CONNECT WITH US  

ಭಾವನಾತ್ಮಕ ಕಾರಣದಿಂದ ಅತಿಯಾಗಿ ಆಹಾರ ಸೇವಿಸುವುದು

ತಮ್ಮ ಮನಸ್ಸನ್ನು ಶಾಂತಗೊಳಿಸಲು, ಕೋಪವನ್ನು ಶಮನಗೊಳಿಸಿಕೊಳ್ಳಲು, ಒತ್ತಡವನ್ನು ಹತ್ತಿಕ್ಕಲು, ಒಂಟಿತನ, 

ಮನಃಸ್ಥಿತಿಯ ಏರುಪೇರುಗಳನ್ನು ಸರಿ ದೂಗಿಸಿಕೊಳ್ಳಲು ಜನರು ಭಾವನಾತ್ಮಕ ಆಹಾರ ಸೇವನೆಗೆ ತೊಡಗುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಿರುತ್ತೇವೆ. ಆದರೆ ಭಾವನೆಗಳನ್ನು ನಿಭಾಯಿಸಲು ಆಹಾರ ಸೇವನೆಗೆ ತೊಡಗುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ದೇಹದ ತೂಕವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಜೀವನಶೈಲಿಗೆ ಸಂಬಂಧಿಸಿದಂತೆ ಅನೇಕ ಅಸ್ವಸ್ಥತೆಗಳಿಗೆ ಕಾರಣವಾಗುವುದರಿಂದಾಗಿ ದೇಹದ ತೂಕದ ಮೇಲೆ ನಿಗಾ ಇರಿಸಿಕೊಳ್ಳುವುದು ಅತ್ಯಂತ ಆವಶ್ಯಕ.

ಭಾವನೆಗಳನ್ನು ಸಕಾರಾತ್ಮಕ ರೀತಿಯಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನಿಭಾಯಿ ಸಲು ಕಲಿಯಿರಿ. ನೈಜ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಿ ಅಥವಾ ಪರಿಹರಿ ಸಿಕೊಳ್ಳಿ. ನಿಮಗಿರುವ ಸಮಸ್ಯೆಗೆ, ಅತಿ ಯಾಗಿ ಆಹಾರ ಸೇವಿಸುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದಕ್ಕೆ ಬದಲಾಗಿ, ಇರುವ ಸಮಸ್ಯೆಯ ಬಗ್ಗೆ ನಿಮ್ಮ ಹತ್ತಿರದವರು ಅಥವಾ ಪ್ರೀತಿಪಾತ್ರರ ಜತೆಗೆ ಹಂಚಿಕೊಳ್ಳಿ.
 
ನಿಮ್ಮ ಅನಿಸಿಕೆ, ಅಥವಾ ಉದ್ದೇಶಗಳು ಒಳ್ಳೆಯದೇ ಆಗಿರಬಹುದು; ಆದರೆ ಯಾವುದೋ ಒಂದು ವಿಚಾರವು ನಿಮ್ಮ ತಿನ್ನುವ ಬಯಕೆಯನ್ನು ಕೆರಳಿಸುವ ಕಾರಣ, ನೀವು ಹಸಿವಾಗಿರದಿದ್ದರೂ ಆಹಾರ ಸೇವಿಸುತ್ತಾ ಇರುವಂತಹ ಸ್ಥಿತಿ ಇರಬಹುದು. ಭಾವನಾತ್ಮಕ ಕಾರಣದಿಂದಾಗಿ, ಹಸಿವಿನ ಸ್ಥಿತಿಗೆ ಒಳಗಾಗಿರುವ ಮತ್ತು ದೈಹಿಕವಾಗಿ ಹಸಿವಾಗಿರುವುದರ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಿ. ಆ ಸಮಯಕ್ಕೆ, ಅಂದರೆ ಹಸಿವಿಲ್ಲದಿರುವಾಗಲೂ ಏನಾದರೂ ತಿನ್ನಬೇಕು ಅನಿಸುವ ಸಮಯಕ್ಕೆ ಸರಿಯಾಗಿ ಒಂದೋ ಹೊರಗೆ ಹೊರಟು ಬಿಡುವುದು, ಟಿ.ವಿ. ನೋಡುವುದು ಅಥವಾ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿಮ್ಮನ್ನೆ ನೀವು ತೊಡಗಿಸಿಕೊಳ್ಳುವುದು ಇತ್ಯಾದಿ ಸೂಕ್ತ ವಿಧಾನಗಳನ್ನು ಕಲಿಯಿರಿ.   

