CONNECT WITH US  

ಕಾಗದ ಆಧಾರಿತ ತಂತ್ರಜ್ಞಾನದಿಂದ ತಯಾರಿಸಿದ ರೋಗಿ ಸಲಕರಣೆಗಳು

ಶೀರ್ಷಿಕೆ ಸೂಚಿಸಿದಂತೆ ಹಾಗೂ ವಿವಿಧ ರೀತಿಯ ಅನಗತ್ಯ ಕಾಗದ, ವಾರಪತ್ರಿಕೆ, ದಿನಪತ್ರಿಕೆ, ಸಾಮಾನು-ಸರಂಜಾಮುಗಳನ್ನು  ಕಟ್ಟುವಂತಹ ದಪ್ಪನೆಯ ರಟ್ಟು ಹೀಗೆ ಹತ್ತು ಹಲವು ಉಪಯೋಗಕ್ಕೆ ಬಾರದಂತಹ ವಸ್ತುಗಳನ್ನು ಉಪಯೋಗಿಸಿ ರಚಿಸಿದ ವಿವಿಧ ರೀತಿಯ ಕುರ್ಚಿ, ಬೆಂಚು, ನಿಲ್ಲುವಂತಹ ಸಾಧನವನ್ನು ಮಾಡುವ ಕಾರ್ಯಾಗಾರವನ್ನು ಇತ್ತೀಚೆಗೆ ಮಣಿಪಾಲ ವಿಶ್ವವಿದ್ಯಾನಿಲಯದ ಫಿಸಿಯೋತೆರಪಿ ವಿಭಾಗದವರು ಆಯೋಜಿಸಿದ್ದರು. ಈ ಕಾರ್ಯಾಗಾರವನ್ನು ನಡೆಸಿ ಕೊಟ್ಟವರು ಡಾ| ನಿಗಮಜಾ ಹರಿಹರನ್‌. ಚಾಲನೆ ನೀಡಿದವರು, ಪ್ರಖ್ಯಾತ ಮಕ್ಕಳ  ತಜ್ಞೆ ಡಾ| ನಳಿನಿ ಭಾಸ್ಕರಾನಂದ್‌, ಡೀನ್‌ ಡಾ| ರಾಜಶೇಖರ್‌ ಮತ್ತು ಲೇಖಕಿ.

ದೈಹಿಕ ಸಾಮರ್ಥ್ಯ ಕಡಿಮೆಯುಳ್ಳ ಮಕ್ಕಳು ಕುಳಿತುಕೊಳ್ಳಲು, ಹಾಗೇ ನಿಲ್ಲಲ್ಲು ಆಗದೇ ಇರುವಂತೆ ಸಂದರ್ಭದಲ್ಲಿ ಅನ್ಯ ಸಲಕರಣೆಗಳ ಸಹಾಯದಿಂದ ಅವರನ್ನು ಕುಳಿತುಕೊಳ್ಳಿಸುವುದು ಅಥವಾ ನಿಲ್ಲಿಸುವುದು. ಫಿಸಿಯೋತೆರಪಿಯ ಒಂದು ಪ್ರಮುಖ ಚಿಕಿತ್ಸೆ .  ಇದು ಯಾಕೆಂದರೆ, ಇಂತಹ ಮಕ್ಕಳಲ್ಲಿ  ಮಾಂಸಖಂಡಗಳು. ಮೂಳೆ ಹಾಗೂ ಕೀಲುಗಳ ದೈಹಿಕ ಅಸಮರ್ಥತೆಯಿಂದಾಗಿ ಯಾವುದೇ ರೀತಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಚಲಿಸುವ ಪ್ರಕ್ರಿಯೆ ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ  ಕಬ್ಬಿಣ ಇಲ್ಲವೇ ಮರದ ತುಂಡುಗಳನ್ನು ಉಪಯೋಗಿಸಿ, ಮಗುವಿನ ಉದ್ದಳತೆಗೆ ಸರಿಯಾಗಿ ಸಲಕರಣೆಗಳನ್ನು ಫಿಸಿಯೋತೆರಪಿಸ್ಟರ ನಿರ್ದೇಶನದಲ್ಲಿ ಮಾಡಿಕೊಡಬೇಕಾಗುತ್ತದೆ. ಇತ್ತೀಚಿನ ಬೆಲೆಯೇರಿಕೆ ಹಾಗೂ ಒಳ್ಳೆಯ ಕೆಲಸಗಾರರ ಕೊರತೆಯಿಂದಾಗಿ, ಈ ಸಾಧನಗಳನ್ನು  ಮಾಡಿಸುವುದು ಕಷ್ಟ ಸಾಧ್ಯವಾಗಿದೆ. ಹಾಗೂ ಇದು ದುಬಾರಿಯೂ ಹೌದು.

