CONNECT WITH US  

ಉಚ್ಚಿಲ ದೇಗುಲ ಜೀರ್ಣೋದ್ಧಾರ ಅದಾನಿ ಯುಪಿಸಿಎಲ್‌ 1 ಕೋ.ರೂ. ದೇಣಿಗೆ

ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಅದಾನಿ ಪ್ರತಿಷ್ಠಾನದ ವತಿಯಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ದೇಗುಲದ ವಾರ್ಷಿಕ ಮಹಾರಥೋತ್ಸವದ ಸಂದರ್ಭದಲ್ಲಿ 10 ಲಕ್ಷ ರೂ. ದೇಣಿಗೆಯ ಘೋಷಣ ಪತ್ರವನ್ನು ಅದಾನಿ ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕೆ. ಕಿಶೋರ್‌ ಆಳ್ವ ಅವರು ಸಮಿತಿಗೆ  ಫೆ. 27ರಂದು ಹಸ್ತಾಂತರಿಸಿದರು. ಈ ಸಂದರ್ಭ ಅದಾನಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಮಾತನಾಡಿ, ಅದಾನಿ ಯುಪಿಸಿಎಲ್‌ ಸಂಸ್ಥೆಯು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಹೆಚ್ಚಿನ ಮುತುವರ್ಜಿಯಿಂದ ತೊಡಗಿಸಿಕೊಳ್ಳಲಿದ್ದು, 1 ಕೋಟಿ ರೂ. ಅನುದಾನವನ್ನು ಸಿ.ಎಸ್‌.ಆರ್‌. ನಿಧಿಯಿಂದ ನೀಡಲು ಸಿದ್ಧವಿದೆ. ಪ್ರಥಮ ಹಂತದಲ್ಲಿ ದೇವಸ್ಥಾನದ ಆವರಣಗೋಡೆ ಕಾಮಗಾರಿಗೆ 10 ಲ.ರೂ. ನೀಡುತ್ತಿದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಅದಾನಿ ಫೌಂಡೇಶನ್‌ ಪ್ರಬಂಧಕ ರವಿ ಜೀರೆ, ಸುಕೇಶ್‌ ಸುವರ್ಣ, ಅನುದೀಪ್‌ ಪೂಜಾರಿ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯ ಯು. ಸಿ. ಶೇಕಬ್ಬ, ಗ್ರಾ.ಪಂ. ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ, ನಾಗರತ್ನ ಎ. ಕರ್ಕೇರ, ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪೊಲ್ಯ ಬಾಂಜಗುತ್ತು ಜಯಕರ ಶೆಟ್ಟಿ, ಸಮಿತಿಯ ಪ್ರಮುಖರಾದ ಗಂಗಾಧರ ಸುವರ್ಣ, ಚಂದ್ರಶೇಖರ ಶೆಟ್ಟಿ, ಪುಟ್ಟಮ್ಮ ಬಿ. ಶ್ರೀಯಾನ್‌, ಎಂ. ಕಿಶೋರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕ ಯು. ಸೀತಾರಾಮ ಭಟ್‌ ಪ್ರಸ್ತಾವನೆಗೈದರು. ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ಸ್ವಾಗತಿಸಿ, ವಂದಿಸಿದರು.


Trending videos

Back to Top