CONNECT WITH US  

ತೂಕ ಇಳಿಸೋಕ್ಕೆಅಡ್ಡದಾರಿ ಇಲ್ಲ ಕೂತ್ಕೋ ಬೇಡಿ,ಅಡ್ಡಾಡಿ

20 ನಿಮಿಷದಷ್ಟುವಾಕಿಂಗ್‌ ಕಡ್ಡಾಯ ಇರುವಂತೆ ನೋಡಿಕೊಳ್ಳಿ. ಅದು ಯಾವಹೊತ್ತಿಗೇ ಆದರೂ ಪರವಾಗಿಲ್ಲ, ಅದು ನಿಮ್ಮ ಹೃದಯ ಮತ್ತುಶ್ವಾಸಕೋಶವನ್ನು ಒಳ್ಳೆಯ ಕಂಡೀಷನ್‌ನಲ್ಲಿ ಇಡುತ್ತದೆ. 

ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದಿರೋದು ಮತ್ತು ಊಟ ಸರಿಯಾಗಿ ತೆಗೆದು ಕೊಳ್ಳದಿರುವುದುನಿಮ್ಮನ್ನು ಇನ್ನೂ ಹೆಚ್ಚು ಸ್ಥೂಲಕಾಯರನ್ನಾಗಿ ಮಾಡುತ್ತಾ ಹೋಗುತ್ತದೆ.ಇದಕ್ಕೆ ಈಗಲೇ ಏನಾದರೂ ಮಾಡದೇ ಹೋದರೆ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸುವುದಷ್ಟೇ ಅಲ್ಲ, ಮೊಣಕಾಲು ಮತ್ತು ಬೆನ್ನಿನ ನೋವು ಇತ್ಯಾದಿ ಸಮಸ್ಯೆಗಳೂ ಎದುರಾಗುತ್ತವೆ. ಸಾಮಾನ್ಯವಾಗಿ ಸೊಂಟದ ಸುತ್ತ ಬೊಜ್ಜು ಹೆಚ್ಚಿದರೆ ಅದನ್ನು ಕರಗಿಸುವುದು ತುಂಬಕಷ್ಟ, ಅಸಾಧ್ಯವಲ್ಲ ಅಷ್ಟೇ. ಸರಿಯಾದ ವಕೌìಟ್‌ಮತ್ತು ಊಟದ ನಿಯಂತ್ರಣಗಳಿಂದ ಇದನ್ನು ಕ್ರಮೇಣ ಸರಿದಾರಿಗೆ ತರಬೇಕಷ್ಟೇ.

ಏನು ಮಾಡೋದು ನಿಮ್ಮ ಅತಿ ಕೆಲಸದ ಅವಧಿಯೇ ನಿಮ್ಮ ವಕೌìಟ್‌ ಸಮಯ ಮತ್ತು ಉಣ್ಣುವ ಅಭ್ಯಾಸವನ್ನು ತಿನ್ನುತ್ತಿರೋದು. ಇದಕ್ಕೆ ಬೇರೆ ಒಳದಾರಿಗಳಿಲ್ಲದ ಕಾರಣ ಹೇಗೋ ಸಮಯವನ್ನು ಹೊಂದಿಸಿಕೊಳ್ಳದೇ ವಿಧಿ ಇಲ್ಲ.

70 ಶೇ.ದಷ್ಟು ನಿಮ್ಮ ಊಟದಲ್ಲಿ ಬದಲಾವಣೆ ಮಾಡಿಕೊಂಡರೆ ಅದೇ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತದೆ. ನೀವೇನು ಉಣ್ಣುತ್ತಿದ್ದೀರೆಂಬ ಬಗ್ಗೆ ಲಕ್ಷ್ಯ ಇರಲಿ, ಪ್ರತಿ 2 ಗಂಟೆಗೊಮ್ಮೆ ಏನಾದರೂ ತಿನ್ನಿ, ಕುರುಕಲು ಇತ್ಯಾದಿ ಜಂಕ್‌ ಫ‌ುಡ್‌ ಮೊದಲು ತಿನ್ನೋದು ನಿಲ್ಲಿಸಿ, ತುಂಬ ಕೆಲೋರಿ ಇರೋ ಆಹಾರವಾಗಲೀ, ಸಾಫ್ಟ್ ಡ್ರಿಂಕ್ಸ್‌ ಆಗಲೀ ಮುಟ್ಟಬೇಡಿ. ಆದಷ್ಟು ಮನೆ ಊಟವನ್ನೇ ತೆಗೆದುಕೊಂಡು ಹೋಗಿ. ನೀರು ಚೆನ್ನಾಗಿ ಕುಡೀರಿ, ಹಣ್ಣು ತರಕಾರಿ ಯಥೇತ್ಛ ತಿನ್ನಿ.

ಅದೂ ಆದಷ್ಟು ಫ್ರೆಷ್‌ ಆಗೇ ಇರಲಿ. ಇನ್ನುಳಿದದ್ದು ನಿಮ್ಮ ವಕೌìಟ್‌ ಇತ್ಯಾದಿ ವಿಚಾರಗಳು. 20 ನಿಮಿಷದಷ್ಟು ವಾಕಿಂಗ್‌ ಕಡ್ಡಾಯ ಇರುವಂತೆ ನೋಡಿಕೊಳ್ಳಿ. ಅದುಯಾವ ಹೊತ್ತಿಗೇ ಆದರೂ ಪರವಾಗಿಲ್ಲ, ಅದು ನಿಮ್ಮ ಹೃದಯ ಮತ್ತು ಶ್ವಾಸಕೋಶವನ್ನು ಒಳ್ಳೆಯ ಕಂಡೀಷನ್‌ನಲ್ಲಿ ಇಡುತ್ತದೆ. ಇನ್ನು ಕೆಲ ಸ್ಟ್ರೆಚ್ಚಿಂಗ್‌ ಎಕ್ಸರ್‌ಸೈಜ್‌ಗೆ ಸಮಯ ಹೊಂದಿಸಿಕೊಳ್ಳಿ.

ವಾರಕ್ಕೆರಡು ಸಲದಂತೆ ಇಪ್ಪತ್ತು ನಿಮಿಷಗಳಷ್ಟುಯಾವುದಾದರೂ ಎಕ್ಸರ್‌ಸೈಜ್‌ ಮಾಡಿ, ಜಿಮ್‌ಗೆ ವಾರಕ್ಕೆರಡು ಸಲವಾದರೂ ಹೋಗೋದಕ್ಕೆ ಸಮಯ ಹೊಂದಿಸಿಕೊಳ್ಳಿ.

ವನಿತಾ ಅಶೋಕ್‌

 

Trending videos

Back to Top