CONNECT WITH US  

ವಿಷ-ಮುಕ್ತಗೊಳಿಸುವ 7 ನೈಸರ್ಗಿಕ ಆಹಾರಗಳು

ಡಿ-ಟಾಕ್ಸಿಫಿಕೇಷನ್‌ ಅಂದರೆ ರಕ್ತವನ್ನು ಶುದ್ಧಿಗೊಳಿಸುವುದು ಎಂದು ಅರ್ಥ. ಯಕೃತ್ತಿನಲ್ಲಿ ರಕ್ತದ ಕಲುಷಿತ ಅಂಶಗಳು ತೆಗೆದುಹಾಕಲ್ಪಟ್ಟು, ವಿಷಕಾರಕಗಳು ಸಂಸ್ಕರಣೆಗೆ ಒಳಪಟ್ಟು  ವಿಸರ್ಜನೆಯಾಗುತ್ತವೆ. ಇಷ್ಟು ಮಾತ್ರವಲ್ಲದೆ, ಮೂತ್ರಪಿಂಡಗಳು, ಕರುಳು, ಶ್ವಾಸಕೋಶಗಳು, ದುಗ್ಧ ಗ್ರಂಥಿಗಳು ಮತ್ತು ಚರ್ಮದ ಮೂಲಕವೂ ಸಹ ಶರೀರದ ನಂಜು ಅಥವಾ ವಿಷಕಾರಕಗಳು ಹೊರಹಾಕಲ್ಪಡುತ್ತವೆ. 

ಫಾಸ್ಟ್‌ ಫ‌ುಡ್‌ ಮತ್ತು ಶೀಘ್ರ ಜೀರ್ಣವಾಗುವ ಆಹಾರಗಳನ್ನು ಸೇವಿಸಿದ ಸಂದರ್ಭದಲ್ಲಿ ದೇಹವನ್ನು ನಿಯಮಿತವಾಗಿ ಡಿ-ಟಾಕ್ಸಿಫೈ ಮಾಡುವುದು ಅಥವಾ ವಿಷಮುಕ್ತಗೊಳಿಸುವುದು ಬಹಳ ಆವಶ್ಯಕ. ಒಂದು ಉತ್ತಮ ಆರಂಭಕ್ಕೆ ಸಹಾಯ ಮಾಡಲು, ಶರೀರದ ಒಳಾಂಗಗಳನ್ನು ಶುದ್ಧೀಕರಣಗೊಳಿಸುವ ಒಂದಷ್ಟು ಆಹಾರಗಳ ಮತ್ತು ಗಿಡಮೂಲಿಕೆಗಳ ಪಟ್ಟಿ ಇಲ್ಲಿದೆ, ಈ ಅಂಶಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಂಡ ಒಂದು ವಾರದ ಒಳಗಾಗಿ, ಅವು ನಿಮ್ಮಲ್ಲಿ ಹಗುರತನ ಮತ್ತು ತಾಜಾತನದ ಭಾವವನ್ನು ಹುಟ್ಟಿಸುತ್ತವೆ.   

ಅರಿಶಿನ:

