CONNECT WITH US  

ಮಳೆ ಕಾಲಕ್ಕೆ ಬೇಸಿಗೆಯಲ್ಲಿ ನಿರ್ವಹಣೆ

ಮಳೆಗಾಲಕ್ಕೆ ಮೊದಲೇ ಬಿಸಿಲು ಮಳೆ ಒಂದೆರಡು ಬಾರಿ ಹೊಡೆದಾಗ ನಮಗೆ ಕಾಡುವುದು ಮನೆಯ ನಿರ್ವಹಣೆಯಲ್ಲಿನ ದೋಷ ಹಾಗೂ ವಿನ್ಯಾಸ ಮಾಡುವಾಗ ಉಂಟಾದ ನ್ಯೂನತೆಯಿಂದಾಗಿ ಆಗಾಗ ಬೇಡುವ ರಿಪೇರಿಗಳು. ಮಳೆಬಿಸಿಲಿಗೆ ಕಾರ್ಗಲ್ಲೇ ಕರಗಿ ಕಾಲಾಂತರದಲ್ಲಿ ಮಣ್ಣಾಗುವುದು ಇದ್ದರೂ, ನಾವು ಕಟ್ಟುವ ಮನೆ ಕಡೇಪಕ್ಷ ಹಲವಾರು ತಲೆಮಾರುಗಳು ಗಟ್ಟಿಮುಟ್ಟಾಗಿ ಇರಲಿ ಎಂದು ಆಶಿಸುತ್ತೇವೆ ಎಂಬುದಂತೂ ನಿಜ. ಹಾಗಾಗಿ ಮನೆ ಕಟ್ಟುವಾಗ ಹಾಗೂ ನಂತರ ಕೆಲ ಸಂಗತಿಗಳ ಬಗ್ಗೆ ಎಚ್ಚರ ವಹಿಸಿದರೆ, ಹೆಚ್ಚಿನ ನಿರ್ವಹಣೆ ಇಲ್ಲದೆ ನಾವು ಆರಾಮವಾಗಿ ಇರಬಹುದು!

ವಿನ್ಯಾಸದ ಮೂಲಕ ಮಳೆ ನಿರೋಧಕ ಗುಣ
ವರ್ಷದ ಬಹುಪಾಲು ಮಳೆ ಅಬ್ಬಬ್ಬ ಅಂದರೆ ಅರ್ಧಗಂಟೆ ಸುರಿದು ನಿಂತುಬಿಡುತ್ತದೆ. ಆದರೆ ಈ ಮಾದರಿಯ ಮಳೆ ಬಿಸಿಲಿನಿಂದಾಗಿ ಗೋಡೆ ಹಾಗೂ ಸೂರು ಬಿಸಿಯೇರಿದ ನಂತರ ದಿಢೀರನೆ ಸುರಿಯುವುದರಿಂದ, ಮನೆಗೆ ಹಾನಿಯಾಗುವುದು ಹೆಚ್ಚು. ಬಿಸಿಯೇರಿದ ಬಹುತೇಕ ವಸ್ತುಗಳ ಮೇಲೆ ತಣ್ಣೀರು ಸುರಿದರೆ, ಸಹಜವಾಗೇ ಬಿರುಕುಬಿಡುವುದು ಇಲ್ಲವೇ ಪುಡಿಯಾಗುವುದೂ  ಉಂಟು. ಅದೇ ರೀತಿಯಲ್ಲಿ, ಮನೆ ಕಟ್ಟಲು ಬಳಸುವ ಬಹುತೇಕ ವಸ್ತುಗಳು, ವರ್ಷವಿಡೀ ಬೀಳುವ ಅಲ್ಪ ಕಾಲದ ಮಳೆಯಿಂದ ಹಾನಿಗೊಳಗಾಗುವುದೇ ಹೆಚ್ಚು. ಹಾಗಾಗಿ ಮಳೆಗೆ ಹೆಚ್ಚು ತೆರೆದುಕೊಂಡಿರುವ ಹಾಗೂ ಬಿಸಿಲು ಹೆಚ್ಚು ಬೀಳುವ ಜಾಗಗಳಲ್ಲಿ ಸುದೃಢವಾದ ವಸ್ತುಗಳನ್ನು ಬಳಸುವುದು ಉತ್ತಮ. ಸಿಮೆಂಟ್‌ ಪ್ಲಾಸ್ಟರ್‌ಗೆ ಹೋಲಿಸಿದರೆ, ಗ್ರಾನೈಟ್‌ ಕಲ್ಲು ಹೆಚ್ಚು ಗಟ್ಟಿಮುಟ್ಟಾಗಿದ್ದು, ನೈಸರ್ಗಿಕ ವೈಪರಿತ್ಯಗಳನ್ನು ಸಲೀಸಾಗಿ ಎದುರಿಸಬಲ್ಲದು. ಈ ಕಾರಣದಿಂದಾಗಿ, ಹೆಚ್ಚು ತೆರೆದುಕೊಂಡಿರುವ ಸ್ಥಳಕ್ಕೆ, ಕಲ್ಲಿನಿಂದ ಕ್ಲಾಡಿಂಗ್‌ ಮಾಡಿಸಬಹುದು.

