CONNECT WITH US  

ಟ್ವಿಟಾಪತಿ

ನಮ್ಮ ಸಂತೋಷವನ್ನು ತ್ಯಾಗ ಮಾಡಿ ಮತ್ತೂಬ್ಬರನ್ನು ಸಂತೋಷಪಡಿಸುವುದು ದೊಡ್ಡತನವಲ್ಲ. ಮತ್ತೂಬ್ಬರನ್ನು ಸಂತೋಷಪಡಿಸಲು ಸಾಧ್ಯವಾಗದಿದ್ದಾಗಲೂ ನಾವು ಮತ್ತೆ ಪ್ರಯತ್ನಿಸುವುದು ನಮ್ಮ ದೊಡ್ಡತನ. ದ್ವೇಷ ನಮ್ಮ ದೌರ್ಬಲ್ಯ, ಪ್ರೀತಿ ನಮ್ಮ ಬಲ.
●ದಲೈ ಲಾಮಾ
ಕಳೆದ ಕೆಲವು ದಿನಗಳಲ್ಲಿ ಸುಪ್ರೀಂ ಕೋರ್ಟ್‌ ಎಷ್ಟೊಂದು ಪ್ರಮುಖ ವಿಷಯಗಳ ಮೇಲೆ ಮಹತ್ತರ ತೀರ್ಪು ನೀಡುತ್ತಿದೆಯೆಂದರೆ, ನ್ಯಾಯಾಂಗದ ಶಕ್ತಿಯ ಮೇಲೆ ನಂಬಿಕೆ ಬಲಿಷ್ಠವಾಗುತ್ತಿದೆ.
●ಹರ್ಷ ತೀರಥ್‌
ಇಲ್ಲಿಯವರೆಗೂ ಖಾಸಗಿ ಸಂಸ್ಥೆಗಳು ಆಧಾರ್‌ ಮೂಲಕ ಜನರಿಂದ ಸಂಗ್ರಹಿಸಿದ ಮಾಹಿತಿಯನ್ನು ಅಳಿಸಿಹಾಕಬೇಕೆಂದು ಸರ್ಕಾರ ಆದೇಶ ನೀಡಬೇಕು.
●ಖಾನುಂ ಚೌಧರಿ
ಯುದ್ಧ ವಿಮಾನ ಒಪ್ಪಂದದ ವಿಚಾರದಲ್ಲಿ ಕೇಂದ್ರ ಸರ್ಕಾರ ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗುವಂಥ ಸುದೀರ್ಘ‌ ವಿವರಗಳನ್ನು ಕೊಡುತ್ತಿದೆ.ಸ್ಪಷ್ಟ ಅಂಕಿ ಸಂಖ್ಯೆಗಳನ್ನು ಮುಂದಿಟ್ಟುಬಿಟ್ಟರೆ ಸಾಕಲ್ಲವೇ?
●ತೂಜಾನೇನಾ
ಕನಸು ಕಾಣುತ್ತಾ ಕೂಡಬೇಡಿ. ಶ್ರಮಪಡದೇ ಬರೀ ಕನಸುಕಾಣುವವನು ಎಚ್ಚರಗೊಂಡಾಗ ಜೀವನ ಅಂತ್ಯಕಾಲ ಸಮೀಪಿಸಿರುತ್ತದೆ.
●ಪೌಲೋ ಕೋಲ್ಹೋ
ಒಂದೇ ಸುಳ್ಳನ್ನು ಹತ್ತು ಬಾರಿ ಹೇಳಿಬಿಟ್ಟರೆ ಅದೇ ಸತ್ಯವಾಗಿಬಿಡುತ್ತದಂತೆ. ಯುದ್ಧವಿಮಾನ ಒಪ್ಪಂದದ ವಿಷಯದಲ್ಲಿ ಕಾಂಗ್ರೆಸ್‌ ಈ ತಂತ್ರ ಅನುಸರಿಸುತ್ತಿರುವುದು ಖಚಿತ.
●ವಿನೋದ್‌
ಆಧಾರ್‌ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ "ತಮಗೇ ಜಯವಾಯಿತು' ಎನ್ನುತ್ತಿವೆ. ಯಾರು ಯಾವುದನ್ನು ಯಾವಾಗ ವಿರೋಧಿಸುತ್ತಾರೋ, ಬೆಂಬಲಿಸುತ್ತಾರೋ ತಿಳಿಯದಾಗಿದೆ.
●ಟ್ರೂ ಜಂಟಲ್‌ವುನ್‌
