CONNECT WITH US  

ಬ್ರಾಂಕಯಲ್‌ ಅಸ್ತಮಾ

ಹಿಂದಿನ ವಾರದಿಂದ  7. ವಾಯು ಮಾಲಿನ್ಯಕ್ಕೂ ಅಸ್ತಮಾಕ್ಕೂ ಏನಾದರೂ ಸಂಬಂಧ ಇದೆಯೇ? 
ಹೌದು. ಒಳಾಂಗಣ , ಹೊರಾಂಗಣ ವಾಯುಮಾಲಿನ್ಯಗಳೆರಡೂ ಅಸ್ತಮಾವನ್ನು ಉಂಟುಮಾಡಬಹುದು ಅಥವಾ ಅಸ್ತಮಾದ ಲಕ್ಷಣಗಳ ತೀವ್ರತೆಗೆ ಕಾರಣವಾಗಬಹುದು. ಧೂಳು, ಹೊಗೆ ಮತ್ತು ಓಝೋನ್‌ನಂತಹ ಅಲರ್ಜಿಕಾರಕಗಳು ಅಸ್ತಮಾ ಆಕ್ರಮಣಕ್ಕೆ ಕಾರಣವಾಗಬಹುದು ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ; ಒಳಾಂಗಣದಲ್ಲಿ ಹೆಚ್ಚಿರುವ ಈ ಅಲರ್ಜಿಕಾರಕಗಳ ಸಾಂದ್ರತೆಯು ಅಸ್ತಮಾ ಆಕ್ರಮಣಕ್ಕೆ ಕಾರಣವಾಗಬಹುದು. ಇತ್ತೀಚೆಗಿನ ದಿನಗಳಲ್ಲಿ ಒಳಾಂಗಣ ವಾಯು ಮಾಲಿನ್ಯ ಮತ್ತು ಅಸ್ತಮಾ ಬಗ್ಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ.  ಒಳಾಂಗಣದಲ್ಲಿ  ವಾಯುಮಾಲಿನ್ಯಕ್ಕೆ ಕಾರಣವಾಗಬಲ್ಲ ಅಂಶಗಳಲ್ಲಿ ಈ ಕೆಳಗಿನವು ಸೇರಿವೆ: 
- ಬೂಸ್ಟು, ಬೂಸರು ಮತ್ತು ಧೂಳಿನಲ್ಲಿರುವ ಸೂಕ್ಷ್ಮಾಣುಗಳು
- ಸಾಕುಪ್ರಾಣಿಗಳ ಮೃತ ಚರ್ಮದ ಧೂಳು
- ಸಾಕುಪ್ರಾಣಿಗಳ ಮಲಮೂತ್ರ, ಕೂದಲುಗಳು ಇತ್ಯಾದಿ
- ನೈಸರ್ಗಿಕ ಗ್ಯಾಸ್‌ ಹೀಟರುಗಳು, ಸ್ಟವ್‌ ಇತ್ಯಾದಿಗಳಿಂದ ಬಿಡುಗಡೆಯಾಗುವ ನೈಟ್ರೋಜನ್‌ ಡಯಾಕ್ಸೆ„ಡ್‌
- ಸುಗಂಧದ್ರವ್ಯಗಳು, ಹೇರ್‌ಸ್ಪ್ರೆà, ಸುಗಂಧಿತ ಮೋಂಬತ್ತಿಗಳು, ಏರ್‌ಫ್ರೆಶ್‌ನರ್‌ ಸ್ಪ್ರೆàಗಳು ಮತ್ತು ಸುಗಂಧಕ್ಕಾಗಿ ಇರಿಸಿರುವ ಒಣಹೂವುಗಳು ಇತ್ಯಾದಿ.
- ಕ್ಲೀನಿಂಗ್‌ ಸ್ಪ್ರೆàಗಳು ಮತ್ತು ಸೋಂಕು ನಿಯಂತ್ರಕ ಸ್ಪ್ರೆàಗಳು
- ಅಗ್ಗಿಷ್ಟಿಕೆ, ಸೌದೆ ಒಲೆಗಳು ಅಥವಾ ಸೀಮೆಎಣ್ಣೆ ಸ್ಟವ್‌, ಹೀಟರುಗಳು

8. ಅಸ್ತಮಾ ಮತ್ತು ಬೊಜ್ಜು  ಪರಸ್ಪರ ಸಂಬಂಧ ಹೊಂದಿವೆಯೇ?
ಇವೆರಡರ ನಡುವೆ ಖಚಿತ ಸಂಬಂಧ ಇರುವುದು ಸಾಬೀತಾಗಿಲ್ಲದಿದ್ದರೂ ಬೊಜ್ಜು ರೋಗಿಗಳು ಅಸ್ತಮಾ ಲಕ್ಷಣಗಳ ಆಧಿಕ್ಯ, ಕಡಿಮೆ ನಿಯಂತ್ರಣ ಸಾಮರ್ಥ್ಯ ಹೊಂದಿರುವುದು, ಅಸ್ತಮಾ ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖ ಲಾಗುವ ಸಾಧ್ಯತೆ ಹೆಚ್ಚಿರುವುದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಅವರಿಗೆ ಹೆಚ್ಚು ಪ್ರಮಾಣದ ಔಷಧ ಅಗತ್ಯವಾಗಬಹುದು ಮತ್ತು ಅದರಿಂದಾಗಿ ಪಾರ್ಶ್ವ ಪರಿಣಾಮ ಗಳಿಂದ ಬಳಲುವ ಸಂಭವವೂ ಹೆಚ್ಚು. 