ಸಿಮೆಂಟ್‌ ಪ್ಲಾಸ್ಟರ್‌ ಬಣ್ಣ ಬಳಿದ ನಂತರ ಸಪೂರಾಗಿ ಕಂಡರೂ, ಅದು ಇಡಿಯಾಗಿ ನೆಲ ಮಟ್ಟದಿಂದ ಸೂರಿನ ಎತ್ತರ ಅಥವಾ ಪ್ಯಾರಪೆಟ್‌ ಮಟ್ಟಕ್ಕೆ ಹಾಗೂ ಮನೆಯ ಉದ್ದಗಲಕ್ಕೆ ಹರಡಿಕೊಂಡಿರುತ್ತದೆ. ಇದರಿಂದ ವಾತಾವರಣದ ವೈಪರಿತ್ಯಗಳು ಹೆಚ್ಚು ಕಾಡುತ್ತವೆ. ಉರಿಬಿಸಿಲಿಗೆ ಹಲವಾರು ಮಿಲಿಮೀಟರ್‌ ಹಿಗ್ಗಿ, ಮಳೆ ಬಿದ್ದು ದಿಢೀರನೆ ಕುಗ್ಗಿದರೆ, ಎಲ್ಲಂದರಲ್ಲಿ ಕೂದಲೆಳೆ ದಪ್ಪದ ಬಿರುಕುಗಳು ಬಿಡುವುದು ಸಹಜ. ಹೀಗಾಗಲು ಮುಖ್ಯ ಕಾರಣ- ಸಿಮೆಂಟ್‌ ಗಾರೆಯನ್ನು ಗೋಡೆಗೆ ಪೂಸಿದಾಗ, ಅದು ಒಂದೇ ರೀತಿಯಲ್ಲಿ ಎಲ್ಲೆಡೆ ಅಂಟಿಕೊಂಡಿರುತ್ತದೆ ಎಂದೇನೂ ಇಲ್ಲ.  ಹಾಗಾಗಿ, ಎಲ್ಲೆಲ್ಲಿ ಸುದೃಢವಾಗಿ ಅಂಟಿರುತ್ತದೋ ಅಲ್ಲೆಲ್ಲ ಹಾಗೆಯೇ ಉಳಿದು, ಇತರೆಡೆ ಬಿರುಕು ಬಿಟ್ಟಿರುತ್ತದೆ. ಈ ರೀತಿಯಾಗಿ ಎಲ್ಲಂದರಲ್ಲಿ ಬಿರುಕು ಬಿಟ್ಟು ನಿರ್ವಹಣೆ ಕಷ್ಟವಾಗುವ ಬದಲು ಪ್ಲಾಸ್ಟರ್‌ ಮಾಡುವಾಗಲೇ ನಾವು ಅಲ್ಲಲ್ಲಿ- ನೋಡಲು ವಿಶೇಷ ವಿನ್ಯಾಸವೇನೋ! ಎಲಿವೇಷನ್‌ಗೆ ಮಾಡಿದ್ದಂತಿದೆ ಎಂಬ ರೀತಿಯಲ್ಲಿ, ಅಲ್ಲಲ್ಲಿ ಅರ್ಧ ಇಂಚು ಅಗಲದ ಗ್ರೂವ್‌ - ಗಾಡಿಗಳನ್ನು ಬಿಡಬೇಕು.

