CONNECT WITH US  

ಟ್ವಿಟಾಪತಿ

ಕಾಶ್ಮೀರದ ಕಲ್ಲು ತೂರಾಟಗಾರರು ನಮ್ಮ ಯೋಧನನ್ನು ಕೊಂದುಹಾಕಿದ್ದಾರೆ. ಆದರೆ ದೇಶದ ಆಜಾದಿ ಗ್ಯಾಂಗ್‌ಗೆ ಸೈನಿಕರ ಬದುಕು ಬದುಕೇ ಅಲ್ಲ.
●ಅನಿರ್ಬಾನ್‌ ಚೌಧರಿ
ಯಶಸ್ಸಿನ ಬೆನ್ನುಹತ್ತಿ ಓಡುವಾಗ ಸುತ್ತಲಿನ ಚಿಕ್ಕಪುಟ್ಟ ಸಂಗತಿಗಳಲ್ಲೂ ಖುಷಿ ಅನುಭವಿಸುವವನೇ ನಿಜವಾದ ಸಾಧಕ.
●ಟ್ರೂಕೋಟ್‌
ವಿರಾಟ್‌ ಕೊಹ್ಲಿಗೆ ಸರಿಸಾಟಿ ಯಾರೂ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ.
●ತೂಜಾನೇನಾ
ಭಾರತೀಯ ಕ್ರಿಕೆಟ್‌ ತಂಡದಲ್ಲಿ ಎಷ್ಟೊಂದು ಪ್ರತಿಭಾನ್ವಿತರು ತುಂಬಿದ್ದಾರೆಂದರೇ, ಮೂರು ನ್ಯಾಷನಲ್‌ ಟೀಂ ಮಾಡಿದರೂ ಸಾಲುವುದಿಲ್ಲ.
●ಸಾಗರ್‌ ಪ್ರಲೋಕ್‌
ಜಗತ್ತಿನ ಸಮಸ್ಯೆಗಳ ಕುರಿತು ಯೋಚಿಸುತ್ತಾ ಕೂರುವ ಬದಲು, ನಂಬಿಕೆ, ಪ್ರೀತಿ ಮತ್ತು ಶಾಂತಿಯ ಬಗ್ಗೆ ಗಮನ ಕೇಂದ್ರೀಕರಿಸುವುದೇ ಒಳ್ಳೆಯದು.
●ಪಾಸಿಟಿವ್‌
ಹಿಂದೆ ಸಿಬಿಐ ಪಂಜರದ ಗಿಣಿಯಾಗಿತ್ತು. ಈಗ ಕಾದಾಟದ ರಣಾಂಗಣವಾಗಿದೆ.
●ಶಿಖರ್‌ ಅರವಿಂದ್‌
ಸಿಬಿಐ ಅಧಿಕಾರಿಯನ್ನೇ ಸಿಬಿಐ ಬಂಧಿಸಿರುವುದರಿಂದಾಗಿ, ಸಿಬಿಐ ಕಚೇರಿಯ ಮೇಲೆ ಸಿಬಿಐ ಸ್ವತಃ ದಾಳಿ ನಡೆಸಿದಂತಾಗಿದೆ!
●ನಾಗಾರ್ಜುನ ದ್ವಾರಕಾನಾಥ್‌
ದೇವರ ಅಸ್ತಿತ್ವವನ್ನೇ ನಿರಾಕರಿಸುವ ಎಡ ಪಕ್ಷಗಳು ದೇಗುಲಗಳ ಹಣವನ್ನು ಮಾತ್ರ ನಿರಾಕರಿಸಲು ಹೋಗುವುದಿಲ್ಲ!
●ಹಯಗ್ರೀವ್‌ ಅಲಪ್ಪುರ
ಎಡಪಂಥೀಯರು ಭಾರತೀಯ ಸಂಪ್ರದಾಯಗಳನ್ನು ಪಾಶ್ಚಾತ್ಯ ಕನ್ನಡಕದಲ್ಲೇ ನೋಡುವ ಪರಿಪಾಠ ಬೆಳೆದಿರುವುದರಿಂದಲೇ ದೇಶದಲ್ಲಿ ಬಿರುಕು ಸೃಷ್ಟಿಯಾಗುತ್ತಿದೆ.
