CONNECT WITH US  

ಮೀನುಗಾರಿಕಾ ದೋಣಿ: ಕಲರ್‌ ಕೋಡಿಂಗ್‌ ಕಡ್ಡಾಯ

ಉಡುಪಿ/ಮಂಗಳೂರು: ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ, ಏಕರೂಪದ ಕಲರ್‌ ಕೋಡಿಂಗ್‌ ಅಳವಡಿಸುವುದನ್ನು  ಕೇಂದ್ರ ಗೃಹ ಮಂತ್ರಾಲಯವು ಕಡ್ಡಾಯಗೊಳಿಸಿದೆ.

ಎಲ್ಲ ಮೀನುಗಾರರು ಜು. 30ರ ಒಳಗೆ ತಮ್ಮ ಮೀನುಗಾರಿಕಾ ದೋಣಿಗಳಿಗೆ ಈ ಮುಂದಿನಂತೆ ಕಲರ್‌ ಕೋಡಿಂಗ್‌ ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಕಲರ್‌ ಕೋಡಿಂಗ್‌ ಅಳವಡಿಸದ ದೋಣಿಗಳಿಗೆ ಮುಂದಿನ ಆಗಸ್ಟ್‌ನಿಂದ ಡೀಸೆಲ್‌ ವಿತರಣೆಯನ್ನು ನಿಲ್ಲಿಸಲಾಗುವುದು.

ಹಲ್‌- ಮರದ ದೋಣಿಗಳು- ಬಿಳಿ, ಸ್ಟೀಲ್‌ ದೋಣಿಗಳು- ತಿಳಿಕೆಂಪು (ರೆಡ್‌ ಆಕ್ಸೆಡ್‌), ಫೆಂಡರ್‌- ಕಪ್ಪು, ಕ್ಯಾಬಿನ್‌ ಕೆಳ ಅರ್ಧ- ನೀಲಿ, ಮೇಲಿನ ಅರ್ಧ- ಬಿಳಿ ಇರಬೇಕು. ಸಮುದ್ರ ಮೀನುಗಾರಿಕೆಗೆ ತೆರಳುವ ಎಲ್ಲ ಮೀನುಗಾರರು ಕಡ್ಡಾಯವಾಗಿ ತಮ್ಮ ಮೂಲ ಬಯೋಮೆಟ್ರಿಕ್‌ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗಬೇಕು. ಬಯೋ ಮೆಟ್ರಿಕ್‌ ಕಾರ್ಡ್‌ ಹೊಂದಿರದ ಮೀನುಗಾರರು ಮೇ- ಜೂನ್‌ ತಿಂಗಳಿನಲ್ಲಿ ನಡೆಯಲಿರುವ ಬಯೋಮೆಟ್ರಿಕ್‌ ಕ್ಯಾಂಪ್‌ನಲ್ಲಿ ನೋಂದಾಯಿಸಿ ಕಾರ್ಡ್‌ ಪಡೆಯುವಂತೆ ಮೀನುಗಾರಿಕಾ ಇಲಾಖೆ ಪ್ರಕಟನೆ ತಿಳಿಸಿದೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top