CONNECT WITH US  

ವೃದ್ಧ ರೋಗಿಗಳಿಗೆ ಅರಿವಳಿಕೆ ಹೇಗೆ?

ಪ್ರಾಯವಾಗುವುದು ಒಂದು ಸತತ ಪ್ರಕ್ರಿಯೆ. ವ್ಯಕ್ತಿಯ ಪ್ರಾಯದ ಜೊತೆಗೆ ಆತನ ಅಂಗಾಂಗಗಳ ಚಟುವಟಿಕೆಗಳೂ ನಿಧಾನವಾಗಿ ಕುಂದುತ್ತಾ ಸಾಗುತ್ತವೆ. ಈ ಕುಂದುವ ಪ್ರಕ್ರಿಯೆ ರೋಗಿಯ ದೈಹಿಕ ಚಟುವಟಿಕೆಗಳು, ಆತನಿಗಿರಬಹುದಾದ ತೀವ್ರ ರೋಗಗಳು ಮತ್ತು ದೈನಂದಿನ ವ್ಯಾಪಾರಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಆತನ ಸಾಮರ್ಥ್ಯಗಳನ್ನು ಆಧರಿಸಿರುತ್ತದೆ.

ಏನೇನು ಬದಲಾವಣೆಗಳು?

ನರವ್ಯೂಹ:

ಬೆನ್ನು ಹುರಿಯ ಕಾಲುವೆಯಲ್ಲಿ ಕ್ರಮೇಣ ಅಂಗಾಂಶಗಳು ಕಡಿಮೆಯಾಗುವುದು ಮತ್ತು ಸೆಂಟ್ರಲ್‌ ಕಾರ್ಟೆಕ್ಸ್‌ ಪ್ರದೇಶದಲ್ಲಿ ನ್ಯೂರಾನ್‌ಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುವುದರಿಂದಾಗಿ ವೃದ್ಧ‌ರಲ್ಲಿ ನರವ್ಯೂಹದ ಚಟುವಟಿಕೆಗಳು ಕುಂದುತ್ತಾ ಬಂದಿರುತ್ತವೆ. ಜೊತೆಗೆ ಹೊರ ಪದರಗಳಲ್ಲಿರುವ ನರ ಅಂಗಾಂಶಗಳು ಸಂಜ್ಞೆಗಳನ್ನು ಕಳುಹಿಸುವ ವೇಗವೂ ಕುಂದಿರುತ್ತದೆ. ಈ ಎಲ್ಲ ಬದಲಾವಣೆಗಳಿಂದಾಗಿ ವೃದ್ಧರ ನಿದ್ದೆಯ ವಿನ್ಯಾಸ ಬದಲಾಗಿರುತ್ತದೆ. ಹಗಲಲ್ಲಿ ಸುಸ್ತು, ನಿದ್ದೆ, ನೆನಪಿಲ್ಲದಿರುವಿಕೆ, ಗೊಂದಲ... ಇವೆಲ್ಲ ಮೆದುಳಿಗೆ ವೃದ್ಧಾಪ್ಯ ಬರುತ್ತಿರುವ ಸೂಚನೆಗಳು.

ಹೃದಯ - ರಕ್ತನಾಳ ವ್ಯೂಹ:

