CONNECT WITH US  

ಕರಾವಳಿ ಅಪರಾಧ ಸುದ್ಧಿಗಳು

ಆಭರಣ ಕಳವು: ಬಂಧನ
ಉಳ್ಳಾಲ
: ಹರೇಕಳ ರಾಜಗುಡ್ಡೆ  ಮನೆಯೊಂದರಲ್ಲಿ ವರ್ಷದ ಹಿಂದೆ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ರಾಜ ಗುಡ್ಡೆ ನಿವಾಸಿಗಳಾದ ರವೂಫ್‌ (31), ಹಸೈನಾರ್‌ (36) ನನ್ನು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಬ್ದುಲ್‌ ಕರೀಂ ಮನೆ ಮಂದಿ ಉಳ್ಳಾಲ ದರ್ಗಾ ತೆರಳಿದ್ದ ಸಂದರ್ಭ  ರೂ. 80,000 ಬೆಲೆಬಾಳುವ ಚಿನ್ನಾಭರಣ ಕಳವು ನಡೆದಿತ್ತು. ಕೊಣಾಜೆ ಠಾಣೆಯಲ್ಲಿ  ಪ್ರಕರಣದಾಖಲಾಗಿತ್ತು. ಕೊಣಾಜೆ ಪೊಲೀಸರು  ಸ್ಥಳೀಯ ನಿವಾಸಿ ಹಸೈನಾರ್‌ನನ್ನು ಅನುಮಾನ ಮೇಲೆ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ ನೀಡಿದ ಮಾಹಿತಿಯಂತೆ  ರವೂಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಕರೀಂ ಅವರ  ನೆರೆಮನೆಯವರು. ಇಬ್ಬರಿಂದ ಕಳವುಗೈದಿದ್ದ ಚಿನ್ನಾಭರಣ  ವಶಪಡಿಸಿಕೊಳ್ಳಲಾಗಿದೆ.

ಅಸಭ್ಯ ವರ್ತನೆ ಆರೋಪ: ಥಳಿತ 
ಕಬಕ:
ಇಲ್ಲಿನ ಫ್ಯಾನ್ಸಿ ಅಃಗಡಿಯೊಂದರ ಯುವತಿಯೊಂದಿಗೆ ಅನ್ಯಧರ್ಮದ ಯುವಕನೋರ್ವ ಅತಿರೇಕದಿಂದ ವರ್ತಿಸಿಧಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಯುವಕನಿಗೆ ಥಳಿಸಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. 

ಯುವಕ ಮಹಮ್ಮದ್‌ ಸಾದಿಕ್‌ ಮೂರು ದಿನಗಳ ಹಿಂದೆ ರೀಚಾರ್ಜ್‌ ನೆಪದಲ್ಲಿ  ಫ್ಯಾನ್ಸಿ ಅಂಗಡಿಗೆ ಬಂದಿದ್ದಾಗ ಯುವತಿಯ ಮೊಬೈಲ್‌ ನಂಬರ್‌ ಪಡೆದು ರೀಚಾರ್ಜ್‌ ಬರದಿದ್ದರೆ  ತಿಳಿಸುವುದಾಗಿ ಹೇಳಿದ್ದ. ಮರುದಿನ ಯುವತಿಗೆ ಮೊಬೈಲ್‌ ಸಂದೇಶ ರವಾನಿಸಿದ್ದು ಅಲ್ಲದೆ ಶುಕ್ರವಾರ ಅಂಗಡಿಗೆ ಬಂದು ಅಸಭ್ಯವಾಗಿ ವರ್ತಿಸಿದ್ದ. ಈ ಹಿನ್ನೆಲೆಯಲ್ಲಿ  ಸಾರ್ವಜನಿಕರು ಯುವಕನನ್ನು ಪ್ರಶ್ನಿಸಿ ಥಳಿಸಿದ್ದಾರೆ ಎನ್ನಲಾಗಿದೆ. 

ಆರೋಪ ನಿರಾಕರಣೆ: ಯುವಕ ಆರೋಪ ನಿರಾಕರಿಸಿದ್ದು, ಉದ್ದೇಶ ಪೂರ್ವಕವಾಗಿ ತನ್ನನ್ನು ಫ್ಯಾನ್ಸಿ ಅಂಗಡಿ ಬಳಿ ಬರ ಹೇಳಿ ಕೆಲವು ಸಂಘಟನೆ ಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಎರಡೂ ಕಡೆಯವರು ಪುತ್ತೂರು ನಗರ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ್ದಾರೆ. 

