CONNECT WITH US  

ಫ್ಲೂಗೆ ಈ ಮದ್ದುಗಳನ್ನು ಉಪಯೋಗಿಸಿ

ಫ್ಲೂ ಎಂಬ ಶಬ್ದವು ಇಟಾಲಿಯನ್‌ ಶಬ್ದ "ಇನ್‌ ಫ್ಲೂಯೆಂಜಾ ಡಿ ಫ್ರೆಡ್ಡೋ'' ಅಥವಾ "ಶೀತ ಮೂಲದ ಇನ್ಫ್ಲ್ಯೆಂಜಾ'' ಎಂಬ ಶಬ್ದದಿಂದ ಬಂದಿದೆ. ಫ್ಲೂ  ಎನ್ನುವುದು ಸಾಮಾನ್ಯ ಶೀತಕ್ಕಿಂತ ಭಿನ್ನವಾದ ಒಂದು ರೋಗಸ್ಥಿತಿ. ಸಾಮಾನ್ಯವಾಗಿ ಶೀತವಾಗಿದ್ದರೆ, ಅದು ಬಹಳ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಆದರೆ ಫ್ಲೂ  ಬಹಳ ಬಿರುಸಾಗಿ ಮತ್ತು ಆಘಾತಕಾರಿಯಾಗಿ ಒಮ್ಮಿಂದೊಮ್ಮೆಗೇ ದಾಳಿ ಮಾಡುತ್ತದೆ. ಫ್ಲೂ  ಗೆ ಕಾರಣವಾಗಿರುವುದು ಒಂದು ವಿಧದ ವೈರಸ್‌, ಇದು  ಶ್ವಾಸಕೋಶದ  ಮೆvàಲು ಭಾಗಗಳಲ್ಲಿ  ಪ್ರಭಾವ ಬೀರುತ್ತದೆ. ಫ್ಲೂ ಜ್ವರದ ರೋಗ ಲಕ್ಷಣಗಳು ಅಂದರೆ ಜ್ವರ, ತಲೆನೋವು, ಮೂಗು ಕಟ್ಟಿರುವುದು ಅಥವಾ ಮೂಗಲ್ಲಿ ಸದಾ ನೀರಿಳಿಯುತ್ತಿರುವುದು, ಶರೀರದಾದ್ಯಂತ ನೋವು ಮತ್ತು  ಸೀನು. ರೋಗಲಕ್ಷಣದ ದಾಳಿಯು ಒಂದು ವಾರದ ಒಳಗೆ ಸರಿ ಹೋಗುತ್ತದೆ.  

ಆಧುನಿಕ ಔಷಧಿಗಳ ಬಳಕೆ ಹೆಚ್ಚುತ್ತಾ ಹೋದ ಹಾಗೆ, ಹೆಚ್ಚಿನ ಜನರು ಆಂಟಿಬಯಾಟಿಕ್ಸ್‌ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.  ಆದರೆ, ಒಂದು ಸೆಕೆಂಡರಿ ಬ್ಯಾಕ್ಟೀರಿಯಲ್‌ ಸೋಂಕು ಇಲ್ಲದಿದ್ದರೆ, ಆಂಟಿಬಯಾಟಿಕ್‌ ಮದ್ದು ಫ್ಲೂ  ತಂದ ಬ್ಯಾಕ್ಟೀರಿಯಾ ವಿರುದ್ಧ ಕೆಲಸ ಮಾಡುವುದಿಲ್ಲ. ಫ್ಲೂ ರೋಗಲಕ್ಷಣಗಳಿಂದ ಬಿಡುಗಡೆಯನ್ನು ನೀಡುವ ಕೆಲವು ಔಷಧಿಗಳು ಲಭ್ಯ ಇವೆ.  ಆದರೆ ಮನೆಯಲ್ಲಿಯೆ ತಯಾರಿಸಬಹುದಾದ ಕೆಲವು ರೀತಿಯ ಸರಳ ತಯಾರಿಯ ಮನೆಮದ್ದುಗಳಿಂದ ಈ ಸಣ್ಣ-ಪುಟ್ಟ ತೊಂದರೆಗಳಿಂದ ಪರಿಹಾರವನ್ನು ಪಡೆಯಬಹುದು. 