ಈ ಅನನುಕೂಲತೆಗೆ ಪರಿಹಾರವೋ ಎಂಬಂತೆ, ದಿನನಿತ್ಯ ಉತ್ಪತ್ತಿಯಾಗುತ್ತಿರುವ ಕಾಗದ, ರಟ್ಟು , ಬಟ್ಟೆಯ ತುಂಡುಗಳು, ಕ್ಯಾಲೆಂಡರ್‌ ಕೊಳವೆಯಾಕಾರದ ಡಬ್ಬಗಳು ಹೀಗೆ ಇನ್ನಿತರ ವಸ್ತುಗಳನ್ನು ಉಪಯೋಗಿಸಿ ಸುಂದರ ಮಗುವಿನ ಗಾತ್ರಕ್ಕೆ ಸರಿಯಾದ ಸಲಕರಣೆಗಳನ್ನು ಮಾಡಿಕೊಳ್ಳಬಹುದು. ಇದರಲ್ಲಿ ಅನಗತ್ಯ ವಸ್ತುಗಳನ್ನು ಉಪಯೋಗಿಸುವುದರಿಂದ ಖರ್ಚು ಕಡಿಮೆ. ಹಾಗೇ ಪರಿಸರಕ್ಕೆ ಹಾನಿಯನ್ನುಂಟು ಮಾಡುವುದನ್ನು ಕೂಡ ಕಡಿಮೆ ಮಾಡಬಹುದು.

ಇದನ್ನು  ಮೊದಲಿಗೆ ಆವಿಷ್ಕರಿಸಿದವರು ದಿ| ಬೆವಿಲ್‌ ಪೇಕರ್‌. ಹರಾರೆ, ಜಿಂಬಾಬ್ಬೆ ದೇಶದಲ್ಲಿ ಆರಂಭಗೊಂಡ ಈ ವಿಧಾನ, ಈಗ ಭಾರತದಲ್ಲಿ ನಿಧಾನಗತಿಯಲ್ಲಿ ಪ್ರಚಾರಗೊಳ್ಳುತ್ತದೆ.