ಅರಿಶಿನದಲ್ಲಿರುವ, ಆಂಟಿಆಕ್ಸಿಡಾಂಟ್‌ ಮತ್ತು ಉರಿಯೂತ ನಿರೋಧಕ ಗುಣಗಳು ಶರೀರದ ಮೇಲೆ ಪ್ರಭಾವ ಉಂಟು ಮಾಡುವುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.  ಅರಿಶಿನದಲ್ಲಿರುವ ವಿಶೇಷ ವೈದ್ಯಕೀಯ ಗುಣಲಕ್ಷಣಗಳಿಗಾಗಿ, ಆಯುರ್ವೇದವು ಈ ಸಂಬಾರ ಪದಾರ್ಥಕ್ಕೆ ನೂರಾರು ವರ್ಷಗಳಿಂದಲೂ ಮಾನ್ಯತೆ ನೀಡುತ್ತಾ ಬಂದಿದೆ. ಅರಿಶಿನದ ನಂಜು ನಿವಾರಕ ಗುಣವು, ಯಕೃತ್ತಿನಲ್ಲಿ ಇರುವ ವಿಷಕಾರಕ ಅಂಶಗಳನ್ನು ತೆಗೆದುಹಾಕುತ್ತದೆ. ವಿಷಮುಕ್ತಗೊಳಿಸುವ ಪ್ರಕ್ರಿಯೆಯ ಮೊದಲ ಉದ್ದೇಶ ಅಂದರೆ ಯಕೃತ್ತಿನಂತಹ ವಿಸರ್ಜನಾಂಗಗಳನ್ನು ಬಲಪಡಿಸುವುದು.  ಅರಿಶಿನದಲ್ಲಿ ಇರುವ ಉಪಶಮನಕಾರಿ ಅಂಶವು ಜೀವಕೋಶಗಳಿಗೆ ಹಾನಿಯಾಗುವುದನ್ನು ಮತ್ತು ಆ ಮೂಲಕ ಮುಪ್ಪಾಗುವ ಪ್ರಕ್ರಿಯೆಯನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಿನಕ್ಕೆ ಒಂದು ಟೇಬಲ್‌ ಚಮಚದಷ್ಟು ಅರಿಶಿನವು ನಿಮ್ಮ ಶರೀರದ ಆಂತರಿಕ ಆರೋಗ್ಯಕ್ಕೆ ಪರಿಣಾಮಕಾರಿಯಾಗಿ ಪ್ರಯೋಜನಕಾರಿ ಆಗಬಲ್ಲದು. 

ಸೇಬುಗಳು

ಸೇಬು ನಾರಿನ ಅಂಶಗಳಿಂದ ಭರಿತವಾಗಿರುವ ಹಣ್ಣು. ಇದರಲ್ಲಿ ಇರುವ ಪೆಕ್ಟಿನ್‌ ಎಂಬ ಅಂಶವು, ಕರುಳನ್ನು ಶುಚಿಗೊಳಿಸುತ್ತದೆ. ಸೇಬು, ಶರೀರದಲ್ಲಿ ಸಂಗ್ರಹಗೊಂಡಿರುವ ನಂಜು ಮತ್ತು ಜೀರ್ಣವಾಗಿಲ್ಲದ ಆಹಾರದ ಅಂಶಗಳನ್ನು ಮುಕ್ತಗೊಳಿಸುತ್ತದೆ.  ಆಹಾರದಲ್ಲಿ  ವಿವಿಧ ರೀತಿಯ ನಾರಿನ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಷಮುಕ್ತಗೊಳಿಸುವ ಪ್ರಕ್ರಿಯೆಯನ್ನು ಹೇಗೆ ಹೆಚ್ಚಿಸಬಹುದು ಎನ್ನುವ ನೆಲೆಯಲ್ಲಿ ಸೇಬನ್ನು ಆಹಾರದ ಮೂಲಕ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾದುದು. 

ಬೆಳ್ಳುಳ್ಳಿ:

ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶ ವಿಶೇಷವಾಗಿದೆ. ಇದು ಚರ್ಮದ ಸಂರಚನೆಯನ್ನು ಉತ್ತಮಪಡಿಸುವುದಷ್ಟೇ ಅಲ್ಲ, ತಲೆಕೂದಲಿಗೆ ಹೊಳಪನ್ನೂ ಸಹ ನೀಡುತ್ತದೆ. ಡಿ-ಟಾಕ್ಸಿಫಿಕೇಷನ್‌, ಅಂದರೆ ಶರೀರದ ವಿಷ-ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಇದು ಕ್ಷಿಪ್ರಗೊಳಿಸುತ್ತದೆ.  ಬೆಳ್ಳುಳ್ಳಿಯಲ್ಲಿರುವ ಗಂಧಕದ ಅಂಶದಿಂದಾಗಿ, ಸಲ್ಫೆàಷನ್‌ ಅನ್ನುವ ಪ್ರಕ್ರಿಯೆಯ ಮೂಲಕ ಯಕೃತ್ತು ತನ್ನಲ್ಲಿರುವ ವಿಷಕಾರಕಗಳನ್ನು, ಅವು ವಿಸರ್ಜನೆ ಆಗುವವರೆಗೆ ತಟಸ್ಥಗೊಳಿಸುತ್ತದೆ.  ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಾಗಗೊಳಿಸಲು ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯಂತಹ ಸಲ#ರ್‌ ಸಮೃದ್ಧ ಆಹಾರಗಳನ್ನು ಹೆಚ್ಚು ಸೇವಿಸಿ. 