●ತೂಜಾನೇನಾ
ಅಮೃತಸರ ರೈಲು ದುರಂತಕ್ಕೆ ರೈಲ್ವೆ ಇಲಾಖೆ ಹೇಗಾದೀತು? ಸ್ಥಳೀಯ ಆಡಳಿತವೇ ಕಾರಣ. ಆದರೆ ಅವರೂ ಒಂದು ಬಾರಿ ತನಿಖೆ ನಡೆಸಬಹುದಿತ್ತು ಅಲ್ಲವೇ?
●ಸುನೀತ್‌ ಸಂಕಲ್ಪ್
ಭದ್ರತೆ ಇಲ್ಲದ ಕಡೆ ಮಹಿಳೆಯರು ಹೋಗೋದು ಬೇಡ ಅಂತೀರಿ. ಸರಿ, ನಾವು ಮನೆಯಲ್ಲಿ ಇಡ್ಲಿ ಮಾಡ್ತಾ ಇತೇìವೆ. ಕನಿಷ್ಠ ಅಲ್ಲಿಯಾದರೂ ಮಹಿಳೆಯರಿಗೆ ಗೌರವ ಕೊಡಿರೆಂದು ಗಂಡಸರಿಗೆ ಹೇಳುವಿರಾ?
●ಚಾರ್ಮಿ ಹರಿಕೃಷ್ಣನ್‌
ಶಬರಿಮಲೆ ಬಗ್ಗೆ ಆರ್‌ಎಸ್‌ಎಸ್‌ ಸ್ಪಷ್ಟನೆ ನೀಡಿದೆ. ಆದಷ್ಟು ಬೇಗ ಬಿಜೆಪಿಯೂ ಸ್ಪಷ್ಟನೆ ನೀಡಬೇಕು ಹಾಗೂ ಬಿಕ್ಕಟ್ಟು ಶಮನಕ್ಕೆ ಸಾಂವಿಧಾನಿಕ ದಾರಿ ಹುಡುಕಿಕೊಳ್ಳಬೇಕು. ಇಲ್ಲವಾದರೆ ಅದು ಗೊಂದಲಕ್ಕೆ ಕಾರಣವಾದೀತು.
●ಎಂಆರ್‌ವಿ
ಇಷ್ಟು ದಿನ ಸುಮ್ಮನಿದ್ದ ಮೋದಿ ಸರ್ಕಾರ ಈಗ ಅಚಾನಕ್ಕಾಗಿ ಅಕºರ್‌ ರಾಜೀನಾಮೆಯ ಕ್ರೆಡಿಟ್‌ ಅನ್ನು ತೆಗೆದುಕೊಳ್ಳಲು ತಡಮಾಡುವುದಿಲ್ಲ. ನೋಡುತ್ತಿರಿ.
●ತೂಜಾನೇನಾ
ಇಷ್ಟು ದಿನ ಸುಮ್ಮನಿದ್ದ ಮೋದಿ ಸರ್ಕಾರ ಈಗ ಅಚಾನಕ್ಕಾಗಿ ಅಕºರ್‌ ರಾಜೀನಾಮೆಯ ಕ್ರೆಡಿಟ್‌ ಅನ್ನು ತೆಗೆದುಕೊಳ್ಳಲು ತಡಮಾಡುವುದಿಲ್ಲ. ನೋಡುತ್ತಿರಿ.
●ತೂಜಾನೇನಾ
ಪಶ್ಚಿಮಾತ್ಯ ಪ್ರೇರಿತ ಮಾಧ್ಯಮಗಳು ಶಬರಿಮಲೆ ವಿಚಾರವನ್ನು ಭಾರತೀಯ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಅಲ್ಲಿ ಅಸಮಾನತೆಯ ಪ್ರಶ್ನೆ ಬರುವುದಿಲ್ಲ ಎಂದು ಅರಿತಾವು.
●ನಯನ್‌ ಪ್ರಯಾಗ್‌

Pages

Back to Top