CONNECT WITH US  

ಜಿಮ್‌ಗೆ ಹೋಗಲು ತೀರ್ಮಾನಿಸಿದ್ದೀರಾ;ಹಾಗಿದ್ರೆ ಕೆಲವು ವಿಚಾರ ಪಾಲಿಸಿ

ನೀವು ಫಿಟೆ°ಸ್‌ ಕಾನ್ಷಿಯಸ್‌ ಆಗಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇದ್ದರೆ ಜಿಮ್‌ಗೆ ಹೋಗುವ ತೀರ್ಮಾನ ತೆಗೆದುಕೊಂಡಿರುತ್ತೀರಾ, ಆದರೆ ಜಿಮ್‌ಗೆ ಹೋಗುವ ಮುನ್ನ ಕಡ್ಡಾಯವಾಗಿ ಕೆಲವೊಂದು ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಕೆಲವರು ಇರುತ್ತಾರೆ ಚೆನ್ನಾಗಿ ತಿನ್ನುವುದು ಮತ್ತೆ ಜಿಮ್‌ ಮಾಡುವುದು. ಪಿಜ್ಜಾ, ಬರ್ಗರ್‌, ಜಂಕ್‌ಫ‌ುಡ್‌, ಕರಿದ ತಿಂಡಿಗಳು ಎಲ್ಲವನ್ನು ಚೆನ್ನಾಗಿ ತಿಂದು ಜಿಮ್‌ನಲ್ಲಿ ಹೋಗಿ ದಿನದಿನಕ್ಕಿಂಥ ಒಂದು ಅರ್ಧಗಂಟೆ ಜಾಸ್ತಿ ಬೆವರು ಹರಿಸಿದರೆ ಸಾಕು ಅಂದುಕೊಂಡಿರುತ್ತಾರೆ. ಆದರೆ ನೀವು ಹೊಸದಾಗಿ ಜಿಮ್‌ ಮಾಡಲು ಆರಂಭಿಸಿದ್ದರೆ ಈ ವಿಚಾರಗಳನ್ನು ನಿಮ್ಮ ಮನಸಿನಲ್ಲಿ ಇರಿಸಿಕೊಂಡು ಮುಂದುವರೆಯಿರಿ.

ಜಿಮ್‌ಗೆ ಹೋದಾಗ ಅಥವಾ ಮನೆಯಲ್ಲೇ ಟ್ರೆಡ್‌ಮಿಲ್‌ ಮಾಡುವಾಗ ಮೊದಲಿಗೆ ಒಂದು ಹದಿನೈದು ನಿಮಿಷ ನಿಧಾನವಾಗಿ ವಾಕ್‌ ಮಾಡಿ.

ಜಿಮ್‌ಗೆ ಹೋಗುವಾಗ ಹೊಟ್ಟೆ ತುಂಬಾ ತಿಂದು ಹೋಗುವುದು ಒಳ್ಳೆಯದಲ್ಲ. ಹಾಗಂತ ಖಾಲಿಹೊಟ್ಟೆಯಲ್ಲಿ ಜಿಮ್‌ ಮಾಡುವುದು ಕೂಡ ಒಳಿತಲ್ಲ. ಜಿಮ್‌ ಮಾಡಲು ಶಕ್ತಿ ಬೇಕಾಗುವ ಕಾರಣ ಲೈಟಾಗಿ ಏನನ್ನಾದರೂ ತಿನ್ನುವುದು ಒಳ್ಳೆಯದು.

ಜಿಮ್‌ ಮಾಡುವಾಗ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆಸುತ್ತು ಬಂದು ಬೀಳಬಹುದು. ಆ ಕಾರಣಕ್ಕಾಗಿಯೇ ಜಾಸ್ತಿ ನೀರು ಕುಡಿಯಿರಿ.

ಜಿಮ್‌ ಮಾಡುವಾಗ ನಿಮಗೆ ನೀವೇ ಇಷ್ಟ ಬಂದ ಹಾಗೆ ಮಾಡಬೇಡಿ. ಇನ್‌ಸ್ಟ್ರಕ್ಟರ್‌ ಸಹಾಯದಿಂದ ಶುರು ಮಾಡಿದರೆ ಒಳಿತು.
ಜಿಮ್‌ ಶುರು ಮಾಡಿದಾಕ್ಷಣ ನಿಮ್ಮ ತೂಕ ಇಳಿಯುತ್ತಿದೆ, ನೀವು ಅಂದುಕೊಂಡ ಫಿಟೆ°ಸ್‌ ನಿಮಗೆ ದಕ್ಕುತ್ತಿದೆಯಾ ಎಂದು ಪರೀಕ್ಷೆ ಮಾಡಲು ಹೋಗಬೇಡಿ. ಏಕೆಂದರೆ ಆ ಹೊಸ ಬದಲಾವಣೆಗೆ ನಿಮ್ಮ ದೇಹ ಸ್ಪಂದಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಏಕೆಂದರೆ ಫಿಟೆ°ಸ್‌ ಅನ್ನುವುದು ಈಗ ಮಾಡಿ ಫ‌ಲಿತಾಂಶ ಪಡೆದು ನಿಲ್ಲಿಸಿಬಿಡುವುದು ಅಲ್ಲ, ಅದನ್ನು ನಿಮ್ಮ ಜೀವನಶೈಲಿಯೊಳಗೆ ಅಳವಡಿಸಿಕೊಳ್ಳಬೇಕಾಗುತ್ತದೆ.
 


Trending videos

Back to Top