CONNECT WITH US  

ಪಾಲಕುನ್ನು: ಮಡಿಕೆಯಲ್ಲಿ ಮಹಾನೈವೇದ್ಯ

ಕಾಸರಗೋಡು: ಇತಿಹಾಸ ಪ್ರಸಿದ್ಧ ಪಾಲಕುನ್ನು ಶ್ರೀ ಭಗವತಿ ಕ್ಷೇತ್ರದಲ್ಲಿ ಮಡಿಕೆಯಲ್ಲಿ ಮಹಾನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ಫೆ. 6ರಂದು ಭಕ್ತಿ, ಶ್ರದ್ಧೆಯಿಂದ ನಡೆಯಿತು.

ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಐಶ್ವರ್ಯಕ್ಕಾಗಿ ಶ್ರೀ ಭಗವತಿಗೆ ಮಹಾ ನೈವೇದ್ಯ ಸಲ್ಲಿಸುವುದು ರೂಢಿಯಾಗಿದೆ. ಪ್ರಾರ್ಥನೆಯೊಂದಿಗೆ ನೈವೇದ್ಯ ಸಲ್ಲಿಸಿದರೆ ಎಲ್ಲ ಕಷ್ಟ, ದುಃಖ ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ.

ವ್ರತದಲ್ಲಿ  ಬೆಳ್ತಿಗೆ ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ಅಕ್ಕಿ ಹಿಟ್ಟು, ವೀಳ್ಯದೆಲೆ ಮೊದಲಾದವುಗಳನ್ನು ಹೊಸ ಮಡಿಕೆಯಲ್ಲಿ  ತುಂಬಿ ಬಾಳೆ ಎಲೆಯಿಂದ ಮುಚ್ಚಿ ಮಹಿಳೆಯರು ಸಹಿತ ಸಾವಿರಾರು ಮಂದಿ ಪಳ್ಳಿಕೆರೆ, ಪಾಕಂ, ಕೋಟಿಕುಳಂ, ಉದುಮ ಪಡಿಂಞಾರ್‌ ಮೊದಲಾದೆಡೆಗಳಿಂದ ಮೆರವಣಿಗೆ ಯಲ್ಲಿ ಕ್ಷೇತ್ರ ಸನ್ನಿಧಿಗೆ ತಲುಪಿದರು. ಕ್ಷೇತ್ರದ ಅಂಗಣದಲ್ಲಿ ಪ್ರತ್ಯೇಕವಾಗಿ ಸಿದ್ಧ ಪಡಿಸಿದ ಒಲೆಯಲ್ಲಿ ನೈವೇದ್ಯ ತಯಾರಿಸಿ ಕ್ಷೇತ್ರ ಸನ್ನಿಯಲ್ಲಿ ಸಮರ್ಪಿಸಿದರು. ಶನಿವಾರ ಬೆಳಗ್ಗೆ ಪ್ರಸಾದವಾಗಿ ವಿತರಿಸಲಾಗುವುದು.

Trending videos

Back to Top