CONNECT WITH US  

ಸೌಖ್ಯ ಸಂಧಾನ

ವಯಸ್ಸು 24. ನಾನು ಮೂರು ತಿಂಗಳ ಬಾಣಂತಿ. ಒಂದು ಹೆಣ್ಣು ಮಗು ಇದೆ. ನಾರ್ಮಲ್‌ ಹೆರಿಗೆ. ಹೆರಿಗೆ ಸಮಯದಲ್ಲಿ ಜನನಾಂಗದ ಭಾಗದ ಬಳಿ ಹೊಲಿಗೆ ಹಾಕಿದೆ. ನಾನು ರಾತ್ರಿ ನನ್ನ ಗಂಡನ ಜೊತೆ ಇರುತ್ತೇನೆ. ಮಿಲನಕ್ರಿಯೆ ಮಾಡಿದಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಇದೆಯೇ, ದಯವಿಟ್ಟು ಉತ್ತರಿಸಿ. 
-ಗಿರಿಜಾ, ಉಡುಪಿ 

ಪ್ರಸವದ ನಂತರ 2-3 ತಿಂಗಳ ನಂತರ ಲೈಂಗಿಕ ಸಂಪರ್ಕ ಪ್ರಾರಂಭಿಸಬಹುದು. ಆಗ ಗರ್ಭಧಾರಣೆಯ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಗರ್ಭನಿರೋಧಕ ಬಳಕೆ ಮಾಡಬೇಕು. ವಂಕಿ (ಕಾಪರ್‌-ಟಿ) ಅಥವಾ ಕಾಂಡೋಮ್‌ನ ಬಳಕೆ ಮಾಡಬಹುದು. ಸಿOಉàರೋಗ ವೈದ್ಯರನ್ನು ಸಂಪರ್ಕಿಸಿ ಅವರ ಸೂಚನೆಯನ್ನು ಪಡೆಯಿರಿ. 

ವಯಸ್ಸು 16. ಕಳೆದ ಮೂರು ವರ್ಷಗಳಿಂದ ಜನನಾಂಗದಿಂದ ಒಂದು ರೀತಿಯ ದ್ರವ ಬರುತ್ತಿದೆ. ಈಗೀಗ ನನಗೆ ನಿದ್ರೆಯಲ್ಲಿ ಲೈಂಗಿಕ ಕ್ರಿಯೆಯ ಘಟನೆಯ ನೆನಪಾಗಿ ದ್ರವ ಬರುತ್ತದೆ. ಇದರಿಂದ ನನಗೆ ತುಂಬಾ ಜಿಗುಪ್ಸೆಯಾಗುತ್ತಿದೆ. ಎಲ್ಲರೊಡನೆ ಮುಕ್ತವಾಗಿ ಬೆರೆಯಲು ಹಿಂಜರಿಕೆಯಾಗುತ್ತದೆ. ಇದರಿಂದ ಮುಂದೆ ತೊಂದರೆಯಾಗಬಹುದೆ? ಇದಕ್ಕೆ ಯಾವುದಾದರೂ ಸುಲಭ ಪರಿಹಾರವಿದೆಯೇ. ವೈದ್ಯರ ಬಳಿ ಹೋಗಲು ಹಿಂಜರಿಕೆ. ಮದುವೆಯಾದ ನಂತರ ತೊಂದರೆಯಾಗಬಹುದೆ? 
-ಪ್ರಸಾದ್‌, ಹಾಸನ 

ನೀವು ಹದಿಹರಯಕ್ಕೆ ಕಾಲಿಟ್ಟಿರುವಿರಿ. ನಿಮ್ಮ ಶರೀರದಲ್ಲಿ ಹಾಗೆಯೇ ಜನನಾಂಗದಲ್ಲಿ ಬದಲಾವಣೆಗಳಾಗುತ್ತಿವೆ. ಅದರಲ್ಲಿ ವೀರ್ಯದ ಉತ್ಪತ್ತಿಯೂ ಒಂದು. ನಿದ್ರೆಯಲ್ಲಿರುವಾಗ ವೀರ್ಯ ಹೊರಬರುವುದಕ್ಕೆ ಸ್ವಪ್ನಸ್ಖಲನ ಎನ್ನುತ್ತಾರೆ. ಇದು ಪ್ರತಿಯೊಬ್ಬರ ಶರೀರದಲ್ಲಿ ನಡೆಯುವ ಬಹಳ ಸಹಜ ಕ್ರಿಯೆ. ಅದಕ್ಕಾಗಿ ಹೆದರಬೇಕಿಲ್ಲ. ಅದಕ್ಕೆ ಯಾವ ಚಿಕಿತ್ಸೆಯೂ ಬೇಕಿಲ್ಲ. 