9. ಯಾವಾಗ ಅಸ್ತಮಾ ಬಾಧೆ ಉಂಟಾಗಿದೆ ಎನ್ನಬಹುದು?
ಸಾಮಾನ್ಯ ಅಸ್ತಮಾ ಲಕ್ಷಣಗಳು ಹಠಾತ್ತಾಗಿ ತೀವ್ರತೆಯ ಸ್ಥಿತಿ ತಲುಪಿದಾಗ ಅಸ್ತಮಾ ಬಾಧೆ ಆರಂಭವಾಗಿದೆ ಎನ್ನಬಹುದು. ಅವು ಹೀಗಿವೆ:
- ಗೂರಲು
- ಉಸಿರು ಹಿಡಿದಿಟ್ಟಂತಾಗುವುದು
- ಎದೆ ಬಿಗಿ ಹಿಡಿದ ಅನುಭವ ಉಂಟಾಗುವುದು
- ದಣಿವು
- ರಾತ್ರಿ ಅಥವಾ ಮುಂಜಾನೆ ಕೆಮ್ಮು

10. ವೈದ್ಯರ ಸಹಾಯಯಾವಾಗ ಪಡೆಯಬೇಕು?
ಕೆಳಕಂಡ ಹೇಳಿಕೆಗಳಲ್ಲಿ ಯಾವುದಾದರೂ ಒಂದು ನಿಜವಾಗಿದ್ದರೂ ವೈದ್ಯರನ್ನು ಸಂಪರ್ಕಿಸಬೇಕು:
- ನೀವು ಸಾಮಾನ್ಯವಾಗಿ ಉಸಿರಾಡು ವಷ್ಟು ಗಾಳಿಯನ್ನು ಹೊರಬಿಡು ವುದು ಸಾಧ್ಯವಾಗದೆ ಇದ್ದಾಗ
- ಮೇಲ್ಕಂಡ ಅಸ್ತಮಾ ಲಕ್ಷಣಗಳಿಂದಾಗಿ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ನಿಮಗೆ ರಾತ್ರಿ ಎಚ್ಚರವಾಗುತ್ತಿದ್ದರೆ
- ನಿಮ್ಮ ಅಸ್ತಮಾ ಲಕ್ಷಣಗಳಿಂದ ಪಾರಾಗಲು ನೀವು ಉಪಯೋಗಿ ಸುವ ಇನ್‌ಹೇಲರ್‌ ದೀರ್ಘ‌ಕಾಲ ನಿಮಗೆ ಸರಾಗ ಉಸಿರಾಟಕ್ಕೆ ಸಹಾಯ ಮಾಡದೆ ಇದ್ದರೆ ಅಥವಾ ನೆರವಾಗದೇ ಇದ್ದರೆ ಅಥವಾ ನೀವು ಅದನ್ನು ಮೇಲಿಂದ ಮೇಲೆ ಉಪಯೋಗಿಸಬೇಕಾಗಿ ಬಂದರೆ

ಕೆಳಕಂಡ ಸಂದರ್ಭಗಳಲ್ಲಿ ತುರ್ತು  ಚಿಕಿತ್ಸೆಯನ್ನು ಪಡೆಯಬೇಕು:
- ಅಸ್ತಮಾದಿಂದಾಗಿ ಮಾತನಾಡುವುದು ಕಷ್ಟವಾಗುತ್ತಿದ್ದರೆ
- ಉಸಿರು ಒಳಗೆಳೆದುಕೊಳ್ಳುವಾಗ ಮೂಗಿನ ಹೊರಳೆಗಳು ಅಗಲವಾಗಿ ತೆರೆದುಕೊಳ್ಳುತ್ತಿದ್ದರೆ
- ನೀವು ಉಸಿರು ತೆಗೆದುಕೊಳ್ಳುವಾಗ ನಿಮ್ಮ ಪಕ್ಕೆಲುಬು ಮತ್ತು ಕುತ್ತಿಗೆಯ ಚರ್ಮವನ್ನು ಬಿಗಿಯಾಗಿ ಸೆಳೆದು
ಕೊಳ್ಳುವಂತಾಗುತ್ತಿದೆಯಾದರೆ
- ನಿಮ್ಮ ಹೃದಯಬಡಿತ ಅಥವಾ ನಾಡಿ ಮಿಡಿತ ವೇಗವಾಗಿದ್ದರೆ
- ನಡೆಯುವುದು ಕಷ್ಟ ಎನಿಸಿದರೆ
- ನಿಮ್ಮ ತುಟಿಗಳು ಅಥವಾ ಉಗುರುಗಳು ಬೂದು ಅಥವಾ ನೀಲಿ ಬಣ್ಣಕ್ಕೆ ತಿರುಗಿದ್ದರೆ
- ಅಸ್ತಮಾ ಲಕ್ಷಣ (ಕೆಮ್ಮು ಸಹಿತ)ಗಳಿಂದಾಗಿ ನಿಮಗೆ ನಿದ್ದೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆಯಾದರೆ 
- ಅಸ್ತಮಾದ ಸಾಮಾನ್ಯ ಲಕ್ಷಣಗಳು (ಕೆಮ್ಮು, ಗೂರಲು, ಎದೆ ಬಿಗಿತ ಅಥವಾ ಉಸಿರುಗಟ್ಟುವಿಕೆ) ಹಗಲಿನಲ್ಲಿಯೂ ಮುಂದುವರಿದರೆ
- ಅಸ್ತಮಾದಿಂದಾಗಿ ನಿಮ್ಮ ದೈನಿಕ ಚಟುವಟಿಕೆ (ವೃತ್ತಿ ಅಥವಾ ಮನೆಯ ಕೆಲಸಗಳು)ಗಳನ್ನು ನಡೆಸುವುದು ಅಸಾಧ್ಯವಾದರೆ 

- ಮುಂದಿನ  ವಾರಕ್ಕೆ 

Trending videos

Back to Top