CONNECT WITH US  

ಮನೋರಥ

ನನ್ನ ಚಿಕ್ಕಮ್ಮನವರಿಗೀಗ ಅರುವತ್ತೆಂಟು ವರ್ಷ ವಯಸ್ಸು. ಅವರು ಪ್ರಾಯದಲ್ಲಿದ್ದಾಗ ಯಾವಾಗಲೂ ನಗುಮುಖದಿಂದ ಲವಲವಿಕೆಯಿಂದ ಓಡಾಡಿಕೊಂಡಿದ್ದದ್ದು ನನಗೆ ಚೆನ್ನಾಗೇ ನೆನಪಿದೆ. ಆದರೆ ಈಗೊಂದೆರಡು ವರ್ಷದಿಂದ ಯಾಕೋ ಮಂಕಾದಂತೆ ತೋರುತ್ತಾರೆ. ಅವರ ಜೊತೆಗಿರುವ ಮಗ - ಸೊಸೆಯೂ ಇದನ್ನು ಗಮನಿಸಿದ್ದಾರೆ. ಕೆಲವೊಮ್ಮೆ ನಿದ್ರೆಯೇ ಇಲ್ಲದೇ ಹೊರಳಾಡಿದರೆ, ಕೆಲವೊಮ್ಮೆ ದಿನವಿಡೀ ನಿದ್ದೆಯೇ ಮಾಡುತ್ತಾರೆ. ಎಲ್ಲೂ ಹೊರಬರಲು, ಜನರೊಡನೆ ಮಾತಾಡಲು ಉತ್ಸಾಹವೇ ತೋರುವುದಿಲ್ಲ. "ನೀವೆಲ್ಲಾ ಹೋಗಿ ಬನ್ನಿ. ನನಗೆ ಸುಸ್ತಾಗುತ್ತೆ'' ಅಂತ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಾರೆ. ಒತ್ತಾಯ ಮಾಡಲು ಹೋದರೆ, ಸಿಡುಕುತ್ತಾರೆ.

ಬೈಯುತ್ತಾರೆ ಕೂಡ! ಮೊಮ್ಮಕ್ಕಳನ್ನೂ ಸಹ ಅಷ್ಟಾಗಿ ಹಚ್ಚಿಕೊಳ್ಳೋದಿಲ್ಲ. ಇದ್ಯಾಕೋ ಸರಿ ಕಾಣುತ್ತಿಲ್ಲವಲ್ಲಾ ಅಂತ ಮನೆಯವರಲ್ಲಿ ವಿಚಾರಿಸಿದರೆ, ಅವರು ಹೇಳುವುದೇ ಬೇರೆ! ಅವರಿಗೆ ವಯಸ್ಸಾಯ್ತಲ್ಲಾ! ಅದಕ್ಕೆ ಹೀಗೆ! ಅರವತ್ತಾದ ಮೇಲೆ ಮಂಕು ಕವಿದಂತೆ ಆಗುತ್ತದೆ ಅಂತ ಕೇಳಿದ್ದೇವೆ. ಹಾಗೆಯೇ ಇರಬೇಕು. ಇನ್ನು ವಯಸ್ಸಾಗದಂತೆ ತಡೆಗಟ್ಟಲು ಯಾರಿಂದ ತಾನೇ ಸಾಧ್ಯ? ಅಂತೆಲ್ಲಾ ಹೇಳುತ್ತಿದ್ದಾರೆ! ಹೌದೇ? ಈ ರೀತಿ ಸ್ವಭಾವದಲ್ಲಿನ ವ್ಯತ್ಯಾಸ ವಯಸ್ಸಾದಂತೆ ಕಾಣಿಸಿಕೊಳ್ಳುವ ಬೆಳವಣಿಗೆಯೇ? ಇದಕ್ಕೆ ಏನೂ ಪರಿಹಾರ ಹುಡುಕುವ ಅಗತ್ಯ ಇಲ್ಲವೇ? 
-ವೆಂಕಟೇಶ್‌, ಕಾರ್ಕಳ 