ನನ್ನ ಮಗನಿಗೆ 38 ವರ್ಷ ವಯಸ್ಸು . ವ್ಯಾಯಾಮ ಎಂದು ಯಾವಾಗಲೂ ಕುತ್ತಿಗೆ ತಿರುಗಿಸುವ ಅಭ್ಯಾಸ. ಕೆಲವೊಮ್ಮೆ ಇದರಿಂದ ಅರೆತಲೆಶೂಲೆ ಬರುತ್ತದೆ ಎಂದು Vasogran ಎಂಬ ಮಾತ್ರೆಯನ್ನು ತೆಗೆದುಕೊಳ್ಳುತ್ತಾನೆ. ಆಗ ತಲೆನೋವು ಕಡಿಮೆಯಾಗುತ್ತದಂತೆ. ಇದು ಅವನಿಗೆ ಅಭ್ಯಾಸವಾಗಿಬಿಟ್ಟಿದೆ. ಇದನ್ನು ಬಿಡಿಸಲು ಏನು ಮಾಡಬೇಕು. ವೈದ್ಯರುಗಳಲ್ಲಿ ಮೂಳೆ ಅಥವಾ ನರರೋಗ ತಜ್ಞರಲ್ಲಿ ಯಾರಿಗೆ ತೋರಿಸಬೇಕು. 8-9 ವರ್ಷಗಳಿಂದ ತಿಂಗಳಿಗೆ ಒಂದೆರಡು ಸಲ ಅರೆ ತಲೆನೋವು ಬರುತ್ತದೆ. ಮಾತ್ರೆ ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದೇ, ದಯಮಾಡಿ ಸಲಹೆ ನೀಡಿ. 
-ಸುಜಾತಾ, ಚಿಕ್ಕಮಗಳೂರು 

ನಿಮ್ಮ ಮಗ ಔಷಧವನ್ನೇ ತೆಗೆದುಕೊಳ್ಳುತ್ತಿದ್ದಾನೆಯೋ ಅಥವಾ ಇನ್ಯಾವುದೋ ಮಾದಕದ್ರವ್ಯವನ್ನು ಸೇವಿಸುತ್ತಿದ್ದಾನೆಯೋ ಎಂಬುದನ್ನು ತಿಳಿದುಕೊಳ್ಳಬೇಕು. ಮಾನಸಿಕ ಹಾಗೂ ನರರೋಗ ತಜ್ಞರ ಬಳಿ ತೋರಿಸಿ ಅವರ ಸಲಹೆ, ಚಿಕಿತ್ಸೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿ. ಮೈಗ್ರೇನ್‌ ತಲೆಶೂಲೆ ಇದ್ದರೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. 

ವಯಸ್ಸು 48. ಒಂದು ವರ್ಷದಿಂದ ಬಿ.ಪಿ., ಗ್ಯಾಸ್ಟ್ರಿಕ್‌ ಇರುತ್ತದೆ. ಪ್ರತಿ ತಿಂಗಳು ಹೊರಗಾಗುತ್ತಿದ್ದೆ. ಆದರೆ ಈಗ ಒಂದು ವರ್ಷದಿಂದ 2 ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಆಗುತ್ತಿದೆ. ಐದು ದಿನಗಳ ಕಾಲ ರಕ್ತಸ್ರಾವ ಇರುತ್ತದೆ. ಎರಡು ಸಲ ಸ್ಕ್ಯಾನಿಂಗ್‌ ಮಾಡಿಸಿದ್ದೇನೆ. ತೊಂದರೆ ಏನಿಲ್ಲ ಗರ್ಭಕೋಶ ದೊಡ್ಡದಾಗಿದೆ ಎಂದಿದ್ದಾರೆ. ನನಗೆ ಯಾವಾಗ ಮುಟ್ಟು ಯಾವ ನಿಲ್ಲುತ್ತದೆ. ಕೆಲಸಕ್ಕೆ ಹೋಗುತ್ತೇನೆ. ತುಂಬ ನಿದ್ರೆ ಬರುತ್ತದೆ. ಯಾವಾಗ ಮಲಗಿದರೂ ನಿದ್ರೆ ಬರುತ್ತದೆ. ಬೇರೆಲ್ಲ ರೀತಿಯಿಂದ ಆರೋಗ್ಯದಿಂದ ಇದ್ದೇನೆ. 5.1 ಅಡಿ ಎತ್ತರ ಇದ್ದೇನೆ. ತೂಕ 60 ಕೆ.ಜಿ. ತುಂಬಾ ಪುಸ್ತಕಗಳನ್ನು ಓದುತ್ತೇನೆ. ರಾತ್ರಿ ಮಲಗಿದಾಗ ಜನನಾಂಗದಲ್ಲಿ ತುಂಬಾ ತುರಿಕೆ ಇರುತ್ತದೆ. ಸಕ್ಕರೆ ಖಾಯಿಲೆ ಇಲ್ಲ. ಯಾವುದಾದರೂ ಔಷಧಿ ಇದ್ದರೆ ತಿಳಿಸಿ. ನಮ್ಮ ಮನೆಯವರಿಗೆ 62 ವರ್ಷ. 5 ವರ್ಷಗಳಿಂದ ನಾವು ಮಿಲನಕ್ರಿಯೆ ನಡೆಸುತ್ತಿಲ್ಲ. ವಿಪರೀತ ಲೈಂಗಿಕ ಆಸಕ್ತಿ ಇರುತ್ತದೆ. ಅದು ನಿಯಂತ್ರಣಕ್ಕೆ ಬರಲು ಯಾವುದಾದರೂ ಔಷಧಿ ಇದ್ದರೆ ತಿಳಿಸಿ. 
-ರುಕ್ಮಿಣೀ, ಬೆಂಗಳೂರು
 
