CONNECT WITH US  

ಬೀದಿಗೆ ಬೀಳದಿರಲಿ ನಮ್ಮ ಬಾವುಟ

ಆಗಸ್ಟ್‌ ಬಂತೆಂದರೆ ಎಲ್ಲೆಡೆ ತ್ರಿವರ್ಣ ಧ್ವಜದ ಮಾರಾಟ ಜೋರಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯುತ್ತಿದ್ದಂತೆ ರಸ್ತೆ, ಬೀದಿಗಳಲ್ಲಿ ಪ್ಲಾಸ್ಟಿಕ್‌ ರಾಷ್ಟ್ರಧ್ವಜ, ಪಿನ್‌ಗಳು ಬಿದ್ದಿರುತ್ತವೆ. ಇದರ ಉದ್ದೇಶಪೂರ್ವಕವಲ್ಲದಿದ್ದರೂ ಒಂದು ರೀತಿಯಲ್ಲಿ ರಾಷ್ಟ್ರಕ್ಕೆ ಅಗೌರವ ತೋರಿದಂತೆಯೇ ಎನ್ನುವುದು ಕಿಶೋರ್‌ ಅವಪ ಅಭಿಪ್ರಾಯ. ಹೀಗಾಗಿಯೇ 4 ವರ್ಷಗಳಿಂದ ಅವರು "ಫ್ಲ್ಯಾಗಥಾನ್‌' ಎನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಬಿದ್ದಿರುವ ಬಾವುಟಗಳನ್ನು ಸಂರಕ್ಷಿಸುವುದು ಮತ್ತು ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಕುರಿತು ಅರಿವು ಮೂಡಿಸುವ ಕೆಲಸವನ್ನು ಅವರ ತಂಡ ಮಾಡುತ್ತಿದೆ. ಈ ಬಾರಿಯೂ ಸ್ವಾತಂತಂರ್ಯ ದಿನಾಚರಣೆಯಂದು ತಂಡದ ಸದಸ್ಯರು ಕಬ್ಬನ್‌ ಪಾರ್ಕ್‌ ಸುತ್ತಮುತ್ತ ಮತ್ತು ಶಾಲೆಗಳಿಗೆ ಭೇಟಿ ಕೊಡಲಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. 

ಎಲ್ಲಿ?: ಕಬ್ಬನ್‌ ಪಾರ್ಕ್‌
ಯಾವಾಗ?: ಆಗಸ್ಟ್‌ 15, ಬುಧವಾರ, ಮಧ್ಯಾಹ್ನ 3
ಹೆಚ್ಚಿನ ಮಾಹಿತಿಗೆ:  www.rainathon.com


Trending videos

Back to Top