CONNECT WITH US  

ಅಡಿಕೆ ಕರಿಮೆಣಸು ತೋಟ: ಕೃಷಿ ಲೆಕ್ಕಾಚಾರದ ಪಾಠ

ಕಣ್ಣು ಹಾಯಿಸಿದಲ್ಲೆಲ್ಲಾ ಪೂರ್ತಿ ಕತ್ತೆತ್ತಿ ನೋಡಬೇಕಾದ ಎತ್ತರಕ್ಕೆ ಬೆಳೆದು ನಿಂತಿದ್ದ ಅಡಿಕೆ ಮರಗಳು. ಅವನ್ನು ಅಪ್ಪಿಕೊಂಡು ಪುಷ್ಟಿಯಾಗಿ 20-30 ಅಡಿ ಎತ್ತರಕ್ಕೆ ಏರಿದ ಪಣಿಯೂರ್‌-1 ತಳಿಯ ಕರಿಮೆಣಸಿನ ಬಳ್ಳಿಗಳು. ಅವುಗಳಲ್ಲಿ ನೇತಾಡುತ್ತಿರುವ ಎಳೆಕರಿಮೆಣಸಿನ ಗೊಂಚಲುಗಳು. ಸುಮಾರು 10 ಎಕರೆ ವಿಸ್ತಾರದಲ್ಲಿ ಎಲ್ಲಿ ಕಂಡರೂ ಇದೇ ನೋಟ. ಅದು ದಕ್ಷಿಣ ಕನ್ನಡದ ಬಲ್ಯ ಎಂಬಲ್ಲಿ ವಿಶ್ವೇಶ್ವರ ಭಟ್‌ ಎಂಬವರು ಅಡಿಕೆ ಮತ್ತು ಕರಿಮೆಣಸು ಉತ್ಪಾದಿಸುವ ವಿಧಾನ ಕೈಗಾರಿಕಾ ಘಟಕವೊಂದರಲ್ಲಿ ಒಳಸುರಿಗಳ ಕರಾರುವಾಕ್‌ ಲೆಕ್ಕಾಚಾರದಿಂದ ಉತ್ಪನ್ನಗಳನ್ನು ಉತ್ಪಾದಿಸುವಂತೆ. ಅÇÉೇ ಹತ್ತಿರದಲ್ಲಿ 25 ಎಕ್ರೆ ವಿಸ್ತಾರದ ಇಂತಹದೇ ಇನ್ನೊಂದು ತೋಟ. ಅಲ್ಲಿಯೂ ಇದೇ ರೀತಿ ಅಡಿಕೆ  ಕರಿಮೆಣಸು ಉತ್ಪಾದನೆ.

ತಮ್ಮ ತಂದೆ ಕೃಷ್ಣ ಭಟ್‌ ಅವರು ಎಬ್ಬಿಸಿದ ಅಡಿಕೆ ತೋಟವನ್ನು ವಿಸ್ತರಿಸುತ್ತಾ ಸಾಗಿ¨ªಾರೆ ವಿಶ್ವೇಶ್ವರ ಭಟ್‌. ಆ ತೋಟದ ಗೇಟು ದಾಟಿದಾಗ ಎಡ-ಬಲಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ನಿಂತಿರುವ ಗೇರುಸಸಿಗಳು. ಎಡಭಾಗದ ಗುಡ್ಡದಲ್ಲಿ ಸುಮಾರು 30 ಅಡಿ ಎತ್ತರಕ್ಕೆ ಬೆಳೆದಿರುವ ರಬ್ಬರ್‌ ಮರಗಳು. ಅಡಿಕೆ ತೋಟದಲ್ಲಿ ಪ್ರತಿ ಎಕರೆಯಲ್ಲಿ ಸುಮಾರು 500 ಅಡಿಕೆ ಮರಗಳಿವೆ; ಅವುಗಳಲ್ಲಿ 100 ಹತ್ತುವ ಅಡಿಕೆ ಮರಗಳ ಹೊರತಾಗಿ, ಉಳಿದ 400 ಅಡಿಕೆ ಮರಗಳ ಬುಡದಲ್ಲಿ ಕರಿಮೆಣಸಿನ ಕಸಿಕಟ್ಟಿದ ಬಳ್ಳಿಗಳನ್ನು ಬೆಳೆಸಿ¨ªಾರೆ. (ಒಂದು ಅಡಿಕೆ ಮರಕ್ಕೆ ಕೊನೆಗಾರ ಹತ್ತಿ ಅದರಿಂದ ಸುತ್ತಲಿನ 9  10 ಅಡಿಕೆ ಮರಗಳಿಗೆ ಹಾರುತ್ತಾನೆ  ಆ ಮರವೇ ಹತ್ತುವ ಮರ.)