ಪ್ರಾಯಸಂದಿರುವುದರಿಂದ ಹೃದಯದ ಗೋಡೆಗಳ ನಿರ್ವಹಣಾ ಸಾಮರ್ಥ್ಯ ಕುಸಿದಿರುತ್ತದೆ. ರಕ್ತನಾಳಗಳ ಸಾಮರ್ಥ್ಯವೂ ಕುಸಿದಿರುವುದರ ಜೊತೆಗೆ ಸ್ವಯಂಪ್ರತಿಕ್ರಿಯಿಸುವ ನರವ್ಯವಸ್ಥೆಯೂ ಕುಂದಿರುವುದರಿಂದ ದೇಹದ ವಿನ್ಯಾಸದಲ್ಲಿ ಬದಲಾವಣೆ ಅಥವಾ ವ್ಯಾಯಾಮಗಳಿಗೆ ದೇಹದ ಪ್ರತಿಕ್ರಿಯೆಗಳು ಬದಲಾಗಿರುತ್ತವೆ. ಪ್ರಾಯ ಸಂದಂತೆ, ಹೃದಯದ ಬಡಿತದ ಸಾಮರ್ಥ್ಯ ಕೂಡ ಕುಂದುತ್ತಾ¤ ಬರುತ್ತದೆ. ಎದೆ ಬಡಿತದ ಲಯದಲ್ಲಿ ಏರುಪೇರು, ರಕ್ತನಾಳಗಳಲ್ಲಿ ಅಡ್ಡಿ, ಹೃದಯದಲ್ಲಿ ಅಡ್ಡಿಯಂತಹ ತೊಂದರೆಗಳು ವೃದ್ದರಲ್ಲಿ ತೀರಾ ಸಾಮಾನ್ಯ. ಪ್ರಾಯ ಸಂದಂತೆ ಹೃತುRಕ್ಷಿಗಳು ಹೊರೆ ತಾಳಲಾರದೆ ಹಿಗ್ಗಿರುತ್ತವೆ. 

ಉಸಿರಾಟ ವ್ಯೂಹ:

ಶ್ವಾಸಕೋಶದ ಗಾತ್ರ ಮತ್ತು ಸಾಮರ್ಥ್ಯಗಳು, ಅವುಗಳಲ್ಲಿರುವ ಹಿಗ್ಗು ಅಂಗಾಂಶಗಳ ನಷ್ಟದಿಂದಾಗಿ ಕುಸಿಯುತ್ತಾ ಬಂದಿರುತ್ತವೆ. ಹಾಗಾಗಿ, ದೈಹಿಕವಾಗಿ ರೋಗಿ ಪ್ರಭಾವಿತ‌ಗೊಂಡಿರುತ್ತಾ¤ನೆ. ಎದೆಯ ಗೋಡೆಗಳು ಹೆಚ್ಚು ಜಡವಾಗಿರುವುದರ ಜೊತೆಗೆ ಚಟುವಟಿಕೆಗಳಿಂದಾಗಿ ಉಸಿರಾಟದ ವೇಳೆ ಶ್ವಾಸಕೋಶದ ಕೆಲಸದ ಹೊರೆ ಹೆಚ್ಚಿರುತ್ತದೆ.

ಮೂತ್ರಾಂಗ ವ್ಯವಸ್ಥೆ:

ಪ್ರಾಯ ಸಂದಂತೆ, ಮೂತ್ರ ಪಿಂಡಗಳಲ್ಲಿ ಮೂತ್ರಾಂಶವನ್ನು ಬೇರ್ಪಡಿಸುವ, ದೇಹದಲ್ಲಿ ನೀರಿನ ಅಂಶವನ್ನು ಸಂರಕ್ಷಿಸುವ ಸಾಮರ್ಥ್ಯ ಕುಸಿದಿರುತ್ತದೆ. ಹಾಗಾಗಿ, ದೇಹದಲ್ಲಿ ನೀರು ಮತ್ತು ಲವಣಾಂಶಗಳ ಕೊರತೆ ಸುಲಭದಲ್ಲಿ ಎದುರಾಗಬಲ್ಲುದು.

ಪಿತ್ತ ಜನಕಾಂಗ:

ಪ್ರಾಯ ಸಂದಂತೆ, ರಕ್ತದ ಹರಿವಿನ ಪ್ರಮಾಣ ಮತ್ತು ದೇಹಕೋಶಗಳ ಸಾಂದ್ರತೆ ಕುಸಿಯುತ್ತದೆ. ಇದು ಪಿತ್ತ ಜನಕಾಂಗದ ಮೇಲೆ ತ‌ನ್ನ ಪ್ರಭಾವ ಬೀರಿರುತ‌¤ದೆ.

