CONNECT WITH US  

ಕರ್ಕಿ:ನುಡುರಾತ್ರಿ ಬಾಗಿಲು ಒಡೆದು,ಬೆದರಿಸಿ ನಗ-ನಗದು ದರೋಡೆ

ಹೊನ್ನಾವರ : ಇಲ್ಲಿನ ಕರ್ಕಿ ರೈಲು ನಿಲ್ದಾಣದ ಬಳಿ 7 ಮಂದಿ ದುಷ್ಕರ್ಮಿಗಳ ತಂಡವೊಂದು ನಸುಕಿನ 2.30 ರ ವೇಳೆಗೆ ಉದ್ಯಮಿಯೊಬ್ಬರ ಮನೆಯ ಬಾಗಿಲು ಒಡೆದು 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ , ನಗದು ಮತ್ತು ಮೊಬೈಲ್‌ಗ‌ಳನ್ನು ದರೋಡೆಗೈದ ಘಟನೆ ಬುಧವಾರ ನಡೆದಿದೆ. 

ರವಿ ರಮಾನಾತ್‌ ರೋಖಡೆ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಮಾರಕಾಯುಧಗಳನ್ನು ತೋರಿಸಿ 61 ಗ್ರಾಂ ಚಿನ್ನಾಭರಣ, 25 ಸಾವಿರ ರೂಪಾಯಿ ನಗದು ಮತ್ತು 2 ಮೊಬೈಲ್‌ಗ‌ಳನ್ನು ದೋಚಿ ಪರಾರಿಯಾಗಿದ್ದಾರೆ.

ಕೃತ್ಯ ನಡೆದ ವೇಳೆ ಮನೆಯಲ್ಲಿ ರಮಾಕಾಂಥ್‌ ಮತ್ತು ಪತ್ನಿ ಇಬ್ಬರೇ ಇದ್ದರು. 

ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Trending videos

Back to Top