ಅಲ್ಲಿ ಕರಿಮೆಣಸಿನ ಬಳ್ಳಿಗಳು ದಷ್ಟಪುಷ್ಟವಾಗಿ ಬೆಳೆದು, ಗೊಂಚಲುಗೊಂಚಲು ಕರಿಮೆಣಸು ಬಿಡಲು ಸಾಧ್ಯವಾದದ್ದು ಹೇಗೆ? ನಮ್ಮ ಜೊತೆಗೆ ಬಂದಿದ್ದ ನಿವೃತ್ತ ಕೃಷಿವಿಜ್ಞಾನಿ ಯದುಕುಮಾರ್‌ ವಿವರಿಸಿದ್ದು ಹೀಗೆ: ಇವೆಲ್ಲ ಹಿಪ್ಪಲಿ ಗಿಡಕ್ಕೆ ಕಸಿಕಟ್ಟಿದ ಕರಿಮೆಣಸಿನ ಬಳ್ಳಿಗಳು. ಮೊದಲ ಎರಡು ವರುಷಗಳಲ್ಲಿ ಬಳ್ಳಿಯ ಬುಡದಲ್ಲಿರುವ ಹಿಪ್ಪಲಿ ಗಿಡದಿಂದ ಟಿಸಿಲೊಡೆದು ಬೆಳೆಯುವ ರೆಂಬೆಗಳನ್ನು ಚೂರಿಯಿಂದ ಕತ್ತರಿಸುತ್ತಾ ಇರಬೇಕು; ಚಿವುಟಿ ತೆಗೆದು ಹಿಪ್ಪಲಿ ಬುಡಕ್ಕೆ ಗಾಯ ಮಾಡಬಾರದು. ಎರಡು ವರುಷ ವಯಸ್ಸಾದ ಕರಿಮೆಣಸಿನ ಬಳ್ಳಿಗಳು 15 ಅಡಿ ಎತ್ತರಕ್ಕೆ ಬೆಳೆದಾಗ, ಬುಡದ ಹಿಪ್ಪಲಿ ಗಿಡದಿಂದ ಟಿಸಿಲೊಡೆದ 2-3 ರೆಂಬೆಗಳಿಗೆ ಕರಿಮೆಣಸಿನ ಬಳ್ಳಿಯ ಕಸಿಕಟ್ಟಿ, ಇವನ್ನೂ ಅದೇ ಅಡಿಕೆ ಮರಕ್ಕೆ ಹಬ್ಬಿಸಬೇಕು. ಇದರಿಂದಾಗಿ, ಅಡಿಕೆಮರದ ಕಾಂಡವನ್ನು ಕರಿಮೆಣಸಿನ ಬಳ್ಳಿ ಆವರಿಸಿಕೊಂಡು ಬೆಳೆಯುತ್ತದೆ.

ಅವರ ತೋಟದ ವಿಶೇಷ: ತಲಾ 26 ಅಡಿ ಎತ್ತರದ 110 ಕಾಂಕ್ರೀಟ್‌ ಕಂಬಗಳ ಆಧಾರದಲ್ಲಿ ಕರಿಮೆಣಸಿನ ಬಳ್ಳಿಗಳ ಕೃಷಿ. ತೋಟದ ಮನೆಯ ಪಕ್ಕದÇÉೇ 60 ಕಾಂಕ್ರೀಟ್‌ ಕಂಬಗಳು. ಅವುಗಳನ್ನು ತಬ್ಬಿಕೊಂಡು 15-20 ಅಡಿ ಎತ್ತರಕ್ಕೆ ಬೆಳೆದಿರುವ ಕರಿಮೆಣಸಿನ ಬಳ್ಳಿಗಳು. ಈ ಬಳ್ಳಿಗಳ ಮೇಲೆ ಚಾವಣಿಯಂತೆ ಅಗ್ರೋ ನೆಟ್‌ ಹಾಸಿ¨ªಾರೆ  ಬಿಸಿಲಿನ ಝಳ ಕಡಿಮೆ ಮಾಡಲಿಕ್ಕಾಗಿ. ಅದಿಲ್ಲದಿದ್ದರೆ ಬಳ್ಳಿಗಳು ಸುಟ್ಟುಹೋಗುತ್ತವೆ ಎಂಬುದು ಅವರ ಅನುಭವ.