ಶಂಕಿತ ವ್ಯಕ್ತಿ ಪೊಲೀಸ್‌ ವಶ
ಬಂಟ್ವಾಳ:
ಅನು ಮಾನಾಸ್ಪದವಾಗಿ ತಿರುಗಾಡು ತ್ತಿದ್ದ ವ್ಯಕ್ತಿಯೊ ಬ್ಬನನ್ನು ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಜಿಲ್ಲೆಯ ಹುಡುಕು ಕಾಲನಿ ನಿವಾಸಿ ಅಬ್ದುಲ್‌ ರಝಾಕ್‌(30) ಆರೋಪಿ.

ಆರೋಪಿಯು ಗುರುವಾರ ಮುಂಜಾನೆ ಬಿ.ಸಿ.ರೋಡಿನ ಕೈಕುಂಜೆ ಪರಿಸರದಲ್ಲಿ ಅನು ಮಾನಾಸ್ಪದವಾಗಿ ತಿರು ಗಾಡುತ್ತಿದ್ದ. ಆಗ ವೇಳೆ ಗಸ್ತಿನಲ್ಲಿದ್ದ ನಗರ ಠಾಣಾಧಿಕಾರಿ ನಂದ ಕುಮಾರ್‌, ಬಂಟ್ವಾಳ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಎಸ್‌ಐ ಗಂಗಾಧರಪ್ಪ ನೇತƒತ್ವದದಲ್ಲಿ ಎಎಸ್‌ಐ  ಸಂಜೀವ, ಸುರೇಶ್‌, ಗಂಗಾಧರ್‌ ಆತನನ್ನು  ವಶಕ್ಕೆ ಪಡೆದಿದ್ದರು.  ಪ್ರಕರಣ ದಾಖಲಿಸಿರುವ ಪೊಲೀ ಸರು ತನಿಖೆ ಕೈಗೊಂಡಿದ್ದಾರೆ.

ಸುಳ್ಯ:ನಾಪತ್ತೆಯಾದ ಯುವಕ ಪತ್ತೆ
ಸುಳ್ಯ
:ಅರಂಬೂರು ಪಾಲಡ್ಕ ಜನಾರ್ದನ ಅವರ ಪುತ್ರ ದೀಕ್ಷಿತ್‌ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಸುಳ್ಯ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ ಆತನೇ ಮನೆಗೆ ಬಂದಿದ್ದಾರೆ.

ದೂರು ದಾಖಲಾಗಿರುವುದರಿಂದ ತಂದೆ, ತಾಯಿ ಪೋಲಿಸ್‌ ಠಾಣೆಗೆ ಮಗನೊಂದಿಗೆ ಬಂದು ವಿಷಯ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ದೀಕ್ಷಿತ್‌ ಮತಾಂತರಗೊಂಡಿದ್ದಾರೆಂದು ಶಂಕಿಸಿ ತಂದೆ ಮಗನನ್ನು ಗದರಿಸಿದ್ದರು. ಈ ಹಿನ್ನಲೆಯಲ್ಲಿ ಮನೆಯವರು ನಾಪತ್ತೆ ದೂರು ನೀಡಿದ್ದರು.

ಲಾರಿಪಲ್ಟಿ;  ಹೆದ್ದಾರಿ ಸಂಚಾರ ಅಸ್ತವ್ಯಸ್ತ
ವಿಟ್ಲ:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಲಾರಿ ರಸ್ತೆಗೆ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡು ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಮಂಗಳೂರು ಕಡೆಯಿಂದ ಬೆಂಗಳೂರಿಗೆ ಪ್ಲೈವುಡ್‌ ಸಾಗಾಟ ಮಾಡುತ್ತಿದ್ದ ಲಾರಿ, ಮಾಣಿ ಪೆಟ್ರೋಲ್‌ ಪಂಪ್‌ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಚಾಲಕ ನಿಝಾಮ್‌ ಅವರು ಗಾಯಗೊಂಡಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯನ್ನು ನಿವಾರಿಸಲು ಪ್ರಯತ್ನಿಸಿದರು. ಲಾರಿಯನ್ನು ಮೇಲೆತ್ತಲಾಗಿದೆ.

