CONNECT WITH US  

ಪುಟ್ಟನಮನೆಯಲ್ಲಿ ಅಕ್ಷರ ಹಬ್ಬ

ಶಿರಸಿ: ಐದನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಗರ ಸಮೀಪದ ಪುಟ್ಟನಮನೆ ಅಭಿನವ ಸಭಾಭವನದಲ್ಲಿ ಹಿರಿಯ ಸಾಹಿತಿ ಡಿ.ಪಿ. ಮಂಗರ್ಶಿ ಸರ್ವಾಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಸಂಘಟನೆ, ಸಂಯೋಜನೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುವ ಮೂಲಕ ಗಮನ ಸೆಳೆಯಿತು. ಸ್ಥಳೀಯರು ಮನೆ ಹಬ್ಬದಂತೆ ಪಾಲ್ಗೊಂಡಿದ್ದರು. ಆದರಾತಿಥ್ಯವನ್ನೂ ಅಚ್ಚುಕಟ್ಟಾಗಿ ನಡೆಸಿ ಹಳ್ಳಿ ಸಂಸ್ಕೃತಿ ಮೆರೆದರು.

ಸಮ್ಮೇಳನದಲ್ಲಿ ಪುಸ್ತಕಗಳ ಬಿಡುಗಡೆ, ತಾಲೂಕಿನ ಐತಿಹಾಸಿಕ ಮಹತ್ವದ ಕುರಿತು ಗೋಷ್ಠಿ, 15ಕ್ಕೂ ಹೆಚ್ಚು ಹಿರಿಕಿರಿಯ ಕವಿಗಳು ಪಾಲ್ಗೊಳ್ಳುವ ಕವಿ ಸಮಯ, ಪಂಪ ಕಂಡ ನಿಸರ್ಗ ಕುರಿತು ಗಾಯನ-ವಾಚನ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ಮತ್ತು ಸಂವಾದ, ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ 14 ಮಂದಿಗೆ ಸನ್ಮಾನ ಹೀಗೆ ದಿನವಿಡೀ ಕನ್ನಡ ಪರ ಚಟುವಟಿಕೆಗಳು ನಡೆದವು.

ಬೆಳಗ್ಗೆ ಸಹಾಯಕ ಆಯುಕ್ತ ನಾಗೇಂದ್ರ ಹೊನ್ನಳ್ಳಿ ರಾಷ್ಟ್ರಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ರೋಹಿದಾಸ ನಾಯಕ ಕನ್ನಡ ಧ್ವಜಾರೋಹಣ, ಸಮ್ಮೇಳನ ದ್ವಾರ, ಪುಸ್ತಕ ಮಳಿಗೆ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಶ್ರೀಲಕ್ಷಿ¾àನರಸಿಂಹ ದೇವಸ್ಥಾನದಿಂದ ಮೆರವಣಿಗೆಗೆ ಆರಕ್ಷಕ ಉಪಾಧೀಕ್ಷಕ ಪ್ರಸನ್ನ ದೇಸಾಯಿ ಶುಭ ಕೋರಿದರು. ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತ, ಕನ್ನಡದ ಧ್ವಜ, ಯಕ್ಷಗಾನ ರೂಪದರ್ಶಿಗಳು ಗಮನ ಸೆಳೆದರು. ಗಮ ತುಂಬೆಮನೆ, ರಮೇಶ ವರ್ಗಾಸರ, ನಾಗೇಂದ್ರ ಮುತು¾ರ್ಡು ಅವರ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು.

ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ಹಿರಿಯ ಇತಿಹಾಸಜ್ಞ ಡಾ| ಎ.ಕೆ. ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಕನ್ನಡ ಭಾಷೆಗೆ ಕದಂಬರ ಶಾಸನಗಳ ಕೊಡುಗೆ ವಿಷಯವಾಗಿ ಲಕ್ಷ್ಮೀಶ ಹೆಗಡೆ ಸೋಂದಾ ವಿಷಯ ಮಂಡಿಸಿದರು. ಪ್ರಾಚೀನ ಕನ್ನಡ ಸಾಹಿತ್ಯದ ವೈಶಿಷ್ಟÂಗಳ ಕುರಿತು ಕೆ.ಜಿ. ಭಟ್ಟ ದಮನಬೈಲ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಪ ಕಂಡ ನಿಸರ್ಗ ವಿಷಯದ ಕಾವ್ಯ ಗಾಯನ ಡಾ| ಸುಮನ್‌ ಹೆಗಡೆ ಸಾದರಪಡಿಸಿದರೆ, ಲೇಖಕ ಜಿ.ಎ. ಹೆಗಡೆ ಸೋಂದಾ ವಾಚನ ಮಾಡಿದರು. ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ಮತ್ತು ಸಂವಾದ ಗೋಷ್ಠಿ ಸ್ಕೃ‌Âನಾರಾಯಣ ಹೆಗಡೆ ಮಂಜುಗುಣಿ ಅಧ್ಯಕ್ಷತೆಯಲ್ಲಿ ಜರುಗಿತು. ಮುರಳೀಧರ ಕುಮಂದನ್‌ ಅವಲೋಕನ ಮಾಡಿದರೆ, ಅಶೋಕ ಹಾಸ್ಯಗಾರ, ಕೆ.ಎನ್‌. ಹೊಸ್ಮನಿ, ರಾಜು ಹೆಗಡೆ, ಪಿ.ಬಿ. ಪ್ರಸನ್ನ, ರಾಮು ಕಿಣಿ ಸಂವಾದದಲ್ಲಿ ಪಾಲ್ಗೊಂಡರು.