ಇದನ್ನು ಮಾಡುವ ಪ್ರಕ್ರಿಯೆ ಹೀಗಿದೆ 

ಮೊದಲಿಗೆ ನಿರ್ಧರಿಸಿದ ಸಲಕರಣೆಯ ಅಳತೆಯನ್ನು ರಟ್ಟು  (ಇಚrಛಚಿಟಚrಛ) ನಲ್ಲಿ  ಕತ್ತರಿಸಿ ಜೋಡಣೆಯನ್ನು ಮಾಡಿಕೊಳ್ಳಬೇಕು. ಇದರ ಮೇಲೆ ಮೈದಾಹಿಟ್ಟಿನ 
ಅಂಟನ್ನು ತಯಾರಿಸಿ, ಆರಿಸಿ ಕಾಗದದ ಸಣ್ಣ ಸಣ್ಣ ತುಂಡುಗಳನ್ನು ಮಾಡಿಕೊಂಡು ಅಂಟಿಸುತ್ತಾ ಬರಬೇಕು. ಈ ಕಾಗದದ ಬಳಕೆಯು ನಿರ್ದಿಷ್ಟ  ಆಧಾರದ ಮೇಲೆ ಅವಲಂಬಿತವಾಗುತ್ತಿದೆ. ಸರಿಯಾಗಿ ಕಾಗದವನ್ನು ಹಚ್ಚುತ್ತಾ ಬಂದ ಅನಂತರ ಒಂದು ದಿನ ಸೂರ್ಯನ ಕಿರಣ ನೇರದಲ್ಲಿ ತಾಗದಂತೆ ಗಾಳಿಯಾಡುವ ಕೊಠಡಿಯಲ್ಲಿ ಒಣಗಿಸಬೇಕು. ಹೀಗೆ ತಯಾರಾದ ಸಲಕರಣೆಯು ಎಷ್ಟು ತೂಕದ ವ್ಯಕ್ತಿಯ ಭಾರ ಧಾರಣಾ ಶಕ್ತಿ ಹೊಂದಿರುತ್ತದೆ ಎಂದು ನಿರ್ಧಾರ ಮಾಡಲಾಗುತ್ತದೆ. ಒಂದು ವಾರದ ಅನಂತರ ಸಲಕರಣೆಯು ಹಾಳಾಗದಂತೆ ತಡೆಯಲು ವಾರ್ನಿಶ್‌ (Vಚrnಜಿsಜ)ನ್ನು ಉಪಯೋಗಿಸಬೇಕು. ಇಲ್ಲಿ  ಒಂದನ್ನು ಮಾತ್ರ ಉದಾಹರಣೆಯಾಗಿ ಕೊಟ್ಟಿದ್ದೇನೆ. 

ಈ ಕಾರ್ಯಾಗಾರದಲ್ಲಿ  ವಿವಿಧ ಬಗೆಯ ಕುರ್ಚಿ, ಬೆಂಚು, ನಿಲ್ಲುವ ಮತ್ತು  ನಡೆಯುವ ಸಾಧನ, ಫಿಸಿಯೋತೆರಪಿ ವ್ಯಾಯಾಮಕ್ಕೆ ಬೇಕಾಗುವ ಸಲಕರಣೆಗಳು, ಸುಂದರ ಆಟಿಕೆಗಳನ್ನು ಮಾಡಿದ್ದಾರೆ.

ಒಂದೇ ಒಂದು ಹೇಳಬೇಕಾದ ಪ್ರಾಯೋಗಿಕ ತೊಂದರೆ ಏನೆಂದರೆ, ಕಾಗದವನ್ನು ಅಂಟಿಸುವಂತಹದ್ದು . ಈ ಕೆಲಸ ನೋಡುವುದಕ್ಕೆ ಸುಲಭ ಎನಿಸಿದರೂ  ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ದೈಹಿಕ ಅಸಮರ್ಥತೆ ಹೊಂದಿರುವ ಮಕ್ಕಳನ್ನು  ನೋಡಿಕೊಳ್ಳುವಲ್ಲಿ ಹೆತ್ತವರಿಗೆ ಇಂತಹ ಸಲಕರಣೆಗಳು ಅತ್ಯಗತ್ಯ. ಇದನ್ನು ಮುಂದುವರಿಸಿಕೊಂಡು ಹೋಗುವಂತಹ ಜವಾಬ್ದಾರಿ ನಮ್ಮ  ಮೇಲಿದೆ.

ಡಾ| ಭಾಮಿನಿ ಕೃಷ್ಣ ರಾವ್‌,
ಫಿಸಿಯೋತೆರಪಿ ವಿಭಾಗ ಮುಖ್ಯಸ್ಥರು,
ಮಣಿಪಾಲ ವಿಶ್ವವಿದ್ಯಾನಿಲಯ,
ಮಣಿಪಾಲ.


Trending videos

Back to Top