CONNECT WITH US  

ಕಾಂಗ್ರೆಸ್‌ನಿಂದ ಧರ್ಮ ಒಡೆಯುವ ಹುನ್ನಾರ

ದಾಂಡೇಲಿ: ರಾಜ್ಯ ಸರಕಾರದ ಜನವಿರೋ ಆಡಳಿತಕ್ಕೆ ಬೇಸತ್ತ ಬೇಸತ್ತ ಜನ ಈ ಬಾರಿ ರಾಜ್ಯದ ಎಲ್ಲೆಡೆಯಲ್ಲಿ ಕಾಂಗ್ರೆಸ್‌ ಮುಕ್ತ ಸರ್ಕಾರಕ್ಕೆ ಕೈಜೋಡಿಸಲು ಮುಂದಾಗಿದ್ದಾರೆಂದು ನಗರ ಬಿಜೆಪಿ ಘಟಕಾಧ್ಯಕ್ಷ ಬಸವರಾಜ ಕಲಶೆಟ್ಟಿ ನುಡಿದರು.

ಅವರು ನಗರದಲ್ಲಿ ಬಿಜೆಪಿಯ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಮಾತನಾಡಿ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಸಂಪೂರ್ಣ ಸಾಲದಲ್ಲಿ ಮುಳಗಿಸಿದೆ. ಧರ್ಮ ಒಡೆದು ಸರ್ಕಾರ ಉಳಿಸಲು ಹುನ್ನಾರ ನಡೆಸಿದೆ ಪ್ರಾಮಾಣಿಕ ಅ ಧಿಕಾರಿಗಳ ಪ್ರಾಣ ಹಿಂಡುತ್ತಿದೆ. ಓಟಿಗಾಗಿ ನೋಟು
ಸಂಸ್ಕೃತಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ ಜಿಲ್ಲಾ ಅಲ್ಪಸಂಖ್ಯಾತ ಘಟಕದ ರಫಿಕ್‌ ಹುದ್ದಾರ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಚವ್ಹಾಣ, ಉಪಾಧ್ಯಕ್ಷ
ಚಂದ್ರಕಾಂತ ಕ್ಷೀರಸಾಗರ, ಮಹಿಳಾ ಘಟಕದ ಅಧ್ಯಕ್ಷೆ ದೇವಕ್ಕ ಕರೆಮನಿ, ಮುಖಂಡರಾದ ಗುರು ಮಠಪತಿ, ರಮಾ, ಸುನಿತಾ ದಮಾಮ್‌, ರಮೇಶ ಹೊಸಮನಿ, ರವೀಂದ್ರ ಶಾಹ, ವಿಷ್ಣು ವಾಜುವೆ, ರವಿ  ಗಾಂವಕರ್‌, ವಿಷ್ಣು ನಾಯರ ಉಪಸ್ಥಿತರಿದ್ದರು.


Trending videos

Back to Top