CONNECT WITH US  

ಸಿಂಡರೆಲ್ಲಾ ಬಂದ್ಳುಲ್ಲಾ: ಟುಟು ಡ್ರೆಸ್ಸಿನ ಟುವ್ವಿ ಟುವ್ವಿ ಲುಕ್ಕು

ಸಿಂಡರೆಲ್ಲಾ ಕತೆಯನ್ನು ನೀವೆಲ್ಲರೂ ಕೇಳಿರುತ್ತೀರಿ ಮತ್ತು ಕತೆಗಳಲ್ಲಿ ಆಕೆಯ ಚಿತ್ರವನ್ನು ನೋಡಿರುತ್ತೀರಿ. ಅಗಲ ಲಂಗವನ್ನು ತೊಟ್ಟು ಕೈಯಲ್ಲಿ ಮಂತ್ರದಂಡವನ್ನು ಹಿಡಿದ ಸಿಂಡರೆಲ್ಲಾ ಲುಕ್ಕನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಇಷ್ಟಪಡುತ್ತಾರೆ. ಇದೇ ಸಿಂಡರೆಲ್ಲಾ ಮಾದರಿಯ ಲಂಗವನ್ನು ಫ್ಯಾಷನ್‌ಗೆ ತಕ್ಕಂತೆ ಮಾರ್ಪಾಡು ಮಾಡಿದಾಗ ತಯಾರಾಗಿದ್ದೇ ಟುಟು ಡ್ರೆಸ್‌...

ಟುಟು ಡ್ರೆಸ್‌ ಫ್ಯಾಷನ್‌ ಟ್ರೆಂಡ್‌ನ‌ಲ್ಲಿದೆ. ಗೌನ್‌ಗಳಿಗಿಂತ ಸ್ವಲ್ಪ ಭಿನ್ನವಾಗಿರುವುದರಿಂದ ಎಲ್ಲಾ ವಯೋಮಾನದ ಯುವತಿಯರ ಮನ ಗೆದ್ದಿವೆ. ಸ್ಕರ್ಟ್‌, ಜೀ… , ಟೀ ಶರ್ಟ್‌ ಹಾಕಿ ಬೋರ್‌ ಆಗಿದೆ ಯಾವುದಾದರು ಯುನಿಕ್‌ ಆಗಿರುವ ಡ್ರೆಸ್‌ ಬೇಕು ಅದು ಮಾಡ್ರನ್‌ ಮತ್ತು ಸ್ಟೈಲಿಶ್‌ ಆಗಿರಬೇಕು ಎಂದು ಬಯಸುವ ಯುವತಿಯರಿಗೆ ಟುಟು ಡ್ರೆಸ್‌ ಒಳ್ಳೆಯ ಆಯ್ಕೆ. ಕೊಡೆಯ ವಿನ್ಯಾಸವನ್ನು ಹೊಂದಿರುವ ಟುಟು ಡ್ರೆಸ್‌ ಒಂದು ವಿಭಿನ್ನ ಪರಿಕಲ್ಪನೆಯಾಗಿದ್ದು, ಈ ದಿರಿಸನ್ನು ನೆಟ್ಟೆಡ್‌ ಮತ್ತು ಫ್ಯಾಬ್ರಿಕ್‌ ಕ್ಲಾತ್‌ ನಿಂದ ಡಿಸೈನ್‌ ಮಾಡಲಾಗಿದೆ. ಈಗಿನ ಯುವತಿಯರು, ಮಕ್ಕಳು ಸಿಂಡ್ರೆಲ್ಲಾ ಲುಕ್‌ ಬಯಸುತ್ತಾರೆ ಮತ್ತು ಇದಕ್ಕಾಗಿ ಗೌನ್‌ ಮತ್ತು ನೆಟ್ಟೆಡ್‌ ಡ್ರೆಸ್‌ಗಳನ್ನು ಧರಿಸುತ್ತಾರೆ. ಈ ಯುವತಿಯರು ಟುಟು ಡ್ರೆಸ್‌ಅನ್ನು ಆರಿಸಿಕೊಳ್ಳಬಹುದು. ಪಾರ್ಟಿಗಳಿಗೆ ಅದದೇ ಜೀನ್ಸ್‌ ತೊಟ್ಟು ಬೋರ್‌ ಆದವರಿಗೆ ಈ ದಿರಿಸು ಫ್ರೆಶ್‌ ಅನುಭವವನ್ನು ನೀಡುತ್ತದೆ. ಬಿಳಿ ಮತ್ತು ಕೆಂಪು, ಕಪ್ಪು ಮತ್ತು ನೇರಳೆ ಕಾಂಬಿನೇಷನ್‌ ಟುಟು ಡ್ರೆಸ್‌ಗಳು ಹೆಚ್ಚು ಹೆಚ್ಚು ಪ್ರಖ್ಯಾತಿ ಪಡೆಯುತ್ತಿವೆ. ಈ ದಿರಿಸು ತೊಡುವುದರಿಂದ ಸುತ್ತಮುತ್ತಲಿನವರ ಗಮನ ನಿಮ್ಮ ಮೇಲೆ ಬೀಳುವುದು ಖಂಡಿತ. 

