CONNECT WITH US  

ಟ್ವಿಟಾಪತಿ

ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎನ್‌.ಶ್ರೀನಿವಾಸನ್‌ ಅವರಿಗೆ ಸುಪ್ರೀಂಕೋರ್ಟು ನಿಷೇಧ ಹೇರಿದೆಯಂತೆ. ತೀರ್ಪನ್ನು ಗೌರವಿಸಿರುವ ಶ್ರೀನಿವಾಸನ್‌ ಅವರು ಬಿಸಿಸಿಐ ಚುನಾವಣೆಯನ್ನೇ ನಿಷೇಧಿಸಿದರಂತೆ!
ರಾಜು ಅರುಣ್‌
ಜೈಪುರ ಸಾಹಿತ್ಯ ಉತ್ಸವ ನಡೆಯುವ ಸ್ಥಳದ ಸುತ್ತ ಮುತ್ತ ನೆಲೆಸಿರುವವರು, ನಿಜವಾಗಿ ಹೇಳಬೇಕೆಂದರೆ ಅದರಿಂದ ಅತ್ಯಂತ ದೂರ ಇರುವವರು!
ರಾಫ‌ಲ್‌ ಇಂಡಿಯನ್‌
ಶುಭ ಸುದ್ದಿ... ಇಂದು ನನ್ನ ಮಾಜಿ ಪ್ರಿಯಕರನ ಕಾಲಿನ ಮೇಲೆ ಕಾರು ಹರಿದು ಆತನಿಗೆ ಮೂಳೆ ಮುರಿತ ಉಂಟಾಯಿತು. ಕೆಟ್ಟ ಸುದ್ದಿ... ಅವನ ಕಾಲಿನ ಮೇಲೆ ಕಾರು ಹರಿಸಿದ್ದಕ್ಕಾಗಿ ಪೊಲೀಸರು ನನ್ನ ವಿರುದ್ಧ ಕೇಸು ಜಡಿದಿದ್ದಾರೆ!
ಟುಕೆಒನ್‌ಫೈವ್‌
ಕೇಜ್ರಿವಾಲ್‌ ಆಸ್ತಿ 2 ಕೋಟಿ, ಬೇಡಿ ಆಸ್ತಿ 11 ಕೋಟಿ: ಇದರಿಂದ ತಿಳಿದುಬರುವುದೇನು?: ಕೇಜ್ರಿವಾಲ್‌ಗೆ ಕಫ್ಸಿರಪ್‌ಗೆ ಹೆಚ್ಚು ಹಣ ಖರ್ಚಾಗಿರಬಹುದು!
- ಪಿಜೆ ಕ್ರ್ಯಾಕರ್‌
ಮಹಿಳೆಯರ ಶಾಪಿಂಗನ್ನೂ "ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌' ಎಂದು ತೆರಿಗೆ ಕಾನೂನಿನಲ್ಲಿ ಸೇರಿಸಿ: ಪುರುಷರ ಒತ್ತಾಯ
- ಮಸಾಲಾ ಟ್ವೀಕ್ಸ್‌
ಟೈಮ್ಸ್‌ ನೌ ಅರ್ನಾಬ್‌ ಗೋಸ್ವಾಮಿಯವರು ಹತ್ತಿರಕ್ಕೆ ಬಂದು ಪ್ರಶ್ನೆ ಕೇಳದಂತೆ ನಾವು ಭದ್ರತೆ ಒದಗಿಸುತ್ತೇವೆ: ಅಮೆರಿಕ ಆಡಳಿತಕ್ಕೆ ಪ್ರಧಾನಿ ಮೋದಿ ಅಭಯ!
- ಆಜಂ ಖಾನ್‌ ಕಾ ಬಫೆಲೋ
ನಿಮಗೆ ಸಚಿನ್‌ ತೆಂಡೂಲ್ಕರ್‌ ಗೊತ್ತಾ ಅಂತ ಯಾರಾದ್ರೂ ಒಬಾಮಾರನ್ನು ನಾಡಿದ್ದು ಕೇಳಿದರೆ ಏನು ಗತಿ ಎಂಬ ಬಗ್ಗೆಯೇ ನನಗೆ ಚಿಂತೆಯಾಗುತ್ತಿದೆ!