ಇತರ ಬದಲಾವಣೆಗಳು:

ದೇಹದ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತಾ¤ ಬರುವುದು, ಮೆದುಳಿನಲ್ಲಿ ಪಿತ್ತ ಜನಕಾಂಗ ಮತ‌ು¤ ಮೂತ್ರ ಪಿಂಡಗಳಲ್ಲಿ ದೇಹ ವ್ಯಾಪಾರಗಳನ್ನು ನಿರ್ವಹಿಸುವ ಚಟುವಟಿಕೆಗಳ ಭಾಗ ಕ್ಷೀಣಗೊಳ್ಳುವುದು, ದೇಹದಲ್ಲಿ ಕೊಬ್ಬಿನ ಅಂಶ ಏರಿ, ನೀರಿನ ಅಂಶ ಕಡಿಮೆಯಾಗುವುದು, ಸಕ್ಕರೆಯ ಸಹನ ಶೀಲತೆ ದೇಹದಲ್ಲಿ ಕಡಿಮೆಯಾಗುವುದು... ಪ್ರಾಯ ಸಂದಂತೆ ಕಂಡು ಬರುವ ಇತರ ಕೆಲವು ಬದಲಾವಣೆಗಳು.

ಜೊತೆಗಾರರಾಗಿರುವ ರೋಗಗಳು

ಪ್ರಾಯ ಸಂದಂತೆ ಕೆಲವು ರೋಗಗಳೂ ವೃದ್ಧರನ್ನು ಕಾಡುತ್ತಿರುವುದು ಸಾಮಾನ್ಯ. ರಕ್ತದ ಅತಿ ಒತ್ತಡ, ಹೃದಯದ ರಕ್ತನಾಳದ ದೋಷಗಳು, ಹೃದಯದ ರಕ್ತ ಪ್ರೇಶಕ ಚಟುವಟಿಕೆಯಲ್ಲಿ ಅಡ್ಡಿಗಳು, ಒತ‌¤ಡದಿಂದಾಗಿ ಹೃದಯ ವೈಫಲ್ಯ, ಶ್ವಾಸಕೋಶದ ದೀರ್ಘ‌ಕಾಲಿಕ ರೋಗಗಳು, ಮಧುಮೇಹ, ಥೈರಾಯ್ಡ ಗ್ರಂಥಿಯ ಚಟುವಟಿಕೆ ಕುಗ್ಗಿರುವುದು, ಸಂಧಿವಾತ‌, ಮೂಳೆಗಳ ಸಾಂದ್ರತೆ ಕುಸಿದಿರುವುದು... ಅಂತಹ ಕೆಲವು ಸಾಮಾನ್ಯವಾಗಿ ಕಂಡು ಬರುವ ರೋಗಸ್ಥಿತಿಗಳು.

ಮದ್ಯಪಾನ, ಧೂಮಪಾನ, ಬೊಜ್ಜು ಮೊದಲಾದ ವಿಚಾರಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುತ‌¤ವೆ. ಇಂತಹ ರೋಗಿಗಳಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಾದ ಸ್ಥಿತಿ ಒದಗಿದಾಗ, ಸಾವು-ನೋವುಗಳ ಸಾಧ್ಯತೆ ಹೆಚ್ಚು.

