CONNECT WITH US  

ಟ್ವಿಟಾಪತಿ

ಜೀವನವೆನ್ನುವುದು ಪರಿಹರಿಸಬೇಕಾದ ಸಮಸ್ಯೆಯಲ್ಲ, ಅನುಭವಿಸಬೇಕಾದ ವಾಸ್ತವ
●ಇನ್‌ಸ್ಪೈರ್‌ ಟುಬಿ
ಅಮರೀಂದರ್‌ ಸರ್ಕಾರದ ನಿರ್ಧಾರ ನಿಜಕ್ಕೂ ಅಪಾಯಕಾರಿ. ಧಾರ್ಮಿಕ ಅವಹೇಳನದ ಸುಳ್ಳು ಆರೋಪಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
●ಅವಂತ್‌ ಸಿ
ಕಾಶ್ಮೀರದಲ್ಲಿ ನಿರಂತರವಾಗಿ ಪೊಲೀಸರ, ಸೈನಿಕರ ಹತ್ಯೆಗಳಾಗುತ್ತಿವೆ. ಆದರೆ ದೇಶದ ಮುಖ್ಯವಾಹಿನಿ ಮಾಧ್ಯಮಗಳಿಗೆ ಇದು ಸುದ್ದಿಯೇ ಅಲ್ಲವೇ?
●ತೂಜಾನೇನಾ
ವೈಫ‌ಲ್ಯಗಳೇ ನಮ್ಮನ್ನು ಪ್ರಬುದ್ಧರನ್ನಾಗಿಸುತ್ತವೆ. ಸೋಲಿಗೆ ಹೆದರಬೇಡಿ, ಸೋಲು ಕಲಿಸುವ ಪಾಠವನ್ನು ಚೆನ್ನಾಗಿ ಕಲಿತುಕೊಳ್ಳಿ.
●ಟ್ರೂಹಾರ್ಟ್‌
ಜೀವನದ ಮೂರು ಅತ್ಯುತ್ತಮ ಶಿಕ್ಷಕರು: ಹಾರ್ಟ್‌ಬ್ರೇಕ್‌ಗಳು, ಖಾಲಿ ಜೇಬುಗಳು ಮತ್ತು ವೈಫ‌ಲ್ಯಗಳು.
●ಅನುಪಮ್‌ ಖೇರ್‌
ವಿರಾಟ್‌ ಕೊಹ್ಲಿ ನಿಜಕ್ಕೂ ಮಾದರಿ ನಾಯಕ. ಅವರ ಶಿಸ್ತು ಭಾರತದ ಯುವ ಜನಾಂಗಕ್ಕೆ ಸ್ಫೂರ್ತಿಯಾಗಲಿ.
●ವಿನೋದ್‌ ಮುಕುಂದನ್‌
ಈಗ ಆಶಿಶ್‌ ಖೇತನ್‌ ಕೂಡ ಆಪ್‌ ಅನ್ನು ತೊರೆದಿದ್ದಾರೆ. ಕೇಜ್ರಿವಾಲ್‌ರ ಪಕ್ಷ 2019ರ ಚುನಾವಣೆಯ ವೇಳೆಗೆ ಪೂರ್ಣ ಅಸ್ತಿತ್ವ ಕಳೆದುಕೊಳ್ಳದಿದ್ದರೆ ಪುಣ್ಯ!
●ಟ್ರಾಲ್‌ಬಂದಾ
ಸಮಸ್ಯೆಯಿರುವುದು ಕಾನೂನು ಸುವ್ಯವಸ್ಥೆಯದ್ದೇ ಹೊರತು ವಾಟ್ಸ್‌ಆ್ಯಪ್‌ನದ್ದಲ್ಲ. ಸಮೂಹ ಥಳಿತಕ್ಕೆಲ್ಲ ಸಾಮಾಜಿಕ ಜಾಲತಾಣಗಳನ್ನು ಹೊಣೆಗಾರನನ್ನಾಗಿಸಿ ಸರ್ಕಾರಗಳು ನುಣುಚಿಕೊಳ್ಳಬಾರದು.
●ಜಾಧವ್‌ ಹೇರಂಬ್‌
ಕರ್ತವ್ಯ ವಿಮುಖನಾದವನು ಮಾತ್ರ ಅದೃಷ್ಟವನ್ನು ದೂರುತ್ತಾನೆ.
●ಟ್ರೂಕೋಟ್ಸ್‌
ಪಾಕಿಸ್ತಾನ ಸೇನೆ ಕಣಕಣದಲ್ಲೂ ಭಾರತ ದ್ವೇಷ ತುಂಬಿಕೊಂಡಿದೆ ಎನ್ನುವುದು ಸಿಧುಗೆ ಗೊತ್ತಿಲ್ಲವೇ? ತಬ್ಬಿಕೊಳ್ಳುವ ಮುನ್ನ ತಲೆ ಉಪಯೋಗಿಸಲು ಬರುವುದಿಲ್ಲವೇ?
●ತೂಜಾನೇನಾ
ಕೆಲವೊಂದು ಸಂಗತಿಗಳು ಸರಿಯಾದ ದಾರಿಗೆ ಬರಬೇಕೆಂದರೆ, ಸಮಾಜವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ರೇಪಿಸ್ಟ್‌ಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಕೂಡ ಅಂಥ ನಿರ್ಧಾರಗಳಲ್ಲಿ ಒಂದು.
●ರಾಜ್‌ವೀರ್‌ ಸಿಂಗ್‌
ಬೌಲರ್‌ಗಳಿಗೆ ಪೂರಕವಾಗಿರುವ ಪಿಚ್‌ನಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದಾರೆ. ಅವರನ್ನು ಕಿಂಗ್‌ ಕೊಹ್ಲಿ ಎಂದು ಕರೆಯಲು ಇನ್ನೇನು ಕಾರಣ ಬೇಕು?
●ಭುವನೇಶ್‌ ಪ್ರಥಂ
ಉಗ್ರವಾದಿ ಪಾಕ್‌ ಸೇನಾ ಮುಖ್ಯಸ್ಥನನ್ನು ತಬ್ಬಿಕೊಂಡು ನವಜೋತ್‌ ಸಿಂಗ್‌ ಸಿಧು ತಮ್ಮ ಪಕ್ಷಕ್ಕೆ ಮತ್ತು ನಮ್ಮ ದೇಶಕ್ಕೆ ಅವಮಾನ ಮಾಡಿದ್ದಾರೆ.
●ಮಿನ್ಹಾಜ್‌ ಮರ್ಚೆಂಟ್‌
ಕೆಲವೊಮ್ಮೆ ಹೊಸ ದಾರಿಗಳನ್ನು ಕಂಡುಕೊಳ್ಳಲು ಹಳೆಯ ಹಾದಿಗಳನ್ನು ಮರೆಯಬೇಕಾಗುತ್ತದೆ.
●ರಾಬಿನ್‌ ಶರ್ಮಾ
ಒಂದೇ ರೀತಿಯ ಜೀವನಶೈಲಿಯನ್ನು ಪುನರಾವರ್ತಿಸುತ್ತಾ ಅದನ್ನೇ ಬದುಕು ಎಂದು ಭ್ರಮಿಸುವವರ ಸಂಖ್ಯೆಯೇ ಹೆಚ್ಚು.
●ಪೌಲೋ ಕೊಲ್ಹೋ

Pages

Back to Top