ಅವೆಲ್ಲ ಬಿಸಿರೋಡಿನ ವಿದ್ಯುತ್‌ ತಂತಿ ಕಂಬಗಳ ಉತ್ಪಾದನಾ ಘಟಕದಿಂದ ಖರೀದಿಸಿದ ಕಂಬಗಳು (ಅವು ರಿಜೆಕ್ಟ್ ಕಂಬಗಳು  ಅಂದರೆ ತುದಿ ತುಂಡಾಗಿರುವ ಕಂಬಗಳು). ಪ್ರತಿ ಕಂಬದ ಖರೀದಿ ಬೆಲೆ ರೂ.2,000. ಅವನ್ನು ಉದ್ದದ್ದ ಲಾರಿಯಲ್ಲಿ ತೋಟಕ್ಕೆ ತರಿಸಲು ಸಾಗಾಟ ವೆಚ್ಚ. ಅನಂತರ, ಟ್ರ್ಯಾಕ್ಟರಿನಲ್ಲಿ ಬೇಕಾದಲ್ಲಿಗೆ ಒಯ್ದು, ಕ್ರೇನಿನಿಂದ ಎತ್ತಿ ನಿಲ್ಲಿಸುವ ಯಂತ್ರ ವೆಚ್ಚ. ಅಂತಿಮವಾಗಿ, ಪ್ರತಿಯೊಂದು ಕಂಬವನ್ನು ಇವರು ತೊಡಿಸಿದ ಹೊಂಡದಲ್ಲಿ ಊರಲು ತಲಾ ರೂ.3,000 ವೆಚ್ಚ. ತೋಟಕ್ಕೆ ಏನು ಗೊಬ್ಬರ ಹಾಕುತ್ತೀರಿ? ಎಂಬ ಪ್ರಶ್ನೆಗೆ ವಿಶ್ವೇಶ್ವರ ಭಟ್‌ ಅವರ ಉತ್ತರ: ಪ್ರತಿ ಅಡಿಕೆ ಮರದ ಬುಡಕ್ಕೆ ಮಳೆಗಾಲದ ಕೊನೆಯಲ್ಲಿ ಒಂದು ಚಟ್ಟಿ (2 ಕಿಲೋ) ಕುರಿಗೊಬ್ಬರ ಮತ್ತು ಎರಡು ಕಿಲೋ ಹರಳು ಹಿಂಡಿ ಹಾಕುತ್ತೇನೆ. ಹರಳುಹಿಂಡಿಯನ್ನು ಕರಿಮೆಣಸಿನ ಬಳ್ಳಿಯ ಬುಡಕ್ಕೆ ಹಾಕಬಾರದು; ಬುಡದಿಂದ ಒಂದಡಿ ದೂರದಲ್ಲಿ ಹಾಕಿ ಅಡಿಕೆ ಮರದ ಬುಡದಲ್ಲಿ ಹರಡಬೇಕು. ಅಡಿಕೆಮರಕ್ಕೆ ಪೊಟ್ಯಾಷ್‌ ರಾಸಾಯನಿಕ ಗೊಬ್ಬರ ಕೂಡ ಹಾಕುತ್ತೇನೆ. 

