CONNECT WITH US  

ಟ್ವಿಟಾಪತಿ

"ಇಂಡಿಯಾಸ್‌ ಡಾಟರ್‌' ಸಾಕ್ಷ್ಯಚಿತ್ರವನ್ನು ಯಾರೂ ನೋಡಲು ಸಾಧ್ಯವಿಲ್ಲ. ಇರಿ ಇರಿ... ಯಾವ ಭಾರತೀಯನೂ ನೋಡಲು ಸಾಧ್ಯವಿಲ್ಲ. ಅಯ್ಯೋ, ಹಾಗಲ್ಲ... "ಯೂಟ್ಯೂಬ್‌ ಇಲ್ಲದ ಯಾವ ಭಾರತೀಯನೂ ನೋಡಲು ಸಾಧ್ಯವಿಲ್ಲ'!
- ರಮೇಶ್‌ ಶ್ರೀವತ್ಸ
ಮಧ್ಯಪ್ರಾಚ್ಯದಲ್ಲಿ : ಐಸಿಸ್‌ನವರನ್ನು ತಡೆಯೋದು ಹೇಗೆ? ಯುರೋಪ್‌ನಲ್ಲಿ: ಆರ್ಥಿಕತೆ ಕುಸಿತಕ್ಕೆ ಏನ್ಮಾಡೋದು..? ಅಮೆರಿಕದಲ್ಲಿ: ಇನ್ಯಾರ ಮೇಲೆ ಬಾಂಬ್‌ ಹಾಕೋದು? ಭಾರತದಲ್ಲಿ: ಯಾರ್ರೀ ಅದು ಅಲ್ಲಿ ಧ್ವಜ ಹಾಕಿದ್ದು..?
- ಜೆ ವೂಡಮ್‌
ಅರವಿಂದ ಕೇಜ್ರಿವಾಲ್‌ ಅವರು ಸಂಚಾಲಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅರವಿಂದ ಕೇಜ್ರಿವಾಲ್‌ ಅವರಿಗೆ ಕಳಿಸಿದ್ರು: ಈಗ ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆಯನ್ನು ತಿರಸ್ಕರಿಸಲಿದ್ದಾರೆ!
- ಗೀತಿಕಾ
ಆ ಗಾಳಿಯಲ್ಲಿ ಏನೋ ಇದೆ: ಪ್ರೇಮಿಗಳು ಅದನ್ನು "ಲವ್‌' ಅಂತಾ ಕರೀತಾರೆ: ಸಿಂಗಲ್ಲಾಗಿ ಇರೋವ್ರು "ಹಂದಿ ಜ್ವರ' ಅಂತಾರೆ!
- ಮಸಾಲಾಟ್ವೀಕ್ಸ್‌
ಮಹಾರಾಷ್ಟ್ರದಲ್ಲಿ ಗೋಹತ್ಯೆ ಎಂದೋ ನಿಷೇಧವಾಗಿತ್ತು. ಇದೀಗ ಹೋರಿ ಮತ್ತು ಎತ್ತುಗಳ ಹತ್ಯೆಯನ್ನೂ ನಿಷೇಧಿಸಲಾಗಿದೆ. ಅಲ್ಲಿಗೆ, ಬಿಜೆಪಿ ಸರ್ಕಾರ ಲಿಂಗ ಸಮಾನತೆ ಜಾರಿಗೊಳಿಸಿದಂತಾಗಿದೆ!
- ರಾಜು ಅರುಣ್‌
ಮನುಷ್ಯನ ನಿಜವಾದ ತೂಕಕ್ಕಿಂತ ಪ್ರತಿಷ್ಠೆಯೇ ಹೆಚ್ಚು ಭಾರ. ಆದರೂ, ಬಹಳಷ್ಟು ಜನ ಪ್ರತಿಷ್ಠೆ ಇಳಿಸಿಕೊಳ್ಳುವುದಿಲ್ಲ!
- ಎಂ.ಎಸ್‌.ಪ್ರಸಾದ್‌
ಅರವಿಂದ್‌ ಕೇಜ್ರಿವಾಲ್‌: ವೂ... ಹೂ... ನಾನು ದಿಲ್ಲಿ ಮುಖ್ಯಮಂತ್ರಿ. ಬಿಜೆಪಿ: ನಮಗೆ ಪ್ರತಿಪಕ್ಷ ನಾಯಕನ ಸ್ಥಾನ ಕೊಡ್ತೀರಾ? ಅರವಿಂದ್‌ ಕೇಜ್ರಿವಾಲ್‌: ಇಲ್ಲ ಇಲ್ಲ, ಅದನ್ನು ಯೋಗೇಂದ್ರ ಯಾದವ್‌ ತೆಗೆದುಕೊಂಡಿದ್ದಾರೆ!
- ರಮೇಶ್‌ ಶ್ರೀವತ್ಸ
