CONNECT WITH US  

ಟ್ವಿಟಾಪತಿ

ವಿಫ‌ಲ ಹೊಂದುತ್ತಿರುವ ರಾಜಕುಮಾರನ ಬದಲಿಗೆ ರಾಜಕುಮಾರಿಯನ್ನು ಕರೆ ತರಲಾಗುತ್ತಿದೆ. ಆದರೆ ಈ ಯೋಜನೆ ಯಶಸ್ವಿಯಾಗುತ್ತದೆಯೋ ಕಾದು ನೋಡಬೇಕು.
*ಹರ್ಬಿರ್‌ ಸಿಂಗ್‌
ಆಪ್‌ನ ಸಚಿವರೊಬ್ಬರು ಬೋಟ್ಸ್‌ವಾನಾದಲ್ಲಿ ಮತದಾನಕ್ಕೆ ಇವಿಎಂ ಸರಿಯಾದ ವ್ಯವಸ್ಥೆ ಅಲ್ಲ ಎಂಬ ಬಗ್ಗೆ ಮನದಟ್ಟು ಮಾಡಲು ಮುಂದಾಗುತ್ತಿದ್ದಾರಂತೆ. ಹಾಗಿದ್ದರೆ 70 ಸ್ಥಾನಗಳ ಪೈಕಿ ಆಪ್‌ 67 ಸ್ಥಾನಗಳನ್ನು ಗೆದ್ದದ್ದು ಹೇಗೆ?
*ಯಶವಂತ್‌ ದೇಶ್‌ಮುಖ್‌
ಅಸ್ಸಾಂನಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಸರ್ಕಾರಗಳು ಉದ್ದೇಶಪೂರ್ವಕವಾಗಿಯೇ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿಟ್ಟು ಅಕ್ರಮವಾಗಿ ವಲಸಿಗರು ಪ್ರವೇಶಿಸುವಂತೆ ಮಾಡಿತು. ವೋಟ್‌ ಬ್ಯಾಂಕ್‌ಗಾಗಿ ಈ ಕೃತ್ಯವನ್ನು ವರ್ಷಗಟ್ಟಲೆ ನಡೆಸಿತು.
*ಡೇವಿಡ್‌ ಫ್ರಾಲೆ
ಭಾರತದಲ್ಲಿ ಸಾಕಷ್ಟು ಮುಸ್ಲಿಮರಿದ್ದಾರೆ. ನೆರೆರಾಷ್ಟ್ರಗಳಿಂದ ಇನ್ನಷ್ಟು ಮುಸ್ಲಿಮರು ಭಾರತಕ್ಕೆ ಬೇಕಾಗಿಲ್ಲ. ಆದರೆ, ಭಾರತದ ರಾಜಕಾರಣಿಗಳಿಗೆ ಬೇಕು.
●ತಸ್ಲೀಮಾ ನಸ್ರೀನ್‌
ದೇವೇಂದ್ರ ಫ‌ಡ್ನವಿಸ್‌ ಅವರ ದೂರದೃಷ್ಟಿ, ಉತ್ತಮ ಕೆಲಸ ಮತ್ತು ಮೋದಿ ಸರ್ಕಾರ ಕೈಗೊಂಡ ನೋಟು ಅಮಾನ್ಯದಿಂದಾಗಿ ಬಿಜೆಪಿ ಮಹಾರಾಷ್ಟ್ರದ 2 ನಗರಗಳಲ್ಲಿ ಜಯ ಸಾಧಿಸಲು ಸಾಧ್ಯವಾಯಿತು.
● ಆಶು
ಗುಟ್ಕಾ ಜಗಿಯುವ ಮಂದಿಯ ಉತ್ತಮ ನಡೆಯೆಂದರೆ, ಅವರು ನಿಶ್ಯಬ್ದ ಕಾಯ್ದುಕೊಂಡಿರುತ್ತಾರೆ. ನಿಶ್ಯಬ್ದದ ಬೆಲೆ ಗುಟ್ಕಾದ ಬೆಲೆಗಿಂತ ಹೆಚ್ಚು ಎಂಬ ಸಂದರ್ಭಗಳಲ್ಲಿ ಮಾತ್ರ ಗುಟ್ಕಾ ಉಗಿಯುತ್ತಾರೆ.
●ಗಬ್ಬರ್‌