ಅಡಿಕೆ ಮರಗಳ ಕೊಳೆರೋಗ ಹತೋಟಿಗೆ ಏನು ಮಾಡುತ್ತೀರಿ? ಎಂದು ಕೇಳಿದಾಗ ಅವರ ಪ್ರತಿಕ್ರಿಯೆ: ಮಳೆಗಾಲ ಆರಂಭವಾಗುವ ಮುಂಚೆ ಬಯೋಫೈಟ್‌ ಪ್ರಯೋಗಿಸುತ್ತೇನೆ. ಅನಂತರ ಒಂದೆರಡು ಸಲ ಬೋಡೋì ದ್ರಾವಣ ಸಿಂಪಡಿಸ ಬೇಕಾಗುತ್ತದೆ. ಅಡಿಕೆ ಮರಗಳಿಗೆ ಹಾಗೂ ಕರಿಮೆಣಿಸಿನ ಬಳ್ಳಿಗಳಿಗೆ ಪ್ರತ್ಯೇಕ ಪ್ರಮಾಣದಲ್ಲಿ ಪ್ರಯೋಗಿಸಬೇಕು. ಬೇಸಿಗೆಯಲ್ಲಿ ಅಡಿಕೆಮರದ ಸಿಂಗಾರ (ಹೂಗೊಂಚಲು)ಗಳಿಗೆ 2-3 ಪೀಡೆನಾಶಕಗಳ ಸಿಂಪಡಣೆ ಅವರಲ್ಲಿ ಕಡ್ಡಾಯ. ನಿಮ್ಮಲ್ಲಿ ಕರಿಮೆಣಸಿಗೆ ಸೊರಗುರೋಗ ಬಾಧೆ ಇದೆಯೇ? ಎಂದು ಪ್ರಶ್ನಿಸಿದಾಗ ಅವರ ನೇರಾನೇರ ಉತ್ತರ: ಈ ವರೆಗೆ ಇಲ್ಲ. ಅದು ಬಾರದಂತೆ ಪೀಡೆನಾಶಕಗಳನ್ನು ಸಿಂಪಡಿಸುತ್ತೇನೆ. ಉತ್ತಮ ಇಳುವರಿ ಪಡೆಯಬೇಕಾದರೆ ರಾಸಾಯನಿಕ ಪೀಡೆನಾಶಕಗಳ ಬಳಕೆ ಅಗತ್ಯ ಎಂಬುದವರ ಸಮರ್ಥನೆ.

ಇಂತಹ ವಿಸ್ತಾರವಾದ ತೋಟ ನಿಭಾಯಿಸಲು ಕೆಲಸಗಾರರ ಕೊರತೆ ಎದುರಾಗಿಲ್ಲವೇ? ಎಂದು ಕೇಳಿದಾಗ ಅವರ ಉತ್ತರ ಇಲ್ಲ. ವಾಸಕ್ಕೆ ಮನೆ ಒದಗಿಸಿದರೆ, ಕೆಲಸಗಾರರು ಕೆಲಸ ಕೇಳಿಕೊಂಡು ಬರುತ್ತಾರೆ. ವಿಶ್ವೇಶ್ವರ ಭಟ್‌ ಅವರ ಈ ತೋಟಕ್ಕೆ ಹಾದಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆ¨ªಾರಿಯಲ್ಲಿನ ಉಪ್ಪಿನಂಗಡಿಯಿಂದ ಮುಂದೆ ಸಾಗಿ, ಬಲಕ್ಕೆ ಕಡಬ ರಸ್ತೆಗೆ ತಿರುಗಿ, ಕೊಯಿಲ ದಾಟಿ, ಬಲ್ಯ ದೇವಸ್ಥಾನ ತಲಪಬೇಕು. ಅಲ್ಲಿ ಎಡಕ್ಕೆ ತಿರುಗಿ, ಅರ್ಧ ಕಿಮೀ ಕ್ರಮಿಸಿದರೆ ಈ ತೋಟದ ಪ್ರವೇಶದ್ವಾರ ಕಾಣಿಸುತ್ತದೆ. ಸಮೃದ್ಧಿ ಗಿಡ ಗೆಳೆತನ ಬಳಗದ 53 ಸದಸ್ಯರೊಂದಿಗೆ 25 ಅಕ್ಟೋಬರ್‌ 2016ರಂದು ಈ ತೋಟ ಸುತ್ತಾಡಿದ ಬಳಿಕ, ವಿಸ್ತಾರವಾದ ಅಡಿಕೆ ತೋಟವೊಂದನ್ನು ಕೈಗಾರಿಕಾ ಘಟಕದಂತೆ ನಿರ್ವಹಿಸಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿ ಉಳಿದಿಲ್ಲ.

-ಅಡ್ಕೂರು ಕೃಷ್ಣ ರಾವ್ 


Trending videos

Back to Top