ಈ ರೀತಿಯಾಗಿ ಗಾಡಿಗಳನ್ನು ಪ್ಲಾಸ್ಟರ್‌ನಲ್ಲಿ ಬಿಡುವ ಮೂಲ ಉದ್ಧೇಶ- ಬಿರುಕು ಬಿಡುವುದು ಅನಿವಾರ್ಯ ಆದ ಕಾರಣ- ಅದು ನಮಗೆ ಅನುಕೂಲಕರವಾದ ಸ್ಥಳದಲ್ಲಿ ಕ್ರಾ$Âಕ್‌ ಬಿಡುವಂತೆ ಮಾಡಿದರೆ, ಆಗ ನಾವು ಇಡೀ ಗೋಡೆಯ ನಿರ್ವಹಣೆಯ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ. ವರ್ಷಕ್ಕೊಮ್ಮೆ, ಈ ಗಾಡಿ- ಗ್ರೂವ್‌ಗಳನ್ನು ಪರಿಶೀಲಿಸಿ, ಬಿರುಕು ಬಿಟ್ಟಿದ್ದರೆ, ಇಲ್ಲಿ ಮಾತ್ರ ನೀರು ನಿರೋಧಕ ಬಣ್ಣವನ್ನು ಬಳಿದು, ನೀರು ಒಳನುಸುಳದಂತೆ ಮಾಡಬಹುದು.

ಸೂರ್ಯನ ಕೋನ ಗಮನಿಸಿ
ದಕ್ಷಿಣ ಭಾರತದ ಬಹುಪಾಲು ಭಾಗದಲ್ಲಿ ಬೇಸಿಗೆಯ ಬಿರು ಬಿಸಿಲು. ಸುಮಾರು ಹತ್ತು ಡಿಗ್ರಿಯಷ್ಟು ಮಾತ್ರ ವಾಲಿದ ಕೋನದಲ್ಲಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಬೆಳಗ್ಗೆ ಸುಮಾರು ಹತ್ತರಿಂದ ಮಧ್ಯಾಹ್ನ ಮೂರರವರೆಗೆ ಬೀಳುತ್ತದೆ. ಮನೆಯ ಮೇಲೆ ಪ್ಯಾರಾಪೆಟ್‌ ಮಟ್ಟದಲ್ಲಿ ಸುಮಾರು ಆರರಿಂದ ಒಂಭತ್ತು ಇಂಚಿನಷ್ಟು ಹೊರಚಾಚನ್ನು ಅಲಂಕಾರಿಕವೆಂಬಂತೆ- ಕಾರ್‌ನೀಸ್‌ ಮಾದರಿಯಲ್ಲಿ ನೀಡಿದರೆ, ಉರಿಬಿಸಿಲಿನಿಂದ ಮನೆಯ ಗೋಡೆ ಅತಿಹೆಚ್ಚು ಶಾಖಾಘಾತಕ್ಕೆ ಒಳಗಾಗುವುದು ತಪ್ಪುತ್ತದೆ. ನೀವು ಗಮನಿಸಿರಬಹುದು, ಬಹುತೇಕ ಎಲ್ಲ ಹಳೆಯ ಮನೆ ಹಾಗೂ ಇತರೆ ಕಟ್ಟಡಗಳಲ್ಲಿ ಈ ಮಾದರಿಯ ಕಾನೀìಸ್‌ಗಳನ್ನು ಕಡ್ಡಾಯವೇನೋ ಎಂಬಂತೆ ನೀಡುತ್ತಿದ್ದರು. ಈ ಕಟ್ಟಡಗಳಿಗೆ ಆಗಿನ ಕಾಲದಲ್ಲಿ ಸಿಮೆಂಟ್‌ಗಾರೆಗಿಂತ ಕಡಿಮೆ ಗಟ್ಟಿ ಎಂಬ ಹಣೆಪಟ್ಟಿಯನ್ನು ಅನಗತ್ಯವಾಗಿ ಹೊತ್ತಿರುವ ಸುಣ್ಣದ ಗಾರೆಯಿಂದ ಕಟ್ಟುತ್ತಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಬೇಕು! ಗಾರೆ ಗೋಡೆಗಳಿಗೆ ರಕ್ಷಣೆ ನೀಡುತ್ತಿದ್ದ ಈ ಕಾನೀìಗಳು ಈಗಲೂ ಕೂಡ ನಮ್ಮ ಮನೆಗಳಿಗೆ ಅನೇಕ ರೀತಿಯಲ್ಲಿ ಉಪಯುಕ್ತವಾಗುತ್ತದ್ದಂತೆಯೇ ನೋಡಲು ಚಿತ್ತಾಕರ್ಷಕವಾಗಿಯೂ ಇರಬಲ್ಲವು!