ವೆಂಕಟೇಶ್‌ರವರೇ, ನಿಮ್ಮ ಚಿಕ್ಕಮ್ಮನಲ್ಲಿ ಕಂಡು ಬರುತ್ತಿರುವ ಯಾವ ಗುಣಲಕ್ಷಣಗಳೂ ಖಂಡಿತವಾಗಿಯೂ ವಯೋಸಹಜವಾಗಿ ಬರುವ ಗುಣ ವ್ಯತ್ಯಯಗಳಲ್ಲ! ಜನಸ್ತೋಮದಲ್ಲಿ ಇಂದಿಗೂ ವಯಸ್ಸಾದವರ ಮನಸ್ಥಿತಿಯ ಕುರಿತು ಹಲವು ತಪ್ಪು ಅಭಿಪ್ರಾಯಗಳು ಇವೆ. ವಯಸ್ಸಿನ ಪ್ರಭಾವದಿಂದ ಮಾತ್ರವೇ ಆಗುವ ಕೆಲವು ಬದಲಾವಣೆಗಳನ್ನು ವಯೋಸಹಜ ಎನ್ನಬಹುದು ಅಷ್ಟೇ. ಈ ಬದಲಾವಣೆಗಳು ಎಲ್ಲರಲ್ಲೂ ಅಂದರೆ ಶೇ. ನೂರರಷ್ಟು ಜನರಲ್ಲಿ ಕಂಡೇ ಕಾಣುತ್ತದೆ. ಉದಾಹರಣೆಗೆ, ಕೂದಲು ಬೆಳ್ಳಾಗಾಗುವಿಕೆ, ಚರ್ಮ ಸುಕ್ಕುಗಟ್ಟುವಿಕೆ, ದೃಷ್ಟಿ ಮಂಜಾಗುವಿಕೆ ಇತ್ಯಾದಿ.

ಅದು ಬಿಟ್ಟು, ಖನ್ನತೆ, ಆತಂಕ, ಮರೆಗುಳಿತನ... ಇವೆಲ್ಲವನ್ನೂ ವಯಸ್ಸಾದವರ ಸೊತ್ತೆಂಬಂತೆ ಅವರ ತಲೆಗೆ ಕಟ್ಟುವುದು, ಅರಿವಿನ ಕೊರತೆಯೂ ಹೌದು. ಹಾಗೂ ನಾವೇ ಈ ಹಿರಿಯರ ಹಿರಿತನಕ್ಕೆ ಮಾಡುವ ಅಪಮಾನವೂ ಹೌದು. ಈ ರೀತಿಯ ಗುಣಸ್ವಭಾವದಲ್ಲಿನ ವ್ಯತ್ಯಾಸಗಳು ಶೇ. ಎರಡರಿಂದ ಐದರಷ್ಟು ವಯೋ ವೃದಟಛಿರಲ್ಲಿ ಕಾಣಿಸಿಕೊಳ್ಳಬಹುದು. ‌ಟಛಿರಲ್ಲಿ ಈ ರೀತಿಯ ಯಾವ ವ್ಯತ್ಯಾಸಗಳೂ ೇ, ಕಡೇಗಾಲದವರೆಗೂ ಲವಲವಿಕೆಯಿಂದಲೂ, ಜೀವನೋತ್ಸಾಹದಿಂದಲೂ ಜೀವನ ನಿರ್ವಹಿಸುವ ಕ್ಷಮತೆ ಇರುತ್ತದೆ.

‌ಂತೆ, ಕೆಲವು ವಯಸ್ಸಾದವರಲ್ಲಿ ಅರವತ್ತೆ„ದು ವರ್ಷದ ಸಿಕೊಳ್ಳುವ ಈ ಮನೋವ್ಯಾಕುಲತೆಗೆ "ವೃದಾಟಛಿಪ್ಯದಲ್ಲಿ ಖನ್ನತೆ' (lಚಠಿಛಿ ಟnsಛಿಠಿ ಛಛಿಟrಛಿssಜಿಟn) ಅನ್ನುವ ಾಮಾಂಕಿತವೇ ಇದೆ. ಇಂಥವರಿಗೆ ಈ ಕಾಯಿಲೆ ಜೀವನದಲ್ಲಿ ಇರದೇ, ಅವರು ವಯಸ್ಸಾದ ನಂತರವೇ ಮೊದಲ ಸಿಕೊಳ್ಳುವುದರಿಂದ, ಜನರು ಇದನ್ನು ವಯೋಸಹಜ ಎಂದು ತಪ್ಪಾಗಿ ಭಾವಿಸಿ, ಯಾವುದೇ ಚಿಕಿತ್ಸೆ ಕೊಡಿಸಲು . ಈ ರೀತಿಯ ಮನೋವ್ಯಾಕುಲತೆಯಲ್ಲಿ, ಖನ್ನತೆ ಕಾಯಿಲೆಯಲ್ಲಿರುವ ಗುಣಲಕ್ಷಣಗಳಾದ ಬೇಜಾರಾಗುವಿಕೆ, ಗುವಿಕೆ, ಅನಾಸಕ್ತಿ ಉದಾಸೀನ, ನಿರುತ್ಸಾಹ,