ಕೆಲವರು ಈ ಮಾದರಿಯ ಬಟ್ಟೆಯನ್ನು ಗೌನ್‌ಗಳಿಗೆ ಪರ್ಯಾಯವಾಗಿಯೂ ಬಳಸುವುದಿದೆ. ಆದರೆ ಗೌನ್‌ ಲಾಂಗ್‌ ಆಗಿರುವುದರಿಂದ ಇನ್ನು ಕೆಲವರಿಗೆ ಅದು ಕಂಫ‌ರ್ಟ್‌ ಎನ್ನಿಸುವುದಿಲ್ಲ. ಹೀಗಾಗಿಯೇ ಅವರು ಟುಟು ಡ್ರೆಸ್‌ಗಳಿಗೆ ಮೊರೆ ಹೋಗುತ್ತಿರುವುದು. ಯುವತಿಯರು ತಮ್ಮ ಮೈ ಬಣ್ಣ ಕ್ಕೆ ಹೊಂದುವ ಕಲರ್‌ ಚಾಯ್ಸ… ಮಾಡಿ ಧರಿಸಬಹುದು. ಇಲ್ಲವೇ ಮಿಕ್ಸ್‌ ಅಡ್‌ ಮ್ಯಾಚ್‌ ಮಾಡಿ ತಮಗೆ ಚೆಂದ ತೋರುವ ಕಾಂಬಿನೇಷನ್‌ ಅನ್ನು ಹುಡುಕಿಕೊಳ್ಳಬಹುದು. 

ಇನ್ನೊಂದು ಮುಖ್ಯ ಸಂಗತಿಯೆಂದರೆ ಟುಟು ಡ್ರೆಸ್‌ಗೆ ಸರಿಹೊಂದುವಂತೆ ಶೂ ಅಥವಾ ಸ್ಯಾಂಡಲ್‌ಗ‌ಳನ್ನು ತೊಡಬೇಕು. ಇಲ್ಲದಿದ್ದರೆ ಲುಕ್‌ ಹಾಳಾಗುವ ಸಾಧ್ಯತೆ ಹೆಚ್ಚು. ಸ್ಲಿಮ… ಆಗಿರುವ ಯುವತಿಯರು ಟುಟು ಧರಿಸಿ ಹೈ ಹೀಲ್ಡ್‌ ಶೂ ಮತ್ತು ಸ್ಯಾಂಡಲ… ಹಾಕ್ಕೊಂಡರೆ ಪಫೆಕ… ಆಗಿ ಮ್ಯಾಚ್‌ ಆಗುತ್ತದೆ. ಕಡಿಮೆ ಎತ್ತರ ಇರುವ ಯುವತಿಯರೂ ಟುಟು ಡ್ರೆಸ್‌ ಧರಿಸಬಹುದು. ಆದರೆ ಅದರ ಜೊತೆಗೆ ಹೆಚ್ಚು ಆ್ಯಕ್ಸೆಸರೀಸ್‌ಗಳನ್ನು ಬಳಸದೇ ಇರುವುದು ಉತ್ತಮ. 
ಮದುವೆ ಸಮಾರಂಭಗಳಲ್ಲಿ ಬಿಳಿ ಬಣ್ಣದ ಟುಟು ಡ್ರೆಸ್‌, ಮತ್ತದಕ್ಕೆ ಬಿಳಿ ಬಣ್ಣದ ಮಾಡ್ರನ್‌ ಆದರೆ ಸಿಂಪಲ… ಜ್ಯುವೆಲರಿ ಧರಿಸಿದರೆ ನೀವೂ ನಿಜಕ್ಕೂ ಅಪ್ಸರೆಯಂತೆ ಕಾಣುವಿರಿ. 

ಟುಟು ಗುಟ್ಟು ಗೊತ್ತೇನು?
1. ಬಿಳಿ ಬಣ್ಣದ ಟುಟು ಡ್ರೆಸ್‌ಗೆ ಸಿಂಪಲ… ಜ್ಯುವೆಲರಿ ಧರಿಸಿದರೆ ನೀವೂ ನಿಜಕ್ಕೂ ಅಪ್ಸರೆಯೇ!
2. ಸ್ಲಿಮ… ಆಗಿರುವ ಯುವತಿಯರು ಟುಟು ಧರಿಸಿ, ಹೈ ಹೀಲ್ಡ್‌ ಶೂ ಹಾಕ್ಕೊಂಡ್ರೆ ಪಫೆìಕr… ಮ್ಯಾಚ್‌.
3. ನೆಟ್ಟೆಡ್‌ ಮತ್ತು ಫ್ಯಾಬ್ರಿಕ್‌ ಕ್ಲಾತ್‌ನಿಂದ ಡಿಸೈನ್‌ ಮಾಡಿರುವ ಟುಟು ಯಾರಿಗೂ ಹೊಂದುತ್ತದೆ.

ಮಕ್ಕಳಿಗೂ ಮ್ಯಾಚ್‌ ಆಗುತ್ತೆ!
ಮಕ್ಕಳಿಗಂತೂ ಕೇಳುವುದೇ ಬೇಡ. ಟುಟು ಅವರಿಗೆ ಸಖತ್‌ ಲುಕ್‌ ಕೊಡುತ್ತೆ. ಕಣ್ಮುಚ್ಚಿ ಯಾವ ಬಣ್ಣದ ಟುಟು ಡ್ರೆಸ್‌ ತೊಟ್ಟರೂ ತುಂಬಾ ಮುದ್ದಾಗಿ ಕಾಣಾ¤ರೆ. ಅದರಲ್ಲೂ ರೆಡ್‌ ಮತ್ತು ರಾಯಲ… ಪಿಂಕ್‌ ಬಣ್ಣಗಳಲ್ಲಿ ಮಕ್ಕಳು ಸಿಂಡರೆಲ್ಲಾಳಂತೆಯೇ ಕಾಣಿಸುತ್ತಾರೆ.

ಕಾವ್ಯ ಎಚ್‌.ಎನ್‌., ದಾವಣಗೆರೆ

Trending videos

Back to Top