೋಜನೆಯ ಹೆಸರೇ ಉದ್ಯೋಗ ಖಾತ್ರಿ. ವೇತನ ಖಾತ್ರಿ ಅಂತ ಎಲ್ಲೂ ಇಲ್ವಲ್ಲ!

Pages

Back to Top