ಸಾಮಾನ್ಯ ಶೀತಕ್ಕೆ ಚಿಕಿತ್ಸೆ ನೀಡಲು ಪೂರಕ ಮತ್ತು ಬದಲಿ ಔಷಧಿ ಚಿಕಿತ್ಸೆಗಳನ್ನು ನೀಡಲಾಗುವುದು. ಇವುಗಳಲ್ಲಿ ಕೆಲವು ಪಾರಂಪರಿಕ ಆಂಟಿಡಾಟ್‌ಗಳಾಗಿದ್ದರೆ, ಇತರ ಔಷಧಿಗಳು ಪೋಷಕಾಂಶಗಳು, ಗಿಡ ಮೂಲಿಕೆಗಳ ಪೂರಣಗಳು.  ಕೆಲವು ಔಷಧಿಗಳು ಉತ್ತಮ ಪರಿಣಾಮ ಉಂಟು ಮಾಡುವ ವೈಜಾnನಿಕ ಪುರಾವೆಗಳು ಇವೆ.  ಫ್ಲೂ  ನಿಂದ ಪರಿಹಾರವನ್ನು ಪಡೆಯಲು ಇರುವ ಸಾಮಾನ್ಯ ಪರಿಹಾರೋಪಾಯಗಳು ಅಂದರೆ:

ಕಾಢಾ

ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ಪಡೆಯಲು ಅಜ್ಜಿಯ ಮನೆ ಮದ್ದು. ಕಾಢಾ ಎನ್ನುವುದು ಸಂಬಾರಗಳಾದ-ದಾಲಿcನ್ನಿ, ಲವಂಗ, ಕರಿಮೆಣಸು, ಶುಂಠಿ, ತುಳಸಿಗಳನ್ನು ಸೇರಿಸಿ ತಯಾರಿಸುವ ಒಂದು ಔಷಧೀಯ ಮಿಶ್ರಣ.   

ಜೇನು ಹಾಗೂ ಸಂಬಾರಪದಾರ್ಥಗಳು

ಜೇನು ಬ್ಯಾಕ್ಟೀರಿಯಾ-ನಿರೋಧಕ, ಆಂಟಿ- ಆಕ್ಸಿಡಾಂಟ್‌, ಉರಿಯೂತ ನಿರೋಧಕ ಮತ್ತು ಪ್ರಿ-ಬಯಾಟಿಕ್‌ ಲಕ್ಷಣಗಳನ್ನು ಹೊಂದಿದೆ.  ಜೇನುತುಪ್ಪ ಒಳಗೊಂಡಿರುವ ಇತರ ಪ್ರಯೋಜನಕಾರಿ ಲಕ್ಷಣಗಳು ಅಂದರೆ, ಆಂಟಿ-ಟ್ಯೂಮರ್‌, ಆಂಟಿ-ಮ್ಯೂಟಾಜೆನಿಕ್‌ ಮತ್ತು ಆಂಟಿ- ವೈರಲ್‌ ಗುಣಲಕ್ಷಣಗಳು.  ಜೇನುತುಪ್ಪವನ್ನು ಕರಿಮೆಣಸು, ಶುಂಠಿ, ಲವಂಗ ಮತ್ತು ನಿಂಬೆಯ ಜತೆ ಸೇರಿಸಿ ತೆಗೆದುಕೊಳ್ಳುವುದು ಉತ್ತಮ. 

ಅರಿಶಿನ ಮತ್ತು ತುಪ್ಪ 

ಹಾಲಿನ ಜೊತೆಗೆ ಅರಿಶಿನವು ವೈರಸ್‌ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಆಂಟಿಫ‌ಂಗಲ್‌ ಗುಣಲಕ್ಷಣಗಳನ್ನು ಹೊಂದಿದೆ ಎಂದು ನಂಬಲಾಗುತ್ತದೆ.  

