CONNECT WITH US  

ಟ್ವಿಟಾಪತಿ

ಅರವಿಂದ ಕೇಜ್ರಿವಾಲ್‌ ಅವರು ಯಾವತ್ತೂ ಜನರ ಸನಿಹವೇ: ಏನಿದ್ದರೂ ಕಲ್ಲು ಎಸೆವಷ್ಟು ದೂರದಲ್ಲಿ!
ರಮೇಶ್‌ ಶ್ರೀವತ್ಸ
ಕೆೆಲವು ವಸ್ತುಗಳಿಗೂ ಅಂಗ ಭಾಷೆ ಇರುತ್ತದೆ. ಉದಾಹರಣೆಗೆ... ಬೌಲರ್‌ ಒಬ್ಬ ಕನ್ನಡಕ ಧರಿಸಿ ಬೌಲಿಂಗ್‌ ಮಾಡಿದ ಎಂದಾದರೆ, ಆತನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬೇಕಿಲ್ಲ ಅಂತ ಅರ್ಥ!
ರಾಜು ಅರುಣ್‌
ಎಲ್ಲೆಡೆ ಈಗ ಭಾರೀ ಚಳಿ. ಆತ್ಮೀಯ ರಜನೀಕಾಂತ್‌, ದಯವಿಟ್ಟು ನಿಮ್ಮ ರೆಫ್ರಿಜರೇಟರ್‌ ಬಾಗಿಲು ಮುಚ್ಚಿ!
ಯು.ಬಿ.ಪವನಜ
ಕೆಲವು ವ್ಯಕ್ತಿಗಳು ಅದೆಷ್ಟು ಜಾತ್ಯತೀತವಾಗಿರುತ್ತಾರೆಂದರೆ ಅವರ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗ್ಳಲ್ಲಿ "RAM' ಕೂಡ ಇರುವುದಿಲ್ಲವಂತೆ!
ವಿ ಮೂರ್ತಿ
ಒಬ್ಬ: ಯಾಕ್ರೀ ನಿಮ್ಮ ಹೆಂಡ್ತಿ ಕೂಗಾಡ್ತಾ ಇದಾಳೆ? ಮತ್ತೂಬ್ಬ: ಓ ಅದಾ... ವಾಟ್ಸಪ್‌ನಲ್ಲಿ ಫೋಟೋ ಹಾಕೋ ಬದ್ಲು ತಪ್ಪಿ ಹೋಗಿ, ಓಎಲ್‌ಎಕ್ಸ್‌ನಲ್ಲಿ ಹಾಕ್ದೆ ಅದಕ್ಕೆ!
ಮಸಾಲಾಟ್ವೀಕ್ಸ್‌
2 ಸಾವಿರ ಜನರನ್ನು ಕೊಂದರೂ ಅಷ್ಟಾಗಿ ಸುದ್ದಿಯಾಗಲಿಲ್ಲ: ಬೋಕೋ ಹರಾಮ್‌ ಉಗ್ರರು. ಒಂದೊಳ್ಳೆ ಜಾಹೀರಾತು ಕಂಪನಿಗೆ ಕಾಂಟ್ರಾಕ್ಟ್ ಕೊಡಿ: ಐಸಿಸ್‌ ಸಲಹೆ!
ಗ್ಯಾಪಿಸ್ಟನ್‌ ರೇಡಿಯೋ
ಒಗಟು: ಕೈಕಾಲು ಕೆಲಸ ಮಾಡುತ್ತದೆ, ತಲೆ ಮಾತ್ರ ಮಾಡಲ್ಲ ಏನದು? ಉತ್ತರ: ಮಣಿಶಂಕರ್‌ ಅಯ್ಯರ್‌!
ಕಿಂಗ್‌ ದೇವದಾಸ್‌
ಜ್ಯೋತಿಷಿ: ನಿಮ್ಮ ಗಂಡನ ಭವಿಷ್ಯ ಹೇಳಬೇಕಾ? ಮನೆಯಾಕೆ: ಏನೂ ಬೇಡ. ಹಿಂದಿನದ್ದು ಹೇಳಿ, ಭವಿಷ್ಯ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ!
