CONNECT WITH US  

ಅಡಿಕೆಯ ಮೌಲ್ಯವರ್ಧನೆ ಮತ್ತು ಸೊಳ್ಳೆ ವಿಕರ್ಷಕ ಬತ್ತಿ

ಧರ್ಮಸ್ಥಳ ಹತ್ತಿರದ ಉಜಿರೆಯಿಂದ ಮುಂದಕ್ಕೆ ಚಾರ್ಮಾಡಿ ದಿಕ್ಕಿಗೆ ವಾಹನದಲ್ಲಿ ಹತ್ತು ನಿಮಿಷ ಸಾಗಿದರೆ ಸಿಗುವ ಊರು ಮುಂಡಾಜೆ. ಅಲ್ಲಿ, ಬಸ್‌ನಿಲ್ದಾಣದ ಪಕ್ಕದಲ್ಲಿದೆ ಭಿಡೆ ರಸ್ತೆ. ಅದಕ್ಕೆ ತಿರುಗಿದಾಗ ಎಡಬದಿಯಲ್ಲಿ ಸಿಗುವ ಕಟ್ಟಡದಲ್ಲಿ ಕಾಣಿಸುತ್ತದೆ ದೋಸ್ತಿ ಸುಪಾರಿ, ಮುಂಡಾಜೆ ಎಂಬ ಬರಹ.

ಆ ಕಟ್ಟಡದೊಳಕ್ಕೆ ಪುತ್ತೂರಿನ ಸಮೃದ್ಧಿ ಗಿಡಗೆಳೆತನ ಬಳಗದ ಸದಸ್ಯರು ಹೋದಾಗ ಎದುರಾದವರು ದಯಾನಂದ ಪಟವರ್ಧನ್‌. ಬಿಳಿ ಷರಟು, ಪಂಚೆ ಧರಿಸಿದ್ದ ಸರಳ ವ್ಯಕ್ತಿ.

ಅಡಿಕೆ ಬೆಳೆಗಾರರಾದ ನೀವು ಸುಪಾರಿ ವ್ಯಾಪಾರಕ್ಕೆ ಇಳಿಯಲು ಕಾರಣವೇನು? ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ ಸುಲಿದ ಅಡಿಕೆ ತೋರಿಸಿ, ಅವರು ಕೇಳಿದ್ದು ಇನ್ನೊಂದು ಪ್ರಶ್ನೆಯನ್ನು, ನೋಡಿ, ಇದು ಸಿಪ್ಪೆ ತೆಗೆದ ಅಡಿಕೆ, ಇದು ಪಟೋರ. ಇವೆರಡರಲ್ಲಿ ವ್ಯತ್ಯಾಸ ಏನಿದೆ? ನಮ್ಮÇÉೊಬ್ಬರು, ಅಡಿಕೆಯಲ್ಲಿ ಯಾವುದೇ ಸೀಳು ಇರೋದಿಲ್ಲ.