ನಾವು ಯಾವಾಗಲೂ 
ಮಾಡಬಹುದಾದ ಇನ್ನಿತರ 
ವಿಚಾರಗಳೂ ಇವೆ 

ಆರೋಗ್ಯಕರ ಆಹಾರವನ್ನು ಖರೀದಿಸಿ ಮತ್ತು ಫ್ರಿಜ್‌ನಲ್ಲಿ ಸಂಗ್ರಹಿಸಿಡಿ. ಹೀಗೆ ಮಾಡುವುದರಿಂದ ನಿಮಗೆ ಹಸಿವಾಗುತ್ತದೆ ಅನ್ನುವಾಗಲೆಲ್ಲಾ ಆರೋಗ್ಯಕರ ಆಹಾರವನ್ನೇ ಆರಿಸಿಕೊಳ್ಳುವ ಅವಕಾಶ ಇರುತ್ತದೆ. ಹಣ್ಣುಗಳನ್ನು ನಿಮ್ಮ ಊಟದ ಮೇಜಿನ ಮೇಲೆಯೇ ಇಟ್ಟು ಬಿಡಿ; ಹೀಗೆ ಮಾಡುವುದರಿಂದ, ಬೇರೆ ಯಾವುದೊ ಆಹಾರವನ್ನು ತೆಗೆದುಕೊಳ್ಳಲು ಹೊರಡುವಾಗ, ಎಲ್ಲಕ್ಕಿಂತ ಮೊದಲು ಹಣ್ಣುಗಳು ನಿಮ್ಮ ಕಣ್ಣಿಗೆ ಬೀಳುತ್ತವೆ.  

ಊಟ, ಪಾರ್ಟಿ, ಔತಣಕೂಟ, ಸಂತೋಷ-ಸಮಾರಂಭ ಇತ್ಯಾದಿಗಳಿಗೆ ತೀರಾ ಆವಶ್ಯಕ ಅನಿಸಿದರೆ ಮಾತ್ರವೇ ಹೋಗಿ. ಯಾಕೆಂದರೆ ಈ ಜಾಗಗಳಲ್ಲಿ ಅತಿಯಾಗಿ ಆಹಾರ ಸೇವಿಸಬಹುದಾದ ಸಾಧ್ಯತೆ ಯಾವಾಗಲೂ ಇದ್ದೇ ಇದೆ. ಒಂದುವೇಳೆ ಇಂತಹ ಔತಣ ಕೂಟಗಳಿಗೆ ಹೋಗಲೇ ಬೇಕೆಂದಿದ್ದರೆ, ಒಂದು ಸೇಬು ಹಣ್ಣನ್ನು ತಿಂದು ಅಥವಾ ಸಾಕಷ್ಟು ನೀರು ಕುಡಿದು ಹೊರಡಿ, ಹೀಗೆ ಮಾಡುವುದರಿಂದ ಅಲ್ಲಿ ಹೋಗಿ ಭರ್ಜರಿ ತಿನ್ನುವ ಪ್ರಸಂಗ ತಪ್ಪುತ್ತದೆ. 

