CONNECT WITH US  

"ಸೂಟ್‌' ಆಗುತ್ತೆ!

ಮಹಿಳೆಯ ಹೊಸ ಸಂಗಾತಿ

ಸೂಟ್‌ ಹಾಕಿಕೊಂಡರೆ ಹೆಚ್ಚಿನ ಮರ್ಯಾದೆ ಸಿಗುತ್ತೆ ಎಂಬುದು ಹಲವರ ನಂಬಿಕೆ. ಇದೀಗ ಮಹಿಳೆಯರೂ ಸೂಟ್‌ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಮಹಿಳೆಯರು ಶರ್ಟ್‌ ಪ್ಯಾಂಟ್‌ ತೊಡುವುದು ಹೊಸತೇನಲ್ಲ. ಸೂಟ್‌ ತೊಡುವುದೂ ಹೊಸತಲ್ಲ. ಹಿಂದೆಲ್ಲ ಸೂಟ್‌ ರೆಡಿಮೇಡ್‌ ಮಾತ್ರ ಸಿಗುತ್ತಿದ್ದವು. ಅದನ್ನು ಟೈಲರ್‌ ಬಳಿ ಪುರುಷರು ಆಲ್ಟರ್‌ ಮಾಡಿಸಿಕೊಳ್ಳುತ್ತಿದ್ದರು. ನಂತರ ಟೈಲರ್‌ವೆುàಡ್‌ ಸೂಟ್‌ಗಳು ಸಿಗಲು ಶುರುವಾದವು. ಈಗ ಮಹಿಳೆಯರ ಮೈಕಟ್ಟಿಗೆ ಒಪ್ಪುವಂಥ ಸೂಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. 

ಆಫೀಸಿಗೆ ಅಡ್ಜಸ್ಟ್‌ ಆಗುತ್ತೆ...: ಫಾರ್ಮಲ್‌ ವೇರ್‌ ಆದ ಕಾರಣ ಇವನ್ನು ಸಾಮಾನ್ಯವಾಗಿ ಆಫೀಸ್‌ಗಳಿಗೆ ತೆರಳುವಾಗ ತೊಡಲಾಗುತ್ತದೆ. ಮಹಿಳೆಯರ ಸೂಟ್‌ಗಳಲ್ಲಿ ಹೆಚ್ಚಾಗಿ ಟೈ ಅಥವಾ ಬೋ ಇರುವುದಿಲ್ಲ. ಫಾರ್ಮಲ್‌ ಶರ್ಟ್‌ (ಅಂಗಿ), ಪ್ಯಾಂಟ್‌ ಮತ್ತು ಕೋಟ್‌ ಇರುತ್ತವೆ. ಪ್ಯಾಂಟ್‌ ಬದಲಿಗೆ ಸ್ಕರ್ಟ್‌ ಅನ್ನೂ ತೊಡಬಹುದು.

ಸೂಟ್‌ ಜೊತೆಗಿನ ಪ್ಯಾಂಟ್‌ಗಳಲ್ಲೂ ಅನೇಕ ಆಯ್ಕೆಗಳಿವೆ. ಬೆಲ್‌ ಬಾಟಮ್, ಸ್ಲಿಮ್‌ ಫಿಟ್‌, ಬೂಟ್‌ ಕಟ್‌, ಆಂಕಲ್‌ ಲೆಂಥ್‌ (ಕಾಲಗಂಟಿನ ಅಳತೆಯ ಪ್ಯಾಂಟ್‌), ಪ್ಯಾರಲಲ್ ಹೀಗೆ ಬಗೆಬಗೆಯ ಆಯ್ಕೆಗಳಿವೆ. ಪ್ಯಾಂಟ್‌ ಜೊತೆಗಿನ ಸೂಟ್‌ ತೊಟ್ಟಾಗ ಗೌರವ ಹೆಚ್ಚಾಗುತ್ತೆ ಎಂದು ಅನೇಕರು ನಂಬುತ್ತಾರೆ. 

ಪವರ್‌ ಡ್ರೆಸಿಂಗ್‌: ಈ ಶೈಲಿಗೆ "ಪವರ್‌ ಡ್ರೆಸ್ಸಿಂಗ್‌' ಎಂಬ ಹೆಸರೂ ಇದೆ! ಸೂಟ್‌ ತೊಟ್ಟರೆ ನೌಕರರ ಮಧ್ಯೆ ತಮಗೆ ಮರ್ಯಾದೆ ಜಾಸ್ತಿ ಎಂಬುದು ಅನೇಕ ಬಾಸ್‌ಗಳ ದೃಢ‌ವಾದ ನಂಬಿಕೆ! ಹಾಗಾಗಿ ಲೇಡಿ ಬಾಸ್‌ಗಳೂ ಈಗ ಸೂಟ್‌ಗಳನ್ನು ತೊಡಲು ಮುಂದಾಗಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಹಾಗೂ ಉದ್ಯಮಿಗಳು, ವಿದೇಶಿ ಸಚಿವರು, ರಾಜ- ರಾಣಿಯರು ಮತ್ತು ಸೆಲೆಬ್ರಿಟಿಗಳನ್ನೂ ಸೂಟ್‌ನಲ್ಲಿ ನೋಡಿರುತ್ತೀರ. ಈ ಟ್ರೆಂಡ್‌ ಎಂದಿಗೂ ಮಾಸಿ ಹೋಗದು. 