-ಮಸಾಲಾಟ್ವೀಕ್‌
ಬೆಳಗ್ಗೆ ನೀವು ಏಳುವಲ್ಲಿವರೆಗೆ ಸ್ಮಾರ್ಟ್‌ ಫೋನ್‌ ಅಂದರೆ ಕೇವಲ ಅಲರಾಂ ಕ್ಲಾಕ್‌ ಹೊರತು ಬೇರೇನೂ ಅಲ್ಲ!
- ಗೂಗಲ್‌ ಬಾಬಾ
ನಾವು ಸೊನ್ನೆ ಕಂಡು ಹುಡುಕಿದೆವು ಅಂತ ಹೇಳಿಕೊಂಡು ಓಡಾಡುವುದರಲ್ಲಿ ಏನೂ ಮಜಾ ಉಳಿದಿಲ್ಲ. ಅದಕ್ಕೇ ವಿಮಾನ, ಕಂಪ್ಯೂಟರ್‌, ಅಣುಬಾಂಬ್‌ ನಾವೇ ಕಂಡುಹಿಡಿದದ್ದು ಅಂತ ಹೇಳ್ಳೋಣ: ಬಿಜೆಪಿ
- ರೊಫೆಲ್‌ ಗಾಂಧಿ
ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎನ್ನುವ ಮೂಲಕ ಸಂಸದ ಸಾಕ್ಷಿ ಮಹರಾಜ್‌ ಅವರು ಮೋದಿ ಅವರ "ಮೇಕ್‌ ಇನ್‌ ಇಂಡಿಯಾ'ವನ್ನು ನಿಜವಾಗಿಯೂ ಬೆಂಬಲಿಸಿದ್ದಾರೆ!
ಶ್ರೀ ಶ್ರೀ ಜುಂಝನ್‌ವಾಲಾ
ಯುವರಾಜ್‌ ಸಿಂಗ್‌ ರಣಜಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ರಣಜಿ ಪಂದ್ಯಾವಳಿಗೆ ನಷ್ಟವಾಗುವ ಅಪಾಯವಿರುವ ಹಿನ್ನೆಲೆಯಲ್ಲಿ ಅವರನ್ನು ವಿಶ್ವಕಪ್‌ ತಂಡಕ್ಕೆ ಆರಿಸಲಿಲ್ಲ: ಬಿಸಿಸಿಐ ಸ್ಪಷ್ಟನೆ.
ಆರ್‌.ಎ
ಆಸ್ಟ್ರೇಲಿಯಾ ಪರ ಇಬ್ಬರು ಶತಕ ಬಾರಿಸಿದರು. ಭಾರತದ ಪರ ನಾಲ್ವರು ಶತಕ ಗಳಿಸಿದರು. ಆ ನಾಲ್ವರೂ ಬೌಲರ್‌ಗಳು!
ರಾಜು ಅರುಣ್‌
ಬಿಹಾರ ಮುಖ್ಯಮಂತ್ರಿ ಜಿತನ್‌ ರಾಮ್‌ ಮೇಲೆ ಶೂ ಎಸೆತ: ಸುದ್ದಿ.
ಬಳಿಕ ಗಾಯಗೊಂಡ ಶೂ ಆಸ್ಪತ್ರೆಗೆ ದಾಖಲು: ಸುಳ್‌ಸುದ್ದಿ! ಶ್ರೀ ಶ್ರೀ ಜುಂಝನ್‌ವಾಲಾ
ಕುಸ್ತಿ ಸ್ಪರ್ಧೆಯಲ್ಲಿ ಬಾಬಾ ರಾಮದೇವ್‌ ಭಾಗಿ:
ಪತಂಜಲಿ ಚ್ಯವನಪ್ರಾಶದ ಪರಿಣಾಮ ಇರಬಹುದೇ? ಆಜಂ ಖಾನ್‌ ಕಾ ಬಫೆಲೋ

Pages

Back to Top