ಮನುಷ್ಯ ತನ್ನೊಂದಿಗೆ ತಾನು ಪ್ರಾಮಾಣಿಕವಾದಷ್ಟೂ ಅವನ ಜೀವನ ಸುಂದರವಾಗುತ್ತಾ ಸಾಗುತ್ತದೆ.
●ದಲಾಯ್‌ ಲಾಮಾ
‌ನವೀನ ಸಂಶೋಧನೆಗಳಿಗೆ ಭಾರತದಲ್ಲಿ ಈಗ ಯಾರಿಗೆ ಪುರುಸೊತ್ತಿದೆ. ಯುವಕರು ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಗಳನ್ನು ಬಿಟ್ಟಾಗ ಮಾತ್ರ ಹೊಸ ಸಂಶೋಧನೆಗಳಾಗಬಲ್ಲವಲ್ಲವೇ? ● ಫ‌ನ್ನಿಬುಡ್ಡಾ
● ಫ‌ನ್ನಿಬುಡ್ಡಾ
ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ನಡೆದರೆ ಅದಕ್ಕೆ ತಕರಾರೇಕೆ? ನಾಳೆ ದೇಶದ ಭದ್ರತೆಗೆ ಸಮಸ್ಯೆ ಎದುರಾದರೆ ಯಾರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು?
●ತೂಜಾನೇನಾ
ನಿಮ್ಮ ಮಕ್ಕಳು ಸುಳ್ಳು ಹೇಳುವುದನ್ನು ನಿಲ್ಲುಸುತ್ತಿಲ್ಲ ಎಂದರೆ ಭಯಪಡಬೇಡಿ. ಅವರಿಗೆ ಮುಂದೆ ರಾಜಕೀಯದಲ್ಲಿ ಒಳ್ಳೇ ಭವಿಷ್ಯವಿದೆ!
●ಅನಿರ್ಬಾನ್‌ ಬೂಂಬಕ್‌
ಯಶಸ್ಸೆಂಬ ಆದಾಯ ಹೆಚ್ಚಾಗಬೇಕೆಂದರೆ ನಿಮ್ಮ ಮೇಲೆ ಆತ್ಮವಿಶ್ವಾಸವೆಂಬ ಹೂಡಿಕೆಯನ್ನು ಮಾಡಿ.
●ಏಂಜೆಲಾ ಹ್ಯೂಬ್ಲಿರ್‌
ಇಮ್ರಾನ್‌ ಖಾನ್‌ಗೆ ಅಭಿನಂದನೆಗಳು. ರಾಜಕೀಯದಲ್ಲಿ ಕ್ರಿಕೆಟರ್‌ಗಳಿದ್ದರೆ ತೊಂದರೆ ಇಲ್ಲ, ಕ್ರಿಕೆಟ್‌ನಲ್ಲಿ ರಾಜಕೀಯ ಇರಬಾರದು.
●ರಮೇಶ್‌ ಶ್ರೀವತ್ಸ್
ಕನಸುಗಳನ್ನು ನುಚ್ಚುನೂರು ಮಾಡುವ ಅತಿ ಪ್ರಬಲ ಅಸ್ತ್ರವೆಂದರೆ ಕೀಳರಿಮೆ.
●ಜೋರ್ಡನ್‌ ಬೆಲ್ಫೋರ್ಟ್‌
ನಾವು ಆರಾಮ ಕುರ್ಚಿಗೆ ಎಷ್ಟು ಅಂಟಿಕೊಂಡಿದ್ದೇವೆಂದರೆ ಅವಕಾಶಗಳು ಬಂದಾಗ ಎದ್ದು ನಿಲ್ಲುವುದೇ ಇಲ್ಲ,
●ಪೌಲೋ ಕೊಲ್ಹೋ
ಅಕ್ರಮ ವಲಸಿಗರನ್ನು ಹೊರಹಾಕಲು ಬಿಜೆಪಿ ಪ್ರಯತ್ನಿಸಿದರೆ ಮಮತಾ ಬ್ಯಾನರ್ಜಿಗೇಕೆ ಸಿಟ್ಟು? ಓಟ್‌ ಬ್ಯಾಂಕ್‌ಗೆ ಪೆಟ್ಟಾಗುತ್ತದೆ ಅಂತಲಾ?
●ಭುವನ್‌ ಪರ್ವೀನ್‌

Pages

Back to Top