CONNECT WITH US  

ನಾಯಿಯಿಂದ ಬಂದ ಪತ್ರ ನೋಡಿ ಕಣ್ಣೀರಾದ

representative image

ಕೆಲವೊಮ್ಮೆ ಎದುರುಗೊಳ್ಳುವ ಅನಿರೀಕ್ಷಿತ ಸಂದರ್ಭಗಳು ಹೇಗಿರುತ್ತವೆ ಎಂದರೆ ಅವು ನಿಮಗೆ ಖುಷಿ ಮತ್ತು ದುಖಃ ವನ್ನು ಒಟ್ಟಿಗೇ ತರುತ್ತವೆ. ಯುರೋಪ್‌ನ ವ್ಯಕ್ತಿಯೊಬ್ಬರು ತಮ್ಮ ಇಂಥದ್ದೊಂದು ಅನುಭವವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ವ್ಯಕ್ತಿಯ ಅಜ್ಜ ಒಂದು ನಾಯಿಯನ್ನು ಸಾಕಿದ್ದರು. ಅವರಿಗೆ ಮರೆವಿನ ಕಾಯಿಲೆ ಇದೆ ಎಂದು ತಿಳಿಯುತ್ತಲೇ ತಾವು ಪ್ರೀತಿಯಿಂದ ಸಾಕಿದ ನಾಯಿಗೆ ಯಾವ ಕೊರತೆಯೂ ಆಗಬಾರದು ಎಂದು ಅದನ್ನು ಬೇರೊಂದು ಕುಟುಂಬಕ್ಕೆ ನೀಡಿದ್ದರು. ಅಜ್ಜ ಕೆಲವಾರಗಳ ಹಿಂದೆ ನಿಧನರಾದರು. ಕುಟುಂಬಕ್ಕೆ ಪತ್ರವೊಂದು ತಲುಪಿತು.

"ನಾನು ಸ್ಪೇನ್‌ನಲ್ಲಿ ರಜೆ ಕಳೆಯುತ್ತಿದ್ದೇನೆ. ನನ್ನ ಅಪ್ಪನ ನಿಧನದ ಸುದ್ದಿ ತಿಳಿಯಿತು. ಅವರು ನನಗೆ ದೇವರ ಸಮಾನ' - ಇಂತಿ ವಿನ್ಸೆಂಟ್‌(ನಾಯಿ) ಎಂದಿತ್ತು. ಈ ಪತ್ರ ನೋಡಿ ಮೊಮ್ಮಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ನಾಯಿಯ ಈಗಿನ ಮಾಲೀಕರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾಯಿಯನ್ನು ವಾಪಸ್ಸು ಮನೆಗೆ ತರಬೇಕೆಂದುಕೊಂಡಿದ್ದೆವು ಆದರೆ ಅಷ್ಟರ ಒಳಗೆ ನಮ್ಮ ಅಜ್ಜ ನಿಧನರಾದರು. ವಿನ್ಸೆಂಟ್‌ ನಮ್ಮ ಅಜ್ಜನ ಪೀತಿ ಪಾತ್ರನಾಗಿದ್ದ ಎಂದು ಅವರು ಬರೆದಿದ್ದಾರೆ.

Trending videos

Back to Top