ಗ್ಯಾಪಿಸ್ಟನ್‌ ರೇಡಿಯೋ
ದೆಹಲಿಯಲ್ಲೀಗ ಇಬ್ಬರ ಮಧ್ಯೆ ಭರ್ಜರಿ ಸ್ಪರ್ಧೆ: ಒಬ್ಬರು "ಟಫ್' ಮತ್ತೂಬ್ಬರು "ಕಫ್!'
ಕೃಷ್ಣಪ್ರಿಯಾ
ವಿಚಾರಣೆ ವೇಳೆ ಬಿಟ್ಟು ಹೋದ ಪ್ರಶ್ನೆಗಳನ್ನು ಶಶಿ ತರೂರ್‌ ಅವರಿಗೆ ಟೈಮ್ಸ್‌ ನೌನಲ್ಲಿ ಕೇಳಲು ಅರ್ನಾಬ್‌ಗ ಪೊಲೀಸರ ಮನವಿ!
ಶ್ರೀಶ್ರೀ ಜುಂಝನ್‌ವಾಲಾ
ದೆಹಲಿಯಲ್ಲಿ ತಲೆನೋವು ಮಾದರಿಗಳು... ಬಿಜೆಪಿಗೆ: ಸಿಎಂ ಅಭ್ಯರ್ಥಿ ಯಾರು? ಎಎಪಿಗೆ: ನಮಗೆಷ್ಟು ಸೀಟು ಸಿಗಬಹುದು? ಕಾಂಗ್ರೆಸ್‌ಗೆ: ನಮಗೆ ಒಂದಾದ್ರೂ ಸೀಟು ಬರಬಹುದಾ?
ರೇಬಿಸ್‌
ಒಬಾಮಾ ಭಾರತದಲ್ಲಿರುವಾಗ ಉಗ್ರ ದಾಳಿಯಾದ್ರೆ ಹುಷಾರ್‌: ಪಾಕ್‌ಗೆ ಎಚ್ಚರಿಕೆ. ಹಾಗಿದ್ದರೆ, ಒಬಾಮಾರನ್ನು ಹೇಗಾದರೂ ಮಾಡಿ ಒಂದೈದು ವರ್ಷ ದೆಹಲಿಯಲ್ಲೇ ಕೂರಿಸಿ!
ಜಿತೇಂದ್ರ ಜೈನ್‌
ಒಬ್ಬರು ಸಾಧ್ವಿ: 4 ಮಕ್ಕಳನ್ನು ಹಡೀರಿ. ಮತ್ತೂಬ್ಬರು ಸ್ವಾಮಿ: 10 ಮಕ್ಕಳನ್ನು ಹಡೀರಿ.
ಸಾಫ್ಟ್ವೇರ್‌ ಎಂಜಿನಿಯರ್‌: ನನಗೆ ಆಗಲ್ಲ... ನೈಟ್‌ ಶಿಫ್ಟ್ ಇದೆ!
ರನ್‌ ಹೊಳೆ: ಡಿವಿಲ್ಲಿಯರ್, ಹಶೀಮ್‌ ಆಮ್ಲಾ ಬಾಲ್‌ ಮೇಲೆ ನಡೆಸಿದ "ಕೌಟುಂಬಿಕ ಹಿಂಸೆ' ವಿರುದ್ಧ ಪ್ರಕರಣ ದಾಖಲಿಸಿಲು ಐಸಿಸಿಗೆ ಒತ್ತಾಯ.
ರಮೇಶ್‌ ಶ್ರೀವತ್ಸ
ಗಣರಾಜ್ಯೋತ್ಸವದಂದು ದೆಹಲಿಯಿಂದ ಹೊರಗೆ ಹೋಗುವಂತೆ ಅಮಿತ್‌ ಶಾಗೆ ಪ್ರಧಾನಿ ಮೋದಿ ಮನವಿ: ಇಲ್ಲದಿದ್ದರೆ, ಬರಾಕ್‌ ಒಬಾಮಾರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂಬ ಆತಂಕ!
ಮಸಾಲಾಟ್ವೀಕ್ಸ್‌
ಡಿವಿಲ್ಲಿಯರ್ಸ್‌ "ಅಂತಾರಾಷ್ಟ್ರೀಯ ಭಯೋತ್ಪಾದಕ' ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದಿಂದ ಘೋಷಣೆ!
ಶ್ರೀ ಶ್ರೀ ಜುಂಝನ್‌ವಾಲಾ

Pages

Back to Top