ನಿಂಬೆಹಣ್ಣು:

ನೀವು ಕುಡಿಯುವ ನೀರಿಗೆ ಮತ್ತು ಸೇವಿಸುವ ಆಹಾರಕ್ಕೆ ಒಂದಷ್ಟು ನಿಂಬೆ ರಸವನ್ನು ಹಿಂಡಿಕೊಳ್ಳಲು ಯಾವತ್ತೂ ಮರೆಯಬೇಡಿ.  ನಿಂಬೆಯಲ್ಲಿ ಶರೀರದ ಶೀತವನ್ನು ಗುಣಪಡಿಸುವ ಅಂಶವಿದೆ.  ಇದು ಜೀರ್ಣ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ವಿಸರ್ಜನಾ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ.  ನಿಂಬೆಗೆ ಇರುವ ಹುಳಿ-ಒಗರು (ಟಾರ್ಟ್‌) ರುಚಿಯಿಂದಾಗಿ, ಇದು ಜೀರ್ಣಕ್ಕೆ ಸಹಕರಿಸುವ ಪಿತ್ತರಸದ ಸರಾಗ ಹರಿವನ್ನು ಉತ್ತಮಗೊಳಿಸುತ್ತದೆ. ನಿಂಬೆಯ ಸಿಪ್ಪೆಯಲ್ಲಿಯೂ ಸಹ ಆಂಟಿಆಕ್ಸಿಡಾಂಟ್‌ಗಳು ಸಮೃದ್ಧವಾಗಿದ್ದು, ಇವು ವಿಷಮುಕ್ತಗೊಳಿಸುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. 

ಫ್ಲಾಕ್ಸ್‌ ಸೀಡ್ಸ್‌ ಅಥವಾ ಅಗಸೆ ಬೀಜ

ನಾರಿನ ಅಂಶಗಳಿಂದ ಭರಿತವಾದ ಅಗಸೆ ಬೀಜಗಳು ಹಲವಾರು ಕಾಯಿಲೆಗಳನ್ನು ದೂರವಿರಿಸಲು ಮತ್ತು ಅದರಲ್ಲಿರುವ ಪೋಷಕಾಂಶಗಳ ಮಿಶ್ರಣವು ಆಂತರಿಕ ಅಂಗಾಂಗಗಳನ್ನು ಸ್ವತ್ಛ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.  ಅಗಸೆಬೀಜದಲ್ಲಿ ಕರಗುವಂತಹ ಮತ್ತು ಕರಗದೆ ಇರುವಂತಹ ಎರಡೂ ರೀತಿಯ ನಾರಿನ ಅಂಶಗಳು ಇರುವ ಕಾರಣ, ಮಲವಿಸರ್ಜನೆಯನ್ನು ಇದು ಸರಾಗಗೊಳಿಸುತ್ತದೆ ಮತ್ತು ದೊಡ್ಡಕರುಳಿನಲ್ಲಿ ಕೊಲೆಸ್ಟ್ರಾಲ್‌ ಮರು-ಹೀರುವಿಕೆಯನ್ನು ಇದು ತಡೆಯುತ್ತದೆ.  ನೀವು ಬೆಳಗ್ಗೆ ಸೇವಿಸುವ ಗಂಜಿ ಅಥವಾ ಸಲಾಡ್‌ಗೆ ಒಂದಷ್ಟು ಅಗಸೆಬೀಜಗಳನ್ನು ಸೇರಿಸಿಕೊಳ್ಳಿ. 

