CONNECT WITH US  

ಟ್ವಿಟಾಪತಿ

ಕೆಲವೊಮ್ಮೆ ಹೊಸ ದಾರಿಗಳನ್ನು ಕಂಡುಕೊಳ್ಳಲು ಹಳೆಯ ಹಾದಿಗಳನ್ನು ಮರೆಯಬೇಕಾಗುತ್ತದೆ.
●ರಾಬಿನ್‌ ಶರ್ಮಾ
ಒಂದೇ ರೀತಿಯ ಜೀವನಶೈಲಿಯನ್ನು ಪುನರಾವರ್ತಿಸುತ್ತಾ ಅದನ್ನೇ ಬದುಕು ಎಂದು ಭ್ರಮಿಸುವವರ ಸಂಖ್ಯೆಯೇ ಹೆಚ್ಚು.
●ಪೌಲೋ ಕೊಲ್ಹೋ
ಬದುಕಿನ ಜೊತೆಗೆ ಸ್ಪರ್ಧೆಗೆ ಬಿದ್ದರೆ ನಮಗ್ಯಾರೂ ಪ್ರತಿಸ್ಪರ್ಧಿಗಳಿರುವುದಿಲ್ಲ.
●ಟ್ರೂ ಕೋಟ್ಸ್‌
ಒಬ್ಬ ನೈಜ ದಂತಕತೆ, ರಾಜಕೀಯವನ್ನೂ ಮೀರಿದ ವ್ಯಕ್ತಿತ್ವ. ಎದುರಾಳಿಗಳು ಹಾಗೂ ಟೀಕಾಕಾರರಿಂದಲೂ ಗೌರವಿಸಲ್ಪಟ್ಟ ಅಪರೂಪದ ನಾಯಕ ವಾಜಪೇಯಿ.ಜೀವನದ ಸಾರ್ಥಕತೆಯೇ ಅವರು ದೇಶಕ್ಕೆ ಬಿಟ್ಟು ಹೋದ ಆಸ್ತಿ.
●ವಿವೇಕ್‌ ಓಬೆರಾಯ್‌
ಆಪ್‌ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಷ್ಟು ದುರ್ಬಲವಾಗಿದೆ ಎನ್ನುವುದಕ್ಕೆ ಅಶುತೋಷ್‌ರ ಅಸಂತೋಷವೇ ಸಾಕ್ಷಿಯಲ್ಲವೇ?
●ಅನಿರ್ಬಾನ್‌ ಪ್ರೀತಮ್‌
ಧೈರ್ಯವಂತರಾಗಿರಿ, ಸವಾಲುಗಳನ್ನು ಸ್ವೀಕರಿಸಿ. ಅನುಭವಕ್ಕಿಂತಲೂ ದೊಡ್ಡ ಶಕ್ತಿ ಮತ್ತೂಂದಿಲ್ಲ.
●ಪೌಲೋ ಕೋಲ್ಹೋ
ಹಾರ್ದಿಕ್‌ ಪಾಂಡ್ಯಾಗೆ ಇನ್ನೆಷ್ಟು ದಿನ ಆಲ್‌ರೌಂಡರ್‌ ಎಂಬ ಸುಳ್ಳು ಪಟ್ಟವನ್ನು ಕೊಡಲಿಗೆ ಟೀಂ ಇಂಡಿಯಾ?
●ತೂಜಾನೇನಾ
ನಾನು ಯಾರು ಎಂದು ಅರ್ಥವಾದ ದಿನವೇ ನಾನು ಸ್ವತಂತ್ರನಾಗುತ್ತೇನೆ.
● ರಾಲ್ಫ್ ಎಲಿಸನ್‌
‌ನನ್ನನ್ನು ಕೇಳಿದರೆ ಸ್ಪಷ್ಟವಾಗಿ ಹೇಳುತ್ತೇನೆ. ಶಿಕ್ಷಣವೇ ನಿಜವಾದ ಸ್ವಾತಂತ್ರ್ಯ.
●ಜಾರ್ಜ್‌ ವಾಷಿಂಗ್ಟನ್‌
ವಿವರಣೆಗಳನ್ನು ನೀಡುತ್ತಾ ನಿಮ್ಮ ಸಮಯ ಹಾಳುಮಾಡಿಕೊಳ್ಳಬೇಡಿ. ಜನರು ತಮಗೇನು ಬೇಕೋ ಅದನ್ನೇ ಕೇಳಿಸಿಕೊಳ್ಳುತ್ತಾರೆ.
●ಪೌಲೋ ಕೊಲ್ಹೋ
ಸತ್ಯವೇನೆಂದರೆ ಸೋಮನಾಥ್‌ ಚಟರ್ಜಿ ಅವರನ್ನು ಉಚ್ಚಾಟಿಸಿದಾಗಿನಿಂದಲೇ ಸಿಪಿಐ(ಎಂ) ದೇಶದಲ್ಲಿ ತೀರಾ ದುರ್ಬಲವಾಗುತ್ತಾ ಸಾಗಿತು.
●ತೂಜಾನೇನಾ
ದೇಶದಲ್ಲಿ ಕೆಲವು ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆಯೆಂದರೆ, ತರಗತಿಗಳಲ್ಲಿ ಮಕ್ಕಳಿರುವುದಿಲ್ಲ, ಮೇಕೆಗಳನ್ನು ಕಟ್ಟಲಾಗಿರುತ್ತದೆ. ಹೀಗಿರುವಾಗ ದೇಶದ ಶೈಕ್ಷಣಿಕ ಸುಧಾರಣೆ ಹೇಗೆ ಸಾಧ್ಯ?
●ನಗ್ಮಾ ಶಹರ್‌
ಎಲ್ಲವೂ ಎರಡು ಬಾರಿ ಸೃಷ್ಟಿಯಾಗುತ್ತದೆ. ಮೊದಲು ಮನಸ್ಸಲ್ಲಿ, ನಂತರ ವಾಸ್ತವದಲ್ಲಿ.
●ರಾಬಿನ್‌ ಶರ್ಮಾ
ತ್ರಿವಳಿ ತಲಾಖ್‌ ವಿಷಯದಲ್ಲಿ ಕಾಂಗ್ರೆಸ್‌ ತನ್ನ ಸ್ಪಷ್ಟ ನಿಲುವೇನು ಎನ್ನುವುದನ್ನು ಹೇಳಿಬಿಡಲಿ. ಒಂದೆಡೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದು, ಇನ್ನೊಂದೆಡೆ ತ್ರಿವಳಿ ತಲಾಖ್‌ನ ವಿರುದ್ಧದ ಕೇಂದ್ರದ ನಡೆಯನ್ನು ಪ್ರಶ್ನಿಸುತ್ತಾ ಕೂರುವುದು ಇನ್ನು ಸಾಕು.
●ತ್ರಿವೇದಿನಾಥ್‌ ಓಂಕಾರ್‌
ಕಂಗನಾ ರನಾವತ್‌ ದೇಶದ ಪ್ರಗತಿಪರರ ಧೋರಣೆಯನ್ನು ಪ್ರಶ್ನಿಸಿದ್ದೇ, ಲಿಬರಲ್‌ಗ‌ಳೆಲ್ಲ ಆಕೆಯನ್ನು ಭಕ್ತಳೆಂದು ಕರೆಯಲಾರಂಭಿಸಿದ್ದಾರೆ. ಕಂಗನಾ ಹೇಳಲು ಹೊರಟಿದ್ದೂ ಇದನ್ನೇ ಅಲ್ಲವೇ?
●ಪ್ರತೀಕ್‌ ಧಿಂಪಾಲ್‌

Pages

Back to Top