CONNECT WITH US  

ಬಳೆ ಚೂರಿನ ಫೋಟೋ ಫ್ರೇಮ್‌

ಘಲ್‌ ಘಲ್‌ ಎನ್ನುವ ಗಾಜಿನ ಬಳೆಗಳು ಬಹಳ ಸೂಕ್ಷ್ಮ. ಒಂಚೂರು ನಾಜೂಕು ತಪ್ಪಿದರೂ ಫ‌ಳ್‌ ಎಂದು ಒಡೆದೇ ಹೋಗುತ್ತವೆ. ಇನ್ನೂ ಕೆಲವು ಬಳೆಗಳು ಕೊಳ್ಳುವಾಗಲೇ ಒಡೆದಿರುತ್ತವೆ. ಆ ರೀತಿ ಕಣ್ಣು ಬಿಟ್ಟ ಬಳೆಗಳನ್ನು, ಒಡೆದ ಚೂರುಗಳನ್ನು ಕಸ ಎಂದು ಎಸೆಯುವ ಬದಲು, ಅದರಲ್ಲೇ ಕಲೆ ಅರಳಿಸಬಹುದು. ವ್ಯರ್ಥ ಬಳೆಯ ಕಲೆಯ ಸರಣಿ ಪ್ರತಿವಾರವೂ ಮೂಡಿಬರಲಿದೆ... 

1. ಬಳೆಯ ಚೂರಿನ ಫೋಟೊ ಫ್ರೇಮ್‌
ಬೇಕಾಗುವ ವಸ್ತುಗಳು: 
ಗಾಜಿನ ಬಳೆಯ ಚೂರುಗಳು, ಕಾರ್ಡ್‌ಬೋರ್ಡ್‌ (ರಟ್ಟು), ಅಲಂಕಾರಿಕ ಮಣಿಗಳು, ಫ್ಯಾಬ್ರಿಕ್‌ಗೆ ಬಳಸುವ ಅಂಟು (ಗಮ್‌), ಕತ್ತರಿ

ತಯಾರಿ ಹೇಗೆ?
1. ಕಾರ್ಡ್‌ಬೋರ್ಡ್‌ಅನ್ನು ಕತ್ತರಿಸಿ, 6*6 ಅಳತೆಗೆ ಗುರುತು ಮಾಡಿ ಗೆರೆ ಎಳೆಯಿರಿ.
2. 6*6 ಜಾಗ ಬಿಟ್ಟು ಸುತ್ತ ಬಿಳಿಯ ಹಾಳೆ ಅಂಟಿಸಿ.
3. ಬಿಳಿಯ ಜಾಗದ ಸುತ್ತ ಒಡೆದ ಬಳೆ ಚೂರುಗಳನ್ನು ಗಮ್‌ನಿಂದ ಸಾಲಾಗಿ ಅಂಟಿಸುತ್ತಾ ಬನ್ನಿ.
4. ಒಂದು ಸುತ್ತು ಬಳೆ ಚೂರು ಅಂಟಿಸಿದ ನಂತರ, ಅಲಂಕಾರಿಕ ಮಣಿಗಳನ್ನು ಸಾಲಾಗಿ ಅಂಟಿಸಿ.
5. ಇದೇ ರೀತಿ ಬಿಳಿಯ ಜಾಗದ ತುಂಬ ಬಳೆಯ ಚೂರು ಹಾಗೂ ಮಣಿಗಳಿಂದ ಅಲಂಕರಿಸಿ.
6. ಆ ಫ್ರೇಮ್ನ ಹಿಂಬದಿಗೆ ರಟ್ಟಿನದೇ ಸ್ಟಾಂಡ್‌ ಮಾಡಿ ಅಂಟಿಸಿ.
7. 6*6 ಜಾಗದಲ್ಲಿ ಫೋಟೊ ಅಂಟಿಸಿ, ಶೋಕೇಸ್‌ನಲ್ಲಿ ಇಡಿ.

Trending videos

Back to Top