ಸಾಫ್ಟ್ ಹಿಂದುತ್ವ ಎಂದರೇನು? ಏಕೆ ಕಾಂಗ್ರೆಸ್‌ ಬಹಿರಂಗವಾಗಿಯೇ ಹಿಂದೂ ಹಕ್ಕುಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತದೆ?
●ಕರಣ್‌ ಹಕ್ನೂರ್‌
ಇಮ್ರಾನ್‌ ಖಾನ್‌ ಪಾಕಿಸ್ತಾನ ಮಾನವೀಯ ಕಳಕಳಿಯುಳ್ಳ ದೇಶ ಎನ್ನುವಂತೆ ವರ್ತಿಸುತ್ತಿದ್ದಾರೆ. ಇಂದು ಪಾಕಿಸ್ತಾನವೇ ಜಾಗತಿಕ ಭಯೋತ್ಪಾದನಾ ಕೇಂದ್ರ ಎನ್ನುವುದು ಸುಳ್ಳೇನು?
●ಅಂಕಿತ್‌ ಚಟರ್ಜಿ
ನಿಜಕ್ಕೂ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ಬೆಳವಣಿಗೆ ಅಚ್ಚರಿ ಮೂಡಿಸುತ್ತಿದೆ. ಇನ್ನೊಂದೆರಡು ವರ್ಷದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧದ ಸರಣಿಯನ್ನು ಅದು ಸ್ವೀಪ್‌ ಮಾಡಿದರೂ ಅಚ್ಚರಿಯಿಲ್ಲ!
●ತೂಜಾನೇನಾ
ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ ಎಂದರೆ ನೀವು ಜೀವನದಲ್ಲಿ ಬೆಳೆಯುತ್ತಿಲ್ಲ ಎಂದರ್ಥ!
●ಪೌಲೋ ಕೋಲ್ಹೋ
ಯುದ್ಧ ವಿಮಾನ ಖರೀದಿ ವಿವಾದದಲ್ಲಿ ಮಾಧ್ಯಮಗಳೇಕೆ ಮೌನ ವಹಿಸಿವೆ?
●ತೂಜಾನೇನಾ
ಎರಡು ರೀತಿಯ ಜನರನ್ನು ನಂಬಲೇಬಾರದು: ಹೇಗೆ ಮತ ಚಲಾಯಿಸಬೇಕು ಎಂದು ಹೇಳುವ ಧಾರ್ಮಿಕ ನಾಯಕ ಮತ್ತು ಹೇಗೆ ಪ್ರಾರ್ಥಿಸಬೇಕು ಎಂದು ಹೇಳುವ ರಾಜಕಾರಣಿ.
●ಹರ್ಷ ಗೋಯೆಂಕಾ
ಕೊನೆಗೂ ತನ್ನ ಮೇಲೆ ತನಗೆ ನಂಬಿಕೆಯಿದ್ದವನು ಮಾತ್ರವೇ ಬದುಕಿನಲ್ಲಿ ಗೆಲ್ಲುತ್ತಾನೆ.
●ಬ್ರೇನಿಥಾಟ್ಸ್‌
ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಚುನಾವಣಾ ಕಾರ್ಡ್‌ ಸಿಗುತ್ತಿದೆ ಎಂದರೆ ನಮ್ಮ ದೇಶ ಎಷ್ಟು ಅಪಾಯದಂಚಿನಲ್ಲಿದೆಯೋ ಊಹಿಸಿ? ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಗಟ್ಟುತ್ತೇವೆಂಬ ಮಾತನ್ನು ಉಳಿಸಿಕೊಳ್ಳಲಿದೆಯೇ ಬಿಜೆಪಿ?
●ಮಯಾಂಕ್‌ ಊರ್ಜಿತ್‌

Pages

Back to Top