ಪಟೋರದಲ್ಲಿ ಸೀಳು ಇರುತ್ತದೆ. ಆಗ ಪಟವರ್ಧನರ ಪ್ರತಿಕ್ರಿಯೆ, ಸರಿಯಾಗಿ ಹೇಳಿದ್ದೀರಿ. ಇದೇ ಕಾರಣ ಹೇಳಿ, ಅಡಿಕೆ ಬೆಳೆಗಾರರಿಗೆ ವ್ಯಾಪಾರಿಗಳು ಎಷ್ಟು ಮೋಸ ಮಾಡ್ತಾರೆ, ಗೊತ್ತಾ? ಹಳೆಅಡಿಕೆಗೆ ಕಿಲೋಕ್ಕೆ 300 ರೂಪಾಯಿ ರೇಟ್‌. ಆದರೆ ಪಟೋರಕ್ಕೆ ಕಿಲೋಕ್ಕೆ 200 ರೂಪಾಯಿ ರೇಟ್‌. ಒಂದು ಕಿಲೋದ ರೇಟಿನಲ್ಲಿ ನೂರು ರೂಪಾಯಿ ವ್ಯತ್ಯಾಸ ಅಂದರೆ ಕ್ವಿಂಟಾಲಿಗೆ 10,000 ರೂಪಾಯಿ ವ್ಯತ್ಯಾಸ! ಕೊನೆಗೆ ಎಲ್ಲವನ್ನೂ ಬೆರಕೆ ಮಾಡಿ ಮಾರುತ್ತಾರೆ. ಅಡಿಕೆ ಇರಲಿ, ಪಟೋರ ಇರಲಿ, ಪುಡಿ ಮಾಡಿದ ನಂತರ ಎಲ್ಲ ಒಂದೇ ರೀತಿ ಕಾಣುತ್ತದೆ. ನನ್ನ ಕೈಯಲ್ಲಿದೆ ನೋಡಿ, ಸುಪಾರಿ ಪುಡಿ. ಇದರಲ್ಲಿ ಯಾವ್ಯಾವ ಅಡಿಕೆ ಇದೆ ಅಂತ ಯಾರಿಗೂ ಹೇಳಲಿಕ್ಕೆ ಸಾಧ್ಯವಿಲ್ಲ. ಗುಜರಾತಿನಲ್ಲಿ ಈ ಸುಪಾರಿ ಪುಡಿಯನ್ನೇ ಕಿಲೋಕ್ಕೆ 1,200 ರೂಪಾಯಿಗೆ ಮಾರ್ತಾರೆ. ಆದರೆ ಅಡಿಕೆ ಬೆಳೆಸಿದವನಿಗೆ ಸಿಗೋದು ಕಿಲೋಕ್ಕೆ 250  270 ರೂಪಾಯಿ ಮಾತ್ರ. ಈ ಕೆಲವೇ ಮಾತುಗಳಲ್ಲಿ ಇಡೀ ಅಡಿಕೆ ಮಾರುಕಟ್ಟೆಯಲ್ಲಿ ಬೆಳೆಗಾರನ ಶೋಷಣೆ ಹೇಗಾಗುತ್ತದೆಂದು ಅವರು ತೆರೆದಿಟ್ಟಿದ್ದರು.

ಅದಕ್ಕಾಗಿ ನಾನೇ ಸುಪಾರಿ ಮಾಡಿ ಮಾರಲು ಶುರು ಮಾಡಿದೆ. 250 ಗ್ರಾಮ… ಪ್ಯಾಕೆಟನ್ನು 280ರಿಂದ 300 ರೂಪಾಯಿಗೆ ಮಾರುತ್ತಿದ್ದೇನೆ ಎಂದು ಮೊದಲ ಪ್ರಶ್ನೆಗೆ ಉತ್ತರ ನೀಡಿದರು ಅವರು.  ಅಡಿಕೆ ಸುಪಾರಿ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸಿರುವ ದಯಾನಂದ ಪಟವರ್ಧನರ ಈಗಿನ ಆಸಕ್ತಿ, ಅಡಿಕೆಯ ಮೌಲ್ಯವರ್ಧನೆ. ಅಡಿಕೆಯಿಂದ ತಯಾರಿಸಿದ ಸೊಳ್ಳೆ ವಿಕರ್ಷಕ ಬತ್ತಿಯ ತಯಾರಿ ಮತ್ತು ಮಾರಾಟಕ್ಕೆ ಹೆಚ್ಚಿನ ಗಮನ. ಅದು ಅಡಿಕೆಯ ಸಾರ, ದನದ ಸೆಗಣಿ ಮತ್ತು ದನದ ಮೂತ್ರದಿಂದ ತಯಾರಿಸಿದ ಸೊಳ್ಳೆಬತ್ತಿ. ಅವೆಲ್ಲ ಅಂಟಿಕೊಳ್ಳಲಿಕ್ಕಾಗಿ ಸ್ವಲ್ಪ ಮೆಂತೆಯನ್ನೂ ಸೇರಿಸುತ್ತಾರೆ.

ಮೊಸ್‌-ಕ್ವಿಟ… ಎಂಬ ಹೆಸರಿನಲ್ಲಿ ಪಟವರ್ಧನರ ಸಾವಯವ ಸೊಳ್ಳೆ ವಿಕರ್ಷಕದ ಮಾರಾಟ. ಹತ್ತು ಸೊಳ್ಳೆಬತ್ತಿಗಳ ಒಂದು ಪ್ಯಾಕೆಟಿನ ಬೆಲೆ ರೂ.30. ಈ ಸೊಳ್ಳೆಬತ್ತಿಯನ್ನು ನೇರವಾಗಿ ನಿಲ್ಲಿಸಲಿಕ್ಕಾಗಿ ಅರ್ಧ ಇಂಚು ಎತ್ತರದ ಪುಟ್ಟ ಪೀಠವೂ ಪ್ಯಾಕೆಟಿನಲ್ಲಿದೆ. ಪ್ರತಿಯೊಂದು ಸೊಳ್ಳೆಬತ್ತಿ ಉರಿಯುವ ಅವಧಿ ಎರಡು ತಾಸು. ಅದರಿಂದ ಹೊಮ್ಮುವ ಸೊಳ್ಳೆ ವಿಕರ್ಷಕ ಹೊಗೆಯ ಘಾಟು ಆರು ತಾಸು ಉಳಿದಿರುತ್ತದೆ. ಹಾಗಾಗಿ ಎಂಟು ತಾಸುಗಳ ಅವಧಿಗೆ ಅಂದರೆ ಇಡೀ ರಾತ್ರಿಗೆ ಒಂದು ಕೋಣೆಗೆ ಒಂದು ಸೊಳ್ಳೆಬತ್ತಿ ಉರಿಸಿಟ್ಟರೆ ಸಾಕು.