ನಿಮಗೆ ಮುಟ್ಟು ನಿಲ್ಲುವ ಸಮಯ ಹತ್ತಿರವಾಗುತ್ತಿದೆ. ಜನನಾಂಗದಲ್ಲಿ ಸೋಂಕು ಆಗಿರಬಹುದು. ಸಿOಉàರೋಗ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ. ನಿಮ್ಮ ಪತಿಗೆ ಲೈಂಗಿಕ ಕ್ರಿಯೆಗೆ ತೊಂದರೆ ಇದ್ದರೆ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳಬಹುದು. ನಿಮ್ಮ ಲೈಂಗಿಕ ಆಸಕ್ತಿ ನಿಯಂತ್ರಿಸಿಕೊಳ್ಳಲು ಹಸ್ತಮೈಥುನ ಮಾಡಿಕೊಳ್ಳಬಹುದು. 
ನನ್ನ ವಯಸ್ಸು 19. ನನ್ನ ಎತ್ತರದ ಬೆಳವಣಿಗೆ ಸರಿಯಾಗಿಲ್ಲ. ಇದಕ್ಕೆ ತಾವು ದಯವಿಟ್ಟು ಯಾವುದಾದರೂ ಸಿರಪ್‌, ಮಾತ್ರೆ ಇದ್ದರೆ ತಿಳಿಸಿ. ನಾನು ಜಿಮ್‌ಗೆ ಹೋದರೆ ಸರಿಹೋಗಬಹುದೇ? ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು, ಇದರಿಂದ ಬೆಳವಣಿಗೆಗೆ ತೊಂದರೆಯಾಗಿರಬಹುದೇ? ದಿನಕ್ಕೆ ಕನಿಷ್ಠ ಎಷ್ಟು ಕಾಲ ನಿದ್ರೆ ಮಾಡಬೇಕು? ಉದ್ದವಾಗಲು ಬೇರೆ ಯಾವುದಾದರೂ ಚಿಕಿತ್ಸೆ ಇದೆಯಾ, ದಯವಿಟ್ಟು ತಿಳಿಸಿ. 
-ಸಂದೀಪ್‌, ಮಂಡ್ಯ 

ಹುಡುಗರು 19ರಿಂದ 21 ವರ್ಷಗಳವರೆಗೆ ಉದ್ದಕ್ಕೆ ಬೆಳೆಯಬಹುದು. ನಿಮ್ಮ ಕೈಕಾಲುಗಳ ಮೂಳೆಗಳ ಬೆಳವಣಿಗೆ ಮುಗಿದಿದ್ದರೆ ಮತ್ತೆ ಉದ್ದವಾಗಲು ಸಾಧ್ಯವಿಲ್ಲ. ಬಹಳಷ್ಟು ಜನರಲ್ಲಿ ಎತ್ತರವಾಗುವುದು ವಂಶವಾಹಿನಿಯಿಂದ ಪೂರ್ವ ನಿರ್ಧರಿತವಾಗಿರುತ್ತದೆ. ನಿಮ್ಮ ಆರೋಗ್ಯ, ಆಹಾರ, ವ್ಯಾಯಾಮಗಳು ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತದೆ. ಈಜುವುದು, ಸೈಕ್ಲಿಂಗ್‌, ಸ್ಕಿಪ್ಪಿಂಗ್‌- ಇವುಗಳಿಂದ ಸ್ವಲ್ಪ ಎತ್ತರ ಹೆಚ್ಚಾಗಬಹುದು. ಟಾನಿಕ್‌, ಸಿರಪ್‌ಗ್ಳಿಂದ ಯಾವುದೇ ಉಪಯೋಗವಾಗುವುದಿಲ್ಲ. ಹಸ್ತಮೈಥುನದಿಂದ ಬೆಳವಣಿಗೆ ಕುಂಠಿತವಾಗುವುದಿಲ್ಲ. ದಿನಕ್ಕೆ ಕನಿಷ್ಠ 5-6 ಗಂಟೆಗಳಾದರೂ ನಿದ್ರೆ ಮಾಡಬೇಕು. 

* ಡಾ.ಪದ್ಮಿನಿ ಪ್ರಸಾದ್

Trending videos

Back to Top