ಪೂರ್ವ ಪಶ್ಚಿಮದ ಬಾಲ್ಕನಿಗೆ ರಕ್ಷಣೆ
ಈ ದಿಕ್ಕುಗಳಲ್ಲಿ ಸೂರ್ಯನ ಕಿರಣಗಳು ತೀರ ಕೆಳ ಕೋನಗಳಿಂದ ಬೀಳುವುದರಿಂದ, ನಾವು ಕಾನೀìಸಿನ ಮೂಲಕ ಹೆಚ್ಚು ರಕ್ಷಣೆ ನೀಡಲು ಆಗುವುದಿಲ್ಲ. ಒಂದು ಮಟ್ಟಕ್ಕೆ ಮನೆಗೆ ರಕ್ಷಣೆ ನೀಡಿದರೂ ನಾವು ಹೆಚ್ಚುವರಿ ಬಿರುಕು ನಿರೋಧಕ ಗುಣ ಪಡೆಯಲು ಹೊರಚಾಚುಗಳಿಗೆ ಮೊರೆ ಹೋಗಬೇಕಾಗುತ್ತದೆ. ಮನೆಯ ವಿನ್ಯಾಸ ಮಾಡುವಾಗ ನಮ್ಮ ಅನುಕೂಲ ನೋಡಿಕೊಂಡು ಸೂಕ್ತ ಜಾಗಗಳಲ್ಲಿ ಹೊರಚಾಚುಗಳನ್ನು ನೀಡಿದರೆ, ಇವು ಗೋಡೆಯಿಂದ ಮೂರು ನಾಲ್ಕು ಅಡಿ ಪೊ›ಜೆಕ್ಟ್ ಆಗುವುದರಿಂದ, ಕೆಳಗಿರುವ ಗೋಡೆಗಳಿಗೆ ಸಾಕಷ್ಟು ರಕ್ಷಣೆಯನ್ನು ನೀಡುತ್ತವೆ! 

ಅಲಂಕಾರಿಕ ಫಿನ್‌ ಹಾಗೂ ಸಜಾjಗಳಿಂದ ರಕ್ಷಣೆ
ಸಾಮಾನ್ಯವಾಗಿ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಸೂರ್ಯನ ಕಿರಣಗಳು ದಿನದ ಮೂರು ತಾಸು ತೀಕ್ಷ್ಣವಾಗಿರುವ ಕಾರಣ, ನಾವು ಈ ಬದಿಯಲ್ಲಿ ಅಡ್ಡಡ್ಡಲಾಗಿ ತೆಳ್ಳನೆಯ ಸಜಾj ಮಾದರಿಯ ವಿನ್ಯಾಸವನ್ನು ಬಿಸಿಲು ತಡೆಯಲು ಬಳಸಬಹುದು. ಹಾಗೆಯೇ ಉತ್ತರ ಹಾಗೂ ದಕ್ಷಿಣದ ಕಡೆ ಉದ್ದಕ್ಕೆ ಅಂದರೆ ಮೇಲಿನಿಂದ ಕೆಳಗೆ- ಸುಮಾರು ಆರು ಇಂಚಿನಷ್ಟು ಹೊರಚಾಚಿದಂತಿರುವ ಫಿನ್‌ಗಳನ್ನು ಬಿಸಿಲು ನಿರೋಧಕಗಳಂತೆ ನೀಡಬಹುದು. ಮೋಟರ್‌ ಬೈಕ್‌ ಇಂಜಿನ್‌ ಅನ್ನು ನೀವು ಗಮನಿಸಿದರೆ, ಅದರ ಸುತ್ತಲೂ ತೆಳ್ಳನೆಯ ಲೋಹದ ಫಿನ್‌ ಗಳನ್ನು ನೀಡಿ, ಇದರ ಮೂಲಕ ಬಿಸಿ ಗಾಳಿಗೆ ಹರಿದುಹೋಗಲು ಹೆಚ್ಚು ಮೇಲ್‌ಮೈಯನ್ನು ಒದಗಿಸಿರುತ್ತಾರೆ. ಇದೇ ರೀತಿಯಲ್ಲಿ, ನಾವು ಮನೆಗೂ ನೀಡಲು, ಬಿಸಿಲುಗಾಲದಲ್ಲಿ ಗೋಡೆಗಳಿಗೆ ರಕ್ಷಣೆ ನೀಡಬಹುದು.

ಮನೆಗಳನ್ನು ಈ ರೀತಿಯಾಗಿ ಫಿನ್‌ಗಳಿಂದ ಅಲಂಕರಿಸಿವ ಇನ್ನೊಂದು ಉದ್ದೇಶ- ಇವು ಬಿರುಬೇಸಿಗೆಯಲ್ಲಿಯೂ ಒಳಾಂಗಣ ತಂಪಾಗಿರಲು ಸಹಾಯಕಾರಿಯಾಗಿರುತ್ತವೆ!

ಹೆಚ್ಚಿನ ಮಾತಿಗೆ : 98441 32826

- ಆರ್ಕಿಟೆಕ್ಟ್ ಕೆ ಜಯರಾಮ್‌

Trending videos

Back to Top