ವೃದ್ಧ‌ರಿಗೆ ಅರಿವಳಿಕೆ

60 ವರ್ಷ ದಾಟಿದ ಸ್ತ್ರೀಯರು ಮತ‌ು¤ 65 ವರ್ಷ ದಾಟಿದ ಪುರುಷರು (ಅಂದರೆ ವೃದ್ಧ‌ರು) ಶಸ್ತ್ರಕ್ರಿಯೆಗಳಿಗೆಂದು ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೆಚ್ಚಾಗಿ ಮೂಳೆಗಳಿಗೆ, ರಕ್ತನಾಳಗಳಿಗೆ ಅಥವಾ ಸಾಮಾನ್ಯ ಶಸ್ತ್ರಕ್ರಿಯಾ ಚಿಕಿತ್ಸೆಗಳಿಗಾಗಿ ಅವರು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅವರು ತಮ್ಮ ದುರ್ಬಲ ದೈಹಿಕ ಸ್ಥಿತಿಯಿಂದಾಗಿ ಅಥವಾ ಅಂದಕ್ಕಿಂತ  ಹೆಚ್ಚಿನ ವರ್ಗದಲ್ಲಿ ಪರಿಗಣಿತವಾಗುತ್ತಾರೆ. ತುರ್ತು ಶಸ್ತ್ರಕ್ರಿಯೆಗಳು ನಡೆದಾಗ ಹಠಾತ್‌ ಸಾವಿಗೀಡಾಗುವ ಸಾಧ್ಯತೆಗಳು ಅವರಲ್ಲಿ ಹೆಚ್ಚಿರುತ್ತವೆ.

ಶಸ್ತ್ರಕ್ರಿಯೆಗೆ ತಯಾರಿ

ವೃದ್ಧರಲ್ಲಿ ಶಸ್ತ್ರಕ್ರಿಯೆಯ ಬಗ್ಗೆ ಇರಬಹುದಾದ ಉದ್ವಿಗ್ನತೆಯನ್ನು ಕುಗ್ಗಿಸಿ, ಅವರೊಡನೆ ಆತ್ಮೀಯತೆ ಬೆಳೆಸಿಕೊಳ್ಳುವುದು ವೃದ್ಧ‌ರ ಶಸ್ತ್ರಕ್ರಿಯೆ ತಯಾರಿಯಲ್ಲಿ ಮೊದಲ ಹೆಜ್ಜೆ. ಅವರ ಅಸುರಕ್ಷಿತ ಭಾವನೆಗಳನ್ನು ತೊಡೆದು ಹಾಕುವುದರ ಜೊತೆೆಗೆ, ಈ ಕೆಳಗಿನ ತಯಾರಿಗಳು ಅಗತ್ಯವಿರುತ್ತವೆ.

ಅವರ ಹೃದಯ ರಕ್ತನಾಳಗಳ ಸಾಮರ್ಥ್ಯ ವಿಶ್ಲೇಷಣೆ, ದೇಹದ್ರವದ ಸಾಮರ್ಥ್ಯ ಮತ್ತಿತ‌ರ ರೋಗಗಳ ತಪಾಸಣೆ.

ಅವರ ಶಸ್ತ್ರಕ್ರಿಯಾಪೂರ್ವ ತಪಾಸಣೆೆಗಳಿಗಾಗಿ ಯೋಜನೆಯೊಂದರ ಸಿದ್ಧತೆ.

ಅವರ ದೇಹ ವ್ಯವಸ್ಥೆ-ಔಷಧಿ ಸ್ವೀಕಾರ ವ್ಯವಸ್ಥೆಗಳು ಭಿನ್ನವಾಗಿರುವುದರಿಂದ, ಅವರಿಗೆ ಕೆಲವು ಪೂರ್ವಭಾವಿ ಔಷಧಿಗಳನ್ನು ನೀಡಬೇಕಿರುತ್ತದೆ.

ಅವರಿಗೆ ಅರಿವಳಿಕೆಯ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅದನ್ನವರಿಗೆ ವಿವರಿಸಿ ಹೇಳುವುದು.

ಶಸ್ತ್ರಕ್ರಿಯೋತ್ತರ ನೋವು ಶಾಮಕ ವಿಧಾನಗಳನ್ನು ನಿಗದಿ¬ ಪಡಿಸಿಕೊಳ್ಳುವುದು.

ಅವರ ಶಸ್ತ್ರಕ್ರಿಯೋತ್ತರ ಆರೈಕೆಯ ತೀವ್ರತೆ (ವಾರ್ಡ್‌, ಎಚ್‌ಡಿಯು, ಐಸಿಯು)ಯನ್ನು ನಿರ್ಧರಿಸಿಕೊಳ್ಳುವುದು.