ಶಿರಿಯಾರ: ಪಿಡಿಒ ವಿರುದ್ಧ  ದೂರು
ಕೋಟ:
ಪಿಡಿಒ ನನ್ನ ಸಹಿಯನ್ನು ನಕಲಿ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಶಿರಿಯಾರ ಗ್ರಾ.ಪಂ.ಅಧ್ಯಕ್ಷೆ ಜ್ಯೋತಿಯವರು ಗ್ರಾ.ಪಂ. ಪಿ.ಡಿ.ಒ. ಗಣಪ ಮೊಗವೀರ ವಿರುದ್ಧ  ಕೋಟ ಠಾಣೆಯಲ್ಲಿ  ಸೆ.22ರಂದು ದೂರು ದಾಖಲಿಸಿದ್ದಾರೆ.

ದೂರಿನ ವಿವರ: ಕೆಲವು ಸದಸ್ಯರುಗಳು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದು, ಪಿ.ಡಿ.ಒ. ಗಣಪ ಮೊಗವೀರ ಅವರು ಕೆಲವು ದಾಖಲೆಗಳಿಗೆ ನನ್ನ  ಸಹಿಯನ್ನು ನಕಲಿ ಮಾಡಿರುವುದು ತಿಳಿದು ಬಂದಿದೆ. ಇನ್ನೂ ಅನೇಕ ದಾಖಲೆಗಳಿಗೆ ಇದೇ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರ ವಿರುದ್ಧ ಅಸಮಾಧಾನ : ಸೆ.22ರಂದು ಬಹುಮತವಿದ್ದ  ಸಾಮಾನ್ಯಸಭೆಯಲ್ಲಿ ಪಂಚಾಯತ್‌ ಅಭಿವೃದ್ಧಿಗೆ ಸಂಬಂಧಿಸಿದ ಹಲವು ನಿರ್ಣಯಗಳನ್ನು ಕೈಗೊಳ್ಳುವಾಗ ಇದನ್ನು ವಿರೋಧಿಸಿ ಅಧ್ಯಕ್ಷರು ಸಭೆಯಿಂದ ಹೊರನಡೆದು ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು  ಸದಸ್ಯರಾದ ಪ್ರದೀಪ್‌ಬಲ್ಲಾಳ್‌ ಹಾಗೂ ಸುಧೀಂದ್ರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮನ್ವಯದ ಕೊರತೆಯಿಂದ ಶಿರಿಯಾರ ಗ್ರಾ.ಪಂ.ನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇದೀಗ ಕೋರಂ ಇದ್ದರೂ ಸಭೆ ನೆಡೆಸದಿರುವುದು ಸರಿಯಲ್ಲ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ  ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ
ಬ್ರಹ್ಮಾವರ:
ಇಲ್ಲಿನ ಎಸ್‌.ಎಂ.ಎಸ್‌. ಬಳಿ ಬುಧವಾರ ಬಸ್‌ಗಾಗಿ ಕಾಯುತ್ತಿದ್ದ ಹೇರೂರು ಬಂಡಾÕಲೆಯ ಮಂಜುನಾಥ ಶೆಟ್ಟಿ ಅವರಿಗೆ ಬೈಕ್‌ ಢಿಕ್ಕಿ ಹೊಡೆಯಿತು. ಘಟನೆಯಲ್ಲಿ ಮಂಜುನಾಥ ಶೆಟ್ಟಿ ಹಾಗೂ ಬೈಕ್‌ ಸವಾರ ನಾಗರಾಜ ಗಾಯಗೊಂಡರು.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ವೇಣೂರು:
ಮದ್ಯ ಕುಡಿಯುವ ಚಟ ಹೊಂದಿದ್ದ ವ್ಯಕ್ತಿಯೋ ರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ನಡ್ತಿಕಲ್ಲುವಿನಲ್ಲಿ ಸಂಭವಿಸಿದೆ.

ಮೂಡುಕೋಡಿ ಗ್ರಾಮದ ನಡ್ತಿಕಲ್ಲು ನಿವಾಸಿ ಜೋನ್‌ ರೇಗೋ (44) ಆತ್ಮಹತ್ಯೆ ಮಾಡಿಕೊಂಡವರು. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Trending videos

Back to Top