ಮೆಂತ್ಯಬೀಜಗಳ ಡಿಕಾಕ್ಷನ್‌

ಮೆಂತ್ಯಬೀಜಗಳು ಆಸ್ತಮಾ ಮತ್ತು ಸೈನಸ್‌ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಮೆಂತ್ಯಬೀಜಗಳ ಡಿಕಾಕ್ಷನ್‌ ಬಾಯಿ ಹುಣ್ಣು ಮತ್ತು ಗಂಟಲಕುಳಿಯ ಉರಿಯೂತವನ್ನು ನಿವಾರಿಸುತ್ತದೆ ಎಂದು ನಂಬಲಾಗುತ್ತದೆ. ಇದನ್ನು ಜೇನುತುಪ್ಪ ಮತ್ತು ನಿಂಬೆಯ ಜತೆಗೆ ಸೇರಿಸಿ ಸೇವಿಸಬಹುದು. 

ಬೆಳ್ಳುಳ್ಳಿ

ಬಳ್ಳುಳ್ಳಿಯು 100 ಸಕ್ರಿಯ ರಾಸಾಯನಿಕ ಅಂಶಗಳಿಂದ ಭರಿತವಾಗಿದೆ ಮಾತ್ರವಲ್ಲ ಇದರಲ್ಲಿ ಅನೇಕ ವಿಶೇಷ ರೂಪದ ಆಂಟಿಆಕ್ಸಿಡಾಂಟ್‌ಗಳು ಇವೆ. ಬೆಳ್ಳುಳ್ಳಿ ಹೊಂದಿರುವ ಕೆಲವು ಬಹುಮುಖ್ಯ ಅಂಶಗಳು ಅಂದರೆ ಅಲ್‌Éಸೀನ್‌ ಮತ್ತು ಸಲ#ರ್‌ ಕಂಪೌಂಡ್‌. ಬೆಳ್ಳುಳ್ಳಿಯಲ್ಲಿ ಇರುವ ಇತರ ಆಂಟಿಆಕ್ಸಿಡಂಟ್‌ಗಳು ನ್ಯಾಚುರಲ್‌ ಕಿಲ್ಲರ್‌ ಕೋಶಗಳನ್ನು ಹೆಚ್ಚಿಸುವ ಮೂಲಕ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ. 

ತುಳಸಿ ಚಹಾ

ತುಳಸಿಯನ್ನು ಬ್ಯಾಕ್ಟೀರಿಯಾ, ಫ‌ಂಗಸ್‌ ಮತ್ತು ವೈರಸ್‌ ವಿರುದ್ಧ ಹೋರಾಡುತ್ತದೆ ಎಂದು ನಂಬಲಾಗುತ್ತದೆ. ತುಳಸಿಯನ್ನು ಚಹಾ ಅಥವಾ ಡಿಕಾಕ್ಷನ್‌ ಮಾಡಿ ಸೇವಿಸುವುದು ಒಳ್ಳೆಯದು. 

ಬಾರ್ಲಿ ನೀರು

ಜ್ವರದ ಉಪಚಾರಕ್ಕೆ ಬಾರ್ಲಿ ನೀರು ಉತ್ತಮ. ಬಾರ್ಲಿಯು ಶರೀರದ ಮೇಲೆ ಉಪಶಮನಕಾರಿ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ನಂಬಲಾಗುತ್ತದೆ. 

ನೆಲ್ಲಿ

ಆಮ್ಲ ಅಥವಾ ನೆಲ್ಲಿಯು ವಿಟಾಮಿನ್‌ ಸಿ ಯ ಅತ್ಯುತ್ತಮ ಮೂಲ.

ಚವನ್‌ಪ್ರಾಶ್‌

ಆಯುರ್ವೇದಿಕ್‌ ಮಿಶ್ರಣ ಚವನ್‌ಪ್ರಾಶ್‌ ಶರೀರದ ರೋಗ ಪ್ರತಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ ಎಂದು ನಂಬಲಾಗುತ್ತದೆ.

ಸುಜೇತಾ ಎಂ. ಶೆಟ್ಟಿ,
ಡಯಟೀಷಿಯನ್‌,  ಪಥ್ಯಾಹಾರ ವಿಭಾಗ, 
ಕೆ.ಎಂ.ಸಿ., ಮಣಿಪಾಲ

Trending videos

Back to Top