CONNECT WITH US  

25 ಸಹಸ್ರ ವೃಕ್ಷಾರೋಪಣ ಅಭಿಯಾನ

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಪೀಠಾರೋಹಣಗೊಂಡ ರಜತೋತ್ಸವ ಹಿನ್ನೆಲೆಯಲ್ಲಿ ಜೂ. 5ರಿಂದ 25 ಸಹಸ್ರ ವೃಕ್ಷಾರೋಪಣ ಅಭಿಯಾನ ನಡೆಸಲಾಗುತ್ತಿದೆ ಎಂದು ಮಠದ ಉಪಾಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ ತಿಳಿಸಿದ್ದಾರೆ.

ಸೋಮವಾರ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸಳೂರಿನಲ್ಲಿ ಶ್ರೀಮಠ ನಡೆಸುವ ಶ್ರೀನಿಕೇತನ
ಶಾಲೆಯಲ್ಲಿ ಈ ಅಭಿಯಾನ ಅಂದು ಬೆಳಗ್ಗೆ 10:30ಕ್ಕೆ ಆರಂಭಗೊಳ್ಳಲಿದೆ. ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕೊಲ್ಲಾಪುರ ಕಾನೇರಿ ಮಠದ ಶ್ರೀಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಪವಿತ್ರ ವೃಕ್ಷಾರೋಪಣ ಕಾರ್ಯ ಆರಂಭಿಸಲಿದ್ದಾರೆ.

ಕೇಂದ್ರದ ಮಾಜಿ ಸಚಿವ ಜೈರಾಮ ರಮೇಶ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆನರಾ ವೃತ್ತ ಅರಣ್ಯಾಧಿಕಾರಿ ಅಶೋಕ ಬಾಸರಕೋಡ, ಶಿಕ್ಷಣಾಧಿಕಾರಿ ಪ್ರಸನ್ನಕುಮಾರ, ಪ್ರೊ| ಬಿ.ಎಂ. ಕುಮಾರಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ.

ಹಸಿರು ಸಮಾರಂಭದಲ್ಲಿ ವೃಕ್ಷ ಪೂಜೆ, ಜಾಗೃತಿ ಜಾಥಾ, ವೃಕ್ಷ ಮಂತ್ರಾಕ್ಷತೆ, ವೃಕ್ಷಾರೋಪಣ, ವೃಕ್ಷ ಪ್ರದರ್ಶಿನಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅರಣ್ಯ ಇಲಾಖೆ, ತೋಟಗಾರಿಕಾ ಕಾಲೇಜು, ಎಂಇಎಸ್‌, ಲಯನ್ಸ್‌, ಚಂದನ, ಕದಂಬ, ಸೀಮಾ ಪರಿಷತ್‌ಗಳು, ವೃಕ್ಷಲಕ್ಷ ಆಂದೋಲನ ನಗರ, ಗ್ರಾಮೀಣ ಭಾಗದ ವಿವಿಧ ಶಾಲೆ ಮಕ್ಕಳು, ಇತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. 

ಒಂದು ವಾರಗಳ ಕಾಲ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲೆಯ ವಿವಿಧಡೆ ವೃಕ್ಷಾರೋಪಣ ಕಾರ್ಯ ನಡೆಯಲಿದ್ದು, ಜೂ. 6ಕ್ಕೆ ಸಂಜೆ 5ಕ್ಕೆ ಭಟ್ಕಳದ ಬೈಲೂರಿನಲ್ಲಿ, ಜೂ. 7ರ ಬೆಳಗ್ಗೆ 10ಕ್ಕೆ ಕಡ್ವಾಡದಲ್ಲಿ, ಅದೇ ದಿನ ಸಂಜೆ 5ಕ್ಕೆ ಮಿರ್ಜಾನದಲ್ಲಿ, ಜೂ. 8ಕ್ಕೆ 
ಬೆಳಗ್ಗೆ 10ಕ್ಕೆ ಯಲ್ಲಾಪುರ ಕೆರೆಹೊಸಳ್ಳಿಯಲ್ಲಿ, 9ಕ್ಕೆ ಸಾಲಕಣಿ, 10ಕ್ಕೆ ಮುಂಡಗೋಡ, 11ಕ್ಕೆ ನಾಣಿಕಟ್ಟಾ, 12ಕ್ಕೆ ಸಿದ್ದಾಪುರದ ಶಂಕರ ಮಠದಲ್ಲಿ, ಆಯುರ್ವೆದ ಕಾಲೇಜಿನಲ್ಲಿ ವೃಕ್ಷಾರೋಪಣ ನಡೆಸಲಿದ್ದಾರೆ. ಜೂ. 13ರಂದು ಸ್ವರ್ಣವಲ್ಲೀ ಮಠದಲ್ಲಿ ಸ್ವಾಮೀಜಿಗಳು ಗಿಡ ನೆಡಲಿದ್ದಾರೆ. ಜೂನ್‌ 3ನೇ ವಾರ ಬಾಳೇಸರ, ಹೇರೂರು, ಬೊಮ್ಮನಳ್ಳಿ, ಬಿಸಗೋಡ, ಕಿರವತ್ತಿ, ಚಿಪಗೇರಿ, ದೇವನಳ್ಳಿ, ಮಂಕಿ, ಕಲ್ಲೇಶ್ವರ, ಮಳಗಿ ಇತರಡೆಗಳಲ್ಲಿ ವೃಕ್ಷಾರೋಪಣ ನಡೆಯಲಿದ್ದು, ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಸಂಬಾರು ಸಸಿಗಳನ್ನು ವನವಾಸಿಗಳಿಗೆ ವಿತರಿಸಿ ಅವರ ಹಿತ್ತಲಲ್ಲಿ ನೆಡುವ ಕಾರ್ಯಕ್ರಮ ಕೂಡ ಇದೆ. ಗ್ರಾಮದ ದಂಪತಿಗಳು ಸೇರಿ ಗಿಡನೆಡುವ ಕಾರ್ಯಕ್ರಮ ನಾಣಿಕಟ್ಟಾದಲ್ಲಿ ಜರುಗಲಿದೆ ಎಂದರು.

ಅಭಿಯಾನದ ಗೌರವ ಸಂಚಾಲಕ ಅನಂತ ಅಶೀಸರ, ಕಾರ್ಯದರ್ಶಿ ಆರ್‌.ಎಸ್‌. ಹೆಗಡೆ ಭೈರುಂಬೆ, ಗಣಪತಿ ಕೆ.ಬಿಸಲಕೊಪ್ಪ ಇದ್ದರು.  


Trending videos

Back to Top