ಸಾಮಾನ್ಯವಾಗಿ ಪ್ರಾಯಸ್ಥರು ಶಸ್ತ್ರಕ್ರಿಯಾ ತಯಾರಿಗಾಗಿ ಭೇಟಿಗಳ ವೇಳೆ ಆಸ್ಪತ್ರೆಯಲ್ಲಿ ಎಳೆಯರಿಗಿಂತ ಹೆಚ್ಚು ಅವಧಿ ಕಳೆಯಬೇಕಾಗುತ‌¤ದೆ. ಅವರಿಗೆ ದೃಷ್ಟಿದೋಷ, ನೆನಪಿನ ಶಕ್ತಿಯ ದೋಷ, ಅರ್ಥೈಸಿಕೊಳ್ಳುವ ಸಾಮರ್ಥ್ಯದ ಕೊರತೆಗಳು ಕೂಡ ಇರುವುದರಿಂದ, ವೈದ್ಯರು ಹೆಚ್ಚಿನ ಜವಾಬ್ದಾರಿ ಹೊಂದಿರಬೇಕಾಗುತ್ತದೆ.

ಅರಿವಳಿಕೆ ತಂತ್ರ

ಶಸ್ತ್ರಕ್ರಿಯೆಗಳ ವೇಳೆ ಅರಿವಳಿಕೆಯ ಉದ್ದೇಶಗಳೆಂದರೆ ದೇಹದಲ್ಲಿ ಆಮ್ಲಜನಕ ಪೂರೈಕೆ ಸಮರ್ಪಕವಾಗಿರುವಂತೆ ನೋಡಿಕೊಳ್ಳುವುದು, ರಕ್ತದೊತ್ತಡದಲ್ಲಿ ಏರುಪೇರುಗಳಾಗದಂತೆ ಎಚ್ಚರ, ದೇಹದ ಉಷ್ಣತೆ ಏರುಪೇರಾಗದಂತೆೆ ಮತ್ತು ರಕ್ತಹೀನತೆಯ ತೊಂದರೆಗಳು ಕಾಣಿಸಿಕೊಳ್ಳದಂತೆ ಎಚ್ಚರ.

ವೃದ್ಧರಲ್ಲಿ ರಕ್ತನಾಳಗಳು ದುರ್ಬಲವಾಗಿರುವುದಲ್ಲದೆ ಕೆಲವೊಮ್ಮೆ ಸೂಕ್ತ ರಕ್ತನಾಳಗಳ ಪತ್ತೆ ಮತ್ತು ಪ್ರವೇಶ ಕೂಡ ಕಠಿನವಾಗಿರುತ್ತದೆ. ವೃದ್ದರ ದೇಹದ ಗಂಟುಗಳು ಪೆಡಸಾಗಿರುತ್ತವೆ ಮತ್ತು ಚರ್ಮ ದುರ್ಬಲವಾಗಿರುವುದರಿಂದ, ಅವರ ಸಾಗಣೆ, ಶಸ್ತ್ರಕ್ರಿಯೆಯ ಮೇಜಿನಲ್ಲಿ ಅವರನ್ನು ಇರಿಸುವ ಕೆಲಸಗಳು ಕೂಡ ಎಚ್ಚರಿಕೆಯಿಂದ ನಡೆಯಬೇಕಿರುತ್ತದೆ. ಅವರ ಹೊರ ಚಾಚಿರುವ ಮೂಳೆಗಳಿಗೆ ಮುನ್ನೆಚ್ಚರಿಕೆಯ ಪ್ಯಾಡಿಂಗ್‌ ಅಗತ್ಯವಿರುತ್ತದೆ. ದೇಹದ ಉಷ್ಣತೆ ಏರುಪೇರಾಗಿರುವ ಸಾಧ್ಯತೆ ಗಳಾಗಿರುವುದರಿಂದ ಅವರಿಗೆ ಬೆಚ್ಚಗಿನ ಹಾಸು-ಹೊದಿಕೆಗಳು ಮತ್ತು ಬೆಚ್ಚಗಿನ ದೇಹದ್ರವಗಳ ಪೂರೈಕೆ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ.