ಬ್ಲ್ಯಾಕ್‌ ಅ್ಯಂಡ್‌ ವೈಟ್‌ ಹಳೇದಾಯ್ತು...: ಸೂಟ್‌ ಎಂದಾಗ ಕಪ್ಪು, ಬಿಳುಪು, ಬೂದಿ ಬಣ್ಣದ್ದೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಸೂಟ್‌ ಇದೀಗ ಮೇಕ್‌ ಓವರ್‌ ಪಡೆದಿದೆ. ಹೊಸ ರೂಪದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕೇವಲ ಒಂದೇ ಬಣ್ಣ ಅಥವಾ ಚೆಕ್ಸ್ ಡಿಸೈನ್‌ ಅಲ್ಲದೆ ಫ್ಲೋರಲ್‌ ಪ್ರಿಂಟ್‌ ಅಂದರೆ ಹೂವಿನ ಆಕೃತಿ ಉಳ್ಳ ವಿನ್ಯಾಸ ಮತ್ತು ಚಿತ್ರಗಳೂ ಮೂಡಿಬಂದಿವೆ.

ಬಗೆಬಗೆಯ ಬಣ್ಣದ ಮತ್ತು ಚಿತ್ರವಿಚಿತ್ರ ವಿನ್ಯಾಸದ ಸೂಟ್‌ಗಳೂ ಲಭ್ಯ ಇವೆ. ಸೂಟ್‌ ಮೇಲೆ ಹೂವು, ಬಳ್ಳಿ, ತಾರೆಗಳನ್ನು ಮೂಡಿಸಿದ್ದಾರೆ ಅನೇಕ ವಸ್ತ್ರವಿನ್ಯಾಸಕರು. ಇಂಥ ಕಲರ್‌ಫ‌ುಲ್‌ ಸೂಟ್‌ಗಳನ್ನು ಪಾರ್ಟಿ, ಶಾಪಿಂಗ್‌ ಮತ್ತು ಇತರ ಕ್ಯಾಶುವಲ್‌ ಔಟಿಂಗ್‌ಗೆ ಹಾಕಿಕೊಳ್ಳಬಹುದು. ಉದ್ಯೋಗಸ್ಥ ಮಹಿಳೆಯರನ್ನು ಈ ಉಡುಗೆ ಹೆಚ್ಚಾಗಿ ಸೆಳೆಯುತ್ತಿದೆ. 

ಈ ನಿಯಮಗಳನ್ನು ಪಾಲಿಸಿ...
- ಸೂಟ್‌ ಜೊತೆ ಚಪ್ಪಲಿ ಚೆನ್ನಾಗಿ ಕಾಣಿಸುವುದಿಲ್ಲ. ಆದ್ದರಿಂದ ಇದರ ಜೊತೆ ಸ್ನೀಕರ್, ಚರ್ಮದ ಶೂಸ್‌, ಹೈ ಹೀಲ್ಡ… ಪಾದರಕ್ಷೆಗಳು ಅಥವಾ  ಬೂಟ್‌ ಹಾಕಿಕೊಳ್ಳಬಹುದು. 
- ಈ ಉಡುಗೆ ತೊಟ್ಟಾಗ ಮೇಕಪ್‌ ಮತ್ತು ಆಕ್ಸೆಸರೀಸ್‌ ಕಮ್ಮಿ ಇದ್ದಷ್ಟೂ ಒಳ್ಳೆಯದು. 
- ಉದ್ದ ತಲೆಕೂದಲು ಇರುವವರು, ಸರಳ ಜಡೆ, ಜುಟ್ಟು ಅಥವಾ ತುರುಬು ಕಟ್ಟಿಕೊಳ್ಳಬಹುದು. 
- ತಲೆಕೂದಲು ಬಿಡುವುದಾದರೆ ಅದು ಮುಖದ ಮೇಲೆ ಬೀಳದಂತೆ ಹೇರ್‌ ಬ್ಯಾಂಡ್‌, ಕ್ಲಿಪ್‌ ಅಥವಾ ಪಿನ್‌ ಹಾಕಿಕೊಳ್ಳಬೇಕು. 
- ಚಿಕ್ಕದಾದ ಮತ್ತು ಚೊಕ್ಕದಾದ ಕಿವಿಯೋಲೆ ಇದ್ದರೆ ಒಳ್ಳೆಯದು. ಕತ್ತಿಗೆ ಸರ, ಕೈಗಳಲ್ಲಿ ದೊಡ್ಡ ಬ್ರೇಸ್ಲೆಟ್‌ ಅಥವಾ ಬಳೆ ಹಾಕದಿರಿ. 
- ತೊಟ್ಟ ಬೆಲ್ಟ್ ಕೂಡ ಎಷ್ಟು ಸಣ್ಣ/ ಚಿಕ್ಕದಾಗಿರುತ್ತದೋ ಅಷ್ಟೂ ಒಳ್ಳೆಯದು. ಏಕೆಂದರೆ, ನೀವು ತೊಟ್ಟ ಸೂಟ್‌ ಮಾತಾಡಬೇಕೇ ಹೊರತು ಆಕ್ಸೆಸರೀಸ್‌ ನೋಡುಗರ ಕಣ್ಣು ಕುಕ್ಕುವಂತೆ ಇರಬಾರದು. 

* ಅದಿತಿಮಾನಸ ಟಿ. ಎಸ್‌.


Trending videos

Back to Top