ನನ್ನ ಗೆಳೆಯರೊಬ್ಬರು ಕೊಚ್ಚಿಕೊಂಡರು... "ನಾನಿನ್ನು ಜೀವನದಲ್ಲಿ ಎಂದೂ ಹಿಂದೆ ತಿರುಗಿ ನೋಡಲ್ಲ' ಅಂತ. ಆಮೇಲೆ ನನಗೆ ಗೊತ್ತಾಯ್ತು ಅವರಿಗೆ ಬೆನ್ನು ನೋವು ಇದೆ ಅಂತ!
- ರಾಜು
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದದ್ದಕ್ಕೂ ಪಾಕಿಸ್ತಾನಕ್ಕೆ ಧನ್ಯವಾದ ಹೇಳಬಹುದಿತ್ತು!
- ಆರ್‌.ಎ.
ಮಮತಾ ಬ್ಯಾನರ್ಜಿ: ಬಜೆಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಏನೂ ಕೊಟ್ಟಿಲ್ಲ... ಅರುಣ್‌ ಜೇಟ್ಲಿ : ಬಿಸಿಸಿಐ ಅಧ್ಯಕ್ಷರನ್ನಾಗಿ ಜಗಮೋಹನ್‌ ದಾಲ್ಮಿಯಾ ಕೊಟ್ಟಿಲ್ವಾ?
ಟ್ವಿಟ್ಟು
ಮಕ್ಕಳಿಗೆ ಪರೀಕ್ಷೆ ಭಯ ಇದೆ ಅಂತಾ ಗೊತ್ತಾಗೋದು ಹೀಗೆ: ಹೋಟೆಲ್‌ಗೆ ಹೋದ್ರೂ ವೆಯರ್‌ ಬಳಿ ಮೆನು ಬದಲಿಗೆ "ಸಿಲೆಬಸ್‌' ಕೊಡಿ ಅಂದಾಗ!
- ಮಸಾಲಾಟ್ವೀಕ್ಸ್‌
ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಸತತ ಸೋಲಿಂದ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಜಿಂಬಾಬ್ವೆ ವಿರುದ್ಧ ಗೆಲುವು: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಬಾಂಬ್‌ ಸ್ಫೋಟ ಬದಲಿಗೆ ಪಟಾಕಿ ಹಚ್ಚಿದ್ರು!
- ರೇಬಿಸ್‌
ಭಾರತದಲ್ಲಿ ಸೇವಾ ತೆರಿಗೆ, ಅಬಕಾರಿ ತೆರಿಗೆ ಎಷ್ಟೇ ಹೆಚ್ಚಳ ಮಾಡಿದ್ರೂ ರಾಜಕಾರಣಿಗಳಿಗೆ, ಶ್ರೀಮಂತರಿಗೆ ಚಿಂತೆ ಇಲ್ಲ, ಅವರು ಫಾರಿನ್‌ಗೆ ಹೋಗಿ ಮಸಾಲೆದೋಸೆ ತಿಂದು ಸಿನೆಮಾ ನೋಡಿ ಬರ್ತಾರೆ!
ಡಿಗ್ಗಿ ಲೀಕ್ಸ್‌
ಸೇವಾ ತೆರಿಗೆ ಹೆಚ್ಚಳ ಸರಿದೂಗಿಸಬೇಕಾದರೆ ಜನ ಇನ್ನು ರೆಸ್ಟೋರೆಂಟ್‌ಗೆ ಹೋದರೆ ಟಿಪ್ಸ್‌ ಕೊಡೋದನ್ನು ನಿಲ್ಲಿಸಬೇಕು!
*ಗ್ಯಾಪಿಸ್ಟನ್‌ ರೇಡಿಯೋ
ಅರುಣ್‌ ಜೇಟ್ಲಿ ಹೇಳುತ್ತಾರೆ, ಮಧ್ಯಮ ವರ್ಗದವರು ಅವರ ಹಿತವನ್ನು ಅವರೇ ಕಾಯ್ದುಕೊಳ್ಳುತ್ತಾರೆ. ಹಾಗಾದರೆ ಸರ್ಕಾರ ಕಾರ್ಪೊರೆಟ್‌ ಕಂಪನಿಗಳ ಹಿತ ಕಾಯುತ್ತದೆಯೇ?
*ಜಾಕ್ಸನ್‌

Pages

Back to Top