ವೃದ್ಧರಿಗೆ ಆಗಬೇಕಾಗಿರುವ ಶಸ್ತ್ರಕ್ರಿಯೆಯ ವಿಧವನ್ನು ಆಧರಿಸಿ, ಅರಿವಳಿಕೆಯ ವಿಧಾನವನ್ನು ತೀರ್ಮಾನಿಸಲಾಗುತ್ತದೆ. ಜೊತೆಗೆ ರೋಗಿಯ ದೇಹ ಸ್ಥಿತಿ ಆಧರಿಸಿ, ರೋಗಿಯ ಬಯಕೆಗಳಿಗೂ ಅವಕಾಶ ನೀಡಬೇಕಾಗುತ್ತದೆ. ಪ್ರಾದೇಶಿಕ ಅರಿವಳಿಕೆ ತಂತ್ರ ಅಥವಾ ಪ್ರಾದೇಶಿಕ ಅರಿವಳಿಕೆ ತಂತ್ರದ ಜೊತೆ ಪೂರ್ಣ ಅರಿವಳಿಕೆ ನೀಡಿಕೆಯ ತಂತ್ರಗಳ ಮೂಲಕ ಶಸ್ತ್ರಕ್ರಿಯೋತ್ತರ ಬೇನೆ-ಬವಣೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು.

ಪೂರ್ಣ ಅರಿವಳಿಕೆ

ಬೊಚ್ಚುಬಾಯಿಯ ಅಥವಾ ಸೆರ್ವೈಕಲ್‌ ಸ್ಪಾಂಡಿಲೊಸಿಸ್‌ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೃತಕ ಉಸಿರಾಟದ ಮುಖವಾಡ ಮತ‌ು¤ ಉಸಿರಾಟದ ನಳಿಕೆಗಳ ಜೋಡಣೆ ಸ್ವಲ್ಪ ಕಷ್ಟ.

ಅವರಿಗೆ ಗರಿಷ್ಠ ನಿಗಾ ಅಗತ್ಯವಿರುತ್ತದೆ.

ವೃದ್ಧರಿಗೆ ಅರಿವಳಿಕೆ ನೀಡುವ ಮುನ್ನ ದೇಹಕ್ಕೆ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರಬೇಕಾಗುತ್ತದೆ.

ವೃದ್ಧರಿಗೆ ರಕ್ತನಾಳಗಳ ಮೂಲಕ ನೀಡುವ ಔಷಧಿಗಳು ಮತ್ತು ಉಸಿರಿನ ಮೂಲಕ ನೀಡುವ ಮೂಸುದ್ರವ್ಯಗಳ ಡೋಸೇಜ್‌ ಪ್ರಮಾಣ ಬೇರೆಯವರಿಗಿಂತ ಕಡಿಮೆ ಇರಬೇಕಾಗುತ‌¤ದೆ.

ವೃದ್ಧರು ಅಮಲುಕಾರಕ ನೋವು ಶಾಮಕ ಔಷಧಿಗಳಿಗೆ ಬೇರೆಯವರಿಗಿಂತ ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ.

ರೋಗಿಗೆ ಶಸ್ತ್ರಕ್ರಿಯೆಯ ಬಳಿಕ ಚೇತರಿಕೆ ಕೊಠಡಿಯಲ್ಲೂ ಹೆಚ್ಚುವರಿ ಆಮ್ಲಜನಕ ಪೂರೈಕೆ ಅಗತ್ಯವಿರುತ್ತದೆ.

