CONNECT WITH US  

ಕಾಲಿ ಫ್ಲವರ್‌ ಚೀಸ್‌ (ಕಾಂಟಿನೆಂಟಲ್‌)

ಬೇಕಾಗುವ ಸಾಮಾಗ್ರಿ:
1 ಸಾಧಾರಣ ಗಾತ್ರದ ಕತ್ತರಿಸಿಟ್ಟ ಹೂಕೋಸು, ಬೆಣ್ಣೆ 50 ಗ್ರಾಂ, ಸೋಂಪು ಅರ್ಧ ಚಮಚ, ಖಾರದ ಪುಡಿ ಸ್ವಲ್ಪ, ಹಾಲು 300 ಎಂಎಲ್‌, ಮೈದಾ ಹಿಟ್ಟು 50 ಗ್ರಾಮ್‌, ಗುಣಮಟ್ಟದ ಚೆಡ್ಡಾರ್‌ ಚೀಸ್‌ ( ಫ‌ುಡ್‌ ಶಾಪ್‌ಗ್ಳಲ್ಲಿ ಸಿಗತ್ತೆ), ಗ್ರೌಂಡ್‌ ವೈಟ್‌ ಪೆಪ್ಪರ್‌ 1/4 ಸ್ಪೂನ್‌, ಇಂಗ್ಲಿಷ್‌ ಮಸ್ಟರ್ಡ್‌ 1 ಸ್ಪೂನ್‌, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನ ಕಾಯಿ 1
ವಿಧಾನ:
ಒವೆನ್‌ನ್ನು 180 ಡಿಗ್ರಿ ಉಷ್ಣಾಂಶದಲ್ಲಿಡಿ. ಹೂಕೋಸನ್ನ 8 ನಿಮಿಷ ನೀರು ಹಾಕಿ ಬೇಯಿಸಿ. ನಂತರ ನೀರು ಬಸಿಯಿರಿ. ಬೆಣ್ಣೆಯನ್ನ ಪ್ಯಾನ್‌ ಮೇಲೆ ಹಾಕಿ ಕರಗಿಸಿ, ಅದಕ್ಕೆ ಖಾರದ ಪುಡಿ ಮತ್ತು ಸೋಂಪನ್ನು ಹಾಕಿ ತಿರುವಿ. ಇದಕ್ಕೆ ನೀರು ಮತ್ತು ಮೈದಾ ಹಿಟ್ಟು ಸ್ವಲ್ಪ ಸ್ವಲ್ಪ ಹಾಕುತ್ತಾ ಮಿಕ್ಸ್‌ ಮಾಡ್ತಾ ಬನ್ನಿ, ಪಾಕ ಮೃದುವಾಗುತ್ತಾ ಹೋಗುತ್ತದೆ. ಇದಕ್ಕೆ ಚೀಸ್‌ ಹಾಕಿ. ಹಸಿಮೆಣಸಿಕಾಯಿ ಸೇರಿದಂತೆ ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ. ಉಪ್ಪನ್ನು ಹಾಕಿ. ಇದನ್ನು ಒವನ್‌ನಲ್ಲಿ 20 ನಿಮಿಷಗಳ ಕಾಲ ಕಂದು ಬಣ್ಣಬರುವವರೆಗೆ ಇಡಿ. ಇದರ ಮೇಲೆ ಕ್ಯಾರೆಟ್‌ ಮತ್ತು ಎಳೆಯ ಬೀನ್ಸ್‌ ಪೀಸ್‌ಗಳನ್ನ ಹಾಕಿ ಬಿಸಿ ಬಿಸಿಯಾಗಿ ಸರ್ವ್‌ ಮಾಡಿ.

Trending videos

Back to Top