ಕೊತ್ತಂಬರಿ:

ಕೊತ್ತಂಬರಿ ಬೀಜಗಳು ಜೀರ್ಣಕ್ರಿಯೆಗೆ ಮತ್ತು ಸಹಜ ಕೊಲೆಸ್ಟ್ರಾಲ್‌ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾದರೆ, ಕೊತ್ತಂಬರಿಸೊಪ್ಪು$, ದೇಹದಲ್ಲಿ ಬಹಳ ಸಮಯದಿಂದ ಸಂಗ್ರಹವಾಗಿರುವ ಸೀಸ ಮತ್ತು ಪಾದರಸದಂತಹ ಘನಲೋಹಗಳನ್ನು ವಿಷರಹಿತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಂಬಲಾಗುತ್ತದೆ. ಸಲಾಡ್‌ಗಳಿಗೆ ಅಥವಾ ಬೇಯಿಸಿದ ತರಕಾರಿ, ದಾಲ್‌ ಮತ್ತು ಕ್ಯೂರಿಗಳಿಗೆ ಒಂದು ಹಿಡಿ ಕೊತ್ತಂಬರಿ ಸೊಪ್ಪನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾದುದು.
 
ಬೀಟ್‌ ರೂಟ್‌

ಬೀಟ್‌ರೂಟ್‌ ಸಸ್ಯಮೂಲದ ಬಣ್ಣದಿಂದ ಭರಿತವಾದ ಒಂದು ತರಕಾರಿ.  ಇದರಲ್ಲಿ ಆಂಟಿಆಕ್ಸಿಡಾಂಟ್‌ ಸಮೃದ್ಧವಾಗಿದ್ದು, ಯಕೃತ್ತನ್ನು-ಉತ್ತೇಜಿಸುವ ಸಾಮರ್ಥ್ಯ ಬೀಟ್‌ರೂಟ್‌ಗೆ ಇದೆ ಎಂದು ನಂಬಲಾಗುತ್ತದೆ.  ನಾವೆಲ್ಲರೂ ಬೀಟ್‌ರೂಟನ್ನು ಸೇವಿಸುತ್ತೇವೆ. ಆದರೆ ಅದರ ಹಸುರೆಲೆಯನ್ನು ಬಿಸಾಡುತ್ತೇವೆ, ಈ ಹಸುರೆಲೆ, ವಿಟಾಮಿನ್‌ಗಳು, ಮಿನರಲ್‌ಗ‌ಳು ಮತ್ತು ಆಂಟಿಆಕ್ಸಿಡಾಂಟ್‌ಗಳಿಂದ ಭರಿತವಾಗಿರುತ್ತದೆ.  ಹಾಗಾಗಿ, ಅಡುಗೆಯಲ್ಲಿ ಬೀಟ್‌ರೂಟ್‌ನ ಹಸುರೆಲೆಯನ್ನೂ ಸಹ ಸೇರಿಸಿಕೊಳ್ಳಿ ಮತ್ತು ಡಿ-ಟಾಕ್ಸ್‌ ಪ್ರಯೋಜನವನ್ನು ಪಡೆಯಿರಿ. ನಿಮ್ಮ ಜ್ಯೂಸ್‌ನಲ್ಲಿ ಅರ್ಧ ಕಪ್‌ ಬೀಟ್‌ರೂಟ್‌ ಅಥವಾ ಒಂದು ಕಪ್‌ ಎಲೆಯನ್ನು ಸೇರಿಸಿಕೊಳ್ಳಿ ಮತ್ತು ನಿಮ್ಮ ಶರೀರದ ಆಂತರಿಕ ಆರೋಗ್ಯ ವ್ಯವಸ್ಥೆಯನ್ನು ಚೆನ್ನಾಗಿಟ್ಟುಕೊಳ್ಳಿ. 

ಸುಜೇತಾ ಎಂ ಶೆಟ್ಟಿ
ಡಯಟೀಷಿಯನ್‌, 
ಪಥ್ಯಾಹಾರ ವಿಭಾಗ,  ಕೆಎಂಸಿ, ಮಣಿಪಾಲ


Trending videos

Back to Top