ಸ್ಥಳೀಯ ಅರಿವಳಿಕೆ

ಹೃದಯದ ಹೊರ ಪ್ರೇಷಣಾ ದರವನ್ನು ಖಚಿತ ಪಡಿಸಿಕೊಳ್ಳುವುದು ಮತ್ತು ರಕ್ತ ಹೆಪ್ಪುಗಟ್ಟುವ ತೊಂದರೆಗಳ ಬಗ್ಗೆ ಎಚ್ಚರ ಅಗತ್ಯ.

ವೃದ್ಧರಲ್ಲಿ ಮೂಳೆಗಳ ಸಾಂದ್ರತೆ ಕಡಿಮೆ ಇರುವುದು, ಸಂಧಿವಾತ ಮತ್ತು ಬೆನ್ನು ಹುರಿ ವಕ್ರಗೊಳ್ಳುವ ತೊಂದರೆಗಳಿರುವುದರಿಂದಾಗಿ, ಸ್ಥಳೀಯ ಅರಿವಳಿಕೆ ನೀಡುವುದು ಹೆಚ್ಚು ಕಷ್ಟ.

ವೃದರಲ್ಲಿ ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆಗಳ ಬಗ್ಗೆ, ತೀವ್ರ ನಿಗಾ ಇರಿಸಿ ಚಿಕಿತೆೆÕ ನೀಡಬೇಕಾಗುತ‌¤ದೆ.

ಶಸ್ತ್ರಕ್ರಿಯೋತ್ತರ ಆರೈಕೆ

ದಿನದ 24 ತಾಸೂ ನಿಗಾ ಮತ್ತು ಆಮ್ಲಜನಕ ಸಮರ್ಪಕ ಪೂರೈಕೆ.

ನೋವಿನ ಶಾಮಕಗಳು ಮತ್ತು ದೇಹದ್ರವದ ಪ್ರಮಾಣಗಳ ಬಗ್ಗೆ ನಿಗಾ.

ರೋಗಿಯ ನಿಯಮಿತ ಬೇಟಿ - ಆರೈಕೆ.

ರೋಗಿಗೆ ನ್ಯುಮೋನಿಯಾ ಮತ್ತು ಆಳರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ತೊಂದರೆಗಳನ್ನು ತಡೆಯಲು, ಶೀಘ್ರವಾಗಿ ರೋಗಿ ಸಹಜ ದೈಹಿಕ ಚಲನೆಗಳನ್ನು ಆರಂಭಿಸುವಂತಾಗಬೇಕು.

ದೊಡ್ಡ ಪ್ರಮಾಣದ ಶಸ್ತ್ರಕ್ರಿಯೆ ಅಥವಾ ತೀವ್ರ ರೋಗದಿಂದ ಬಳಲುತ್ತಿರುವ ವೃದ್ಧ ರೋಗಿಗಳಿಗೆ ಶಸ್ತ್ರಕ್ರಿಯೆಯ ಬಳಿಕ ಅತಿ ಅವಲಂಬಿತರ ಆರೈಕೆ ವಾರ್ಡ್‌  ಅಥವಾ ತೀವ್ರ ನಿಗಾ ಘಟಕಗಳಲ್ಲಿ ಆರೈಕೆ ಅಗತ್ಯ ಇರುತ್ತದೆ.

ವೃದ್ಧ ರೋಗಿಗಳು ಎಂದರೆ ಮಕ್ಕಳಂತೆ. ಅವರಿಗೆ ಹೆಚ್ಚುವರಿ ಆರೈಕೆ - ಹೆಚ್ಚುವರಿ ನಿಗಾ ಇದ್ದಾಗ ಮಾತ್ರ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಮತ್ತು ಫಲಪ್ರದವಾಗಿರುತ್ತದೆ.

ಡಾ| ವಿಜಯಾ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌
ಅನಸ್ತೀಶಿಯಾ ವಿಭಾಗ,
ಕೆ.ಎಂ.ಸಿ., ಅತ್ತಾ¤ವರ, ಮಂಗಳೂರು.

Trending videos

Back to Top