ಇವುಗಳ ಜೊತೆ, ಹಿರಿಯರಲ್ಲಿ, ಅಸಹಜವಾದ ಸಿಟ್ಟು, ಸಿಡುಕುತನ, ದೇಹದ ಅಥವಾ ಸಾವಿನ ಬಗ್ಗೆಗಿನ ಅತಿಕಾಳಜಿ ಅಥವಾ ಭಯ, ತೂಕ ಹಾಗೂ ಹಸಿವಿನಲ್ಲಿ ಏರುಪೇರು, ನಿದ್ದೆಯಲ್ಲೂ ಏರುಪೇರು, ಅತಿಯಾದ ತಪ್ಪಿತಸ್ಥ ಭಾವನೆಗಳು, ಆತ್ಮಹತ್ಯೆಯ ಆಲೋಚನೆಗಳು, ಕೆಲವೊಮ್ಮೆ ಸಂಶಯ, ಭ್ರಮೆ, ಭಾÅಂತುವಿನಂಥ ಸ್ಥಿತಿ, ನೆನಪಿನ ಶಕ್ತಿಯ ಕುಂದುವಿಕೆ ಇವೆಲ್ಲವೂ ಕಾಣಿಸಿಕೊಳ್ಳಬಹುದು. ಈ ವಯಸ್ಸಿನವರಲ್ಲಿ ಕೆಲವು ಮೆದುಳಿನಲ್ಲಿಯೇ ಬದಲಾವಣೆಗಳೂ ಆಗಿರುವುದರಿಂದ,

ಬೇರೆ ಹಲವು ದೈಹಿಕ ಕಾಯಿಲೆಗಳೂ ದಾದ ಸಾಧ್ಯತೆಯಿಂದ, ಹಲವಾರು ಔಷಧಿಗಳ ಸೇವನೆ ಮಾಡುತ್ತಿರುವುದರಿಂದ, ಮಾತ್ರೆಗಳನ್ನು ಪರಿಷ್ಕರಿಸಬೇಕಾದ ಹಾಗೂ ಮೂತ್ರಪಿಂಡಗಳಿಗೂ ವಯಸ್ಸಾಗಿರೋದರಿಂದ ಅಡ್ಡ ಪರಿಣಾಮಗಳ ಸಾಧ್ಯತೆ ಹಾಗೂ ತೀವ್ರತೆ Þಗಿರುವುದರಿಂದ ಇಂಥವರ ಚಿಕಿತ್ಸೆ ಕೊಂಚ ಕ್ಲಿಷ್ಟಕರವಾದರೂ, ಧ್ಯವಂತೂ ಅಲ್ಲವೇ ಅಲ್ಲ! ಇವರನ್ನು ಆದಷ್ಟು ಬೇಗ ತಜ್ಞ ವೈದ್ಯರಲ್ಲಿ ತೋರಿಸಿದಲ್ಲಿ, ಸೂಕ್ತ ಔಷಧೋಪಚಾರದ ಜೊತೆ ಜೊತೆಗೆ, ಕೌಟುಂಬಿಕ ಬೆಂಬಲಕಾರಕ, ಸಮಾಧಾನಕರ, ಸಮಾಲೋಚನಾ ರೀತಿಯ ಚಿಕಿತ್ಸೆಯನ್ನೂ ಕೊಟ್ಟು,

ಸಾಕಷ್ಟು ಗುಣಮುಖರಾಗುವಂತೆ ಮಾಡಿ, ಮತ್ತೆ ಅವರಲ್ಲಿಯೂ ಜೀವನದೆಡೆ ಉತ್ಸಾಹ ಚಿಮ್ಮುವಂತೆ ಮಾಡಬಹುದು. ವಿಶ್ವದಲ್ಲಿ ಅದರಲ್ಲೂ, ಭಾರತದಲ್ಲಿ ಜನಸ್ತೋಮದ ಜೀವಿತಾವಧಿ ಜಾಸ್ತಿಯಾದಂತೆಲ್ಲ ವಯೋವೃದಟಛಿರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಹಾಗಿದ್ದಾಗ ಆ ಪ್ರಾಯದವರಲ್ಲಿ ಆಗುವ ಕಾಯಿಲೆಗಳ ಬಗ್ಗೆಗಿನ ಅರಿವು ಕೂಡ ಜನರಲ್ಲಿ ಜಾಸ್ತಿಯಾಗಲೇಬೇಕಾಗಿದೆ. ಆ ನಿಟ್ಟಿನಲ್ಲಿ ಈ ಉತ್ತರ ನಿಮಗೆ ನೆರವಾಗಬಹುದೆಂಬುದೊಂದು ಕಿರಿಯ ಆಶಯವಷ್ಟೇ .

* ಡಾ. ಅರುಣಾ ಯಡಿಯಾಳ್


Trending videos

Back to Top