ದೃಷ್ಟಿಯಿಂದ ದೂರವಾಗಿರುವುದು ಯಾವಾಗಲೂ ನಮ್ಮ ಮನಸ್ಸಿನಲ್ಲಿಯೇ ಇರುತ್ತದೆ ಅನ್ನುವ ಮಾತಿದೆ.  ನಮ್ಮ ಕಣ್ಣೆದುರು ಇರದ ಅಂತಹ ಕೆಲವು ತಿನಿಸುಗಳು ನಮ್ಮ ಮನಸ್ಸಿನಲ್ಲಿಯೂ ಇರಬಹುದು. ಕ್ಯಾಂಡಿಗಳು, ಚಾಕೋಲೇಟ್‌ಗಳು, ಚಿಪ್ಸ್‌ ಮತ್ತು ನಿಮ್ಮ ಮನಸ್ಸನ್ನು ಸೆಳೆಯುವ ತಿನಿಸುಗಳನ್ನು ಖರೀದಿಸಬೇಡಿ ಅಥವಾ ಸಂಗ್ರಹಿಸಿ ಇಡಬೇಡಿ. ನಿಮ್ಮ ಮಕ್ಕಳು ಅಥವಾ ಅತಿಥಿಗಳಿಗಾಗಿ ನೀವು ಆ ಆಹಾರ ವಸ್ತುಗಳನ್ನು ಖರೀದಿಸಿದ್ದರೂ ಸಹ, ಅವುಗಳನ್ನು ನಿಮಗೆ ತೆಗೆದು ತಿನ್ನಲು ಆಗದಿರುವಂತಹ ಅಥವಾ ನೀವು ಹೋಗಿ ತೆಗೆದುಕೊಂಡು ಬರಲು ಉದಾಸೀನ ಪಡುವಂತಹ  ಜಾಗದಲ್ಲಿ ಸಂಗ್ರಹಿಸಿ ಇಡಿ, ಹೀಗೆ ಮಾಡುವುದರಿಂದ ಆ ಖಾದ್ಯಗಳನ್ನು ಅಲ್ಲಿಂದ ಎತ್ತಿಕೊಂಡು ತಂದು ತಿನ್ನುವುದಕ್ಕಿಂತ, ಒಂದು ಹಣ್ಣನ್ನೋ ಅಥವಾ ನಿಮ್ಮ ಫ್ರಿಜ್‌ನಲ್ಲಿ ಇರಿಸಿರುವ  ಬೇರೆ ಯಾವುದೋ ಆರೋಗ್ಯಕರ ಆಹಾರವನ್ನು ತಿನ್ನುವುದೇ ಹೆಚ್ಚು ಸುಲಭ ಅಂದುಕೊಂಡು ನೀವು ಈ ಆಹಾರಗಳನ್ನೇ ಆರಿಸಿಕೊಳ್ಳುತ್ತೀರಿ.
 
ಒಂದು ಆರಾಮದಾಯಕ ಸಂದೇಶ ನೀಡುವುದು, ಸಿನೆಮಾ ನೋಡಲು ಹೊರಡುವುದು ಇತ್ಯಾದಿ ಕ್ರಮಗಳ ಮೂಲಕ ನಿಮ್ಮನ್ನು ನೀವೇ ಸತ್ಕರಿಸಿ ಕೊಳ್ಳಿ. ಪಾರ್ಟಿಗಳಿಗೆ ಹಣ ಖರ್ಚು ಮಾಡುವುದಕ್ಕೆ ಬದಲಾಗಿ ಆ ಹಣದಲ್ಲಿ ಬಟ್ಟೆ ಅಥವಾ ಇನ್ನಿತರ ವಸ್ತುಗಳನ್ನು ಖರೀದಿಸಿ. 
 
ಟಿ.ವಿ., ಸಿನೆಮಾ ನೋಡುವಾಗ ಕುರುಕಲು ಮೆಲ್ಲುವುದನ್ನು ನಿಲ್ಲಿಸಿ. ಈ ತಿಳಿಗೇಡಿ ತಿನ್ನುವಿಕೆಯು ಬೊಜ್ಜು ಬೆಳೆಯುವಿಕೆಗೆ ಕಾರಣವಾಗಬಹುದು. ಆಹಾರ ಸೇವಿಸಬೇಕು ಎಂಬಂತಹ ಪ್ರಚೋದನೆಗಳನ್ನು ಮತ್ತು ಭಾವನಾತ್ಮಕ ಸೇವಿಸುವಿಕೆಯನ್ನು ತಪ್ಪಿಸಿಕೊಳ್ಳಿ. ದೇಹದ ತೂಕವನ್ನು ಇಳಿಸಿಕೊಳ್ಳುವುದಷ್ಟೆ ನಿಮ್ಮ ಉದ್ದೇಶವಾಗಿರಲಿ. ಮುಂದಿನ ಬಾರಿ ಹಸಿವಿಲ್ಲದಿರುವಾಗಲೂ ತಿನ್ನಲು ತೊಡಗುವಾಗ, ನಿಮ್ಮ ಭಾವ ನಾತ್ಮಕ ಆಹಾರ ಸೇವನೆಯನ್ನು ತಣಿಸಿಕೊಳ್ಳುವಾಗ, ಮೇಲೆ ಹೇಳಿದ ವಿಚಾರಗಳನ್ನು ಎರಡೆರಡು ಬಾರಿ  ಯೋಚಿಸಿ.    

ಅರುಣ್‌ ಮಲ್ಯ, 
ಡಯಟೀಷಿಯನ್‌, 
ಪಥ್ಯಾಹಾರ ವಿಭಾಗ,  ಕೆ.ಎಂ.ಸಿ., 
ಅಂಬೇಡ್ಕರ್‌ ಸರ್ಕಲ್‌, ಮಂಗಳೂರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top