ಹಿರಿಯ ಕವಿ ಡಾ| ಕೆ.ಬಿ. ಪವಾರ ಅಧ್ಯಕ್ಷತೆಯಲ್ಲಿ ನಡೆದ ಕವಿ ಗೋಷ್ಠಿ ಕೂಡ ಗಮನ ಸೆಳೆಯಿತು. ಆರ್‌.ಎಂ. ಶೇಟ್‌, ಮೋಹನ ಭಟ್ಟ, ಡಿ.ಎಸ್‌. ನಾಯ್ಕ, ಡಿ.ಎಂ. ಭಟ್ಟ, ಗಣೇಶ ಹೊಸ್ಮನೆ, ದೀಪಕ ಶೆಟ್ಟಿ, ನರಸಿಂಹ ಎಸ್‌. ಹೆಗಡೆ, ರವಿ ದುಂಡ್ಲಮನೆ, ವಿನಯ ದಂಟ್ಕಲ್‌, ನಿರ್ಮಲಾ ಹೆಗಡೆ, ಮೇಧಾ ಎಸ್‌. ಹೆಗಡೆ, ರತ್ನಾಕರ ನಾಯ್ಕ, ಮಧುರಾ ಹೆಗಡೆ, ರಾಜಲಕ್ಷಿ¾à ಬೊಮ್ಮನಳ್ಳಿ, ಜಗದೀಶ ಬಾಗೇವಾಡಿ ಮತ್ತಿತರರು ಸ್ವರಚಿತ ಕವನ ವಾಚಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಲೇಖಕ ಜಿ.ಎಸ್‌. ಭಟ್ಟ ಮೈಸೂರು ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಿ.ಪಿ. ಮಂಗರ್ಶಿ ಮತ್ತು ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ| ವಿ.ಎಸ್‌. ಸೋಂದೆ ಇದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪರಮೇಶ್ವರ ಜೋಶಿ ಮೂಲೆಮನೆ, ಕಾಶಿನಾಥ ಮೂಡಿ, ಅರವಿಂದ ಪಟವರ್ಧನ, ಬ್ರಹ್ಮಕುಮಾರಿ ವೀಣಾಜಿ, ವೆಂಕಟರಮಣ ಮಾದೇವ ಭಟ್ಟ ವರ್ಗಾಸರ, ಡಾ| ಸುಬ್ರಹ್ಮಣ್ಯ ಶಾಸ್ತ್ರಿ ಬಿಸಲಕೊಪ್ಪ, ಪ್ರಭಾಕರ ಜೋಗಳೇಕರ, ಪಾರ್ವತಿ ಭಟ್ಟ ನೀರೊRàಣೆಮನೆ, ಗಣಪತಿ ತಲಗುಂದ ರಾಮಾಪುರ, ಎಸ್‌.ಪಿ. ಶೆಟ್ಟಿ, ವಿಶ್ವನಾಥ ವೆಂ. ಹೆಗಡೆ, ಗಣಪತಿ ಆರ್‌. ಹೆಗಡೆ, ತುಂಗಾ ಹೆಗಡೆ ತಡಗುಣಿ, ಶಾಂತಾರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಕೆ. ಮಹೇಶ ನಿರ್ಣಯ ಮಂಡಿಸಿದರು. ನಂತರ ಸಂಜೆ ವರ್ಗಾಸರ ಮಹಿಳಾ ಮಂಡಳದ ಕಲಾವಿದೆಯರಿಂದ ಯಕ್ಷಗಾನ ತಾಳಮದ್ದಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
 

Trending videos

Back to Top