ನಾವು ಅಲ್ಲಿಂದ ಹೊರಡುವಾಗ ಯಾರೋ ಕೇಳಿದರು, ಪಟವರ್ಧನರೇ, ಇವೆಲ್ಲ ತಾಪತ್ರಯ ಯಾಕೆ? ಗುಜರಾತಿನ ವ್ಯಾಪಾರಿಗಳಂತೆ ನೀವೂ ರುಚಿಯಾದ ಸುಪಾರಿ ಮಾಡಿ ಮಾರಬಹುದಲ್ಲವೇ? ಆ ವ್ಯವಹಾರದಲ್ಲಿ ಭಾರೀ ಲಾಭ ಇದೆಯÇÉಾ? ತಕ್ಷಣ ಪಟವರ್ಧನರ ಉತ್ತರಧಿ- ಅಂತಹ ಸುಪಾರಿ ಮಾಡುವುದು ಹೇಗೆ ಅನ್ನೋದು ಚೆನ್ನಾಗಿ ಗೊತ್ತಿದೆ. ಆದರೆ ಹಾಗೆ ಮಾಡಬೇಕಾದರೆ ಅಡಿಕೆಗೆ ಕೆಮಿಕಲ… ಸೇರಿಸಲೇ ಬೇಕು. ನಾನು ತಯಾರಿಸಿ ಮಾರುವ ಯಾವುದಕ್ಕೂ ಕೆಮಿಕಲ… ಹಾಕುವುದಿಲ್ಲ ಅಂತ ನಾನು ಪ್ರತಿಜ್ಞೆ ಮಾಡಿದ್ದೇನೆ.

ಆಗ ಇನ್ನೊಬ್ಬರು ಸುಮ್ಮನಿರದೆ ಕೇಳಿಯೇ ಬಿಟ್ಟರು, ಪಟವರ್ಧನರೇ, ಗುಟ್ಕಾ ವ್ಯಾಪಾರ ಹೇಗೆ? ನಿಮ್ಮ ಅಭಿಪ್ರಾಯ ಹೇಳಿ. ಕಣ್ಣು ರೆಪ್ಪೆ ಮಿಟುಕಿಸದೆ ಪಟವರ್ಧನರು ಉತ್ತರಿಸಿದರು, ಅಡಿಕೆಯಿಂದ ಗುಟ್ಕಾ ಮಾಡಿ ಮಾರಿದರೆ ಭಾರೀ ಲಾಭ ಬರ್ತದೆ, ಆದರೆ, ಗುಟ್ಕಾ ಚಟಕ್ಕೆ ಬಿದ್ದವನು, ಅವನ ಕುಟುಂಬ ಹಾಳಾಗಿ ಹೋಗ್ತದೆ. ಅದು ಮನೆಹಾಳು ಮಾಡುವ ಕೆಲಸ. ಅಂತಹ ನೀಚ ಕೆಲಸ ಯಾಕೆ ಮಾಡಬೇಕು?

ಆ ಮಾತು ಕೇಳಿದ ನಂತರ ಯಾರಲ್ಲೂ ಪ್ರಶ್ನೆಗಳು ಉಳಿದಿರಲಿಲ್ಲ. ಅಲ್ಲಿ ಒಂದು ನಿಮಿಷ ಮೌನ ನೆಲೆಸಿತ್ತು. ಅನಂತರ ನಾವು ಆ ಮಾತಿನ ಗುಂಗಿನÇÉೇ ದಯಾನಂದ ಪಟವರ್ಧನರನ್ನು ಬೀಳೊYಂಡೆವು. 

- ಅಡ್ಕೂರು ಕೃಷ್ಣ ರಾವ


Trending videos

Back to Top