CONNECT WITH US  

ಉತ್ತಮ ಮಳೆ; ಸಿಡಿಲಿಗೆ ಓರ್ವ ಬಲಿ

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಗುರುವಾರ ಸಂಜೆ ವೇಳೆಗೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಬೆಳ್ಮಣ್‌ನಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ. 

ಕರಾವಳಿಯ ಹೆಚ್ಚಿನೆಡೆ ಮಧ್ಯಾಹ್ನದವರೆಗೆ ಬೇಸಗೆಯ ವಾತಾವರಣ ಇದ್ದು, ಸಂಜೆ ವೇಳೆ ಮಳೆಗಾಲದ ರೀತಿಯಲ್ಲಿ ಮಳೆ ಸುರಿದಿದೆ. ಮಂಗಳೂರು, ಸುರತ್ಕಲ್‌ ಪರಿಸರದಲ್ಲಿ ರಾತ್ರಿ ಉತ್ತಮ ಮಳೆಯಾಗಿದೆ.

ಸಿಡಿಲು ಬಡಿದು ಸಾವು
ಬೆಳ್ಮಣ್‌: ಬೆಳ್ಮಣ್‌ ದೇವಸ್ಥಾನ ಸಮೀಪದ ಮನೆಯೊಂದಕ್ಕೆ ಬುಧವಾರ ತಡರಾತ್ರಿ ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ನಾರಾಯಣ ದೇವಾಡಿಗ (55) ಮೃತಪಟ್ಟವರು.

ಸಿಡಿಲು ಬಡಿದು ಮನೆಗೆ ಹಾನಿ
ಪಣಂಬೂರು:
ಕುತ್ತೆತ್ತೂರಿನ ಕೇಂಞದಲ್ಲಿ ಬುಧವಾರ ರಾತ್ರಿ ಕೃಷ್ಣ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ವಿದ್ಯುತ್‌ ಮೀಟರ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳು ಹಾನಿಗೀಡಾಗಿವೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಶಿರ್ವ, ಕಾಪು, ಕಾರ್ಕಳ, ಹೆಬ್ರಿಯಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕಿನ್ನಿಗೋಳಿ, ಮಡಂತ್ಯಾರು, ಮಚ್ಚಿನದಲ್ಲಿಯೂ ಮಳೆ ಬಂದಿದೆ. ಪುತ್ತೂರು, ಕಡಬದಲ್ಲಿ ಸಿಡಿಲು, ಮಿಂಚು ಸಹಿತ ಹನಿ ಮಳೆಯಾಗಿದೆ. ಬೆಳ್ತಂಗಡಿ, ಪುಂಜಾಲಕಟ್ಟೆ, ತೆಕ್ಕಟ್ಟೆ, ಕುಂಭಾಸಿ, ಬಿ.ಸಿ. ರೋಡ್‌ನ‌ಲ್ಲೂ ಮಳೆಯಾಗಿದೆ. 

ಉಡುಪಿ, ಮಣಿಪಾಲ, ಬಂಗಾಡಿ, ಕಡಿರುದ್ಯಾವರ, ಕಾಜೂರು ಪರಿಸರದಲ್ಲಿ ಉತ್ತಮ ವರ್ಷಧಾರೆಯಾಗಿದೆ. ಮುಳ್ಳೇರಿಯಾದಲ್ಲಿಯೂ ಸಂಜೆ ಮಳೆ ಸುರಿದಿದೆ. ಮಂಗಳೂರಿನಲ್ಲಿ ಬುಧವಾರ ತಡರಾತ್ರಿಯಿಂದ ಗುರುವಾರ ಮುಂಜಾವಿನ ತನಕ ಗುಡುಗು, ಮಿಂಚು ಸಹಿತ ಉತ್ತಮ ಮಳೆ ಬಂದಿದೆ.


Trending videos

Back to Top